Site icon Samastha News

Cab: ಸಾವಿರಾರು ಕೊಡಬೇಕಿಲ್ಲ, ಏರ್​ಪೋರ್ಟ್​ಗೆ ತಲುಪಲು ಸಾಕು 399 ರೂಪಾಯಿ

Cab

Refex eVeelz

Cab

ಬೆಂಗಳೂರು ವಿಮಾನ ನಿಲ್ದಾಣದ ಬಗ್ಗೆ ಎರಡು ಜೋಕುಗಳು ಬಹಳ ಚಾಲ್ತಿಯಲ್ಲಿವೆ. ‘ಬೆಂಗಳೂರು ವಿಮಾನ ನಿಲ್ದಾಣ ಬೆಂಗಳೂರಿನಲ್ಲೇ ಇಲ್ಲ’ ಎಂಬುದು ಒಂದಾದರೆ, ಬೆಂಗಳೂರಿನಿಂದ ದೇಶದ ಬೇರೆ ನಗರಕ್ಕೆ ವಿಮಾನದಲ್ಲಿ ಹೋಗಲು ಟಿಕೆಟ್​ಗೆ ಎಷ್ಟು ಖರ್ಚು ಮಾಡಬೇಕೋ, ಬೆಂಗಳೂರಿನಿಂದ ವಿಮಾನ ನಿಲ್ದಾಣಕ್ಕೆ ಟ್ಯಾಕ್ಸಿಯಲ್ಲಿ ಹೋಗಲು ಅಷ್ಟೆ ದುಡ್ಡು ಕೊಡಬೇಕು, ಒಮ್ಮೊಮ್ಮೆ ಅದಕ್ಕಿಂತಲೂ ಹೆಚ್ಚು ಕೊಡಬೇಕು ಎಂಬುದು ಎರಡನೇ ಜೋಕು. ಅಸಲಿಗೆ ಎರಡೂ ಜೋಕುಗಳು ನಿಜವೇ. ಬೆಂಗಳೂರಿನಿಂದ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಬಹಳ ದೂರದಲ್ಲಿದೆ. ವಿಮಾನ ನಿಲ್ದಾಣಕ್ಕೆ ಟ್ಯಾಕ್ಸಿಯಲ್ಲಿ ಹೋಗಬೇಕೆಂದರೆ ಸಾವಿರಾರು ರೂಪಾಯಿ ಹಣ ಕ್ಯಾಬ್​ಗೆ ನೀಡಬೇಕು. ಅದೇ ವಿಮಾನದಲ್ಲಿ ಗೋವಾಕ್ಕೆ ಹೋಗಲು ಕ್ಯಾಬ್​ಗೆ ನೀಡುವುದಕ್ಕಿಂತಲೂ ಕಡಿಮೆ ಹಣವಾಗುತ್ತದೆ!

ಆದರೆ ಈಗ ಈ ದುಬಾರಿ ಟ್ಯಾಕ್ಸಿ ಸೇವೆಗೆ ಗುಡ್ ಬೈ ಹೇಳುವ ಸಮಯ ಬಂದಾಗಿದೆ. ರಿಫೆಕ್ಸ್ ಇ-ವೀಲ್ಜ್ (Refex eVeelz) ಸಂಸ್ಥೆ ಎಲಿಕ್ಟ್ರಿಕ್ ಕಾರುಗಳ ಕ್ಯಾಬ್ ಸೇವೆ ಆರಂಭಿಸಿದ್ದು, ಅತ್ಯಂತ ಕಡಿಮೆ ದರಕ್ಕೆ ಬೆಂಗಳೂರಿನ ಯಾವುದೇ ಏರಿಯಾದಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಹಾಗೂ ವಿಮಾನ ನಿಲ್ದಾಣದಿಂದ ಬೆಂಗಳೂರು ಹಾಗೂ ಇತರೆ ಪ್ರದೇಶಗಳಿಗೆ ಕ್ಯಾಬ್ ಸೇವೆ ಒದಗಿಸುತ್ತಿದೆ. ಅದೂ ಅತ್ಯಂತ ಕಡಿಮೆ ದರದಲ್ಲಿ!

ಬೆಂಗಳೂರು ಅಂತರಾಷ್ಟ್ರೀಯ ವಿಮಾನ‌ ನಿಲ್ದಾಣದಲ್ಲಿ ಕಡಿಮೆ ಮೊತ್ತದ ಇವಿ ಟ್ಯಾಕ್ಸಿ ಸೇವೆ ಆರಂಭ

ಇದೀಗ ರಿಫೆಕ್ಸ್ ಇ-ವೀಲ್ಜ್ (Refex eVeelz) ಕ್ಯಾಬ್ ತನ್ನ ಪ್ರಯಾಣಿಕರಿಗೆ ಹೊಸ ಆಫರ್ ಒಂದನ್ನು ಹೊರ ತಂದಿದೆ. ಬೆಂಗಳೂರಿನ ಕೆಲ ಪ್ರದೇಶಗಳಿಂದ ಕೇವಲ 399 ರೂಪಾಯಿಗೆ ವಿಮಾನ ನಿಲ್ದಾಣವನ್ನು ತಲುಪಬಹುದಾಗಿದೆ. ಅದೂ ಟಾಟಾದ ಪ್ರೀಮಿಯಂ ಎಸ್​ಯುವಿ ಕಾರ್ ನಲ್ಲಿ. ಬೆಂಗಳೂರಿನ ಪ್ರಮುಖ ಏರಿಯಾಗಳಿಂದ ಇ-ವೀಲ್ಜ್ ಕ್ಯಾಬ್ ಬುಕ್ ಮಾಡಿದರೆ 1000 ಕ್ಕೂ ಕಡಿಮೆ ಮೊತ್ತದಲ್ಲಿ ವಿಮಾನ ನಿಲ್ದಾಣ ತಲುಪಬಹುದಾಗಿದೆ. ವಿಮಾನ ನಿಲ್ದಾಣದಿಂದ ಬಹಳ ದೂರದಲ್ಲಿರುವ ಎಲೆಕ್ಟ್ರಾನಿಕ್ ಸಿಟಿಯಿಂದ ಕೇವಲ 949 ರೂಪಾಯಿಗೆ ರಿಫೆಕ್ಸ್ ಇ-ವೀಲ್ಜ್ ಕ್ಯಾಬ್ ಬುಕ್ ಮಾಡಬಹುದು. ಹಾಗೆಯೇ ಬೆಂಗಳೂರಿನ ವಿವಿಧ ಪ್ರಮುಖ ಪ್ರದೇಶಗಳಿಂದ ನಿಗದಿತ ಮೊತ್ತ ಪಾವತಿಸಿ ವಿಮಾನ ನಿಲ್ದಾಣ ತಲುಪಬಹುದಾಗಿದೆ.

ಬೆಂಗಳೂರಿನ ವಿವಿಧ ಏರಿಯಾಗಳಿಂದ ಇ-ವೀಲ್ಜ್ (Refex eVeelz) ಕ್ಯಾಬ್ ನಲ್ಲಿ ಪ್ರಯಾಣಿಸಲು ಬೇರೆ-ಬೇರೆ ಮೊತ್ತವನ್ನು ನಿಗದಿಪಡಿಸಲಾಗಿದೆ. ಇತರೆ ಕ್ಯಾಬ್​ಗಳಿಗೆ ಹೋಲಿಸಿದರೆ ಇ-ವೀಲ್ಜ್ ಕ್ಯಾಬ್ ಸೇವೆ ಕಡಿಮೆ ಮೊತ್ತಕ್ಕೆ ಲಭ್ಯವಾಗುತ್ತಿದೆ. ಗೂಗಲ್ ಪ್ಲೇ ಸ್ಟೋರ್​ನಲ್ಲಿ Refex eVeelz (ರಿಫೆಕ್ಸ್ ಇವೀಲ್ಜ್) ಅಪ್ಲಿಕೇಶನ್ ಡೌನ್​ಲೋಡ್ ಮಾಡಿ, ಪ್ರೋಮೋ ಕೋಡ್ (REFEX143) ಬಳಸಿ ಕ್ಯಾಬ್ ಬುಕ್ ಮಾಡಿ ಡಿಸ್ಕೌಂಟ್ ಪಡೆಯಬಹುದಾಗಿದೆ. ಇತರೆ ಪೆಟ್ರೋಲ್, ಡೀಸೆಲ್ ಕ್ಯಾಬ್​ಗಳಿಗಿಂತಲೂ ಬಹಳ ಕಡಿಮೆ ದರದಲ್ಲಿ ರಿಫೆಕ್ಸ್ ಇವೀಲ್ಜ್ (Refex eVeelz) ಕ್ಯಾಬ್​ಗಳಲ್ಲಿ ಪ್ರಯಾಣಿಸಬಹುದಾಗಿದೆ. ಈ ಆಫರ್ ಆಗಸ್ಟ್ 31ರ ವರೆಗೆ ಮಾತ್ರವೇ ಚಾಲ್ತಿಯಲ್ಲಿರಲಿದೆ ಎಂದು ಸಂಸ್ಥೆ ಹೇಳಿದೆ.

Exit mobile version