Refex Eveelz
ಬೆಂಗಳೂರಿನಲ್ಲಿ ಟ್ಯಾಕ್ಸಿ ಅಥವಾ ಕ್ಯಾಬ್ ಉದ್ಯಮ ಹಳೆಯದ್ದು, ಬೆಂಗಳೂರು ವಿಮಾನ ನಿಲ್ದಾಣವಾದ ಬಳಿಕವಂತೂ ಕ್ಯಾಬ್ ಉದ್ಯಮ ಹತ್ತು ಪಟ್ಟು ಹೆಚ್ಚಾಗಿದೆ. ಆದರೆ ಸಾವಿರಾರು ಟ್ಯಾಕ್ಸಿಗಳ ನಡುವೆ, ಟ್ಯಾಕ್ಸಿ ಉದ್ಯಮಿಗಳ ನಡುವೆ ‘ರೆಫೆಕ್ಸ್ ಇವೀಲ್ಜ್’ ಸಂಸ್ಥೆ ಭಿನ್ನವಾಗಿ ನಿಲ್ಲುತ್ತದೆ. ಇದಕ್ಕೆ ಕಾರಣ ಪ್ರಯಾಣಿಕರು ಹಾಗೂ ಪರಿಸರದ ಬಗ್ಗೆ ಈ ಸಂಸ್ಥೆಗಿರುವ ಕಾಳಜಿ. ಬೆಂಗಳೂರಿಗರ ಮೆಚ್ಚಿನ ಆರ್ಸಿಬಿ ತಂಡದ ರೀತಿಯಲ್ಲಿಯೇ ಕ್ಯಾಬ್ ಕ್ಷೇತ್ರದಲ್ಲಿ ‘ಹೊಸ ಅಧ್ಯಾಯ’ ಬರೆಯುತ್ತಿದೆ ‘ರೆಫೆಕ್ಸ್ ಇವೀಲ್ಜ್’ ಸಂಸ್ಥೆ.
ಮಾರುಕಟ್ಟೆಯಲ್ಲಿ ಸೇವೆ ನೀಡುತ್ತಿರುವ ಇತರೆ ಕ್ಯಾಬ್ ಅಥವಾ ಟ್ಯಾಕ್ಸಿ ಸಂಸ್ಥೆಗಳು ವೈಯಕ್ತಿಕ ಲಾಭದ ಮೇಲೆ ಗಮನ ಹರಿಸಿದ್ದರೆ ಈ ಸಂಸ್ಥೆಯು ಪ್ರಯಾಣಿಕರ ಸುರಕ್ಷತೆ ಹಾಗೂ ಪರಿಸರ ಕಾಳಜಿಯನ್ನು ತನ್ನ ಮೊದಲ ಆದ್ಯತೆಯನ್ನಾಗಿಸಿಕೊಂಡಿದೆ. ಇದರ ಜೊತೆಗೆ ಪ್ರಯಾಣಿಕರಿಗೆ ಪ್ರತಿಸ್ಪರ್ಧಿ ಸಂಸ್ಥೆಗಳಿಗಿಂತಲೂ ಅತ್ಯಂತ ಕಡಿಮೆ ದರದಲ್ಲಿ ಕ್ಯಾಬ್ ಸೇವೆಯನ್ನು ಒದಗಿಸುತ್ತಿದೆ. ತಮ್ಮ ಸೇವೆ ಹಾಗೂ ಗುರಿಯ ಬಗ್ಗೆ ಆತ್ಮವಿಶ್ವಾಸದಿಂದ ಇರುವ ‘ರೆಫೆಕ್ಸ್ ಇವೀಲ್ಜ್’ ಸಂಸ್ಥೆಯ ಸಿಇಓ ನವಾಜ್ ಶಮೀರ್ ಖಾನ್, ಸಂಸ್ಥೆಯು ಕ್ಯಾಬ್ ಸೇವೆಯಲ್ಲಿ ಹೊಸ ಅಧ್ಯಾಯವನ್ನೇ ಬರೆಯಲಿದೆ ಎಂದಿದ್ದಾರೆ.
ಬೆಂಗಳೂರಿನಲ್ಲಿ ಸೇವೆ ನೀಡುತ್ತಿರುವ ಬಹುತೇಕ ಟ್ಯಾಕ್ಸಿಗಳು ಇಂಧನವನ್ನು ನೆಚ್ಚಿಕೊಂಡಿದ್ದರೆ ‘ರೆಫೆಕ್ಸ್ ಇವೀಲ್ಜ್’ ಸಂಸ್ಥೆಯು ಪರಿಸರಕ್ಕೆ ಹಾನಿಕಾರಕವಾದ ಇಂಧನ ಚಾಲಿತ ಕಾರುಗಳಿಗೆ ವಿದಾಯ ಹೇಳಿ ಪರಿಸರಕ್ಕೆ ಪೂರಕವಾಗಿರುವ ಬ್ಯಾಟರಿ ಚಾಲಿತ ವಾಹನಗಳನ್ನು ಮಾತ್ರವೇ ಟ್ಯಾಕ್ಸಿ ಸೇವೆಗೆ ಬಳಸಿಕೊಳ್ಳುತ್ತಿದೆ. ಪರಿಸರಕ್ಕೆ ಪೂರಕವಾಗಿರುವ ಜೊತೆಗೆ ಇಂಧನ ವೆಚ್ಚವನ್ನು ದೊಡ್ಡ ಮಟ್ಟದಲ್ಲಿ ಉಳಿಸುವ ಸಂಸ್ಥೆಯು, ಕಡಿಮೆ ಬೆಲೆಗೆ ಸೇವೆ ನೀಡುವ ಮೂಲಕ, ಇಂಧನ ವೆಚ್ಚ ಉಳಿತಾಯವನ್ನು ತನ್ನ ಗ್ರಾಹಕರಿಗೆ ವರ್ಗಾಯಿಸುತ್ತಿದೆ. ಬೆಂಗಳೂರಿನ ಯಾವುದೇ ಮೂಲೆಯಿಂದ 399 ಇಂದ ಆರಂಭಿಸಿ 950 ರೂಪಾಯಿಗಿಂತಲೂ ಕಡಿಮೆ ದರದಲ್ಲಿ ‘ರೆಫೆಕ್ಸ್ ಇವೀಲ್ಜ್’ ಟ್ಯಾಕ್ಸಿ ಬುಕ್ ಮಾಡಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಬಹುದಾಗಿದೆ.
Cab: ಸಾವಿರಾರು ಕೊಡಬೇಕಿಲ್ಲ, ಏರ್ಪೋರ್ಟ್ಗೆ ತಲುಪಲು ಸಾಕು 399 ರೂಪಾಯಿ
ಪ್ರಯಾಣಿಕರ ಸುರಕ್ಷತೆಗೆ ಪ್ರಥಮ ಆದ್ಯತೆ ನೀಡುವ ‘ರೆಫೆಕ್ಸ್ ಇವೀಲ್ಜ್’ ಮಹಿಳಾ ಕ್ಯಾಬ್ ಡ್ರೈವರ್ಗಳನ್ನು ಹೊಂದಿದೆ. ಅಲ್ಲದೆ ಸಂಸ್ಥೆಯ ಆಪ್ನಲ್ಲಿ ಸಹ ಸುರಕ್ಷತೆಗೆ ಸಂಬಂಧಿಸಿದ ಹಲವು ಆಯ್ಕೆಗಳನ್ನು ನೀಡಲಾಗಿದೆ. ಇತ್ತೀಚೆಗೆ ವರದಿಯಾದ ಕೆಲ ಸುದ್ದಿಗಳನ್ನು ನೀವು ಗಮನಿಸಿರಬಹುದು, ಕ್ಯಾನ್ನಲ್ಲಿ ಏಸಿ ಹಾಕಿರಿ ಎಂದು ಗ್ರಾಹಕ ಕೇಳಿದ್ದಕ್ಕೆ ಡ್ರೈವರ್ ಜಗಳ ಮಾಡಿದ್ದು, ಹಲ್ಲೆ ಮಾಡಿದ ವರದಿಗಳು ಸಹ ಇತ್ತೀಚೆಗೆ ಪ್ರಕಟವಾಗಿವೆ. ಕೆಲವು ವಿಡಿಯೋಗಳು ಸಹ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿವೆ. ಆದರೆ ‘ರೆಫೆಕ್ಸ್ ಇವೀಲ್ಜ್’ ಸಂಸ್ಥೆ ಗ್ರಾಹಕರ ಸುರಕ್ಷತೆ, ಸೇವೆ ಹಾಗೂ ಭರವಸೆಯನ್ನು ಮೊದಲ ಆದ್ಯತೆಯನ್ನಾಗಿ ಪರಿಗಣಿಸಿದ್ದು, ಟ್ಯಾಕ್ಸಿಯ ಡ್ರೈವರ್ಗಳಿಗೆ ವಿಶೇಷ ತರಬೇತಿಯನ್ನು ಸಹ ನೀಡಲಾಗಿದೆ. ಒಟ್ಟಾರೆಯಾಗಿ ‘ರೆಫೆಕ್ಸ್ ಇವೀಲ್ಜ್’ ಸಂಸ್ಥೆ ಟ್ಯಾಕ್ಸಿ ಕ್ಷೇತ್ರದಲ್ಲಿ ‘ಹೊಸ ಅಧ್ಯಾಯ’ ಬರೆಯಲು ಮುಂದಾಗಿದೆ.