Renuka Swamy Case: ದರ್ಶನ್ ಪರ ಅತ್ಯುತ್ತಮ ವಕೀಲರ ವಾದ, ಆದರೆ ಆತನ ನಂಬಿ ಬಂದ ಬಡವರ ಮಕ್ಕಳ ಪಾಡೇನು?

0
179
Renuka Swamy case
ದರ್ಶನ್‌ ತೂಗುದೀಪ ಮತ್ತು ಪವಿತ್ರಾ ಗೌಡ

Renuka Swamy Case

ಕೊಲೆ ಪ್ರಕರಣ ದೇಶದಾದ್ಯಂತ ಸುದ್ದಿಯಾಗಿದೆ. ಕೊಲೆ ಎಂಬುದು ಮುಖ್ಯ ಪ್ರಕರಣವಾದರೂ ಈ ಪ್ರಕರಣಕ್ಕೆ ಹಲವು ಕೋನಗಳು, ಮುಖಗಳೂ ಇವೆ. ದುಡ್ಡಿದವರು ಸಾಮಾನ್ಯರ ಮೇಲೆ ತೋರುವ ದರ್ಪ. ಹಣ-ಪ್ರಭಾವ ಹೊಂದಿರುವವರು ಹಣದ ಬಲ ಪ್ರಯೋಗಿಸಿ ಬಡವರ ಮಕ್ಕಳನ್ನು ಹಳ್ಳಕ್ಕೆ ಹೇಗೆ ತಳ್ಳುತ್ತಾರೆ. ಹಣವುಳ್ಳವರು, ತಮ್ಮ ವೈಯಕ್ತಿಕ ದ್ವೇಷ ತೀರಿಸಿಕೊಳ್ಳಲು ಬಡವರ ಮಕ್ಕಳನ್ನು ಹೇಗೆ ಬಳಸಿಕೊಳ್ಳುತ್ತಾರೆ ಹೀಗೆ ಕೆದಕುತ್ತಾ ಹೋದರೆ ಹಲವು ಕೋನಗಳು ಈ ಪ್ರಕರಣದಲ್ಲಿ ದೊರಕುತ್ತವೆ.

ಕೊಲೆಯಾದ ದಿನ 30 ಲಕ್ಷ ರೂಪಾಯಿ ಹಣ ಬಿಸಾಕಿ ‘ಕೊಲೆಯಲ್ಲಿ ನನ್ನ ಹೆಸರು ಬರಬಾರದು’ ಎಂದು ಹೇಳಿ ದರ್ಶನ್ ನೆಮ್ಮದಿಯಾಗಿ ಸಿನಿಮಾ ಶೂಟಿಂಗ್​ಗೆ ಹೊರಟು ಹೋದರು. ಈಗಲೂ ಸಹ ದರ್ಶನ್ ಅನ್ನು ಕೇಸಿನಿಂದ ಬಿಡುಗಡೆಗೊಳಿಸಲು ರಾಜ್ಯದ ಅತ್ಯುತ್ತಮ ಲಾಯರ್​ಗಳು ವಾದ ಮಂಡಿಸುತ್ತಿದ್ದಾರೆ. ಆದರೆ ಈ ಪ್ರಕರಣದಲ್ಲಿ ಸಿಲುಕಿರುವ ಬಡವರ ಮಕ್ಕಳ ಗತಿಯೇನು?

ದರ್ಶನ್ ಜೊತೆ ಫೋಟೊ ತೆಗೆಸಿಕೊಳ್ಳಬಹುದು ಎಂಬ ಆಸೆಯಿಂದ ಚಿತ್ರದುರ್ಗದಿಂದ ಬೆಂಗಳೂರಿಗೆ ಬಂದಿದ್ದ ಅನು ಈಗ ಜೈಲು ಸೇರಿದ್ದಾನೆ. ಅವನು ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಸುದ್ದಿ ಕೇಳಿ ಅವರ ತಂದೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಬಾಡಿಗೆಗೆಂದು ಕಾರು ಓಡಿಸಿಕೊಂಡು ಬಂದಿದ್ದ ರವಿಯ ಕುಟುಂಬದವರು ತೀವ್ರ ಸಂಕಷ್ಟದಲ್ಲಿದ್ದಾರೆ ಯಾವ ತಪ್ಪು ಮಾಡದೆ ಆತ ಜೈಲು ಕಂಬಿ ಎಣಿಸುತ್ತಿದ್ದಾನೆ.

ʼ24 ವರ್ಷದ ಹಿಂದೆ ಹೇಗಿದ್ದ ದರ್ಶನ್‌, ಈಗ ಹೇಗಾಗಿಬಿಟ್ಟ, ಎಲ್ಲದಕ್ಕೂ ಅದೇ ಕಾರಣʼ

ಇನ್ನು ದರ್ಶನ್ ಅಭಿಮಾನಿ ಸಂಘದ ಅಧ್ಯಕ್ಷ ರಘುವಿನ ಕುಟುಂಬದವರಂತೂ ದರ್ಶನ್ ಸೇರಿ ಪ್ರಕರಣದ ಎಲ್ಲರಿಗೂ ಹಿಡಿ ಶಾಪ ಹಾಕುತ್ತಿದ್ದಾರೆ. ಮಾಧ್ಯಮದ ಮುಂದೆ ಮಾತನಾಡಿದ ರಘುವಿನ ಪತ್ನಿ, ‘ನೋಡಿ ಸರ್, ನಮ್ಮ ಮನೆಯಲ್ಲಿ ಒಂದು ಹಿಡಿ ಅಕ್ಕಿ-ಕಾಳು ಸಹಿತ ಇಲ್ಲ. ಯಾರಿಗೆ ಬೇಕಿತ್ತು ಇವೆಲ್ಲ. ಮಗನನ್ನು ಕಟ್ಟಿಕೊಂಡು ನಾನು ಜೀವನ ನಡೆಸುವುದು ಹೇಗೆ? ಗಂಡನನ್ನು ನೋಡಲು ಹೋಗಲು ಸಹ ಆಗುತ್ತಿಲ್ಲ, ನಮ್ಮ ಬಳಿ ಹಣವೇ ಇಲ್ಲ’ ಎಂದಿದ್ದಾರೆ.

‘ನಾವು ಅವನನ್ನು (ರಘು) ನಂಬಿಕೊಂಡಿದ್ದೆವು ಆದರೆ ಈಗ ಅವನು ಇಂಥಹಾ ಕೆಲಸ ಮಾಡಿಕೊಂಡಿದ್ದಾನೆ. ದೊಡ್ಡವರ ಸಹವಾಸ ಬೇಡ ಎಂದರು ಕೇಳಲಿಲ್ಲ. ಅವನು ಯಾವ ಜೈಲಿನಲ್ಲಿದ್ದಾನೆ ಎಂಬುದು ಸಹ ನಮಗೆ ಗೊತ್ತಿಲ್ಲ. ಅವನಿಗೆ ಲಾಯರ್ ಅನ್ನು ನೇಮಿಸಲು ಸಹ ನಮ್ಮ ಬಳಿ ಹಣ ಇಲ್ಲ. ಅವನು ಚಿನ್ನ ಕದ್ದಿದ್ದಾನೆ, ನನ್ನ ಹತ್ತಿರ ಚಿನ್ನ ಇಟ್ಟಿದ್ದ ಎಂದೆಲ್ಲ ಹೇಳುತ್ತಿದ್ದಾರೆ ಅದೆಲ್ಲ ಸುಳ್ಳು ಸಾರ್’ ಎಂದಿದ್ದಾರೆ ರಘು ಪತ್ನಿ.

LEAVE A REPLY

Please enter your comment!
Please enter your name here