Rishi Sunak
ಇನ್ಫೋಸಿಸ್ ನಾರಾಯಣಮೂರ್ತಿ ಅವರ ಅಳಿಯ ರಿಶಿ ಸುನಕ್, ಬ್ರಿಟನ್ ನ ಪ್ರಧಾನಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನಾರಾಯಣಮೂರ್ತಿ ಅವರ ಪುತ್ರಿ ಅಕ್ಷತಾ ಹಾಗೂ ರಿಶಿ ಸುನಕ್ ಇದೀಗ ಬ್ರಿಟನ್ ನ ರಾಜಕುಮಾರನನ್ನೇ ಹಿಂದಿಕ್ಕಿ ಬ್ರಿಟನ್ ನ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಶ್ರೀಮಂತಿಕೆ ಪಟ್ಟಿಯಲ್ಲಿ ಆಗಿರುವ ಈ ಬಾರಿ ಜಿಗಿತಕ್ಕೆ ಇನ್ಫೋಸಿಸ್ ಕಾರಣ!
ನಾರಾಯಣಮೂರ್ತಿ ಅವರ ಪುತ್ರಿ ಅಕ್ಷತಾ ಮೂರ್ತಿ ಸುನಕ್ ಅವರು ಇನ್ಪೋಸಿಸ್ ನಲ್ಲಿ ದೊಡ್ಡ ಪ್ರಮಾಣದ ಷೇರು ಹೊಂದಿದ್ದಾರೆ. ಅದರಿಂದ ಬರುವ ದೊಡ್ಡ ಮೊತ್ತದ ಡಿವಿಡೆಂಡ್ ಗಳು ಅವರ ಒಟ್ಟು ಆದಾಯ ಹೆಚ್ಚಾಗುವಂತೆ ಮಾಡಿದೆ. ಕಳೆದ ವರ್ಷ ಇಂಗ್ಲೆಂಡ್ ನ ಶ್ರೀಮಂತರ ಪಟ್ಟಿಯಲ್ಲಿ 275 ನೇ ಸ್ಥಾನದಲ್ಲಿದ್ದ ರಿಶಿ ಸುನಕ್ ಹಾಗೂ ಅಕ್ಷತಾ ಈ ವರ್ಷ 245 ನೇ ಸ್ಥಾನಕ್ಕೇರಿದ್ದಾರೆ. ಅವರ ಈ ವರ್ಷದ ಆದಾಯ 651 ಮಿಲಿಯನ್ ಡಾಲರ್ ಆಗಿದೆ. ಇದರಲ್ಲಿ ಅಕ್ಷತಾರ ಪಾಲು ದೊಡ್ಡದಿದೆ.
Bengaluru: ಟೈಲರ್ ಆಗಿದ್ದ ಈ ಬೆಂಗಳೂರಿನ ವ್ಯಕ್ತಿ ಇಂದು 10 ಸಾವಿರ ಕೋಟಿಗೆ ಒಡೆಯ
ಇಂಗ್ಲೆಂಡ್ ರಾಜ ಮೂರನೇ ಚಾರ್ಲ್ಸ್ ಅನ್ನು ಶ್ರೀಮಂತರ ಪಟ್ಟಿಯಲ್ಲಿ ಹಿಂದಿಕ್ಕಿದ್ದಾರೆ ರಿಶಿ ಸುನಕ್ ಹಾಗೂ ಅಕ್ಷತಾ. ಇನ್ನು ಭಾರತೀಯ ಮೂಲದ ಹಿಂದೂಜಾ ಕುಟುಂಬವು ಇಂಗ್ಲೆಂಡ್ ನ ಶ್ರೀಮಂತರ ಪಟ್ಟಿಯಲ್ಲಿ ಟಾಪ್ ಸ್ಥಾನವನ್ನು ಉಳಿಸಿಕೊಂಡಿದೆ. ಈ ಪಟ್ಟಿಯಲ್ಲಿ ಹಲವು ಭಾರತೀಯರಿದ್ದಾರೆ. ಎನ್ ಮಿತ್ತಲ್, ಅನಿಲ್ ಅಗರ್ವಾಲ್, ಪ್ರಕಾಶ್ ಲೋಹಿಯಾ, ಮೋಹ್ಸಿನ್, ವರ್ಷಾ ಇಂಜಿನಿಯರ್ ಇನ್ನೂ ಹಲವರಿದ್ದಾರೆ.