Robin Uthappa: ಆ ಐಪಿಎಲ್ ತಂಡ ನನ್ನನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ: ರಾಬಿನ್ ಉತ್ತಪ್ಪ

1
223
Robin Uthappa

Robin Uthappa

ಭಾರತ ಕ್ರಿಕೆಟ್ ತಂಡಕ್ಕೆ ಆಡಿರುವ ಕನ್ನಡಿಗ ರಾಬಿನ್ ಉತ್ತಪ್ಪ ಪ್ರತಿಭಾವಂತ ಬ್ಯಾಟ್ಸ್​ಮನ್ ಆಗಿದ್ದವರು. ಭಾರತ ಕ್ರಿಕೆಟ್ ತಂಡಕ್ಕೆ ಆಡಿದ್ದು ಮಾತ್ರವೇ ಅಲ್ಲದೆ ಐಪಿಎಲ್​ನಲ್ಲಿಯೂ ಹಲವು ಸೀಸನ್​ಗಳನ್ನು ರಾಬಿನ್ ಉತ್ತಪ್ಪ ಆಡಿದ್ದಾರೆ. ಐಪಿಎಲ್​ನಲ್ಲಿ ಆರ್​ಸಿಬಿ, ಕೆಕೆಆರ್, ಚೆನ್ನೈ ಸೂಪರ್ ಕಿಂಗ್ಸ್, ರಾಜಸ್ಥಾನ ರಾಯಲ್ಸ್, ಪುಣೆ ತಂಡಗಳ ಪರವಾಗಿ ಆಡಿದ್ದಾರೆ. ಈಗ ಐಪಿಎಲ್​ನಿಂದ ದೂರ ಉಳಿದಿರುವ ರಾಬಿನ್ ಉತ್ತಪ್ಪ, ಇತ್ತೀಚೆಗಿನ ಸಂದರ್ಶನವೊಂದರಲ್ಲಿ ಐಪಿಎಲ್ ತಂಡವೊಂದು ತಮ್ಮನ್ನು ಸರಿಯಾಗಿ ನಡೆಸಿಕೊಂಡಿಲ್ಲವೆಂದಿದ್ದಾರೆ.

ಪಾಡ್​ಕಾಸ್ಟ್ ಒಂದರಲ್ಲಿ ಮಾತನಾಡಿರುವ ರಾಬಿನ್ ಉತ್ತಪ್ಪ, ಕೆಕೆಆರ್ ತಂಡದ ಪರವಾಗಿ ಒಂದು ಸೀಸನ್​ನಲ್ಲಿ ಅತಿ ಹೆಚ್ಚು ರನ್​ಗಳನ್ನು ನಾನು ಹೊಡೆದಿದ್ದೆ, ಆದರೆ ಆ ತಂಡದವರು ನನ್ನನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ. ಹಿರಿಯ ಆಟಗಾರನಿಗೆ ನೀಡಬೇಕಾಗಿದ್ದ ಕನಿಷ್ಟ ಗೌರವವನ್ನು ಆ ತಂಡದವರು ನನಗೆ ನೀಡಲಿಲ್ಲ ಎಂದಿದ್ದಾರೆ ರಾಬಿನ್ ಉತ್ತಪ್ಪ.

‘ಕೆಕೆಆರ್ ಪರವಾಗಿ ನಾನು ಆಡಿದ ಕಡೆಯ ಪಂದ್ಯದಲ್ಲಿ ನಾನು ಅತ್ಯಂತ ಕೆಟ್ಟದಾಗಿ ಆಡಿದ್ದೆ. ನನಗೆ ಗೊತ್ತಾಯ್ತು, ಇದು ನನ್ನ ದಿನವಲ್ಲವೆಂದು. ಈ ಪಂದ್ಯದ ಬಳಿಕ ಏನಾಗಲಿದೆ ಎಂಬುದು ಸಹ ನನಗೆ ಗೊತ್ತಿತ್ತು. ಅದರ ಹಿಂದಿನ ವರ್ಷ ನನ್ನನ್ನು ಚೆನ್ನಾಗಿ ನೋಡಿಕೊಂಡಿದ್ದರು, ನನ್ನೊಂದಿಗೆ ಸರಿಯಾಗಿ ವರ್ತಿಸಿದ್ದರು. ಆದರೆ ನನ್ನನ್ನು ತಂಡದಿಂದ ಕೈಬಿಟ್ಟ ವರ್ಷ ನನ್ನನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ. ಒಬ್ಬ ಹಿರಿಯ ಆಟಗಾರನಿಗೆ ಹೀಗೆ ಮಾಡಿದ್ದು ಸರಿಯಲ್ಲ’ ಎಂದಿದ್ದಾರೆ.

ಫೀಲ್ಡ್​ನಲ್ಲಿ ಸಖತ್ ಚಮಕ್ ಕೊಟ್ಟ ವಿರಾಟ್ ಕೊಹ್ಲಿ, ಎಲ್ಲರೂ ಶಾಕ್

ಆ ಪಂದ್ಯದ ಬಳಿಕ ಮೂರು ತಿಂಗಳ ಕಾಲ ನಾನು ಬೇಸರದಲ್ಲಿದ್ದೆ. ಸೋಷಿಯಲ್ ಮೀಡಿಯಾದಿಂದ ದೂರ ಉಳಿದೆ. ನನ್ನ ಕುಟುಂಬವನ್ನು ಗುರಿ ಮಾಡಿ ನಿಂದಿಸಲಾಯ್ತು. ಆದರೆ ನಾನು ನನ್ನ ಕುಟುಂಬದ ಹಿತದೃಷ್ಟಿಯಿಂದ ಮೌನವಾಗಿಯೇ ಇದ್ದೆ. ನಾನು ಮತ್ತೆ ಖಿನ್ನತೆಗೆ ಜಾರುತ್ತಿದ್ದೇನೆ ಅನಿಸಿತ್ತು. ಆ ಸಮಯದಲ್ಲಿ ನನ್ನ ಮಗನಿಗೆ ಎರಡು ವರ್ಷ ವಯಸ್ಸು. ಅವನಿಗಾಗಿ ಹಾಗೂ ಪತ್ನಿಗಾಗಿ ನಾನು ಇದಕ್ಕೆಲ್ಲ ಅವಕಾಶ ಕೊಡಬಾರದು ಎನಿಸಿ ಸುಮ್ಮನಾದೆ’ ಎಂದಿದ್ದಾರೆ ಉತ್ತಪ್ಪ.

ಕೆಕೆಆರ್ ತಂಡದ ಪರವಾಗಿ ಒಂದು ಸೀಸನ್​ನಲ್ಲಿ ಅದ್ಭುತವಾಗಿ ರಾಬಿನ್ ಉತ್ತಪ್ಪ ಆಡಿದ್ದರು. ಸತತ ಎಂಟು ಇನ್ನಿಂಗ್ಸ್​ಗಳಲ್ಲಿ 40ಕ್ಕೂ ಹೆಚ್ಚು ರನ್ ಭಾರಿಸಿ ಆರೆಂಜ್ ಕ್ಯಾಪ್ ಪಡೆದಿದ್ದರು. ಆದರೆ ಆ ನಂತರದ ಸೀಸನ್​ನಲ್ಲಿ ಉತ್ತಮ ಪ್ರದರ್ಶನ ನೀಡಲಿಲ್ಲ. ಆ ನಂತರ ಚೆನ್ನೈಗೆ ಬಂದು ಎರಡು ಸೀಸನ್ ಆಡಿದರು. 2022ರ ಬಳಿಕ ರಾಬಿನ್ ಉತ್ತಪ್ಪ ಐಪಿಎಲ್​ನಲ್ಲಿ ಕಾಣಿಸಿಕೊಂಡಿಲ್ಲ.

1 COMMENT

LEAVE A REPLY

Please enter your comment!
Please enter your name here