Rohit Sharma: ಬುಮ್ರಾ ಇಲ್ಲದೆಯೂ ಗೆಲುವು, ಸೀಕ್ರೆಟ್ ಬಿಚ್ಚಿಟ್ಟ ರೋಹಿತ್ ಶರ್ಮಾ

0
49
Rohit Sharma

Rohit Sharma

ಭಾರತ ಕ್ರಿಕೆಟ್ ತಂಡ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದಿದೆ. ತಂಡದ ಪ್ರಮುಖ ಆಧಾರ ಸ್ಥಂಭವಾಗಿದ್ದ ಬುಮ್ರಾ ಗಾಯಗೊಂಡಿರುವಾಗ ಚಾಂಪಿಯನ್ಸ್ ಟ್ರೋಫಿ ಆಡಲು ತೆರಳಿದ ಭಾರತ ತಂಡದ ಮೇಲೆ ಹಲವು ಅನುಮಾನಗಳಿದ್ದವು ಆದರೆ ಅದನ್ನೆಲ್ಲ ಸುಳ್ಳು ಮಾಡಿ, ಇಡೀ ಟೂರ್ನಿಯಲ್ಲಿ ಒಂದೂ ಪಂದ್ಯ ಸೋಲದೆ ಭಾರತ ನಿಜವಾಗಿಯೂ ಚಾಂಪಿಯನ್ ಎನಿಸಿಕೊಂಡಿತು. ವಿಶ್ವಕಪ್ ಸೋಲಿನ ಬೇಸರವನ್ನು ನಿವಾಳಿಸಿ ಬಿಸಾಡಿದೆ. ಆದರೆ ಬುಮ್ರಾ ಇಲ್ಲದೆ ಟೂರ್ನಿಮೆಂಟ್ ಗೆ ಹೋದ ಭಾರತ ತಂಡದ ಮಮಡ್ ಸೆಟ್ ಹೇಗಿತ್ತು ಎಂಬುದನ್ನು ನಾಯಕ ರೋಹಿತ್ ಶರ್ಮಾ ವಿವರಿಸಿದ್ದಾರೆ.

“ಬುಮ್ರಾ ತಂಡದಲ್ಲಿ ಇರುವುದಿಲ್ಲ ಎಂಬುದು ಖಚಿತವಾಗುತ್ತಿದ್ದಂತೆ ನಾವು ಸಿದ್ಧತೆ ಆರಂಭ ಮಾಡಿಕೊಳ್ಳಲು ಆರಂಭ ಮಾಡಿದೆವು. ಬುಮ್ರಾ ಇಲ್ಲದ ಈ ಕೊರತೆಯನ್ನು ಹೇಗೆ ಸರಿದೂಗಿಸುವುದು ಎಂದು ಯೋಜನೆ ಮಾಡುವಾಗ, ಮೊಹಮ್ಮದ್ ಶಮಿ ನಮಗೆ ವರವಾಗಿ ಸಿಕ್ಕರು. ಐಸಿಸಿ ಟೂರ್ನಿಗಳಲ್ಲಿ ಅವರು ಈ ವರೆಗೆ ತೋರಿಸಿರುವ ಪ್ರದರ್ಶನ ಅದ್ಭುತವಾದುದು. ಆರಂಭದ ಪಂದ್ಯಗಳಲ್ಲಿ ಅವರು ತೋರಿದ ಪ್ರದರ್ಶನ ನಮಗೆ ಆತ್ಮವಿಶ್ವಾಸ ತುಂಬಿದವು. ಅದರ ಜೊತೆಗೆ, ಅರ್ಶ್‌ದೀಪ್ ಮತ್ತು ಹರ್ಷಿತ್‌ರಂತಹ ಬೌಲರ್‌ಗಳ ಮೇಲೆ ನಾವು ವಿಶ್ವಾಸವಿಟ್ಟಿದ್ದೆವು. ಪಂದ್ಯಕ್ಕೆ ಮುನ್ನ ಇದ್ದ 20-25 ದಿನಗಳನ್ನು ಅಭ್ಯಾಸಕ್ಕೆ ಮೀಸಲಿಟ್ಟೆವು. ಪಿಚ್ ನ ಸ್ಥಿತಿಗತಿಗಳನ್ನು ಅಧ್ಯಯನ ಮಾಡಲು ಆ ಸಮಯವನ್ನು ನಾವು ಬಳಸಿಕೊಂಡೆವು. ವ್ಯವಸ್ಥಿತವಾದ ಯೋಜನೆಗಳಿಂದಾಗಿ ನಾವು ಬುಮ್ರಾ ಇಲ್ಲದೆಯೂ ಅತ್ಯುತ್ತಮ ಪ್ರದರ್ಶನ ನೀಡಲು ಸಾಧ್ಯವಾಯಿತು’ ಎಂದಿದ್ದಾರೆ ರೋಹಿತ್ ಶರ್ಮಾ.

ಸತತವಾಗಿ ಎರಡು ಏಕದಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ನಿರಾಸೆ ಅನುಭವಿಸಿದ ಬಗ್ಗೆ ಮಾತನಾಡಿದ ರೋಹಿತ್ ಶರ್ಮಾ, ‘ನಾವು ಕೊನೆಯ ಘಟಕ್ಕೆ ಹೋಗಿ ಎಡವುತ್ತಿರುವ ಬಗ್ಗೆ ತಂಡದ ಒಳಗೆ ಬಹಳ ಸಮಯದಿಂದಲೂ ನಾವು ಚರ್ಚಿಸುತ್ತಲೇ ಇದ್ದೇವೆ.  2015 ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ, ಸೋತೆವು‌ ಅಂತಹ ಸ್ಥಿತಿಯೇ 2016 ಮತ್ತು 2017ರಲ್ಲೂ ಉಂಟಾಯಿತು. 2023 ವಿಶ್ವಕಪ್‌ನಲ್ಲಿ ಮೊದಲ ಒಂಬತ್ತು ಪಂದ್ಯಗಳಲ್ಲಿ ಉತ್ತಮವಾಗಿ ಆಡಿದೆವು, ಆದರೆ ಫೈನಲ್‌ನಲ್ಲಿ ಸೋತೆವು. 2019 ವಿಶ್ವಕಪ್‌ನಲ್ಲಿ ನಾನು ಐದು ಶತಕಗಳನ್ನು ಗಳಿಸಿದ್ದೆ, ಆದರೆ ತಂಡ ಗೆಲ್ಲದಿದ್ದಾಗ ಆ ಸಾಧನೆಗೆ ಮಹತ್ವವಿಲ್ಲ. ಹಾಗಾಗಿ ಈ ಬಾರಿ ಭಿನ್ನವಾದ ಮನಸ್ಥಿತಿಯೊಂದಿಗೆ ಫೀಲ್ಡ್ ಗೆ ಇಳಿದೆವು. ಪ್ರತಿಯೊಬ್ಬರೂ ಗೆಲುವನ್ನು ಮಾತ್ರ ಗುರಿಯಾಗಿಟ್ಟುಕೊಂಡಿದ್ದೆವು. ಇದರಿಂದಾಗಿ ಗೆಲುವು ಸುಲಭವಾಯಿತು ಎಂದಿದ್ದಾರೆ ಶರ್ಮಾ.

MS Dhoni: ನಿವೃತ್ತಿ ಆದ ಬಳಿಕ ಧೋನಿ ಗಳಿಸುತ್ತಿರುವ ಆದಾಯ ಎಷ್ಟು? ಮೂಲ ಯಾವುದು?

2017 ರ ವಿಶ್ವಕಪ್ ತಂಡದಲ್ಲಿ ಇರುತ್ತೀರ ಎಂಬ ಪ್ರಶ್ನೆಗೆ ಉತ್ತರಿಸಿದ ರೋಹಿತ್ ಶರ್ಮಾ, ‘ ನಿವೃತ್ತಿಯ ಬಗ್ಗೆ ನಾನು ಯೋಚಿಸಿಲ್ಲ. ಆದರೆ 2027 ವಿಶ್ವಕಪ್‌ ನಲ್ಲಿ ಆಡಲಿದ್ದೇನೆಯೇ ಇಲ್ಲವೇ ಎಂಬುದನ್ನು ಈಗಲೇ ಹೇಳಲು ಆಗದು. ನನ್ನ ಗಮನ ನನ್ನ ಆಟದ ಮೇಲೆ ಇದೆ. ಮತ್ತು ನನ್ನ ತಂಡದೊಂದಿಗೆ ಸಮಯವನ್ನು ಕಳೆಯುವುದರ ಮೇಲಿದೆ. ನನ್ನ ತಂಡದ ಸಹ ಆಟಗಾರರು ನನ್ನನ್ನು ತಂಡದಲ್ಲಿ ಬಯಸುತ್ತಾರೆಯೇ ಎಂಬುದೇ ನನಗೆ ಮುಖ್ಯವಾದ ವಿಷಯ ಎಂದು ತಮಾಷೆ ಮಾಡಿದರು ರೋಹಿತ್ ಶರ್ಮಾ.

LEAVE A REPLY

Please enter your comment!
Please enter your name here