Samsung: ಕಡಿಮೆ ಬೆಲೆಗೆ ಲಭ್ಯವಿದೆ ಸ್ಯಾಮ್ ಸಂಗ್ ನ ಈ ಶಕ್ತಿಶಾಲಿ ಫೋನು

0
304
Samsung

Samsung

ಸ್ಯಾಮ್ ಸಂಗ್, ಆಪಲ್ ಈ ಎರಡು ಫೋನುಗಳು ವಿಶ್ವದ ಮೊದಲ ಎರಡು ಅತ್ಯುತ್ತಮ ಫೋನ್ ಸಂಸ್ಥೆಗಳು. ಒನ್ ಪ್ಲಸ್, ಗೂಗಲ್ ಸಂಸ್ಥೆಗಳು ಸಹ ಗುಣಮಟ್ಟದ ಫೋನ್ ಗಳನ್ನು ನಿರ್ಮಾಣ ಮಾಡುತ್ತಿವೆಯಾದರೂ ಸ್ಯಾಮ್ ಸಂಗ್ ಹಾಗೂ ಆಪಲ್‌ನ ಗುಣಮಟ್ಟ ಮತ್ತು ವೇಗವನ್ನು ಹಿಂದಿಕ್ಕಲು ಸಾಧ್ಯವಾಗಿಲ್ಲ. ಹಾಗಾಗಿ ಈ ಎರಡು ಸಂಸ್ಥೆಯ ಮೊಬೈಲ್ ಫೋನ್ ಗಳ ದರ ಸಹ ಬಹಳ ಹೆಚ್ಚು. ಆದರೆ ಇದೀಗ ಸ್ಯಾಮ್ ಸಂಗ್ ನ ಶಕ್ತಿಶಾಲಿ ಫೋನ್ ಒಂದು ಕಡಿಮೆ ಬೆಲೆಗೆ ಲಭ್ಯವಾಗುತ್ತಿದೆ.

ಸ್ಯಾಮ್ ಸಂಗ್ ಹಲವು ಸೀರೀಸ್ ನ ಫೋನುಗಳನ್ನು ಮಾರುಕಟ್ಟೆಗೆ ತಂದಿದೆ. ತರುತ್ತಲಿದೆ. ಇದರಲ್ಲಿ ಎಸ್ ಸರಣಿಯ ಫೋನು ಅತ್ಯಂಯ ಶಕ್ತಿಶಾಲಿ, ಅತ್ಯಂತ ಕ್ಷಮತೆಯುಳ್ಳ ಹಾಗೂ ಸುಂದರ ಫೋನು.  ಇದೀಗ ಈ ಸ್ಯಾಮ್ ಸಂಗ್ ಎಸ್ ಸರಣೊಯ ಶಕ್ತಿಯುತ ಫೋನೊಂದು ರಿಯಾಯಿತಿ ದರದಲ್ಲಿ ಲಭ್ಯವಿದೆ. ಸ್ಯಾಮ್ ಸಂಗ್ ನ ಎಸ್ 24 ಶಕ್ತಿಶಾಲಿ ಫೋನುಗಳಲ್ಲಿ ಒಂದು. ಇದೀಗ ಈ ಫೋನಿನ ಮೇಲೆ ರಿಯಾಯಿತಿ ಘೋಷಣೆ ಆಗಿದೆ.

Google Pixel: ಸ್ಯಾಮ್ಸಂಗ್, ಆಪಲ್ ಗೆ ಠಕ್ಕರ್ ಕೊಟ್ಟ ಗೂಗಲ್, ಹೊಸ ಪಿಕ್ಸೆಲ್ ಫೋನು ನೋಡಿದಿರಾ?

ಎಸ್ 24 ಅಲ್ಟ್ರಾ, ಸ್ಯಾನ್ ಸಂಗ್ ಎಸ್ ಸರಣಿಯ ಈವರೆಗಿನ ಟಾಪ್ ಫೋನು, ಅಲ್ಟ್ರಾ ಬಿಡುಗಡೆಗೆ ಮುನ್ನ ಸ್ಯಾಮ್ ಸಂಗ್ ಎಸ್ ಟಾಪ್ ಫೋನಾಗಿತ್ತು. ಇದೀಗ ಎಸ್ 24 ಅಲ್ಟ್ರಾ ಬಿಡುಗಡೆ ಆದ ಮೇಲೆ ಈ ಫೋನಿನ ಬೆಲೆಯ ಮೇಲೆ ರಿಯಾಯಿತಿ ನೀಡಲಾಗಿದೆ. ಈ ಹಿಂದೆ ಎಸ್ 24 ಫೋನು, 74 ಸಾವಿರಕ್ಕೆ ಲಭ್ಯವಿತ್ತು. ಈಗ ಈ ಫೋನು ಕೇವಲ 56,459 ರೂಪಾಯಿಗಳಿಗೆ ಲಭ್ಯವಿದೆ. ಈ ಹಿಂದಿನ ಬೆಲೆಯ ಮೇಲೆ ಸುಮಾರು 30% ರಿಯಾಯಿತಿ ದೊರೆತಿದೆ.

56,459 ರೂಪಾಯಿಗಳ ಈ ಫೋನು, ಕೆಲವು ಕಾರ್ಡ್ ಡಿಸ್ಕೌಂಟ್, ಎಕ್ಸ್ ಚೇಂಜ್ ಆಫರ್ ಇನ್ನಿತರೆಗಳ ಬಳಿಕ ಫೋನಿನ ಬೆಲೆ ಇನ್ನಷ್ಟು ಇಳಿಕೆ ಆಗಲಿದೆ. ಒಟ್ಟಾರೆಯಾಗಿ 56,459 ರೂಪಾಯಿಗಳಿಗೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಫೋನುಗಳಲ್ಲಿ ಎಸ್ 24 ಪ್ರಮುಖವಾದುದು. ಇಷ್ಟು ಕಡಿಮೆ ದರಕ್ಕೆ ಇಷ್ಟು ಶಕ್ತಿಯುತವಾದ ಮತ್ತೊಂದು ಫೋನು ಮಾರುಕಟ್ಟೆಯಲ್ಲಿ ಲಭ್ಯವಿಲ್ಲ ಎಂದೇ ಹೇಳಬಹುದು.

LEAVE A REPLY

Please enter your comment!
Please enter your name here