Sanjay Dutt
‘ಕೆಜಿಎಫ್’ ಸಿನಿಮಾದ ಅಧೀರ ಯಾರಿಗೆ ಗೊತ್ತಿಲ್ಲ. ಸಂಜಯ್ ದತ್ ನಟಿಸಿದ್ದ ಈ ಪಾತ್ರ, ಯಶ್’ರ ರಾಕಿಭಾಯ್ ಪಾತ್ರದಷ್ಟೆ ಜನಪ್ರಿಯವಾಗಿತ್ತು. ಸಂಜಯ್ ದತ್, ಜನಪ್ರಿಯ ನಟರಾಗಿರುವ ಜೊತೆಗೆ ಉದ್ಯಮಿಯೂ ಆಗಿದ್ದು, ಹಲವು ಬೇರೆ ಬೇರೆ ಕ್ಷೇತ್ರದ ವ್ಯವಹಾರಗಳ ಮೇಲೆ ಹೂಡಿಕೆ ಮಾಡಿದ್ದಾರೆ. ಇತ್ತೀಚೆಗೆ ಅವರು ಮದ್ಯ ಬ್ರ್ಯಾಂಡ್ ಒಂದನ್ನು ಪ್ರಾರಂಭಿಸಿದ್ದರು, ಸಂಜಯ್’ರ ಹೊಸ ವಿಸ್ಕಿ ಕೆಲವೇ ತಿಂಗಳಲ್ಲಿ ದಾಖಲೆ ಸಂಖ್ಯೆಯಲ್ಲಿ ಮಾರಾಟವಾಗಿದೆ.
ಕಳೆದ ವರ್ಷ ಜೂನ್ ತಿಂಗಳಲ್ಲಿ ಸಂಜಯ್ ದತ್, ಗ್ಲೆನ್’ವಾಕ್ ಹೆಸರಿನ ವಿಸ್ಕಿ ಬ್ರ್ಯಾಂಡ್ ಪ್ರಾರಂಭ ಮಾಡಿದ್ದರು. ಪ್ರೀಮಿಯಮ್ ಸ್ಕಾಚ್ ವಿಸ್ಕಿ ಇದಾಗಿದ್ದು, ಈ ವಿಸ್ಕಿ ಮಾರುಕಟ್ಟೆಗೆ ಬಂದ ಕೆಲವೇ ತಿಂಗಳಲ್ಲಿ ದಾಖಲೆ ಸಂಖ್ಯೆಯಲ್ಲಿ ಮಾರಾಟವಾಗಿದೆ. ಮಾರುಕಟ್ಟೆಗೆ ಕಾಲಿಟ್ಟ ಏಳು ತಿಂಗಳಲ್ಲಿ ಗ್ಲೆನ್’ವಾಕ್ ನ 6 ಲಕ್ಷ ವಿಸ್ಕಿ ಬಾಟಲಿಗಳು ಮಾರಾಟವಾಗಿವೆ. ಅದೂ ಕೇವಲ ಭಾರತದ ಹತ್ತು ರಾಜ್ಯಗಳಲ್ಲಿ.
ಹೊಸ ಬ್ರ್ಯಾಂಡ್ ಆಗಿರುವ ಕಾರಣ ಪ್ರಸ್ತುತ ಭಾರತದ ಹತ್ತು ರಾಜ್ಯಗಳಲ್ಲಿ ಮಾತ್ರವೇ ಸಂಜಯ್ ದತ್’ರ ವಿಸ್ಕಿ ಮಾರಾಟ ಆಗುತ್ತಿದೆ. ಪ್ರಸ್ತುತ ಸಂಜಯ್ ದತ್’ರ ಈ ವಿಸ್ಕಿ ಮಹಾರಾಷ್ಟ್ರ, ಹರಿಯಾಣ, ಗೋವಾ, ದೆಹಲಿ, ಪಂಜಾಬ್, ಡಿಯು ಮತ್ತು ದಮನ್, ಉತ್ತರ ಪ್ರದೇಶ, ಮಧ್ಯ ಪ್ರದೇಶ ಮತ್ತು ಉತ್ತರಖಾಂಡಗಳಲ್ಲಿ ಮಾತ್ರವೇ ಮಾರಾಟಕ್ಕೆ ಲಭ್ಯವಿದೆ. ಭಾರತದಲ್ಲಿ ಈ ಬ್ರ್ಯಾಂಡ್’ನ ವಿಸ್ಕಿ ಮಾರಾಟಕ್ಕೆ ಲಭ್ಯವಿಲ್ಲ. ಕರ್ನಾಟಕದಲ್ಲಿ ಮದ್ಯ ನೀತಿಗಳಲ್ಲಿ ಭಿನ್ನತೆ ಇರುವ ಕಾರಣ ಇನ್ನೂ ಕೆಲ ತಿಂಗಳ ಬಳಿಕ ಗ್ಲೆನ್’ವಾಕ್ ವಿಸ್ಕಿ ಸವಿಯಲು ಸಿಗಲಿದೆ.
Pushpa 2 Breaking News: ‘ಪುಷ್ಪ 2’ ಗೆ ಶಾಕ್ ನೀಡಿದ ಕರ್ನಾಟಕ ಸರ್ಕಾರ, ಶೋಗಳು ರದ್ದು
ಗ್ಲೆನ್’ವಾಕ್ ಸ್ಕಾಚ್ ವಿಸ್ಕಿಯನ್ನು ಗುಣಮಟ್ಟದ ಕಾಳುಗಳನ್ನು ಬಳಸಿ ಮಾಲ್ಟ್ ಮಾಡಿ, ಏಜಿಂಗ್ ಮಾಡಿಸಲಾಗುತ್ತದೆ. ಪ್ರೀಮಿಯಂ ವಿಸ್ಕಿ ಮೇಕರ್ಸ್ ಸಂಸ್ಥೆಯಾದ ಕಾರ್ಟೆಲಗ ಬ್ರೋಸ್’ನ ಕೆಲವು ಪರಿಣಿತರ ಸಹಾಯ ಪಡೆದು ಸಂಜಯ್ ದತ್ ಈ ಸಂಸ್ಥೆ ಸ್ಥಾಪನೆ ಮಾಡಿದ್ದಾರೆ. ಗ್ಲೆನ್’ವಾಕ್ ನ 700 ಎಂಎಲ್ ಬಾಟಲಿಯ ಬೆಲೆ ಸದ್ಯಕ್ಕೆ 1500 ರೂಪಾಯಿಗಳಿದೆ. ಕೆಲವು ರಾಜ್ಯಗಳಲ್ಲಿ 1600 ರೂಪಾಯಿಗಳಿದೆ.