Dodaballapur: ಹೊಸ ನಗರ ನಿರ್ಮಾಣಕ್ಕೆ ದೊಡ್ಡಬಳ್ಳಾಪುರದ ಬಳಿ 25 ಎಕರೆ ಜಾಗ ನೀಡಿದ ಸರ್ಕಾರ

0
141
Doddaballapura,

Dodaballapur

ಬೆಂಗಳೂರು ನಗರ ಜನದಟ್ಟಣೆಯಿಂದ ತುಂಬಿ ತುಳುಕುತ್ತಿದ್ದು, ಈಗ ಬೆಂಗಳೂರಿನ ಹೊರವಲಯಗಳ ಕಡೆಗೆ ಬೆಳೆಸಲು ಸರ್ಕಾರ ನೀಲಿ ನಕ್ಷೆ ತಯಾರಿಸಿದೆ. ಈಗಾಗಲೇ, ದೇವನಹಳ್ಳಿ, ದೊಡ್ಡಬಳ್ಳಾಪುರ, ದಾಬಸ್ ಪೇಟೆಗಳ ಕಡೆಗಳಲ್ಲಿ ಹಲವು ಕಡೆ ಸ್ಥಳ ಗುರುತಿಸಿ ಕೆಲವು ಅಭಿವೃದ್ಧಿ ಯೋಜನೆಗಳಿಗೆ ಹಸಿರು ನಿಶಾನೆ ನೀಡಿದೆ‌. ಇದೀಗ ದೊಡ್ಡಬಳ್ಳಾಪುರದ ಬಳಿ ವಿಜ್ಞಾನ ನಗರಕ್ಕೆ ಸರ್ಕಾರ ಮುಂದಾಗಿದ್ದು, ಭೂಮಿ ಹಸ್ತಾಂತರವೂ ನಡೆದಿದೆ.

ಕೆಐಎಡಿಬಿ (ಕರ್ನಾಟಕ ಇಂಡಸ್ಟ್ರಿಯಲ್ ಎರಿಯಾಸ್ ಡೆವೆಲೆಪ್ ಮೆಂಟ್ ಬೋರ್ಡ್) ತನ್ನ 25 ಎಕರೆ ಜಾಗವನ್ನು ಸರ್ಕಾರ ನಿರ್ಮಿಸಲು ಯೋಜಿಸಿರುವ ವಿಜ್ಞಾನ ನಗರಕ್ಕೆ ನೀಡಲು ಒಪ್ಪಿಗೆ ನೀಡಿದೆ. ಈ 25 ಎಕರೆ ಜಾಗವು ದೊಡ್ಡಬಳ್ಳಾಪುರದ ಆದಿನಾರಾಯಣ ಹೊಸಹಳ್ಳಿ ಇಂಡಸ್ಟ್ರಿಯಲ್ ಏರಿಯಾದ ಸಮೀಪದಲ್ಲಿದೆ. ಈ ಬಗ್ಗೆ ಪತ್ರ ಬರೆದಿರುವ ಕೆಐಎಡಿಬಿ, ವಿಜ್ಞಾನ ನಗರ ಯೋಜನೆಗೆ ಕೇದ್ರ ಸಂಸ್ಕೃತಿ ಇಲಾಖೆಯ ಒಪ್ಪಿಗೆ ದೊರೆತ ಕೂಡಲೆ ಜಾಗವನ್ನು ಹಸ್ತಾಂತರಿಸಲು ಸಿದ್ಧವಾಗಿರುವುದಾಗಿ ತಿಳಿಸಿದೆ.

ONDC: ಸ್ವಿಗ್ಗಿ, ಜೊಮ್ಯಾಟೊಗೆ ಠಕ್ಕರ್ ಕೊಡುತ್ತಿರುವ ಬೆಂಗಳೂರು ಹೋಟೆಲಗ ಒಕ್ಕೂಟ

ವಿಜ್ಞಾನ ನಗರವು ವಿದ್ಯಾರ್ಥಿಗಳು, ಶಿಕ್ಷಕರ ಜ್ಞಾನ ವರ್ಧನೆ, ಕಲಿಕೆಗೆ ವಿಫುಲ ಅವಕಾಶಗಳನ್ನು ನೀಡುವುದಲ್ಲದೆ ಸಾಮಾನ್ಯ ಜನರಿಗೂ ಜ್ಞಾನ ಹಾಗೂ ಕುತೂಹಲದ ಆಗರವಾಗುವ ವಿಶ್ವಾಸ ಇರುವುದಾಗಿ ಕೆಐಎಡಿಬಿ ಪತ್ರದಲ್ಲಿ ಹೇಳಿದೆ. ಕೇಂದ್ರದೊಂದಿಗಿನ ಸಹಭಾಗಿತ್ವದಲ್ಲಿ ವಿಜ್ಞಾನ ನಗರ ನಿರ್ಮಿಸುವುದಾಗಿ ಸಿದ್ದರಾಮಯ್ಯ ಕಳೆದ ಬಜೆಟ್ ನಲ್ಲಿ ಹೇಳಿದ್ದರು. ವಿಜ್ಞಾನ ನಗರ ನಿರ್ಮಾಣಕ್ಕಾಗಿ 233 ಕೋಟಿ ಬಜೆಟ್ ಅನ್ನು ಸಹ ಮೀಸಲಿಡಲಾಗಿದೆ. ಕೇಂದ್ರ ಸರ್ಕಾರವು 114 ಕೋಟಿ ರೂಪಾಯಿ ಹಣವನ್ನು ಈ ಯೋಜನೆಗಾಗಿ ನೀಡಲಿದೆ

LEAVE A REPLY

Please enter your comment!
Please enter your name here