Bengaluru Mysore Highway
ಬೆಂಗಳೂರು-ಮೈಸೂರುಬ ಹೆದ್ದಾರಿ ಅತ್ಯಂತ ಹೆಚ್ಚು ಸಂಚಾರಿ ದಟ್ಟಣೆ ಹೊಂದಿರುವ ಹೆದ್ದಾರಿಗಳಲ್ಲಿ ಒಂದು. ಹೆದ್ದಾರಿ ಆರಂಭವಾದಾಗ ರಸ್ತೆಯಲ್ಲಿ ನಡೆದ ಸರಣಿ ಅಪಘಾತಗಳಿಂದಾಗಿ ಹೆದ್ದಾರಿಯ ಬಗ್ಗೆ ದೂರುಗಳು ಕೇಳಿ ಬಂದಿದ್ದವು. ಬೆಂಗಳೂರು-ಮೈಸೂರು ಹೆದ್ದಾರಿ ವೈಜ್ಞನಿಕವಾಗಿಲ್ಲವೆಂಬ ಆರೋಪಗಳು ಎದುರಾದವು. ಈಗ ಬೆಂಗಳೂರು-ಮೈಸೂರು ಹೆದ್ದಾರಿಯು ಅತಿ ಹೆಚ್ಚು ಸಂಚಾರಿ ದಟ್ಟಣೆ ಹೊಂದಿರುವ ರಸ್ತೆಗಳಲ್ಲಿ ಒಂದಾಗಿದ್ದು, ಸಂಚಾರ ದಟ್ಟಣೆಯನ್ನು ನಿರ್ವಹಿಸಲು ಇಂಟೆಲಿಜೆಂಟ್ ಟ್ರಾಫಿಕ್ ಮ್ಯಾನೇಜ್ ಮೆಂಟ್ ಸಿಸ್ಟಮ್ ಅನ್ನು ಬಳಸಲಾಗುತ್ತಿದೆ.
ಬೆಂಗಳೂರು- ಮೈಸೂರು ಹೆದ್ದಾರಿಯಾದ್ಯಂತ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದ್ದು, ಈ ಕ್ಯಾಮೆರಾಗಳು ಏಐ ಚಾಲಿತವಾಗಿರಲಿವೆ. ಈ ಕ್ಯಾಮೆರಾಗಳು ರಸ್ತೆ ನಿಮಯ ಉಲ್ಲಂಘನೆಮಾಡುವ ವಾಹನಗಳನಗನ್ನು ಶೀಘ್ರವೇ ಗುರುತಿಸಿಡ ವಿಧಿಸಲು ಸಹಾಯ ಮಾಡಲಿವೆ. ಫಾಸ್ಟ್ ಟ್ಯಾಗ್ ಮೂಲಕವೇ ದಂಡ ವಿಧಿಸಲು ಮತ್ತು ಸಂಗ್ರಹಿಸಲು ಸಹ ಯೋಚನೆ ನಡೆದಿದೆ.
ವಿಶ್ವಕಪ್ ಗೆದ್ದ ಪಿಚ್ನ ಮಣ್ಣು ತಿಂದ ರೋಹಿತ್ ಶರ್ಮಾ: ಕಾರಣವೇನು?
ಈ ಸ್ವಯಂ ಚಾಲಿತ ಕ್ಯಾಮೆರಾಗಳನ್ನು ಟೋಲ್ ಕೌಂಟರ್ ಗೆ ಹಾಗೂ ಫಾಸ್ಟ್ ಟ್ಯಾಗ್ ಗೆ ಲಿಂಕ್‌ಮಾಡಿ ರಸ್ತೆ ನಿಯಮ ಉಲ್ಲಘನೆಯಾದ ಕೂಡಲೆ ಫಾಸ್ಟ್ ಟ್ಯಾಗ್ ಮೂಲಕ ದಂಡ ಕಟ್ಟಿಸಿಳ್ಳಲಾಗುತ್ತದೆ. ಬೆಂಗಳೂರು-ಮೈಸೂರಿ ಹೆದ್ದಸರಿಯಾದ್ಯಂತ ಕ್ಯಾಮೆರಾ ಹಾಗೂ ಸ್ಪೀಡ್ ಗನ್ ಇನ್ನಿತರೆ ಡಿವೈಸ್ ಗಳನ್ನು ಈಗಾಗಲೇ ಅಳವಡಿಸಲಾಗಿದ್ದು ಜುಲೈ 1 ರಿಂದ ಇವುಗಳು ಕಾರ್ಯಾರಂಭ ಮಾಡಲಿವೆ.
ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಅಳವಡಿಸಿರುವ ಸ್ವ ಬುದ್ಧಿಮತ್ತೆ ಹೊಂದೊರುವ ಕ್ಯಾಮೆರಾಗಳು ಕಾರುಗಳ ನಂಬರ್ ಪ್ಲೇಕ್ ಗುರುತಿಸುವುದು, ರಸ್ತೆ ನಿಯಮಗಳ ಉಲ್ಲಂಘನೆ ಗುರುತಿಸುವುದು, ಸಂಚಾರ ದಟ್ಟಣೆ ಗುರುತಿಸುವುದು ಇನ್ನಿತರೆ ಕಾರ್ಯಗಳನ್ನು ಮಾಡಲಿದ್ದಾವೆ. ಇವುಗಳ ಅಳವಡಿಕೆಗಾಗಿ ಸುಮಾರು 8.50 ಕೋಟಿ ಹಣ ಖರ್ಚು ಮಾಡುತ್ತಿದೆ ಸರ್ಕಾರ.