SSLC: ಫಲಿತಾಂಶ ಮೇ 09ಕ್ಕೆ, ಫಲಿತಾಂಶ ವೀಕ್ಷಿಸುವುದು ಹೇಗೆ?

0
153
sslc

SSLC

2023-2024ನೇ ಸಾಲಿನ ಹತ್ತನೇ ತರಗತಿ ವಿದ್ಯಾರ್ಥಿಗಳ ಪರೀಕ್ಷೆ ಫಲಿತಾಂಶವನ್ನು ಮೇ 08 ಘೋಷಿಸುವುದಾಗಿ ಕೆಎಸ್ಇಎಬಿ (KSEAB) ಹೇಳಿತ್ತು. ಆದರೆ ಕೆಲವು ತಾಂತ್ರಿಕ ಸಮಸ್ಯೆಗಳಿಂದಾಗಿ ಫಲಿತಾಂಶ ಬಿಡುಗಡೆ ತಡವಾಗಿದೆ. ಮುಂಚೆ ಹೇಳಿದಂತೆ ಮೇ 08 ರ ಬದಲಿಗೆ ಅಲ್ಲದೆ ಮೇ 9 ರಂದು ಫಲಿತಾಂಶ ಪ್ರಕಟವಾಗಲಿದೆ.

ಕೆಎಸ್ಇಎಬಿಯು ಪ್ರಶ್ನೆ ಪತ್ರಿಕೆಗಳ ಮೌಲ್ಯಮಾಪನವನ್ನು ಪೂರ್ಣಗೊಳಿಸಿದೆ. ಆದರೆ ಫಲಿತಾಂಶವನ್ನು ಆನ್ ಲೈನ್ ನಲ್ಲಿ ಪ್ರಕಟಿಸುವ ಕಾರ್ಯದಲ್ಲಿ ತಾಂತ್ರಿಕ ಸಮಸ್ಯೆ ಎದುರಾದ ಕಾರಣ ಫಲಿತಾಂಶ ಪ್ರಕಟಣೆ ತಡವಾಗಿದೆ. ಮೇ 8 ರ ರಾತ್ರಿ ವೇಳೆಗೆ ಸಮಸ್ಯೆ ಪರಿಹಾರವಾಗುವ ಸಾಧ್ಯತೆ ಇದ್ದು, ಮೇ 9 ಕ್ಕೆ ಫಲಿತಾಂಶ ಪ್ರಕಟ ಮಾಡುವುದಾಗಿ ಹೇಳಿದೆ ಕೆಎಸ್ಇಎಬಿ. ಅಂತೆಯೇ ಮೇ 09 ಕ್ಕೆ ಫಲಿತಾಂಶ ಪ್ರಕಟವಾಗಲಿದೆ.

Bengaluru Police: ರಸ್ತೆಯಲ್ಲಿ ಜಗಳವಾದಾಗ ಏನು ಮಾಡಬೇಕು? ಬೆಂಗಳೂರು ಪೊಲೀಸರು ನೀಡಿದ್ದಾರೆ ಸೂಚನೆ

ಎಸ್ಎಸ್ಎಲ್ಸಿ ಫಲಿತಾಂಶವನ್ನು ಆನ್ ಲೈನ್ ನಲ್ಲಿ ವೀಕ್ಷಿಸಬಹುದಾಗಿದೆ. kseab.karnataka.gov.in ಹಾಗೂ karresults.nic.in ನಲ್ಲಿಯೂ ಫಲಿತಾಂಶವನ್ನು ವೀಕ್ಷಿಸಬಹುದಾಗಿದೆ. ಇದರ ಹೊರತಾಗಿ ನಿಗದಿತ ಶಾಲೆಗಳಿಗೂ ಫಲಿತಾಂಶ ರವಾನೆಯಾಗಿರುತ್ತದೆ ವಿದ್ಯಾರ್ಥಿಗಳು, ಪೋಷಕರು ಅಲ್ಲಿಯೂ ಫಲಿತಾಂಶ ವೀಕ್ಷಿಸಬಹುದಾಗಿದೆ.

ಮಾರ್ಚ್ 25 ರಿಂದ ಏಪ್ರಿಲ್ 6 ರ ವರೆಗೆ ರಾಜ್ಯದಲ್ಲಿ SSLC ಪರೀಕ್ಷೆಗಳು ನಡೆದಿದ್ದವು‌. ಸುಮಾರು 1.50 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.

LEAVE A REPLY

Please enter your comment!
Please enter your name here