Sun Pharmaceutical: ತನ್ನ 4500 ನೌಕರರನ್ನು ವಿದೇಶ ಪ್ರವಾಸಕ್ಕೆ ಕಳಿಸಿದ ಭಾರತೀಯ ಉದ್ಯಮಿ, ಯಾರೀತ?

0
175
Sun Pharmaceutical

Sun pharmaceutical

ಕಂಪೆನಿಗಳು ತನ್ನ ನೌಕರರನ್ನು ದುಡಿಯುವ ಮಷೀನ್ ಗಳಂತೆ ಮಾತ್ರವೇ ನೋಡುತ್ತವೆ. ಎಷ್ಟು ಸಾಧ್ಯವೋ ಅಷ್ಟು ಕಡಿಮೆ ಸಂಬಳಕ್ಕೆ ಹೆಚ್ಚು ದುಡಿಸಿಕೊಳ್ಳುತ್ತವೆ. ಆದರೆ ಭಾರತದ ದೊಡ್ಡ ಸಂಸ್ಥೆಯ ಮಾಲೀಲರೊಬ್ಬರು ತನ್ನ ಎಲ್ಲ ಸಿಬ್ಬಂದಿಯನ್ನು ಒಟ್ಟಿಗೆ ವಿದೇಶ ಪ್ರವಾಸಕ್ಕೆ ಕಳುಹಿಸಿದ್ದಾರೆ. ಅಲ್ಲಿಯೂ ಸಹ ನೌಕರರಿಗೆ ಒಳ್ಳೆ 5 ಸ್ಟಾರ್ ಆತಿಥ್ಯವನ್ನೇ ನೀಡಿದ್ದಾರೆ.

ಸನ್ ಫಾರ್ಮಾ, ಭಾರತದ ಅತಿ ದೊಡ್ಡ ಔಷದ ಉತ್ಪಾದನೆ ಹಾಗೂ ಮಾರಾಟಗಾರ ಸಂಸ್ಥೆ. ಈ ಸಂಸ್ಥೆಯ ಮಾಲೀಕ, ವ್ಯವಸ್ಥಾಪಕ ನಿರ್ದೇಶಕ ದಿಲೀಪ್ ಸಾಂಘ್ವಿ ತನ್ನ ಸಂಸ್ಥೆಯ 4500 ಸಿಬ್ಬಂದಿಯನ್ನು ಒಟ್ಟಿಗೆ ವಿದೇಶ ಪ್ರವಾಸಕ್ಕೆ ಕಳಿಸಿದ್ದಾರೆ. ಅದೂ ವಿಯೇಟ್ನಾಂ ದೇಶಕ್ಕೆ. ವಿಯೆಟ್ನಾಮ್ ನ ಹನೋಯಿ, ನಿಹ್ ಬಿನ್, ಹಾ ಲಾಂಗ್ ಬೇ ಇನ್ನಿತರೆ ಪ್ರಮುಖ ಪ್ರವಾಸಿ ತಾಣಗಳಿಗೆ ಭೇಟಿ ನೀಡಲಿದ್ದಾರೆ. ಎರಡು ವಾರಗಳ ಕಾಲ ಈ ಪ್ರವಾಸ ನಡೆಯಲಿದ್ದು, ಆಗಸ್ಟ್ 27 ರಿಂದ ಸೆಪ್ಟೆಂಬರ್ 7 ರ ವರೆಗೆ ವಿವಿಧ ಗುಂಪುಗಳಲ್ಲಿ 4500 ನೌಕರರು ಪ್ರವಾಸಕ್ಕೆ ತೆರಳಲಿದ್ದಾರೆ.

ಮೂರು ತಿಂಗಳ ಮುಂಚೆಯೇ ಪ್ರವಾಸಕ್ಕಾಗಿ ಎಲ್ಲ ವ್ಯವಸ್ಥೆಯನ್ನು ಸಂಸ್ಥೆ ಮಾಡಿಕೊಂಡಿತ್ತಂತೆ. ಪ್ರವಾಸಿಗರಿಗಾಗಿ ಹಲವು ಫೈವ್ ಸ್ಟಾರ್ ಹೋಟೆಲ್ ಗಳನ್ನು ಸಹ ಬುಕ್ ಮಾಡಲಾಗಿತ್ತು. ಪ್ರವಾಸಿಗರ ಅನುಕೂಲಕ್ಕಾಗಿ ಹಿಂದಿ ಮಾತನಾಡಬಲ್ಲ ಟೂರಿಸ್ಟ್ ಗೈಡ್ ಗಳನ್ನು ನಿಯೋಜನೆ ಮಾಡಲಾಗಿದೆ.

special children: ಬೆಂಗಳೂರಿನಲ್ಲಿ ಹೀಗೋಂದು ಅರ್ಥಪೂರ್ಣ ಸ್ವಾತಂತ್ರ್ಯೋತ್ಸವ

ಅಂದಹಾಗೆ ತನ್ನ ನೌಕರರಿಗೆ ವಿದೇಶ ಪ್ರವಾಸ ಮಾಡಿಸುತ್ತಿರುವ ಉದ್ಯಮಿಯ ಹೆಸರು ದಿಲೀಪ್ ಸಾಂಘ್ವಿ. ಇವರ ಆಸ್ತಿ ಮೌಲ್ಯ ಸುಮಾರು 24 ಲಕ್ಷ ಕೋಟಿ ರೂಪಾಯಿಗಳು. ಈ ವ್ಯಕ್ತಿಯ ವಾರ್ಷಿಕ ವ್ಯವಹಾರವೇ ಸುಮಾರು 4 ಲಕ್ಷ ಕೋಟಿ ರೂಪಾಯಿಗಳು. ಭಾರತದ ಟಾಪ್ ಶ್ರೀಮಂತರ ಪಟ್ಟಿಯಲ್ಲಿ ಇವರೂ ಸಹ ಒಬ್ಬರು. ಮಧ್ಯಮ ವರ್ಗದ ಕುಟುಂಬದವರಾಗಿದ್ದ ಸಾಂಘ್ವಿ 1982 ರಲ್ಲಿ ಕೇವಲ‌ 10 ಸಾವಿರ ರೂಪಾಯಿಯಿಂದ ಉದ್ಯಮ ಆರಂಭ ಮಾಡಿ ಈಗ ಲಕ್ಷಾಂತರ ಕೋಟಿಯ ಒಡೆಯರಾಗಿದ್ದಾರೆ.

LEAVE A REPLY

Please enter your comment!
Please enter your name here