Swiggy
ಬೆಂಗಳೂರು ಹಲವು ಸಂಸ್ಕೃತಿಯ, ಹಲವು ಧರ್ಮ, ಜಾತಿಯ ಜನ ವಾಸಿಸುವ ನಗರ. ಇಲ್ಲಿನ ಆಹಾರ ಪದ್ಧತಿಯೂ ಸಹ ಬಹಳ ಭಿನ್ನ. ವೆಜ್ಜು-ನಾನ್ ವೆಜ್ಜು ಎಲ್ಲವೂ ಇಲ್ಲಿ ಪ್ರಿಯವೇ. ಆದರೆ ಆಹಾರ ಡೆಲಿವರಿ ಮಾಡುವ ಸ್ವಿಗ್ಗಿ ಹೇಳುತ್ತಿರುವುದೇ ಬೇರೆ, ಬೆಂಗಳೂರಿನ ಜನ ನಾನ್ ವೆಜ್ ಗಿಂತಲೂ ವೆಜ್ ಆಹಾರಕ್ಕೆ ಹೆಚ್ಚಿನ ಆದ್ಯತೆ ಕೊಡುತ್ತಿದ್ದಾರಂತೆ.
ಸ್ವಿಗ್ಗಿ ಸ್ವೀಕರಿಸುವ ಮೂರು ಸಸ್ಯಹಾರಿ ಆರ್ಡರ್ ಗಳಲ್ಲಿ ಒಂದು ಆರ್ಡರ್ ಬೆಂಗಳೂರಿನದ್ದಾಗಿರುತ್ತದೆಯಂತೆ. ಆ ಲೆವೆಲ್ ಗೆ ಬೆಂಗಳೂರಿಗರು ವೆಜ್ ಫುಡ್ ಆರ್ಡರ್ ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ಜೊಮ್ಯಾಟೊ ಬೆಂಗಳೂರನ್ನು ಸಿಲಿಕಾನ್ ವ್ಯಾಲಿಯ ಬದಲಿಗೆ ವೆಜ್ ವ್ಯಾಲಿ ಎಂದು ಕರೆದಿದೆ. ಬೆಂಗಳೂರಿನ ಮೆಚ್ಚಿನ ವೆಜ್ ಊಟವೆಂದರೆ ಅದು ಮಸಾಲೆ ದೋಸೆ, ಪನ್ನೀರ್ ಬಿರಿಯಾನಿ ಮತ್ತು ಪನ್ನೀರ್ ಬಟರ್ ಮಸಾಲ. ಈ ಮೂರು ಐಟಂಗಳನ್ನು ಬೆಂಗಳೂರಿಗರು ಹೆಚ್ಚು ಆರ್ಡರ್ ಮಾಡಿದ್ದಾರೆ.
ಅದರಲ್ಲೂ ಬೆಳಿಗ್ಗೆ ಬ್ರೇಕ್ ಫಾಸ್ಟ್ ಸಮಯಕ್ಕೆ ಬರುವ ಆರ್ಡರ್ ಗಳಲ್ಲಿ ಶೇಕಡ 95% ಸಸ್ಯಹಾರವೇ ಇರುತ್ತದೆಯಂತೆ. ಮಸಾಲೆ ದೋಸೆ, ಇಡ್ಲಿ, ಪೊಂಗಲ್‌ಗಳು ಬೆಳಿಗಿನ ಉಪಹಾರದ ಸಮಯದಲ್ಲಿ ಹೆಚ್ಚು ಆರ್ಡರ್ ಮಾಡಲಾಗುವ ತಿಂಡಿಗಳು. ಇನ್ನು ಮಹಾರಾಷ್ಟ್ರದಲ್ಲಿ ವಡಾ ಪಾವ್, ದಾಲ್ ಕಿಚಡಿ ಮುಂತಾದ ಪದಾರ್ಥಗಳು ಹೆಚ್ಚು ಆರ್ಡರ್ ಆಗುತ್ತವೆ. ಮಸಾಲೆ ದೋಸೆ ಬೆಂಗಳೂರಿನಲ್ಲಿ ಮಾತ್ರವೇ ಅಲ್ಲದೆ ದೇಶದ ಹಲವು ನಗರಗಳಲ್ಲಿ ಆರ್ಡರ್ ಆಗುವ ಪ್ರಮುಖ ತಿನಿಸಂತೆ.
Indian Foods: ವಿದೇಶಗಳಲ್ಲಿ ನಿಷೇಧವಾಗಿದೆ ಭಾರತದ ಈ ಜನಪ್ರಿಯ ಆಹಾರಗಳು
ಜೊಮ್ಯಾಟೊ ಸದ್ಯಕ್ಕೆ ಭಾರತದ ಅತಿ ದೊಡ್ಡ ಆಹಾರ ಡೆಲಿವರಿ ಸಂಸ್ಥೆಯಾಗಿದ್ದು, ಇತ್ತೀಚೆಗಷ್ಟೆ ಈ ಸಂಸ್ಥೆ ತ್ರೈಮಾಸಿಕ ವರದಿಯಲ್ಲಿ 285 ಕೋಟಿ ರೂಪಾಯಿ ಲಾಭ ಮಾಡಿರುವುದಾಗಿ ಘೋಷಣೆ ಮಾಡಿದೆ. ಕಳೆದ ತ್ರೈಮಾಸಕ್ಕೆ ಹೋಲಿಸಿದರೆ 70% ಹೆಚ್ಚು ಲಾಭವನ್ನು ಈ ಸಂಸ್ಥೆ ಮಾಡಿದೆ. ಸ್ವಿಗ್ಗಿ ಸಹ ಫೂಡ್ ಡೆಲಿವರಿ ಸಂಸ್ಥೆಯಾಗಿದ್ದು, ಅದೂ ಸಹ ಉತ್ತಮ ಸೇವೆಗೆ ಹೆಸರುವಾಸಿಯಾಗಿದೆ.