Tamannaah Bhatia
ನಟಿ ತಮನ್ನಾ ಭಾಟಿಯಾ ಭಾರತದ ಬ್ಯುಸಿ ನಟಿಯರಲ್ಲಿ ಒಬ್ಬರು. ವಯಸ್ಸು 40 ಕ್ಕೆ ಸನಿಹ ಬಂದಿದ್ದರೂ ಈಗಲೂ ಗ್ಲಾಮರ್ ಉಳಿಸಿಕೊಂಡಿರುವ ತಮನ್ನಾ ಭಾಟಿಯಾ ತೆಲುಗು, ತಮಿಳು, ಹಿಂದಿ ಭಾಷೆಗಳ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ತಮನ್ನಾ ಪಡೆಯುವ ಸಂಭಾವನೆಯೂ ಕಡಿಮೆಯಿಲ್ಲ. ಆದರೂ ಯಾಕೋ ಈ ನಟಿ ತಮ್ಮ ಆಸ್ತಿಗಳನ್ನು ಅಡವಿಟ್ಟು ಕೋಟ್ಯಂತರ ರೂಪಾಯಿ ಸಾಲ ಪಡೆದಿದ್ದಾರೆ.
ತಮನ್ನಾ ಭಾಟಿಯಾ ಮುಂಬೈನಲ್ಲಿ ಕೆಲ ವರ್ಷಗಳ ಹಿಂದೆ ಆಸ್ತಿ ಖರೀದಿ ಮಾಡಿದ್ದರು. ಐಶಾರಾಮಿ ಅಪಾರ್ಟ್ ಮೆಂಟ್ ಗಳಲ್ಲಿ ಫ್ಲ್ಯಾಟ್ ಗಳನ್ನು ಖರೀದಿಸಿದ್ದರು. ಈಗ ಅವುಗಳಲ್ಲಿ ಮೂರು ಫ್ಲ್ಯಾಟ್ ಗಳನ್ನು ಬ್ಯಾಂಕ್ ನಲ್ಲಿ ಅಡಮಾನವಿಟ್ಟು ಅದರ ಮೇಲೆ ಕೋಟ್ಯಂತರ ರೂಪಾಯಿ ಸಾಲ ಪಡೆದಿದ್ದಾರೆ.
https://samasthanews.com/hathras-incident-who-is-narayana-sakar-hari-or-bhole-baba/
ಮುಂಬೈನ ಅಂಧೇರಿ ವೆಸ್ಟ್ ರಸ್ತೆ, ವೀರ ದೇಸಾಯಿ ರಸ್ತೆಯ ಅಪಾರ್ಟ್ ಮೆಂಟ್ ಗಳಲ್ಲಿನ ಮೂರು ರೆಸಿಡೆನ್ಷಿಯಲ್ ಫ್ಲ್ಯಾಟ್ ಗಳನ್ನು ಇಂಡಿಯನ್ ಬ್ಯಾಂಕ್ ನಲ್ಲಿ ಅಡಮಾನವಿಟ್ಟಿರುವ ತಮನ್ನಾ ಭಾಟಿಯಾ ಬ್ಯಾಂಕ್ ನಿಂದ ಬರೋಬ್ಬರಿ 7.84 ಕೋಟಿ ರೂಪಾಯಿ ಸಾಲ ಪಡೆದಿದ್ದಾರೆ. ಈ ಸಾಲಕ್ಕೆ ನಿರ್ದಿಷ್ಟ ಕಾರಣವನ್ನು ಅವರು ನೀಡಿದಂತಿಲ್ಲ. ಆದರೆ ಕೆಲವು ಮೂಲಗಳ ಪ್ರಕಾರ ತಮನ್ನಾ ಭಾಟಿಯಾ ಹೊಸ ಬ್ಯುಸಿನೆಸ್ ಪ್ರಾರಂಭಿಸುತ್ತಿದ್ದು ಅದರ ಮೇಲೆ ಬಂಡವಾಳ ಹೂಡಲೆಂದು ಸಾಲ ಮಾಡಿದ್ದಾರೆ ಎನ್ನಲಾಗುತ್ತಿದೆ.
ಕೆಲವು ಮೂಲಗಳ ಪ್ರಕಾರ ನಟಿ ತಮನ್ನಾ ಭಾಟಿಯಾ ಆಭರಣಗಳ ಮಳಿಗೆ ತೆರೆಯುತ್ತಿದ್ದಾರಂತೆ. ಈ ಹಿಂದೆ ಮಲಬಾರ್ ಸೇರಿದಂತೆ ಕೆಲವು ಆಭರಣ ಬ್ರ್ಯಾಂಡ್ ಗಳಿಗೆ ರೂಪದರ್ಶಿಯಾಗಿದ್ದ ತಮನ್ನಾ ಈಗ ತಮ್ಮದೇ ಆದ ಆಭರಣ ಮಳಿಗೆ ಪ್ರಾರಂಭ ಮಾಡುತ್ತಿದ್ದು ಅದಕ್ಕಾಗಿ ಕೋಟ್ಯಂತರ ರೂಪಾಯಿ ಬಂಡವಾಳ ಹೂಡುತ್ತಿದ್ದಾರೆ. ದೇಶದ ಪ್ರಮುಖ ನಗರಗಳಲ್ಲಿ ತಮ್ಮ ಆಭರಣ ಮಳಿಗೆಗಳನ್ನು ತೆರೆಯಲಿದ್ದಾರಂತೆ ತಮನ್ನಾ ಭಾಟಿಯಾ.
ತಮನ್ನಾ ಭಾಟಿಯಾ ಪ್ರಸ್ತುತ ಬಾಲಿವುಡ್ ನಟ ವಿಜಯ್ ವರ್ಮಾ ಅವರನ್ನು ಪ್ರೀತಿಸುತ್ತಿದ್ದು ಈ ಜೋಡಿ ಆಗಾಗ್ಗೆ ಕೈ-ಕೈ ಹಿಡಿದು ಸುತ್ತಾಡುತ್ತಾ ಇರುತ್ತದೆ. ಶೀಘ್ರವೇ ತಮನ್ನಾ ಹಾಗೂ ವಿಜಯ್ ವಿವಾಹವಾಗಲಿದ್ದಾರೆ ಎನ್ನಲಾಗುತ್ತಿದೆ.