Site icon Samastha News

Marriage: ತಮಿಳುನಾಡಿನಲ್ಲಿ‌ ವಿವಾದ ಎಬ್ಬಿಸಿದೆ ಬೆಂಗಳೂರು ಮಹಿಳೆಯ ಮದುವೆ

Marriage

Marriage

ಮದುವೆಗಳು ಸಂಭ್ರಮ ಮೂಡಿಸುತ್ತವೆ ಆದರೆ ತಮಿಳುನಾಡಿನಲ್ಲಿ ನಡೆದಿರುವ ಮದುವೆಯೊಂದು ಭಾರಿ ವಿವಾದ ಎಬ್ಬಿಸಿದೆ. ರಾಜ್ಯದಾದ್ಯಂತ ಕೋಲಾಹಲ ಎಬ್ಬಿಸಿದ್ದು, ಭಿನ್ನ ಸಂಪ್ರದಾಯ, ನಂಬಿಕೆ, ಸಮುದಾಯದ ಜನರ ನಡುವೆ ಭಿನ್ನಾಭಿಪ್ರಾಯ ಮೂಡುವಂತೆ ಮಾಡಿದೆ. ಒಇ ಮದುವೆಯಲ್ಲಿ ವರ ತಮಿಳುನಾಡಿನವರಾದರೆ, ವಧು ಬೆಂಗಳೂರಿನವರು.

ತಮಿಳುನಾಡಿನ ಕುಂಭಕೋಣಂನ ಪ್ರಸಿದ್ಧ ಶೈವ ಮಠ ಸೂರ್ಯನಾರ್ ಮಠದ ಮಠಾಧಿಪತಿ 54 ವರ್ಷದ ಮಹಾಲಿಂಗ ಸ್ವಾಮಿ ಅವರು 47 ವರ್ಷದ ಬೆಂಗಳೂರಿನ ಮಹಿಳೆ ಹೇಮಾಶ್ರೀ ಎಂಬುವರನ್ನು ಕೆಲ ದಿನದ ಹಿಂದೆ ವಿವಾಹ ಆಗಿದ್ದಾರೆ. ಸ್ಚಾಮೀಜಿಯ ವಿವಾಹ ವಿವಾದ ಎಬ್ಬಿಸಿದೆ. ಕಳೆದ ತಿಂಗಳು ಮದುವೆ ನಡೆದಿದ್ದು, ಇತ್ತೀಚೆಗೆ ಈ ಸುದ್ದಿ ಹೊರಬಿದ್ದಿದೆ. ಇದರ ಬೆನ್ನಲ್ಲೆ ಮಠದ ಭಕ್ತರು, ಸ್ವಾಮಿಯರು ಪೀಠದಿಂದ ಇಳಿದು ಬೇರೆಯವರಿಗೆ ಪೀಠಾಧಿಪತ್ಯ ನೀಡುವಂತೆ ಒತ್ತಾಯಿಸಿದ್ದಾರೆ.

ಮಂಗಳವಾರದಂದು ಮಠದ ಭಕ್ತರು ಏಕಾಏಕಿ ಮಠಕ್ಕೆ ನುಗ್ಗಿ ಮಹಾಲಿಂಗ ಸ್ವಾಮಿಯನ್ನು ಮಠದ ಆವರಣದಿಂದ ಬಲವಂತದಿಂದ ಹೊರಗೆ ಅಟ್ಟಿದ್ದಾರೆ. ಇದರ ಬೆನ್ನಲ್ಲೆ ಬೇರೆಯವರನ್ನು ಮಠಾಧಿಪತಿ ಮಾಡಬೇಕಿದ್ದ ಮಹಾಲಿಂಗ ಸ್ವಾಮಿ ಹಿಂದೂ ಧಾರ್ಮಿಕ ಚಾರಿಟೇಬಲ್ ವಿಭಾಗ ಹಾಗೂ ರಾಜ್ಯ ಸರ್ಕಾರಕ್ಕೆ ಪತ್ರ ಬರೆದು, ಮಠವನ್ನು ಸರ್ಕಾರಸ ವಶಕ್ಕೆ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ತನ್ನ ಭಕ್ತೆಯೊಂದಿಗೆ ಮಾಡಿಕೊಂಡಿರುವ ಮದುವಡಯನ್ನು ನೊಂದಣಿ ಸಹ ಮಾಡಿಸಿರುವ‌ ಮಠಾಧಿಪತಿ, ಈ ಹಿಂದೆ ಸಹ ಶೈವ ಮಠದ ಮಠಾಧಿಪತಿಗಳು ಮದುವೆ ಆಗಿದ್ದರು, ಮದುವೆ ಆದ ಬಳಿಕವೂ ಮಠಾಧಿಪತಿಗಳಾಗಿ ಮುಂದುವರೆದಿದ್ದರು ಎಂದಿದ್ದಾರೆ. ಈ ವಿವಾದ ಬಹಿರಂಗ ಆದ ಬಳಿಕ ಹಲವರು ತಮ್ಮ ಅಭಿಪ್ರಾಯಗಳನ್ನು ತೂರಲು ಆರಂಭಿಸಿದ್ದು, ಕೆಲವರು ಮಠಾಧಿಪತಿಗೆ ಬೆಂಬಲ ನೀಡಿದ್ದರೆ ಇನ್ನು ಕೆಲವರು ವಿರೋಧ ಮಾಡಿದ್ದಾರೆ.

ಹಿಂದೂ ಧಾರ್ಮಿಕ ಚಾರಿಟೇಬಲ್ ಬೋರ್ಡ್’ನ ಅಧಿಕಾರಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು ಸೆಕ್ಷನ್ 60 ಮತ್ತು 60 (ಎ) ಅಡಿಯಲ್ಲಿ ಮಠವನ್ನು ಸರ್ಕಾರ ತನ್ನ ಪರಿಧಿಗೆ ತೆಗೆದುಕೊಳ್ಳಬಹುದಾಗಿದ್ದು, ಇಲಾಖೆಯು ಈ ಬಗ್ಗೆ ಚರ್ಚೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಿದೆ ಎಂದಿದ್ದಾರೆ. ಮದುವೆಯಾಗಿರುವ ಮಠಾಧಿಪತಿ ಮಹಾಲಿಂಗಸ್ವಾಮಿ, ಈ ಮಠವನ್ನು ಸರ್ಕಾರ ತನ್ನ ವಶಕ್ಕೆ ತೆಗೆದುಕೊಳ್ಳುವ ವರೆಗೆ ಮಠದ ಆವರಣದಿಂದ ತಾವು ತೆರಳುವುದಿಲ್ಲ ಎಂದಿದ್ದು, ಸರ್ಕಾರ ಮಠವನ್ನು ವಶಕ್ಕೆ ತೆಗೆದುಕೊಂಡ ಬಳಿಕ ತಾವು ಕರ್ನಾಟಕಕ್ಕೆ ಹೋಗಿ ಪತ್ನಿಯೊಂದಿಗೆ ನೆಲೆಗೊಳ್ಳುವಹದಾಗಿ ಹೇಳಿದ್ದಾರೆ.

Biriyani: ಮೂರು ರೂಪಾಯಿಗೆ ಹೊಟ್ಟೆ ತುಂಬ ಬಿರಿಯಾನಿ!

ಅಂದಹಾಗೆ ವಿವಾದದ ಕೇಂದ್ರವಾಗಿರುವ ಕುಂಭಕೋಣಂನ ಶೈವ ಮಠಕ್ಕೆ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಇದೆ. ಅಲ್ಲದೆ ಪ್ರತಿ ತಿಂಗಳು ಲಕ್ಷಾಂತರ ರೂಪಾಯಿ ಆದಾಯ ಬರುತ್ತದೆ. ತಮಿಳುನಾಡಿನ ಪ್ರಮುಖ ಶೈವ ಮಠಗಳಲ್ಲಿ ಇದು ಸಹ ಒಂದಾಗಿದೆ.

Exit mobile version