TATA Sumo: ಮತ್ತೆ ಬರುತ್ತಿದೆ ಭಾರತೀಯರ ಮೆಚ್ಚಿನ ಕಾರು ಟಾಟಾ ಸುಮೊ, ಸಖತ್ ಆಗಿದೆ ಹೊಸ‌ ಡಿಜೈನ್

0
188
TATA SUMO

TATA Sumo

ಟಾಟಾ ಸುಮೋ ಭಾರತೀಯರ ಬಲು ಮೆಚ್ಚಿನ ಕಾರು. ಭಾರತದಲ್ಲಿ ಮೊಟ್ಟ ಮೊದಲ ಬಾರಿ ಅತಿ ಹೆಚ್ಚು ಮಾರಾಟವಾದ ಎಸ್’ಯುವಿ ಕಾರು ಟಾಟಾ ಸುಮೋ ಎನ್ನಬಹುದೇನೋ. ಟಾಟಾ ಸುಮೋ ಕಾರು ದೇಶದೆಲ್ಲೆಡೆ ಮಚಲನ ಮೂಡಿಸಿತ್ತು, ಭಾರತದ ಪ್ರವಾಸೋದ್ಯಮಕ್ಕೆ ಹೊಸ ಚೈತನ್ಯ ನೀಡಿತ್ತು. ಟಾಟಾ ಸುಮೋ ದಿಂದಾಗಿ ಲಕ್ಷಾಂತರ ಜನ ಟ್ರಾನ್ಸ್ ಪೋರ್ಟ್ ಉದ್ಯಕ್ಕೆ ಇಳಿದಿದ್ದರು. ಸಖತ್ ಗಟ್ಟಿ ಮತ್ತು ಕಂಫರ್ಟ್ ವಾಹನ ಆಗಿದ್ದ ಟಾಟಾ ಸುಮೊ ಹೊಸ ಅವತಾರದಲ್ಲಿ ಈಗ ಮತ್ತೆ ಬರುತ್ತಿದೆ.

ಟಾಟಾ ಕಂಪೆನಿಯ ಈ ಗಾಡಿ 1999 ರಲ್ಲಿ ಮೊದಲ ಬಾರಿಗೆ ಮಾರುಕಟ್ಟೆಗೆ ಬಂದಿತ್ತು. ಅಲ್ಲಿಂದ 2019 ರ ವರೆಗೆ ಇದರ ನಿರ್ಮಾಣ ಮಾಡಲಾಯ್ತು. ಆದರೆ ಟಾಟಾ ಸುಮೊದ ಅತ್ಯುತ್ತಮ ವರ್ಷಗಳೆಂದರೆ ಅದು 2000 ರಿಂದ 2012 ಈ ಅವಧಿಯಲ್ಲಿ ಲಕ್ಷಾಂತರ ಸುಮೋಗಳನ್ನು ಟಾಟಾ ಕಂಪೆನಿ ಮಾರಿದೆ. 2019 ರಲ್ಲಿ ಟಾಟಾ ಸಂಸ್ಥೆ ಸುಮೊ ವಾಹನಗಳ ನಿರ್ಮಾಣವನ್ನು ನಿಲ್ಲಿಸಿ ಬಿಟ್ಟಿತು. ತನ್ನ ಇತರೆ ಜನಪ್ರಿಯ ವಾಹನಗಳಾದ ನೆಕ್ಸಾನ್, ಪಂಚ್ ಇನ್ನಿತರೆ ವಾಹನಗಳ ಮೇಲೆ ಹೆಚ್ಚು ಗಮನ ಹರಿಸಿತು.

ಇದೀಗ ಟಾಟಾ ತನ್ನ ಐಕಾನಿಕ್ ಕಾರನ್ನು ಮತ್ತೆ ರಸ್ತೆಗೆ ಇಳಿಸುವ ಆಲೋಚನೆಯಲ್ಲಿದೆ. ಟಾಟಾ ಸುಮೋ ಅನ್ನು ಈಗ ಮತ್ತೆ ಬಿಡುಗಡೆ ಮಾಡಲು ಸಂಸ್ಥೆ ಸಜ್ಜಾಗಿದ್ದು, ಈ ಬಾರಿ ಹಲವು ಅಪ್ ಗ್ರೇಡ್ ಗಳನ್ನು ಈ ಕಾರಿಗೆ ಮಾಡಲಾಗುತ್ತಿದೆ. ಗ್ರಾಹಕರ ಅವಶ್ಯಕತೆಗಳಿಗೆ ಅನುಗುಣವಾಗಿ ಲಭ್ಯವಿರುವ ಹಲವು ತಂತ್ರಜ್ಞಾನವನ್ನು ಈ ಕಾರಿಗೆ ಅಳವಡಿಸಲು ಕಂಪೆನಿ ಮುಂದಾಗಿದೆ. ಈ ಹಿಂದೆ ಟಾಟಾ ಸುಮೋ ಅನ್ನು ಟ್ರಾವೆಲರ್ಸ್ ಗಾಡಿಯಾಗಿ ಪರಿಚಯಿಸಲಾಗಿತ್ತು. ಆದರೆ ಈ ಬಾರಿ ಪವರ್ ಫುಲ್ ಎಸ್’ಯುವಿ ಆಗಿ ಪರಿಚಯಿಸಲಾಗುತ್ತಿದೆ. ಮಹೀಂದ್ರಾ ಸಂಸ್ಥೆಯ ಸ್ಕಾರ್ಪಿಯೊ ಮತ್ತು ಎಕ್ಸ್’ಯುವಿ ಗಳಿಗೆ ಪ್ರತಿಸ್ಪರ್ಧಿಯಾಗಿ ಈ ಕಾರನ್ನು ಹೊರತರಲಾಗುತ್ತಿದೆ.

Toyota: ಅತ್ಯಂತ ಕಡಿಮೆ ಬೆಲೆಗೆ ಹೊಸ ಫಾರ್ಚ್ಯುನರ್, ಖರೀದಿಸಲು ಸಿದ್ಧವೆ?

ಟಾಟಾ ಸುಮೋದ ಡಿಸೈನ್ ನ ಕೆಲ ಚಿತ್ರಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಹಳೆಯ ಟಾಟಾ ಸುಮೋದ ಚಚ್ಚೌಕ ಡಿಸೈನ್ ಗೆ ಹಲವು ಫೇಸ್ ಲಿಫ್ಟ್ ಗಳನ್ನು ಟಾಟಾ ಮಾಡಿದಂತಿದೆ. ಇದೇ ವರ್ಷದಲ್ಲಿ ಟಾಟಾ ಸಂಸ್ಥೆ ಸುಮೊ‌ ವಾಹನವನ್ನು ರಸ್ತೆಗೆ ಬಿಡಲಿದೆ ಎನ್ನಲಾಗುತ್ತಿದೆ. ಕಾರಿನ ಬೆಲೆ ಎಷ್ಟಿರಲಿದೆ ಎಂಬಿತ್ಯಾದಿ ಮಾಹಿತಿ ಮುಂದಿನ ದಿನಗಳಲ್ಲಿ ಲಭ್ಯ ಆಗಲಿದೆ.

LEAVE A REPLY

Please enter your comment!
Please enter your name here