Tesla
ಟೆಸ್ಲಾ ಸಂಸ್ಥೆ ತನ್ನ ಹೊಸ ಸಂಶೋಧನೆಗಳಿಂದ ವಿಶ್ವದಾದ್ಯಂತ ಜನಪ್ರಿಯ. ಬ್ಯಾಟರಿ ಚಾಲಿತ ಕಾರುಗಳನ್ನು ಜನಪ್ರಿಯಗೊಳಿಸಿದ ಟೆಸ್ಲಾ ಸಂಸ್ಥೆ, ಅಂತರಿಕ್ಷ ಯಾನದಲ್ಲೂ ಸಹ ಟೆಸ್ಲಾ ಹಲವು ಮೈಲಿಗಲ್ಲುಗಳನ್ನು ಸ್ಥಾಪನೆ ಮಾಡಿದೆ. ಸ್ಟಾರ್ ಲಿಂಕ್ ಮೂಲಕ ಇಂಟರ್ನೆಟ್ ಕನೆಕ್ಷನ್ ಕ್ಷೇತ್ರದಲ್ಲಿ ಕ್ರಾಂತಿ ತಂದಿದೆ. ಇದೀಗ ಈ ಸಂಸ್ಥೆ ಮೊಬೈಲ್ ಉದ್ಯಮಕ್ಕೆ ಕಾಲಿರಿಸಿದೆ.
ಟೆಸ್ಲಾ ಸಂಸ್ಥೆ ಮೊಬೈಲ್ ಉತ್ಪಾದನೆ ಮತ್ತು ಮಾರಾಟಕ್ಕೆ ಮುಂದಾಗಿದೆ. ಪ್ರಸ್ತುತ, ಇಡೀ ವಿಶ್ವಲ್ಲಿ ಆಪಲ್ ಸಂಸ್ಥೆಯ ಐಫೋನ್ ಗಳು ಹಾವಳಿ ಎಬ್ಬಿಸಿವೆ. ಐಫೋನ್ ವಿಶ್ವದಲ್ಲೇ ಅತಿ ಹೆಚ್ಚು ಮಾರಾಟ ಆಗುವ ಫೋನ್ ಎನಿಸಿಕೊಂಡಿದೆ. ಇದೀಗ ಟೆಸ್ಲಾ ಸಂಸ್ಥೆ ಮೊಬೈಲ್ ಉದ್ಯಮಕ್ಕೆ ಕಾಲಿಡುತ್ತಿದ್ದು, ಐಫೋನ್ ಗೆ ಸೂಕ್ತ ಪ್ರತಿಸ್ಪರ್ಧೆ ನೀಡಲು ಸಜ್ಜಾಗಿದೆ. ಈ ಹಿಂದೆ ಟೆಸ್ಲಾ ಮಾಲೀಕ ಎಲಾನ್ ಮಸ್ಕ್ ಸಹ ತಾವು ಐಫೋನ್ ಗೆ ಠಕ್ಕರ್ ಕೊಡುವುದಾಗಿ ಬಹಿರಂಗವಾಗಿ ಹೇಳಿಕೊಂಡಿದ್ದರು.
ಟೆಸ್ಲಾ ಸಂಸ್ಥೆಯ ಫೋನುಗಳು ಡಿಸೈನ್ ಇಂದ ಹಿಡಿದು, ಕಾರ್ಯಕ್ಷಮತೆ, ಆಪರೇಟಿಂಗ್ ಸಿಸ್ಟಮ್, ಕ್ಯಾಮೆರಾ, ಫೀಚರ್ ಎಲ್ಲದರಲ್ಲೂ ಈಗಿರುವ ಹಲವು ಫೋನ್ ಗಳಿಗಿಂತಲೂ ಉತ್ತಮವಾಗಿರಲಿದೆ ಎನ್ನಲಾಗುತ್ತಿದೆ. ಕರೆ ಮಾಡಲು, ಸಂದೇಶ ಕಳಿಸಲು, ಮನೊರಂಜನೆಗಾಗಿ ಮಾತ್ರವೇ ಅಲ್ಲದೆ, ವ್ಯಕ್ತಿಯೊಬ್ಬ ದಿನನಿತ್ಯ ನಿಋವಹಿಸುವ ಹಲವು ಕೆಲಸಗಳಲ್ಲಿ ಟೆಸ್ಲಾದ ಫೋನ್ ನೆರವು ನೀಡಲಿದೆಯಂತೆ.
ಕೆಲವು ಮೂಲಗಳ ಪ್ರಕಾರ ಟೆಸ್ಲಾದ ಫೋನುಗಳು ಚಾರ್ಜರ್ ರಹಿತವಾಗಿರುತ್ತವೆ ಎನ್ನಲಾಗುತ್ತಿದೆ. ಯುರನಿಯಮ್ ಬ್ಯಾಟರಿಗಳನ್ನು ಈ ಫೋನ್ ನಲ್ಲಿ ಬಳಸುವ ಯತ್ನ ಚಾಲ್ತಿಯಲ್ಲಿದ್ದು, ಈ ಫೋನ್ ಗಳನ್ನು ಚಾರ್ಜ್ ಗೆ ಹಾಕುವ ಅವಶ್ಯಕತೆಯೇ ಇರುವುದಿಲ್ಲ ಎನ್ನಲಾಗುತ್ತಿದೆ. ಇದರ ಜೊತೆಗೆ ಟೆಸ್ಲಾದ ಗ್ರೋಕ್ ಎಐನ ಅತ್ಯುನ್ನತ ವರ್ಷನ್ ಅನ್ನು ಈ ಫೋನ್ ನಲ್ಲಿ ಅಳವಡಿಸಲಾಗುತ್ತಿದೆ. ಈ ಎಐ ಬಳಕೆದಾರನಿಗೆ ಹಲವು ವಿಧಾನಗಳಲ್ಲಿ ಕಾರ್ಯ ನಿರ್ವಹಿಸಲಿದೆಯಂತೆ.
Business: ಕರ್ನಾಟಕದಲ್ಲಿ 40 ಸಾವಿರ ಕೋಟಿ ಕಳ್ಳ ವ್ಯವಹಾರ, ಯಾವುದಕ್ಕೂ ಲೆಕ್ಕ ಇಲ್ಲ
ಟೆಸ್ಲಾ ಸಂಸ್ಥೆ ಇತ್ತೀಚೆಗಷ್ಟೆ ತನ್ನ ಕಾರು ಮಾರುಕಟ್ಟೆಯನ್ನು ವಿಸ್ತರಣೆ ಮಾಡಲು ಮುಂದಾಗಿದೆ. ಭಾರತಕ್ಕೆ, ಟೆಸ್ಲಾ ಕಾರುಗಳು ಕಾಲಿಡುತ್ತಿವೆ. ಟೆಸ್ಲಾ ಭಾರಕ್ಕೆ ಬರುವ ಸಮಯಕ್ಕೆ ಸರಿಯಾಗಿ ಅಮೆರಿಕ ತೆರಿಗೆ ಯುದ್ಧ (ಟ್ಯಾಕ್ಸ್ ವಾರ್) ಶುರು ಮಾಡಿದ್ದು, ಭಾರತ ಬೇರೆ ದಾರಿಯಿಲ್ಲದೆ ವಿದೇಶದಿಂದ ಆಮದು ಮಾಡಿಕೊಳ್ಳುತ್ತಿದ್ದ ಕಾರುಗಳ ಮೇಲಿನ ತೆರಿಗೆ ಇಳಿಕೆ ಮಾಡಿದೆ. ಇದು ಟೆಸ್ಲಾ ಕಾರುಗಳಿಗೆ ಭಾರಿ ಅನುಕೂಲ ಮಾಡಿಕೊಟ್ಟಿದೆ. ಟೆಸ್ಲಾ ಕಾರುಗಳು ಮಾತ್ರವೇ ಅಲ್ಲದೆ ಟೆಸ್ಲಾ ಸಂಸ್ಥೆಯ ಇಂಟರ್ನೆಟ್ ಸೇವೆಯಾದ ಸ್ಟಾರ್ ಲಿಂಕ್ ಸಹ ಭಾರತಕ್ಕೆ ಬರುತ್ತಿದೆ.