Tesla: ಭಾರತಕ್ಕೆ ಬರುವ ಮುನ್ನ ಟೆಸ್ಲಾಗೆ ಹಿನ್ನಡೆ, ಭಾರತದಲ್ಲಿ ಸಿಗಲಿದೆಯಾ ಯಶಸ್ಸು

0
270
Tesla

Tesla

ಜಗತ್ತಿನ ಆಟೋಮೊಬೈಲ್ ಉದ್ಯಮದಲ್ಲಿ ಕ್ರಾಂತಿ ಉಂಟಾಗಲು ಕಾರಣವಾದ ಟೆಸ್ಲಾ (Tesla) ಸಂಸ್ಥೆಯ ಕಾರುಗಳು ಭಾರತೀಯ ಮಾರುಕಟ್ಟೆಗೂ ಲಗ್ಗೆ ಇಡಲಿವೆ. ದಶಕಗಳಿಂದಲೂ ಕುಂಟುತ್ತಾ ಸಾಗುತ್ತಿದ್ದ ಕಾರು ತಂತ್ರಜ್ಞಾನದಲ್ಲಿ ಟೆಸ್ಲಾ ಕಾರು ಭಾರಿ ದೊಡ್ಡ ಕ್ರಾಂತಿಯನ್ನೇ ಮಾಡಿದೆ. ಟೆಸ್ಲಾ ಸ್ವಯಂ ಚಾಲಿತ, ಬ್ಯಾಟರ ಚಾಲಿತ ಕಾರುಗಳನ್ನು ಮಾರುಕಟ್ಟೆಗೆ ಪರಿಚಯಿಸಿದ್ದಲ್ಲದೆ ಗ್ರಾಹಕರು ಮುಗಿಬಿದ್ದು ಟೆಸ್ಲಾ ಕಾರುಗಳನ್ನು ಖರೀದಿಸುವಂತೆ ಮಾಡಿತು. ಟೆಸ್ಲಾದ ಸೆಲ್ಫ್ ಡ್ರೈವ್ ಕಾರುಗಳು ಭಾರತದ ರಸ್ತೆಗಳಿಗೆ ಸರಿ ಹೊಂದುವುದಿಲ್ಲ ಎಂಬ ಮಾತುಗಳು ಆರಂಭದಿಂದಲೂ ಕೇಳಿ ಬರುತ್ತಿತ್ತು. ಆದರೆ ಇದೀಗ ಟೆಸ್ಲಾ ಭಾರತದ ಮಾರುಕಟ್ಟೆಗೆ ಪ್ರವೇಶ ಮಾಡುವುದು ಬಹುತೇಕ ಖಾತ್ರಿ ಆಗಿದೆ. ಆದರೆ ಇದರ ಬೆನ್ನಲ್ಲೆ ಟೆಸ್ಲಾಗೆ ವಿಶ್ವಮಟ್ಟದಲ್ಲಿ ಹಿನ್ನಡೆ ಸಹ ಆಗಿದೆ.

ಟೆಸ್ಲಾ ಸಂಸ್ಥೆಯ ಕಾರಿನ ಮಾರಾಟ ಕಳೆದ ತ್ರೈಮಾಸಿಕ ವರ್ಷದಲ್ಲಿ ಕುಸಿದಿದೆ. ಹಲವು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಟೆಸ್ಲಾ ಕಾರಿನ ಮಾರಾಟದಲ್ಲಿ ಕುಸಿತ ಕಂಡಿದ್ದು, ಇದರಿಂದಾಗಿ ಕೆಲವು ಕಠಿಣ ನಿರ್ಧಾರಗಳನ್ನು ಟೆಸ್ಲಾ ಮಾಲೀಕ ಎಲಾನ್ ಮಸ್ಕ್​ ತೆಗೆದುಕೊಳ್ಳುತ್ತಿದ್ದಾರೆ. ಸಂಸ್ಥೆಯ ಸುಮಾರು 14 ಸಾವಿರ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುವ ನಿರ್ಣಯವನ್ನು ಎಲಾನ್ ಮಸ್ಕ್ ಮಾಡಿದ್ದಾರೆ.

ಈ ಹಿಂದೆ ಈ ಬಗ್ಗೆ ಟ್ವೀಟ್ ಮಾಡಿದ್ದ ಎಲಾನ್ ಮಸ್ಕ್, ಕೆಲವು ವಿಭಾಗಗಳಲ್ಲಿ ಒಂದೇ ಉದ್ಯೋಗವನ್ನು ಹಲವರು ಮಾಡುತ್ತಿರವುದು, ನಿಗದಿತ ಕೆಲಸಕ್ಕೆ ಅಗತ್ಯಕ್ಕಿಂತಲೂ ಹೆಚ್ಚಿನ ಜನ ಇರುವುದು ಗಮನಕ್ಕೆ ಬಂದಿದೆ ಎಂದಿದ್ದರು. ಇದೇ ಕಾರಣಕ್ಕೆ ಈಗ ಸಂಸ್ಥೆಯ ಸುಮಾರು 10% ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕುತ್ತಿದ್ದಾರೆ ಎಲಾನ್ ಮಸ್ಕ್. ಇದು ಬಹಳ ಕಠಿಣವಾದ ನಿರ್ಧಾರ, ಈ ರೀತಿಯ ನಿರ್ಧಾರ ಮಾಡುವುದು ನನಗೆ ಬಹಳ ಕಠಿಣವಾದದ್ದು, ಆದರೆ ಈ ನಿರ್ಧಾರವನ್ನು ನಾನು ಮಾಡಲೇ ಬೇಕಿದೆ ಎಂದು ಎಲಾನ್ ಟ್ವೀಟ್ ಮಾಡಿದ್ದಾರೆ.

ರಾಹುಲ್ ಗಾಂಧಿ ಆಸ್ತಿ ಎಷ್ಟು ಕೋಟಿ, ಎಲ್ಲಿಂದ ಬರುತ್ತಿದೆ ಆದಾಯ? ಹೂಡಿಕೆ ಮಾಡಿದ್ದು ಎಲ್ಲೆಲ್ಲಿ?

ಭಾರತಕ್ಕೆ ಟೆಸ್ಲಾ ಪ್ರವೇಶಿಸುವುದು ಬಹುತೇಕ ಖಾತ್ರಿಯಾಗಿದೆ. ಸುಮಾರು 500 ಮಿಲಿಯನ್ ಡಾಲರ್ ಅಂದರೆ ಸುಮಾರು 4200 ಕೋಟಿ ರೂಪಾಯಿ ಹೂಡಿಕೆಯನ್ನು ಭಾರತದಲ್ಲಿ ಮಾಡಲಿದೆ ಟೆಸ್ಲಾ. ಭಾರತದಲ್ಲಿಯೇ ಕಾರು ನಿರ್ಮಾಣ ಘಟಕ ತೆರೆದು ಇಲ್ಲಿಯೇ ಕಾರು ನಿರ್ಮಿಸಿ, ಭಾರತ ಸೇರಿದಂತೆ ಇನ್ನೂ ಕೆಲವು ದೇಶಗಳಿಗೆ ಇಲ್ಲಿಂದಲೇ ಸರಬರಾಜು ಸಹ ಮಾಡಲಿದೆ. ಟೆಸ್ಲಾ ಇಲ್ಲಿ ಹೂಡಿಕೆ ಮಾಡಲೆಂದೇ ಭಾರತ ಸರ್ಕಾರವು ವಿದ್ಯುತ್ ಚಾಲಿತ ವಾಹನಗಳ ನಿಯಮಗಳಲ್ಲಿ ಕೆಲವು ಬದಲಾವಣೆಯನ್ನು ಮಾಡಿದೆ. ಕಾರ್ಮಿಕ ನೀತಿಯಲ್ಲಿಯೂ ಸಹ ಕೆಲವು ಬದಲಾವಣೆಗಳು ಆಗಲಿವೆ ಎನ್ನಲಾಗುತ್ತಿದೆ.

LEAVE A REPLY

Please enter your comment!
Please enter your name here