Stock Market
ಚಿನ್ನ, ರಿಯಲ್ ಎಸ್ಟೇಟ್ ಮತ್ತು ಷೇರು ಮಾರುಕಟ್ಟೆ ಸದ್ಯಕ್ಕೆ ಸಾಮಾನ್ಯ ಭಾರತೀಯರಿಗೆ ಲಭ್ಯವಿರುವ ಅತ್ಯುತ್ತಮ ಹೂಡಿಕೆ ಕ್ಷೇತ್ರಗಳು. ಇದರಲ್ಲಿ ರಿಯಲ್ ಎಸ್ಟೇಟ್ ಹೂಡಿಕೆ ಸಾಮಾನ್ಯರ ಪಾಲಿಗೆ ಅತ್ಯಂತ ಕಷ್ಟವಾದುದು. ಚಿನ್ನದ ಹೂಡಿಕೆ ಒಳ್ಳೆಯದಾದರೂ ಲಾಭದ ಪ್ರಮಾಣದ ಸಾಧಾರಣವಾಗಿರುತ್ತದೆ. ಷೇರು ಮಾರುಕಟ್ಟೆ ಎಲ್ಲರ ಕೈಗೆಟುಕುವ, ತೀರ ಸಣ್ಣ ಮೊತ್ತವನ್ನು ಸಹ ಹೂಡಿಕೆ ಮಾಡಬಹುದಾದ ಸ್ಥಳ. ಯೋಚಿಸಿ ಸರಿಯಾಗಿ ಹೂಡಿಕೆ ಮಾಡಿದರೆ ರಿಯಲ್ ಎಸ್ಟೇಟ್ ಗಿಂತಲೂ ಹೆಚ್ಚು ಲಾಭವನ್ನು ತಂದುಕೊಡಬಹುದು. ಅದಕ್ಕೆ ಈ ಹತ್ತು ಸ್ಟಾಕ್ ಗಳೇ ಉದಾಹರಣೆ.
ಐದು ವರ್ಷದ ಹಿಂದೆ ಮಾಡಲಾಗಿದ್ದ ಕೇವಲ 1 ಲಕ್ಷ ರೂಪಾಯಿ ಹೂಡಿಕೆಯನ್ನು 6 ಕೋಟಿ ಮೊತ್ತವನ್ನಾಗಿ ಬದಲಾಯಿಸಿ ಹೂಡಿಕೆದಾರರಿಗೆ ಭಾರಿ ಲಾಭ ತಂದುಕೊಟ್ಟಿವೆ ಈ ಹತ್ತು ಕಂಪೆನಿಯ ಷೇರುಗಳು.
ಕೇವಲ 1 ರೂಪಾಯಿ, 2 ರೂಪಾಯಿ ಇದ್ದ ಕೆಲವು ಷೇರುಗಳು ಕೆಲವು ಸಾವಿರ ರೂಪಾಯಿಗಳಿಗೆ ಏರಿಕೆ ಆಗಿದೆ. ವಾರೀ ರಿನೀವೆಬಲ್ಸ್ ಹೆಸರಿನ ಕಂಪೆನಿಯ ಷೇರು 2020 ರಲ್ಲಿ ಕೇವಲ 1.50 ರೂಪಾಯಿ ಇತ್ತು. ಈಗ ಒಂದು ಷೇರಿನ ಬೆಲೆ 1725. ಕೆಲ ತಿಂಗಳ ಹಿಂದೆ ಈ ಷೇರಿನ ಬೆಲೆ 2700 ಇತ್ತು. 2020 ರಲ್ಲಿ ಈ ಕಂಪೆನಿ ಮೇಲೆ 1 ಲಕ್ಷ ಹೂಡಿಕೆ ಮಾಡಿದ್ದರೆ ಈಗ ಕೆಲ ತಿಂಗಳ ಹಿಂದೆ ಅದರ ಮೌಲ್ಯ 6 ಕೋಟಿ ಆಗಿರುತ್ತಿತ್ತು.
Personal Finance: 25 ಸಾವಿರ ಸಂಬಳದವರು ಕೋಟ್ಯಧೀಶರಾಗಬಹುದು, ಹೇಗೆ?
ಹಜೂರ್ ಮಲ್ಟಿ ಪ್ರಾಜೆಕ್ಟ್ ಲಿಮಿಟೆಡ್ ಸಂಸ್ಥೆಯ ಷೇರಿನ ಮೌಲ್ಯವೂ ಸಹ ಕೇವಲ 1.57 ರೂಪಾಯಿ ಇತ್ತು 2020 ರಲ್ಲಿ. ಈಗ ಈ ಷೇರಿನ ಮೌಲ್ಯ 424 ರೂಪಾಯಿಗಳಿವೆ. ಈ ಷೇರು ಸಹ ಹೂಡಿಕೆದಾರರ ಹಣವನ್ನು ಕೆಲವೇ ವರ್ಷಗಲ್ಲಿ 28 ಸಾವಿರ ಪರ್ಸೆಂಟ್ ಮರಳಿಸಿದೆ. ಪ್ರವೇಜ್, ಆರ್ಕಿಡ್ ಫಾರ್ಮಾ, ಡಬ್ಲು ಎಸ್ ಇಂಡಸ್ಟ್ರೀಸ್, ರಾಜ್ ರಾಯನ್ ಇಂಡಸ್ಟ್ರೀಸ್, ಆಲ್ಗೋಫೋಕ್ಟ್ ಫಿನಾನ್ಸ್ ಈ ಸಂಸ್ಥೆಗಳು ಸಹ ಹೂಡಿಕೆದಾರರ ಹಣವನ್ನು ಸುಮಾರು 500 ಪಟ್ಟು ಹೆಚ್ಚು ಮಾಡಿವೆ ಅಂದರೆ 1 ಲಕ್ಷ ಹೂಡಿಕೆ ಮಾಡಿದವರಿಗೆ ಕೋಟಿಗಳಲ್ಲಿ ಹಣ ವಾಪಸ್ಸಾಗಿದೆ.
*ಈ ಲೇಖನದಲ್ಲಿ ನೀಡಿರುವ ಮಾಹಿತಿಯನ್ನು ಹೂಡಿಕೆಗೆ ಸಲಹೆ ಎಂದು ಪರಿಗಣಿಸಬಾರದು. ಸರಿಯಾದ ಮಾಹಿತಿ, ಮಾರ್ಗದರ್ಶನ ಪಡೆದ ಮೇಲಷ್ಟೆ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಬೇಕು.