Traffic Police
ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಹೆಚ್ಚು, ಅದರಂತೆ ಟ್ರಾಫಿಕ್ ವಯೋಲೆಷನ್ ಸಹ ಹೆಚ್ಚಿಗೆ ಆಗುತ್ತದೆ. ಸಂಚಾರ ನಿಯಮ ಮುರಿದವರಿದೆ ದಂಡವೂ ಸಾಮಾನ್ಯ. ಭಾರತದಲ್ಲಿ ಅತಿ ಹೆಚ್ಚು ಸಂಚಾರ ನಿಯಮ ಉಲ್ಲಂಘನೆ ದಂಡ ಕಟ್ಟುವ ನಗರಗಳಲ್ಲಿ ಬೆಂಗಳೂರು ಸಹ ಒಂದು. ಆದರೆ ಇದೀಗ ಟ್ರಾಫಿಕ್ ಫೈನ್ ಹೆಸರಲ್ಲೂ ಸಹ ವಂಚನೆ ಶುರುವಾಗಿದೆ ಬೆಂಗಳೂರಿನಲ್ಲಿ.
ಬೆಂಗಳೂರಿನಲ್ಲಿ ಟ್ರಾಫಿಕ್ ಫೈಮ್ ಹೆಸರಿನಲ್ಲಿ ವಂಚನೆ ನಡೆಯುತ್ತಿದ್ದು ಎಚ್ಚರಿಕೆಯಿಂದ ಇರುವಂತೆ ಸ್ವತಃ ಬೆಂಗಳೂರು ಟ್ರಾಫಿಕ್ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಟ್ರಾಫಿಕ್ ಫೈನ್ ಹೆಸರಲ್ಲಿ ನಕಲಿ ಲಿಂಕ್’ಗಳನ್ನು ಕಳಿಸಿ ಹಣ ಹಾಕಿಸಿಕೊಳ್ಳುವುದು, ನಕಲಿ ಇ-ನೊಟೀಸ್ ಕಳಿಸುವುದು, ಕರೆ ಮಾಡಿ ಹಣ ಕೇಳುವುದು ಇನ್ನಿತರೆ ಕೃತ್ಯಗಳು ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆಯುತ್ತಿದ್ದು, ಬೆಂಗಳೂರಿನ ಜನ ಜಾಗರೂಕರಾಗಿರಬೇಕು ಎಂದಿದ್ದಾರೆ ಪೊಲೀಸರು.
ಗುರುವಾರ ಈ ಬಗ್ಗೆ ಪ್ರಕಟಣೆ ಬಿಡುಗಡೆ ಮಾಡಿರುವ ಬೆಂಗಳೂರು ಸಂಚಾರ ಪೊಲೀಸರು, ‘ವಾಹನ ಸಂಚಾರ ನಿಯಮ ಉಲ್ಲಂಘನೆ ದಂಡದ ಹೆಸರಲ್ಲಿ ನಕಲಿ ಲಿಂಕ್’ಗಳನ್ನು ಕಳಿಸಿ ಆನ್’ಲೈನ್ ಮೂಲಕ ಹಣ ದೋಚುವ ಪ್ರಯತ್ನ ನಡೆಯುತ್ತಿದೆ. ನಕಲಿ ಕರೆಗಳನ್ನು ಮಾಡಿ ಹಣ ಹಾಕಿಸಿಕೊಳ್ಳಲಾಗುತ್ತಿದೆ. ಬೆಂಗಳೂರು ಸಂಚಾರಿ ಪೊಲೀಸರು, ಎಂದಿಗೂ ಖಾಸಗಿಯಾಗಿ ಲಿಂಕ್ ಕಳಿಸಿ ದಂಡ ಕಟ್ಟುವಂತೆ ಕೇಳುವುದಿಲ್ಲ, ಕರೆ ಮಾಡಿ ದಂಡ ಕಟ್ಟುವಂತೆ ಕೇಳುವುದಿಲ್ಲ, ಖಾಸಗಿ ಮಾಹಿತಿ, ಬ್ಯಾಂಕ್ ಮಾಹಿತಿ ಅತಯವಾ ಓಟಿಪಿ ಕೇಳುವುದಿಲ್ಲ’ ಎಂದಿದ್ದಾರೆ.
ಈ ರೀತಿಯ ಯಾವುದೇ ಕರೆ, ಸಂದೇಶಗಳಿಗೆ ಪ್ರತಿಕ್ರಿಯೆ ನೀಡಬೇಡಿ ಎಂದಿರುವ ಬೆಂಗಳೂರು ಪೊಲೀಸರು, ಅಂಥಹಾ ಕರೆ ಅಥವಾ ಸಂದೇಶ ಬಂದರೆ 080-22868550, 080-22868444 ಸಂಖ್ಯೆಗಳಿಗೆ ಕರೆ ಮಾಡಿ ಮಾಹಿತಿ ನೀಡಿ ಎಂದಿದ್ದಾರೆ. ಆನ್’ಲೈನ್ ನಲ್ಲಿ ದಂಡ ಪಾವತಿ ಮಾಡುವಂತಿದ್ದರೆ ಕಡ್ಡಾಯವಾಗಿ ಅಧಿಕೃತ ವೆಬ್’ಸೈಟ್, ಅಪ್ಲಿಕೇಶನ್’ಗಳ ಮೂಲಕವೇ ದಂಡ ಕಟ್ಟಿ ಎಂದಿದ್ದಾರೆ.
Food Safety: ಶುಂಠಿ-ಬೆಳ್ಳುಳ್ಳಿ ಪೇಸ್ಟ್’ನಲ್ಲಿ ಅಪಾಯಕಾರಿ ರಾಸಾಯನಿಕ ಪತ್ತೆ, 960 ಕೆಜಿ ಸೀಜ್
ಬೆಂಗಳೂರಿನಲ್ಲಿ ಇತ್ತೀಚೆಗೆ ಆನ್’ಲೈನ್ ಫ್ರಾಡ್ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಉತ್ತರದ ಕೆಲವು ರಾಜ್ಯಗಳಿಂದ ಬೆಂಗಳೂರಿಗೆ ಕೆಲಸ ಹುಡುಕಿ ಬಂದಿರುವ ಕೆಲವರು ಸ್ಥಳೀಯರಿಗೆ ಮೋಸ ಮಾಡುತ್ತಾ ಹಣ ಮಾಡುವ ದಾರಿ ಕಂಡುಕೊಂಡಿದ್ದಾರೆ. ಆನ್’ಲೈನ್ ಫ್ರಾಡ್’ಗೆ ಗುರಿ ಆಗಿ ಕೋಟ್ಯಂತರ ಹಣವನ್ನು ಬೆಂಗಳೂರಿನ ಜನ ಕಳೆದುಕೊಂಡಿದ್ದಾರೆ.