Renuka Swamy case: ಆತ್ಮಹತ್ಯೆ ಮಾಡಿಕೊಂಡ ನಿರ್ಮಾಪಕನ ಖಾತೆಯಿಂದ ಪವಿತ್ರಾ ಗೌಡಗೆ ಕೋಟಿ-ಕೋಟಿ ಹಣ ವರ್ಗ!

0
171
Renuka Swamy case
ಪವಿತ್ರಾ ಗೌಡ-ದರ್ಶನ್-ಸೌಂದರ್ಯ ಜಗದೀಶ್

Renuka Swamy case

ಏಪ್ರಿಲ್ ತಿಂಗಳಲ್ಲಿ ನಿರ್ಮಾಪಕ ಸೌಂದರ್ಯ ಜಗದೀಶ್ (Soundarya Jagadish) ನಿಧನ ಹೊಂದಿದ್ದರು, ಕೋಟ್ಯಂತರ ಮೌಲ್ಯದ ಆಸ್ತಿಯ ಒಡೆಯನಾಗಿದ್ದರೂ ಸಹ ಹಣಕಾಸಿನ ಇಕ್ಕಟ್ಟಿನಿಂದಾಗಿ ಸೌಂದರ್ಯ ಜಗದೀಶ್ ಆತ್ಮಹತ್ಯೆಗೆ ಶರಣಾಗಿದ್ದರು ಎನ್ನಲಾಗಿತ್ತು, ಆದರೆ ಈಗ ಹೊರಬಂದಿರುವ ಚಿತ್ರವೊಂದು ನಿರ್ಮಾಪಕ ಸೌಂದರ್ಯ ಜಗದೀಶ್ ಆತ್ಮಹತ್ಯೆಗೂ ನಟಿ, ದರ್ಶನ್ ಆಪ್ತ ಗೆಳತಿ ಪವಿತ್ರಾ ಗೌಡಗೂ ನಂಟಿದೆಯಾ ಎಂಬ ಸಣ್ಣ ಅನುಮಾನವನ್ನು ಹುಟ್ಟು ಹಾಕಿದೆ.

ಪವಿತ್ರಾ ಗೌಡ ಈಗಾಗಲೇ ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿಯಾಗಿ ಜೈಲು ಸೇರಿದ್ದಾರೆ. ಕೊಲೆ ಪ್ರಕರಣದಲ್ಲಿ ಪವಿತ್ರಾ ಗೌಡ ಮೊದಲ ಆರೋಪಿ, ನಟ ದರ್ಶನ್ ಸಹ ಈ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿದ್ದು ಜೈಲಿನಲ್ಲಿದ್ದಾರೆ. ಈಗ ಸಾಮಾಜಿಕ ಜಾಲತಾಣದಲ್ಲಿ ಸ್ಕ್ರೀನ್ ಶಾಟ್ ಒಂದಯ ಹರಿದಾಡುತ್ತಿದ್ದು, ಆತ್ಮಹತ್ಯೆ ಮಾಡಿಕೊಂಡ ಜಗದೀಶ್ ಖಾತೆಯಿಂದ ಪವಿತ್ರಾ ಗೌಡಗೆ ಬರೋಬ್ಬರಿ ಕೋಟಿ ರೂಪಾತಿ ವರ್ಗವಾಗಿದೆ ಎನ್ನಲಾಗುತ್ತಿದೆ.

ರಾಜಾಜಿನಗರದ ಟಿಜಿಎಂಸಿ ಬ್ಯಾಂಕ್ ಖಾತೆಯಿಂದ ಈ ಹಣಕಾಸು ವ್ಯವಹಾರ ನಡೆದಿದೆ. ಸೌದರ್ಯ ಜಗದೀಶ್ ಖಾತೆಯಿಂದಲೇ ನೇರವಾಗಿ ಎರಡು ಕೋಟಿ ರೂಪಾಯಿ ಹಣ ಪವಿತ್ರಾ ಗೌಡ ಖಾತೆಗೆ ಹೋಗಿದೆ ಎನ್ನಲಾಗಿದೆ. ಈ ಹಣವನ್ನು ಜಗದೀಶ್ ಪವಿತ್ರಾ ಅವರಿಗೆ ಏಕೆ ನೀಡಿದ್ದರು? ಸಾಲವಾಗಿ ನೀಡಲಾಗಿತ್ತೆ? ಅಥವಾ ‘ಸುಮ್ಮನೆ’ ಕೊಟ್ಟಿದ್ದರೆ. ಹಣ ವರ್ಗಾವಣೆ ಹಿಂದೆ ಬೇರೆಯವರ ಕೈವಾಡ ಇದೆಯೇ? ಎಂಬುದು ತನಿಖೆಯಿಂದ ತಿಳಿಯಬೇಕಿದೆ. ಅಂದಹಾಗೆ, ಪವಿತ್ರಾ ಹೆಸರಿನಲ್ಲಿ ಖರೀದಿ ಮಾಡಲಾಗಿರುವ ಭಾರಿ ಮನೆಯ ನೊಂದಣಿ ದಾಖಲಾತಿಯಲ್ಲಿ ಸಹ ಜಗದೀಶ್ ಸಾಕ್ಷಿಯಾಗಿ ಸಹಿ ಹಾಕಿದ್ದಾರೆ.

ಯಾರು ಈ ಪವಿತ್ರ ಗೌಡ, ಈಕೆಯ ಮೋಹದಲ್ಲಿ ದರ್ಶನ್ ಸಿಲುಕಿದ್ದು ಹೇಗೆ?

ಸೌಂದರ್ಯ ಜಗದೀಶ್ ಮತ್ತು ಪವಿತ್ರಾ ಗೌಡರ ಬಾಯ್ ಫ್ರೆಂಡ್ ದರ್ಶನ್ ನಡುವೆ ಆಪ್ತ ಬಂಧವಿತ್ತು. ‘ಕಾಟೇರ’ ಸಿನಿಮಾದ ಸಕ್ಸಸ್ ಪಾರ್ಟಿ ಇದೇ ಸಂದರ್ಯ ಜಗದೀಶ್ ಅವರ ಜೆಟ್ ಲ್ಯಾಗ್ ಪಬ್ ನಲ್ಲಿ ತಡ ರಾತ್ರಿ ವರೆಗೆ ನಡೆದಿತ್ತು, ದರ್ಶನ್ ಸೇರಿದಂತೆ ಹಲವರ ಮೇಲೆ ಪ್ರಕರಣ ದಾಖಲಾಗಿದ್ದಲ್ಲದೆ, ಜೆಟ್ ಲ್ಯಾಗ್ ನ ಲೇಸೆನ್ಸ್ ಅನ್ನು ಸಹ ತಿಂಗಳ ಕಾಲ ರದ್ದು ಮಾಡಲಾಗಿತ್ತು.

LEAVE A REPLY

Please enter your comment!
Please enter your name here