Dreams: ಕನಸಿನಲ್ಲಿ ಇನ್ನೊಬ್ಬ ವ್ಯಕ್ತಿಯೊಂದಿಗೆ ಸಂವಾದ! ಪ್ರಯೋಗ ಯಶಸ್ವಿಯೆಂದ ವಿಜ್ಞಾನಿಗಳು

0
256
Dreams

Dreams

ಕನಸು ಪ್ರತಿಯೊಬ್ಬ ವ್ಯಕ್ತಿಗೂ ಬೀಳುತ್ತದೆ, ಕೆಲವರ ಪ್ರಕಾರ ಹುಚ್ಚರ ಹೊರತಾಗಿ ಸಣ್ಣ ಮಕ್ಕಳಿಂದ ಹಿಡಿದು ಎಲ್ಲರಿಗೂ ಕನಸು ಬೀಳುತ್ತದೆ. ಆದರೆ ಎಷ್ಟೋ ಮಂದಿಗೆ ತಮಗೆ ಬಿದ್ದ ಕನಸು ನೆನಪು ಸಹ ಇರುವುದಿಲ್ಲ. ಎಷ್ಟೋ ಜನರ ಕನಸಿನಲ್ಲಿ ಸಂಭಾಷಣೆ ಸಹ ಇರುವುದಿಲ್ಲ ಬದಲಿಗೆ ಬರೀಯ ದೃಶ್ಯಗಳು ಮಾತ್ರವೇ ಇರುತ್ತವೆ. ಕನಸುಗಳ ಮತ್ತೊಂದು ವಿಶೇಷವೆಂದರೆ ಅವು ಎಲ್ಲಿ, ಹೇಗೆ ಶುರುವಾದವೆಂದು ಸಹ ಗೊತ್ತಾಗುವುದಿಲ್ಲ. ಆದರೆ ಕನಸಿನಲ್ಲಿಯೇ ಮತ್ತೊಬ್ಬ ವ್ಯಕ್ತಿಯ ಜೊತೆ ಮಾತನಾಡುವಂತಾದರೆ! ಇದು ಯಾವುದೋ ಸಿನಿಮಾದ ಕತೆ ಎನಿಸಬಹುದು ಆದರೆ ನಿಜ. ಕ್ಯಾಲಿಫೋರ್ನಿಯಾದ ವಿಜ್ಞಾನಿಗಳು ಹೀಗೊಂದು ಪ್ರಯೋಗ ಮಾಡಿದ್ದು, ಪ್ರಯೋಗ ಯಶಸ್ವಿ ಆಗಿದೆ.

ಊಹೆ ಮಾಡಿ, ಬೆಂಗಳೂರಿನಲ್ಲಿ ಮಲಗಿ ನಿದ್ರಿಸಿದ ವ್ಯಕ್ತಿಯೊಬ್ಬ, ಅಮೆರಿಕದ ನ್ಯೂಯಾರ್ಕ್ ನಗರದಲ್ಲಿ ಮಲಗಿ ನಿದ್ರಿಸುತ್ತಿರುವ ವ್ಯಕ್ತಿಯೊಬ್ಬನೊಟ್ಟಿಗೆ ಕನಸಿನ ಮೂಲಕ ಮಾತನಾಡಿದರೆ? ಕಲ್ಪನೆಯೇ ಅದ್ಭುತ ಅನಿಸುತ್ತದೆ ಅಲ್ಲವೆ? ಈ ಕಲ್ಪನೆ ನಿಜವಾಗಿದೆ. ವಿಜ್ಞಾನಿಗಳ ಪ್ರಯೋಗದಿಂದ ಕನಸಿನ ಮೂಲಕ ಸಂವಹನ ಈಗ ಸಾಧ್ಯವಾಗಿದೆ.

ಲೂಸಿಡ್ ಡ್ರೀಮ್ ಹೆಸರಿನ ಒಂದು ರೀತಿಯ ನಿದ್ರಾವಸ್ತೆ ಇದೆ. ಈ ನಿದ್ರಾವಸ್ತೆಯಲ್ಲಿ ವ್ಯಕ್ತಿಗೆ ಪೂರ್ಣ ನಿದ್ದೆ ಆವರಿಸಿರುವುದಿಲ್ಲ ಅರೆ ನಿದ್ರಾವಸ್ತೆಯಲ್ಲಿ ಬೀಳುವ ಕನಸನ್ನು ವ್ಯಕ್ತಿ ನಿಯಂತ್ರಿಸಬಹುದು, ತನಗೆ ಬೇಕಾದಂತೆ ಬದಲಾಯಿಸಬಹುದು. ವೇಗವಾಗಿ ಕಣ್ಣಿನ ಚಲನೆ ಇದ್ದಾಗ ಇಂಥಹ ಲೂಸಿಡ್ ಡ್ರೀಮಿಂಗ್ ಸ್ಥಿತಿ ಇರುತ್ತದೆ. ಇದೇ ಅವಸ್ಥೆಯಲ್ಲಿ ಈಗ ಇಬ್ಬರು ವ್ಯಕ್ತಿಗಳ ನಡುವೆ ಕನಸಿನಲ್ಲಿ ಸಂವಹನ ನಡೆದಿದೆ.

Do Blind Dream: ಕಣ್ಣು ಕಾಣದ ಅಂಧರಿಗೆ ಕನಸು ಬೀಳುತ್ತದೆಯೆ? ಆ ಕನಸು ಬಣ್ಣದಲ್ಲಿರುತ್ತದೆಯಾ ಅಥವಾ ಕಪ್ಪು-ಬಿಳುಪು?

ಕ್ಯಾಲಿಫೋರ್ನಿಯಾದ ರೆಮ್ ಸ್ಪೇಸ್ ಹೆಸರಿನ ಸಂಸ್ಥೆಯ ವಿಜ್ಞಾನಿಗಳು ಹೀಗೊಂದು ಪ್ರಯೋಗ ಮಾಡಿ ಪ್ರಾರಂಭಿಕ ಯಶಸ್ಸು ಪಡೆದಿದ್ದಾರೆ. ಇಬ್ಬರು ಪರಿಣಿತ ಲೂಡಿಸ್ ಡ್ರೀಮರ್ಸ್​ ಅನ್ನು ತಮ್ಮ ತಮ್ಮ ಮನೆಯಲ್ಲಿ ಮಲಗಲು ಸೂಚಿಸಿದ್ದಾರೆ. ಅವರ ಮೆದುಳಿನ ಚಲನೆಯನ್ನು ವೀಕ್ಷಿಸಲು ಅವರ ತಲೆಗೆ ಕೆಲವು ಯಂತ್ರಗಳನ್ನು ಜೋಡಿಸಿ ಅದನ್ನು ಸರ್ವರ್​ಗೆ ಜೋಡಿಸಲಾಗಿದೆ. ಒಬ್ಬ ವ್ಯಕ್ತಿಯ ಕಿವಿಯಲ್ಲಿ ‘ಜುಲಿಕ್’ ಎಂಬ ಶಬ್ದವನ್ನು ಹೇಳಲಾಗಿದೆ. ಅದಾದ ಎಂಟು ನಿಮಿಷಗಳ ಬಳಿಕ ದೂರದ ಇನ್ನೊಂದು ಮನೆಯಲ್ಲಿ ಮಲಗಿರುವ ವ್ಯಕ್ತಿ ಎದ್ದು ‘ಜುಲಿಕ್’ ಶಬ್ದವನ್ನು ನಾನು ಸ್ವೀಕರಿಸಿದ್ದೇನೆ’ ಎಂದು ಹೇಳಿದ್ದಾರೆ.

ಹೀಗೆ ಕನಸಿನಲ್ಲಿ ಸಂವಹನ ಮಾಡಲು ಯಾವ ತಂತ್ರಜ್ಞಾನವನ್ನು ಬಳಸಿದ್ದೇವೆ ಎಂದು ರೆಮ್ ಸ್ಪೇಸ್ ಸಂಸ್ಥೆ ಈಗಲೇ ಬಹಿರಂಗಪಡಿಸಿಲ್ಲ. ಇನ್ನೂ ಕೆಲವು ಪ್ರಯೋಗಗಳ ಬಳಿಕವಷ್ಟೆ ಬಹಿರಂಗಪಡಿಸುವುದಾಗಿ ಹೇಳಿಕೆ. ಬೇರೆ ಬೇರೆ ಜೋಡಿಗಳನ್ನು ಇಟ್ಟುಕೊಂಡು ಈ ಪ್ರಯೋಗ ಮಾಡುವುದಾಗಿ ಸಂಸ್ಥೆ ಹೇಳಿಕೊಂಡಿದೆ.

ಕೆಲ ವರ್ಷಗಳ ಹಿಂದೆ ಬಿಡುಗಡೆ ಆಗಿದ್ದ ಕ್ರಿಸ್ಟೊಫರ್ ನೋಲನ್ ನಿರ್ದೇಶನದ ‘ಇನ್​ಸೆಪ್ಷನ್’ ಸಿನಿಮಾ, ಕನಸಿನ ಬಗ್ಗೆ ಹಲವು ಗಹನವಾದ ವಿಷಯಗಳನ್ನು ಹೇಳಿತ್ತು. ಕನಸುಗಳನ್ನು ಸಂಹವನ ಸಾಧನವನ್ನಾಗಿ, ಕನಸುಗಳನ್ನು ನಿಯಂತ್ರಿಸುವುದನ್ನು ಸಹ ಆ ಸಿನಿಮಾ ಒಳಗೊಂಡಿತ್ತು. ಈಗ ಅದು ನಿಜವಾಗುತ್ತಿರುವಂತಿದೆ.

LEAVE A REPLY

Please enter your comment!
Please enter your name here