Modern Art: 5.83 ಲಕ್ಷಕ್ಕೆ ಮಾರಾಟವಾಯ್ತು 2 ವರ್ಷದ ಬಾಲಕ ಬಿಡಿಸಿದ ಚಿತ್ರ 

0
166
Modern Art

Modern Art

ಪ್ರಖ್ಯಾತ ಕಲಾವಿದರ ಚಿತ್ರಗಳು ಕೋಟ್ಯಂತರ ರೂಪಾಯಿಗೆ ಮಾರಾಟವಾದ ಸುದ್ದಿಗಳು ಅಗಾಗ್ಗೆ ಪ್ರಕಟವಾಗುತ್ತಲೇ ಇರುತ್ತವೆ. ಆದರೆ ಇಲ್ಲೊಬ್ಬ ಎರಡು ವರ್ಷದ ಬಾಲಕ ಬರೆದ ಚಿತ್ರ ಲಕ್ಷಾಂತರ ರೂಪಾಯಿಗೆ ಮಾರಾಟವಾಗಿದೆ. ಬಾಲಕನ ಬಾಲ ಬರಹಕ್ಕೆ ಲಕ್ಷಾಂತರ ರೂಪಾಯಿ ಹಣ ದೊರೆತಿದೆ.

ಜರ್ಮನಿಯ ಲ್ಯೂರೆಂಟ್ ಶ್ವಾರ್ಜ್ ಇನ್ನೂ ಎರಡು ವರ್ಷದ ಬಾಲಕ. ಆತನ ನುಡಿ ಇನ್ನೂ ತೊದಲು. ಆದರೆ ಈತ ಈ ವಯಸ್ಸಿಗೆ ಕಲಾ ಲೋಕದಲ್ಲಿ ಸಂಚಲನ‌ ಸೃಷ್ಟಿಸುತ್ತಿದ್ದಾನೆ. ಈತ ರಚಿಸಿದ ಚಿತ್ರಗಳಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ.

ಈ ಬಾಲಕ ಪ್ರಾಣಿಗಳು, ಅರಣ್ಯದ ಬಗ್ಗೆ ಅಮೂರ್ತ (ಅಬ್ ಸ್ಟಾರ್ಕ್) ಮಾದರಿಯ ಚಿತ್ರಗಳನ್ನು ರಚಿಸುತ್ತಿದ್ದಾನೆ. ಈ ಬಾಲಕನ ಚಿತ್ರಗಳು ಆಳವಾದ ಅರ್ಥಗಳನ್ನು ಹೊಂದಿದೆ ಎಂದು ಕಲಾ ಪ್ರೇಮಿಗಳು ಮುಗಿಬಿದ್ದು ಈ ಬಾಲಕನ ಚಿತ್ರಗಳನ್ನು ಖರೀದಿಸುತ್ತಿದ್ದಾರೆ. ಇತ್ತೀಚೆಗಷ್ಟೆ ಈತ ರಚಿಸಿದ ಚಿತ್ರ 7000 ಡಾಲರ್ ಗೆ ಅಂದರೆ 5.83 ಲಕ್ಷ ರೂಪಾಯಿಗೆ ಮಾರಾಟವಾಗಿದೆ‌‌.

ಕಳೆದ ವರ್ಷ ಕುಟುಂಬದೊಂದಿಗೆ ಪ್ರವಾಸ ಹೋಗಿದ್ದಾಗ ಅಲ್ಲಿ ನಡೆದ ಚಿತ್ರ ಬಿಡಿಸುವ ಆಕ್ಟಿವಿಟಿಯಲ್ಲಿ ಲ್ಯೂರೆಂಟ್ ತೊಡಗಿಕೊಂಡಿದ್ದ‌. ಅಲ್ಲಿ ಸಾಕಷ್ಟು ಚಿತ್ರಗಳನ್ನು ಸಹ ಗಮನಿಸಿದ. ಅಲ್ಲಿ ಈ ಬಾಲಕನಿಗೆ ಚಿತ್ರ ರಚನೆ ಬಗ್ಗೆ ಆಸಕ್ತಿ ಮೂಡಿತು. ಮನೆಗೆ ವಾಪಸ್ಸಾದ ಬಳಿಕ ಚಿತ್ರ ರಚನೆಯಲ್ಲಿ ತೊಡಗಿಕೊಂಡ. ಮಗನ ಆಸಕ್ತಿಯನ್ನಹ ಗಮನಿಸಿದ ಪೋಷಕರು, ಮಗನಿಗಾಗಿ ಒಂದು ಆರ್ಟ್ ಸ್ಟುಡಿಯೋ ಮಾಡಿಸಿ ಮಗನಿಗೆ ಚಿತ್ರ ಬರೆಯಲು ಅನುವು ಮಾಡಿಕೊಟ್ಟಿದ್ದಾರೆ. ಅಲ್ಲಿಂದ ಆತ ಚಿತ್ರ ರಚನೆಯಲ್ಲಿ ‘ಗಂಭೀರ’ವಾಗಿ ತೊಡಗಿಕೊಂಡಿದ್ದಾನೆ.

ಲ್ಯೂರೆಂಟ್ ಚಿತ್ರಗಳು ಪ್ರಾಣಿಗಳ ಛಾಯೆಯನ್ನು ಒಳಗೊಂಡ ಅಮೂರ್ತ (ಅಬ್ ಸ್ಟ್ರಾಕ್) ಮಾದರಿಯ ಚಿತ್ರಗಳಾಗಿವೆ. ಲ್ಯೂರೆಂಟ್ ತನ್ನ ಚಿತ್ರಗಳಲ್ಲಿ ಹೆಚ್ಚಾಗಿ ತನ್ನಿಷ್ಟದ ಆನೆ, ಕುದುರೆ, ಡೈನೋಸರ್ ಗಳನ್ನು ಹೆಚ್ಚಾಗಿ ಮೂಡಿಸುತ್ತಾನೆ.

Allu Arjun: ಅಲ್ಲು ಅರ್ಜುನ್- ಸುಕುಮಾರ್ ಮಧ್ಯೆ ಜಗಳ, ನಿಜಾಂಶವೇನು?

ಜರ್ಮನಿಯ ಅತಿ ದೊಡ್ಡ ಕಲಾ ಪ್ರದರ್ಶನವಾದ ಮ್ಯೂನಿಚ್ ನ ಆರ್ಟ್ ಎಂಯುಸಿನಲ್ಲಿ ಈ ಬಾಲಕನ ಚಿತ್ರಗಳು ಪ್ರದರ್ಶನಗೊಂಡಿವೆ. ನ್ಯೂಯಾರ್ಕ್ ಆರ್ಟ್ ಗ್ಯಾಲರಿಯಲ್ಲೊಯೂ ಈ ಬಾಲಕನ ಚಿತ್ರಗಳು ಪ್ರದರ್ಶಿತಗೊಳ್ಳಲಿವೆ.

LEAVE A REPLY

Please enter your comment!
Please enter your name here