Upendra: ಬೇಕಾದ್ರೆ ಇನ್ನೂ 5 ಮದುವೆ ಆಗ್ತೀನಿ ಆದರೆ ಅದು ಮಾತ್ರ ಕಷ್ಟ: ಉಪೇಂದ್ರ

0
103
Upendra

Upendra

ನಟ‌, ನಿರ್ದೇಶಕ ಉಪೇಂದ್ರ ಹುಟ್ಟಹಬ್ಬ ಇಂದು. ಈ ಹುಟ್ಟುಹಬ್ಬ ಅವರಿಗೆ ಹಲವು ಕಾರಣಕ್ಕೆ ವಿಶೇಷ. ಅವರ ನಿರ್ದೇಶನದ ಯುಐ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಇತ್ತೀಚೆಗಷ್ಟೆ ಅವರಿಗೆ ರಜನೀಕಾಂತ್ ಸಿನಿಮಾದಲ್ಲಿ ನಟಿಸುವ ಅವಕಾಶವೂ ದೊರೆತಿದೆ. ಪ್ರತಿ ವರ್ಷದಂತೆ ಇಂದು ಸಹ ಅಭಿಮಾನಿಗಳ ಜೊತೆ ಕೇಕ್ ಕತ್ತರಿಸಿ ಹುಟ್ಟುಹಬ್ಬವನ್ನು ಉಪ್ಪಿ ಆಚರಣೆ ಮಾಡಿಕೊಂಡಿದ್ದಾರೆ.

ಹುಟ್ಟುಹಬ್ಬ ಆಚರಣೆ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಉಪೇಂದ್ರ, ‘ಯುಐ’ ಸಿನಿಮಾ ಕುರಿತು ಮಾತನಾಡುತ್ತಾ. ಇನ್ನೂ ಐದು ಮದುವೆ ಬೇಕಾದ್ರೆ ಮಾಡಿಕೊಂಡು ಬಿಡ್ತೀನಿ, ಆದರೆ ಈ ನಿರ್ದೇಶನ ಮಾತ್ರ ಬಲು ಕಷ್ಟ. ಸರಿಯಾಗಿ ಸಿಕ್ಕಿಹಾಕಿಕೊಂಡಿದ್ದೀನಿ ಎಲ್ಲರೂ ಹಾಕಿಕೊಂಡು ರುಬ್ಬುತ್ತಿದ್ದಾರೆ’ ಎಂದು ತಮಾಷೆ ಮಾಡಿದ ಉಪ್ಪಿ, ನನ್ನ ಮನೆಯವರಂತೂ ನಿರ್ದೇಶನ ಮುಗಿಸುವವರೆಗೂ ಮನೆಗೇ ಬರಬೇಡ ಎಂದು ಬಿಟ್ಟುಬ್ಬಿಟ್ಟಿದ್ದಾರೆ ಎಂದು ಹಾಸ್ಯ ಚಟಾಕಿ ಹಾರಿಸಿದರು.

ಈ ಸಿನಿಮಾಕ್ಕೆ ಕೆಲಸ ಮಾಡಿದ ಎಲ್ಲರೂ ಅವರವರ ಪಾತ್ರಗಳನ್ನು ಸೂಕ್ತವಾಗಿ ನಿರ್ವಹಿಸಿದ್ದಾರೆ. ಸಂಗೀತಕ್ಕೆ ಯೂರೋಪ್ ಗೆ ಹೋಗಿ ರೆಕಾರ್ಡ್ ಮಾಡಿದ್ದೇವೆ. ನಮ್ಮ ನಿರ್ಮಾಪಕರುಗಳು ಸಹ ದೊಡ್ಡ ಮಟ್ಟದ ಸಹಕಾರ‌ ಕೊಟ್ಟಿದ್ದಾರೆ. ಸಿನಿಮಾ ಮಾಡುವುದು   ಮೊದಲಿನಷ್ಟು ಸುಲಭವಾಗಿಲ್ಲ, ತಂತ್ರಜ್ಞಾನ ಹೆಚ್ಚಾದಷ್ಟು ಸಮಯ ಹೆಚ್ಚಾಗುತ್ತಲೇ ಹೋಗುತ್ತಿದೆ. ನಾವು ಈ ಸಿನಿಮಾನಲ್ಲಿ ಕೆಲ ಹೊಸ ತಂತ್ರಜ್ಞಾನ ಬಳಸಿದ್ದೇವೆ ಎಂದಿದ್ದಾರೆ. ಮೊದಲು ಕನ್ನಡ ಮಾತ್ರ ಅಂದುಕೊಂಡಿದ್ವಿ ಈಗ ಪ್ಯಾನ್ ಇಂಡಿಯಾ ಸಿನಿಮಾ ಆಗಿ ಹೋಗಿದೆ’ ಎಂದಿದ್ದಾರೆ ಉಪೇಂದ್ರ.

Vishnuvardhan: ವಿಷ್ಣುವರ್ಧನ್ ಕೈಯಲ್ಲಿದ್ದ ಕಡಗದ ಗುಟ್ಟೇನು? ಅದನ್ನು ಕೊಟ್ಟಿದ್ದು ಯಾರು?

ಸಿನಿಮಾದ ನಿರ್ಮಾಪಕರಲ್ಲಿ ಒಬ್ಬರಾದ‌ ಲಹರಿ ವೇಲು ಮಾತನಾಡಿ, ‘ಉಪೇಂದ್ರ ಅವರ ಲಕ್ಕಿ ನಂಬರ್ 18 ನನಗೂ ಸಹ 18 ಲಕ್ಕಿ ಸಂಖ್ಯೆ. ಅವರಿಗೆ ಕೊಟ್ಟ ಅಡ್ವಾನ್ಸ್ ಸಹ 9 ಆಗಿತ್ತು. ಎಲ್ಲವೂ ಒಳ್ಳೆಯದಾಗಲಿ ಎಂದು ತಿರುವಣ್ಣಾಮಲೈಗೆ ಹೋಗಿ ವಿಭೂತಿ ತಂದು ಉಪ್ಪಿಗೆ ಕೊಟ್ಟಿದ್ದೇನೆ. ಚಿತ್ರರಂಗಕ್ಕೆ ನೆಗೆಟಿವ್ ಎನರ್ಜಿ ಬರದೇ ಇರಲಿ ಎಂದು ಪ್ರಾರ್ಥನೆ ಮಾಡಿದ್ದೀನಿ. ಯಾರೋ ಒಬ್ಬರು, ಇಬ್ಬರು ಮಾಡೋ ತಪ್ಪಿನಿಂದ ಚಿತ್ರರಂಗಕ್ಕೆ ಕಳಂಕ ಬಾರದೆ ಇರಲಿ ಎಂದು ಕೇಳಿಕೊಂಡಿದ್ದೀನಿ’ ಎಂದರು.

LEAVE A REPLY

Please enter your comment!
Please enter your name here