Site icon Samastha News

Vijayalakshmi Darshan: ಮುಂದುವರೆದ ವಿಜಯಲಕ್ಷ್ಮಿ ಹೋರಾಟ, ಪತಿ‌ ದರ್ಶನ್ ಗಾಗಿ ಗೃಹ ಸಚಿವರ ಭೇಟಿ

Vijayalakshmi Darshan

Vijayalaksmi Darshan

Vijayalakshmi Darshan

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ದರ್ಶನ್, ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿ ದಿನಗಳನ್ನು ಕಳೆಯುತ್ತಿದ್ದಾರೆ. ಹೊರಗೆ ಅವರ ಕುಟುಂಬದವರು ವಿಶೇಷವಾಗಿ ಅವರ ಪತ್ನಿ, ದರ್ಶನ್ ಅನ್ನು ಹೊರಗೆ ತರಲು ತೀವ್ರ ಹೋರಾಟದಲ್ಲಿ ನಿರತರಾಗಿದ್ದಾರೆ. ಪತಿಗೆ ಜಾಮೀನು ಕೊಡಿಸಲು, ಪತಿಗೆ ಜೈಲಿನಲ್ಲಿ ಒಳ್ಳೆಯ ಊಟ ಕೊಡಿಸಲು ನ್ಯಾಯಾಲಯಗಳ ಮೂಲಕ‌ಹೋರಾಟ ನಡೆಸುತ್ತಿದ್ದಾರೆ. ಇದೀಗ ಒಂದು ಹೆಜ್ಜೆ ಮುಂದೆ ಹೋಗಿ ರಾಜ್ಯದ ಗೃಹ ಸಚಿರನ್ನು ಭೇಟಿಯಾಗುತ್ತಿದ್ದಾರೆ.

ದರ್ಶನ್ ವಿರುದ್ಧ ಚಾರ್ಜ್ ಶೀಟ್ ಸಿದ್ಧವಾಗುತ್ತಿರುವ ಈ ಮಹತ್ವದ ಸಮಯದಲ್ಲಿ ವಿಜಯಲಕ್ಷ್ಮಿ ದರ್ಶನ್, ಗೃಹ ಸಚಿವರನ್ನು ಭೇಟಿ ಆಗಲಿದ್ದಾರೆ. ಸ್ವತಃ ಗೃಹ ಸಚಿವ ಪರಮೇಶ್ವರ್ ಹೇಳಿರುವಂತೆ ಇಂದು‌ ವಿಜಯಲಕ್ಷ್ಮಿ ದರ್ಶನ್, ಭೇಟಿಗೆ ಅವಕಾಶ ಕೇಳಿದ್ದು, ಭೇಟಿಯಾಗಲು ಒಪ್ಪಿದ್ದೇನೆ‌. ಅವರ ಭೇಟಿಯ ಬಳಿಕ ಮಾಧ್ಯಮಗಳೊಟ್ಟಿಗೆ ಮಾತನಾಡುತ್ತೇನೆ ಎಂದಿದ್ದಾರೆ.

ರೇಣುಕಾ ಸ್ವಾಮಿ ಪ್ರಕಣದ ಚಾರ್ಜ್ ಶೀಟ್ ಅನ್ನು ತನಿಖಾಧಿಕಾರಿಗಳು ಸಿದ್ಧಪಡಿಸುತ್ತಿದ್ದಾರೆ. ಈ ಸಮಯದಲ್ಲಿ ವಿಜಯಲಕ್ಷ್ಮಿ ದರ್ಶನ್, ಗೃಹ ಸಚಿವರ ಭೇಟಿಯಾಗಿ ಅದೇ ವಿಷಯವನ್ನು ಚರ್ಚಿಸುವ ಸಾಧ್ಯತೆ ಇದೆ. ಪೊಲೀಸರು ದರ್ಶನ್ ಬಗ್ಗೆ ಹೆಚ್ಚು ಕಠಿಣ ನಿಲವು ತಳೆದಿದ್ದು, ಅದನ್ನು ಕೊಂಚ ಸಡಿಲಿಸುವಂತೆ ಕೋರುವ ಸಾಧ್ಯತೆ ಇದೆ. ಆ ಮೂಲಕ ಚಾರ್ಜ್ ಶೀಟ್ ಅನ್ನು ತುಸು ಸೌಮ್ಯಗೊಳಿಸಲು ಮನವಿ ಮಾಡುವ ಸಾಧ್ಯತೆಯೂ ಇದೆ.

Jasmine Bhasin: ಕಾಂಟಾಕ್ಟ್ ಲೆನ್ಸ್ ನಿಂದ ಕಣ್ಣೇ ಕಳೆದುಕೊಂಡರೇ ನಟಿ?

ವಿಜಯಲಕ್ಷ್ಮಿ ದರ್ಶನ್, ತಾವಾಯಿತು, ತಮ್ಮ ಕುಟುಂಬವಾಯ್ತು ಎಂದು ಆರಾಮದಿಂದ ಇರುವವರು. ಸಾಮಾಜಿಕವಾಗಿ ಹೆಚ್ಚು ಕಾಣಿಸಿಕೊಂಡವರಲ್ಲ. ಮಾಧ್ಯಮಗಳ ಬಳಿಯೂ ಮಾತನಾಡಿದವರಲ್ಲ. ಆದರೆ ಇಂದು ಪತಿಗಾಗಿ ಆ ಎಲ್ಲ ಹಿಂಜರಿಕೆಯನ್ನು ಬಿಟ್ಟು ರಾಜ್ಯದ ಗೃಹ ಸಚಿವರನ್ನೇ ಭೇಟಿ ಆಗಲು ತೆರಳುತ್ತಿದ್ದಾರೆ. ಗೃವ ಸಚಿವರ ಮುಂದೆ ಪತಿಗಾಗಿ ಕೈ ಮುಗಿದು ಬೇಡಿಕೊಳ್ಳಲಿದ್ದಾರೆ. ವಿಜಯಲಕ್ಷ್ಮಿ ಅವರ ಬೇಡಿಕೆಯನ್ನು ಪರಮೇಶ್ವರ್ ಮನ್ನಿಸುತ್ತಾರೆಯೇ ಕಾದು ನೋಡಬೇಕಿದೆ‌.

Exit mobile version