Site icon Samastha News

Virat Kohli: ಭಾರತ ಬಿಡುತ್ತಿದ್ದಾರೆ ವಿರಾಟ್ ಕೊಹ್ಲಿ, ಯಾವ ದೇಶಕ್ಕೆ ಪಯಣ? ಕಾರಣ ಏನು?

Virat Kohli

Virat Kohli

ವಿರಾಟ್ ಕೊಹ್ಲಿ ಭಾರತದ ಹೆಮ್ಮೆಯ ಕ್ರಿಕೆಟಿಗ. ಭಾರತದ ಕೋಟ್ಯಂತರ ಯುವಕರಿಗೆ ಸ್ಪೂರ್ತಿ. ಭಾರತದ ಕ್ರಿಕೆಟ್ ತಂಡದ ಪ್ರಮುಖ ಆಟಗಾರ. ಭಾರತದ ಪರವಾಗಿ ಹಲವಾರು ದಾಖಲೆಗಳನ್ನು ಕೊಹ್ಲಿ ಮಾಡಿದ್ದಾರೆ. ಆದರೆ ಈಗ ವಿರಾಟ್ ಕೊಹ್ಲಿ ಭಾರತ ಬಿಟ್ಟು ಹೋಗುತ್ತಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಆತಂಕ ಮೂಡಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಹುಟ್ಟು ಹಾಕಿದೆ.

ಅಂದಹಾಗೆ ವಿರಾಟ್ ಕೊಹ್ಲಿ ಬ್ರಿಟನ್ ನಿವಾಸಿ ಆಗಲಿದ್ದಾರೆ. ಲಂಡನ್’ನಲ್ಲಿ ಈಗಾಗಲೇ ಐಶಾರಾಮಿ ಮನೆ ಖರೀದಿ ಮಾಡಿರುವ‌ ಕೊಹ್ಲಿ ಲಂಡನ್’ನಲ್ಲಿಯೇ ಕುಟುಂಬದ ಜೊತೆ ನೆಲೆಸಲಿದ್ದಾರೆ. ಈಗಾಗಲೇ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಮತ್ತು ಮಕ್ಕಳು ಒಂದು ವರ್ಷದಿಂದ ಲಂಡನ್ ನಲ್ಲಿ ನೆಲೆಸಿದ್ದಾರೆ. ಕೊಹ್ಲಿ ಸಹ ಈ ವರ್ಷದ ಬಹುತೇಕ ಸಮಯ ಲಂಡನ್ ನಲ್ಲಿಯೇ ಕಳೆದಿದ್ದಾರೆ. ಆದರೆ ಈಗ ಅವರು ಸಂಪೂರ್ಣವಾಗಿ ಲಂಡನ್’ಗೆ ವಾಸ್ತವ್ಯ ಬದಲಿಸುತ್ತಿದ್ದಾರೆ. ಆ ಮೂಲಕ ತಾಯ್ನಾಡು ಭಾರತಕ್ಕೆ ವಿದಾಯ ಹೇಳಲಿದ್ದಾರೆ.

ಕೊಹ್ಲಿ ಭಾರತ ತೊರೆಯುತ್ತಿರುವ ಬಗ್ಗೆ ಈ ಹಿಂದೆಯೇ ಗಾಳಿ ಸುದ್ದಿಗಳು ಹರಿದಾಡಿದ್ದವು. ಆದರೆ ಈಗ ಕೊಹ್ಲಿಯ ಮಾಜಿ ಕೋಚ್ ಸ್ವತಃ ಸುದ್ದಿಯನ್ನು ಖಾತ್ರಿಗೊಳಿಸಿದ್ದು, ಕೊಹ್ಲಿ ಲಂಡನ್’ನಲ್ಲಿ ನೆಲೆಸಲಿದ್ದಾರೆ ಎಂದಿದ್ದಾರೆ. ಕೊಹ್ಲಿ ಭಾರತ ತ್ಯಜಿಸಲು ಪತ್ನಿ ಅನುಷ್ಕಾ ಮತ್ತು ಮಕ್ಕಳು ಕಾರಣ ಎನ್ನಲಾಗುತ್ತಿದೆ‌. ಭಾರತಕ್ಕೆ ಹೋಲಿಸಿದರೆ ಲಂಡನ್’ನಲ್ಲಿ ಜೀವನ ಶೈಲಿ, ಬದುಕಲು ಅವಕಾಶ ಮತ್ತು ವಾತಾವರಣ ಹೆಚ್ಚು ಚೆನ್ನಾಗಿದೆ ಎಂಬ ಕಾರಣಕ್ಕೆ ಕೊಹ್ಲಿ ವಿದೇಶಕ್ಕೆ ತೆರಳುತ್ತಿದ್ದಾರೆ.

ಭಾರತ ಬಿಟ್ಟು ಹೋಗಿರುವ ಸೆಲೆಬ್ರಿಟಿಗಳಲ್ಲಿ ಕೊಹ್ಲಿ ಮೊದಲಿಗರೇನಲ್ಲ. ಕಳೆದ ಹತ್ತು ವರ್ಷಗಳಲ್ಲಿ ಭಾರತದಿಂದ ಸಾವಿರಾರು ಉದ್ಯಮಿಗಳು, ಕಲಾವಿದರು ಹೊರ ದೇಶಕ್ಕೆ ಹೋಗಿದ್ದಾರೆ. ಭಾರತದಲ್ಲಿ ಜನಪ್ರಿಯ ಆಗಿರುವ ಹಲವಾರು ಕಲಾವಿದರು ನೆಲೆಸಿರುವುದು ದುಬೈ, ಅಮೆರಿಕ ಅಂಥಹಾ ದೇಶಗಳಲ್ಲಿ ಆದರೆ ಸಿನಿಮಾ ಇನ್ನಿತರೆ ಕೆಲಸಗಳಿಗೆ ಮಾತ್ರವೇ ಅವರು ಭಾರತಕ್ಕೆ ಬರುತ್ತಾರೆ.

MS Dhoni: ಧೋನಿ‌ ಜೊತೆ ಮಾತು ಬಿಟ್ಟು ಹತ್ತು ವರ್ಷವಾಯ್ತು: ಹರ್ಭಜನ್ ಸಿಂಗ್

ಕೇಂದ್ರ ಸರ್ಕಾರ ನೀಡಿರುವ ಮಾಹಿತಿ ಪ್ರಕಾರ, 2019 ರಿಂದ 2023 ರ ವರೆಗೆ 8.33 ಲಕ್ಷ ಮಂದಿ ಭಾರತೀಯರು ತಮ್ಮ‌ ನಾಗರಿಕತ್ವವನ್ನು ತೊರೆದು ಬೇರೆ ದೇಶಗಳಿಗೆ ಹೋಗಿ ಸೆಟಲ್ ಆಗಿದ್ದಾರೆ. ಈ ನಾಲ್ಕು‌ ವರ್ಷದ ಅವಧಿಯಲ್ಲಿ ಭಾರತವನ್ನು ಬಿಟ್ಟು ಹೋಗಿರುವ ‘ಹೈ ನೆಟ್ ವರ್ತ್ ಇಂಡಿವಿಜ್ಯುವಲ್’ ದೊಡ್ಡ ಆಸ್ತಿ ಮೌಲ್ಯ ಉಳ್ಳವರ ಸಂಖ್ಯೆ 36 ಸಾವಿರ.

Exit mobile version