Site icon Samastha News

Virat Kohli: ಫೀಲ್ಡ್​ನಲ್ಲಿ ಸಖತ್ ಚಮಕ್ ಕೊಟ್ಟ ವಿರಾಟ್ ಕೊಹ್ಲಿ, ಎಲ್ಲರೂ ಶಾಕ್

Virat Kohli

Virat Kohli

ವಿರಾಟ್ ಕೊಹ್ಲಿ ಅತ್ಯುತ್ತಮ ಬ್ಯಾಟ್ಸ್​ಮನ್ ಆಗಿರುವ ಜೊತೆಗೆ ಫಿಲ್ಡಿಂಗ್ ಮಾಡುವಾಗಿ ಪ್ರೇಕ್ಷಕರನ್ನು ಸಖತ್ ಎಂಟರ್ಟೈನ್ ಸಹ ಮಾಡುತ್ತಾರೆ. ಪ್ರೇಕ್ಷಕರಿಗೆ ಪ್ರತಿಕ್ರಿಯೆ ನೀಡುತ್ತಿರುತ್ತಾರೆ. ಟೀಕಿಸುವ ವಿದೇಶಿ ಆಟಗಾರರಿಗೆ ಕಟು ಉತ್ತರಗಳನ್ನು ಸಹ ನೀಡುತ್ತಾರೆ. ಹಾಡು ಹಾಡುತ್ತಾರೆ, ಒಮ್ಮೊಮ್ಮೆ ಡ್ಯಾನ್ಸ್ ಸಹ ಮಾಡುತ್ತಾರೆ. ಐಪಿಎಲ್​ನಲ್ಲಂತೂ ವಿರಾಟ್​ ಕ್ರೀಡಾಂಗಣದಲ್ಲಿ ಸಖತ್ ಎಂಟರ್ಟೈನ್ ಮಾಡುತ್ತಾರೆ. ಇಂದು ಕೆಕೆಆರ್ ವಿರುದ್ಧ ಬೆಂಗಳೂರು ಪಂದ್ಯದಲ್ಲಿ ವಿರಾಟ್ ಪ್ರೇಕ್ಷಕರಿಗೆ ಹಾಗೂ ವೀಕ್ಷಕ ವಿವರಣೆಗಾರರಿಗೆ ಸಖತ್ ಚಮಕ್ ಕೊಟ್ಟರು.

ಕೊಲ್ಕತ್ತದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಆರ್​ಸಿಬಿ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಆಟ ನಡೆಯುತ್ತಿರುವಾಗ ಬೌಲಿಂಗ್ ಮಾರ್ಕ್ ಬಳಿ ಬಂದ ವಿರಾಟ್ ಕೊಹ್ಲಿ ಅಂಪೈರ್ ಕೈಗೆ ತಮ್ಮ ಕ್ಯಾಪ್ ನೀಡಿ ಅವರಿಂದ ಬಾಲ್ ಪಡೆದು ಬೌಲಿಂಗ್ ಹಾಕಲು ತಯಾರಾಗುವಂತೆ ಕೈಗಳನ್ನು ರೊಟೇಷನ್ ಮಾಡುತ್ತಾ ವಾರ್ಮಪ್ ಪ್ರಾರಂಭ ಮಾಡಿದರು. ವಿರಾಟ್ ಕೊಹ್ಲಿ ಬೌಲಿಂಗ್ ಮಾಡಲು ಬಂದಿದ್ದು ನೋಡಿ ಎಲ್ಲರೂ ಓಹ್ ಎಂದು ಕಿರುಚಲು ಆರಂಭಿಸಿದರು. ಬಳಿಕ ಕೋಹ್ಲಿ, ಪ್ರೇಕ್ಷಕರತ್ತ ನೋಡಿ ಹೇಗಿತ್ತು ನಾನು ಮಾಡಿದ ತಮಾಷೆ ಎನ್ನುವಂತೆ ನಕ್ಕು ಅಂಪೈರ್​ ಅವರಿಂದ ತಮ್ಮ ಟೋಪಿ ಪಡೆದುಕೊಂಡು ವಾಪಸ್ ಫೀಲ್ಡಿಂಗ್​ಗೆ ಹೋದರು.

ಪ್ಲೇ ಆಫ್​ ತಲುಪಲು ಆರ್​ಸಿಬಿಗೆ ಇನ್ನೂ ಇದೆ ಅವಕಾಶ, ಲೆಕ್ಕಾಚಾರ ಹೀಗಿದೆ

ಅಸಲಿಗೆ ವಿರಾಟ್ ಕೊಹ್ಲಿ ಐಪಿಎಲ್​ನಲ್ಲಿ ಬೌಲಿಂಗ್ ಮಾಡಿ ವರ್ಷಗಳೇ ಆಗಿವೆ. ಹಿಂದೊಮ್ಮೆ ವಿರಾಟ್ ಕೊಹ್ಲಿ ಬೌಲಿಂಗ್ ಮಾಡಿದಾಗ ಗೆಲ್ಲಲಿದ್ದ ಪಂದ್ಯವನ್ನು ಸಹ ಸೋತಿದ್ದರು ಆರ್​ಸಿಬಿ. ಸಿಎಸ್​ಕೆಗೆ 12 ಬಾಲ್​ಗಳಲ್ಲಿ 43 ರನ್​ಗಳ ಅವಶ್ಯಕತೆ ಇತ್ತು. ಚೆನ್ನೈನ 8 ವಿಕೆಟ್​ಗಳು ಬಿದ್ದಿದ್ದವು. ಆಗ ಕೊಹ್ಲಿ ಬೌಲಿಂಗ್​ಗೆ ಆಗಮಿಸಿದರು. ಅವರು ಒಂದೇ ಓವರ್​ನಲ್ಲಿ ಐದು ಸಿಕ್ಸರ್ ಕೊಟ್ಟರು, ಚೆನ್ನೈ ಮ್ಯಾಚ್ ಗೆದ್ದುಕೊಂಡಿತು. ಆ ಪಂದ್ಯದ ಬಳಿಕ ಕೊಹ್ಲಿ ಐಪಿಎಲ್​ನಲ್ಲಿ ಬೌಲಿಂಗ್ ಹಾಕಿಲ್ಲ.

ಕೊಲ್ಕತ್ತ ನೈಟ್ ರೈಡರ್ಸ್ ವಿರುದ್ಧ ಇಂದು ಆರ್​ಸಿಬಿ ಪಂದ್ಯ ಆಡುತ್ತಿದೆ. ಪಂದ್ಯವು ಈಡನ್ ಗಾರ್ಡನ್ಸ್​ನಲ್ಲಿ ನಡೆಯುತ್ತಿದೆ. ಪಂದ್ಯದಲ್ಲಿ ಟಾಸ್ ಗೆದ್ದ ಆರ್​ಸಿಬಿ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಇಂದು ಆರ್​ಸಿಬಿ ಬೌಲರ್​ಗಳು ವಿಕೆಟ್​ಗಳನ್ನು ನಿಯಮಿತವಾಗಿ ತೆಗೆದರಾದರೂ ಪ್ರತಿ ಮ್ಯಾಚ್​ ನಂತೆ ಈ ಮ್ಯಾಚ್​ನಲ್ಲಿಯೂ ರನ್​ಗಳನ್ನು ಬಿಟ್ಟುಕೊಟ್ಟರು. ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ 20 ಓವರ್​ಗಳಲ್ಲಿ ಆರು ವಿಕೆಟ್ ಕಳೆದುಕೊಂಡು 222 ರನ್​ಗಳನ್ನು ಗಳಿಸಿದ್ದಾರೆ. ಕೆಕೆಆರ್ ಪರವಾಗಿ ಸಾಲ್ಟ್ 48 ರನ್​ಗಳನ್ನು ಕೇವಲ 14 ಎಸೆತಗಳಲ್ಲಿ ಭಾರಿಸಿದರು. ಕ್ಯಾಪ್ಟನ್ ಶ್ರೇಯಸ್ ಐಯ್ಯರ್ 50 ಹೊಡೆದರು. ರಸೆಲ್ಸ್ 27, ರಮನ್​ದೀಪ್ 24, ರಿಂಕು ಸಿಂಗ್ 24 ರನ್​ಗಳನ್ನು ಹೊಡೆದರು.

Exit mobile version