Virat Kohli
ವಿರಾಟ್ ಕೊಹ್ಲಿ ಅತ್ಯುತ್ತಮ ಬ್ಯಾಟ್ಸ್ಮನ್ ಆಗಿರುವ ಜೊತೆಗೆ ಫಿಲ್ಡಿಂಗ್ ಮಾಡುವಾಗಿ ಪ್ರೇಕ್ಷಕರನ್ನು ಸಖತ್ ಎಂಟರ್ಟೈನ್ ಸಹ ಮಾಡುತ್ತಾರೆ. ಪ್ರೇಕ್ಷಕರಿಗೆ ಪ್ರತಿಕ್ರಿಯೆ ನೀಡುತ್ತಿರುತ್ತಾರೆ. ಟೀಕಿಸುವ ವಿದೇಶಿ ಆಟಗಾರರಿಗೆ ಕಟು ಉತ್ತರಗಳನ್ನು ಸಹ ನೀಡುತ್ತಾರೆ. ಹಾಡು ಹಾಡುತ್ತಾರೆ, ಒಮ್ಮೊಮ್ಮೆ ಡ್ಯಾನ್ಸ್ ಸಹ ಮಾಡುತ್ತಾರೆ. ಐಪಿಎಲ್ನಲ್ಲಂತೂ ವಿರಾಟ್ ಕ್ರೀಡಾಂಗಣದಲ್ಲಿ ಸಖತ್ ಎಂಟರ್ಟೈನ್ ಮಾಡುತ್ತಾರೆ. ಇಂದು ಕೆಕೆಆರ್ ವಿರುದ್ಧ ಬೆಂಗಳೂರು ಪಂದ್ಯದಲ್ಲಿ ವಿರಾಟ್ ಪ್ರೇಕ್ಷಕರಿಗೆ ಹಾಗೂ ವೀಕ್ಷಕ ವಿವರಣೆಗಾರರಿಗೆ ಸಖತ್ ಚಮಕ್ ಕೊಟ್ಟರು.
ಕೊಲ್ಕತ್ತದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಆರ್ಸಿಬಿ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಆಟ ನಡೆಯುತ್ತಿರುವಾಗ ಬೌಲಿಂಗ್ ಮಾರ್ಕ್ ಬಳಿ ಬಂದ ವಿರಾಟ್ ಕೊಹ್ಲಿ ಅಂಪೈರ್ ಕೈಗೆ ತಮ್ಮ ಕ್ಯಾಪ್ ನೀಡಿ ಅವರಿಂದ ಬಾಲ್ ಪಡೆದು ಬೌಲಿಂಗ್ ಹಾಕಲು ತಯಾರಾಗುವಂತೆ ಕೈಗಳನ್ನು ರೊಟೇಷನ್ ಮಾಡುತ್ತಾ ವಾರ್ಮಪ್ ಪ್ರಾರಂಭ ಮಾಡಿದರು. ವಿರಾಟ್ ಕೊಹ್ಲಿ ಬೌಲಿಂಗ್ ಮಾಡಲು ಬಂದಿದ್ದು ನೋಡಿ ಎಲ್ಲರೂ ಓಹ್ ಎಂದು ಕಿರುಚಲು ಆರಂಭಿಸಿದರು. ಬಳಿಕ ಕೋಹ್ಲಿ, ಪ್ರೇಕ್ಷಕರತ್ತ ನೋಡಿ ಹೇಗಿತ್ತು ನಾನು ಮಾಡಿದ ತಮಾಷೆ ಎನ್ನುವಂತೆ ನಕ್ಕು ಅಂಪೈರ್ ಅವರಿಂದ ತಮ್ಮ ಟೋಪಿ ಪಡೆದುಕೊಂಡು ವಾಪಸ್ ಫೀಲ್ಡಿಂಗ್ಗೆ ಹೋದರು.
ಪ್ಲೇ ಆಫ್ ತಲುಪಲು ಆರ್ಸಿಬಿಗೆ ಇನ್ನೂ ಇದೆ ಅವಕಾಶ, ಲೆಕ್ಕಾಚಾರ ಹೀಗಿದೆ
ಅಸಲಿಗೆ ವಿರಾಟ್ ಕೊಹ್ಲಿ ಐಪಿಎಲ್ನಲ್ಲಿ ಬೌಲಿಂಗ್ ಮಾಡಿ ವರ್ಷಗಳೇ ಆಗಿವೆ. ಹಿಂದೊಮ್ಮೆ ವಿರಾಟ್ ಕೊಹ್ಲಿ ಬೌಲಿಂಗ್ ಮಾಡಿದಾಗ ಗೆಲ್ಲಲಿದ್ದ ಪಂದ್ಯವನ್ನು ಸಹ ಸೋತಿದ್ದರು ಆರ್ಸಿಬಿ. ಸಿಎಸ್ಕೆಗೆ 12 ಬಾಲ್ಗಳಲ್ಲಿ 43 ರನ್ಗಳ ಅವಶ್ಯಕತೆ ಇತ್ತು. ಚೆನ್ನೈನ 8 ವಿಕೆಟ್ಗಳು ಬಿದ್ದಿದ್ದವು. ಆಗ ಕೊಹ್ಲಿ ಬೌಲಿಂಗ್ಗೆ ಆಗಮಿಸಿದರು. ಅವರು ಒಂದೇ ಓವರ್ನಲ್ಲಿ ಐದು ಸಿಕ್ಸರ್ ಕೊಟ್ಟರು, ಚೆನ್ನೈ ಮ್ಯಾಚ್ ಗೆದ್ದುಕೊಂಡಿತು. ಆ ಪಂದ್ಯದ ಬಳಿಕ ಕೊಹ್ಲಿ ಐಪಿಎಲ್ನಲ್ಲಿ ಬೌಲಿಂಗ್ ಹಾಕಿಲ್ಲ.
ಕೊಲ್ಕತ್ತ ನೈಟ್ ರೈಡರ್ಸ್ ವಿರುದ್ಧ ಇಂದು ಆರ್ಸಿಬಿ ಪಂದ್ಯ ಆಡುತ್ತಿದೆ. ಪಂದ್ಯವು ಈಡನ್ ಗಾರ್ಡನ್ಸ್ನಲ್ಲಿ ನಡೆಯುತ್ತಿದೆ. ಪಂದ್ಯದಲ್ಲಿ ಟಾಸ್ ಗೆದ್ದ ಆರ್ಸಿಬಿ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಇಂದು ಆರ್ಸಿಬಿ ಬೌಲರ್ಗಳು ವಿಕೆಟ್ಗಳನ್ನು ನಿಯಮಿತವಾಗಿ ತೆಗೆದರಾದರೂ ಪ್ರತಿ ಮ್ಯಾಚ್ ನಂತೆ ಈ ಮ್ಯಾಚ್ನಲ್ಲಿಯೂ ರನ್ಗಳನ್ನು ಬಿಟ್ಟುಕೊಟ್ಟರು. ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ 20 ಓವರ್ಗಳಲ್ಲಿ ಆರು ವಿಕೆಟ್ ಕಳೆದುಕೊಂಡು 222 ರನ್ಗಳನ್ನು ಗಳಿಸಿದ್ದಾರೆ. ಕೆಕೆಆರ್ ಪರವಾಗಿ ಸಾಲ್ಟ್ 48 ರನ್ಗಳನ್ನು ಕೇವಲ 14 ಎಸೆತಗಳಲ್ಲಿ ಭಾರಿಸಿದರು. ಕ್ಯಾಪ್ಟನ್ ಶ್ರೇಯಸ್ ಐಯ್ಯರ್ 50 ಹೊಡೆದರು. ರಸೆಲ್ಸ್ 27, ರಮನ್ದೀಪ್ 24, ರಿಂಕು ಸಿಂಗ್ 24 ರನ್ಗಳನ್ನು ಹೊಡೆದರು.