Vitamin D: ಚಳಿಗಾಲದಲ್ಲಿ ಹೆಚ್ಚಾಗುತ್ತೆ ವಿಟಮಿನ್ ಡಿ ಸಮಸ್ಯೆ, ಏನಿದರ ಗುಣಲಕ್ಷಣ

0
77
Vitamin D

Vitamin D

ಚಳಿಗಾಲ ಬಹಳ ಖುಷಿ ಕೊಡುವ ಋತು, ಬಿಸಿಯಾದ ಊಟ, ಕುರುಕುಲು ತಿಂಡಿ, ಒಳ್ಳೆಯ ನಿದ್ದೆ, ಬೆಚ್ಚನೆ ಹೊದ್ದುಗೆಗಳು ಸುಂದರವಾದ ಮಂಜು ತುಂಬಿದ ಮುಂಜಾವು ಚಳಿಗಾಲಕ್ಕೆ ಚಳಿಗಾಲವೇ ಸಾಟಿ. ಆದರೆ ಚಳಿಗಾಲದಲ್ಲಿ ಉಲ್ಬಣವಾಗುವ ಆರೋಗ್ಯ ಸಮಸ್ಯೆಗಳು ಒಂದೆರಡಲ್ಲ. ಚಳಿಗಾಲದಲ್ಲಿ ಅಸ್ತಮಾ, ಹೃದಯ ರೋಗ ಸಮಸ್ಯೆಗಳು ಹೆಚ್ಚಾಗುತ್ತವೆ. ಆದರೆ 100 ರಲ್ಲಿ 80 ಜನಕ್ಕೆ ವಿಟಮಿನ್ ಡಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ವಿಟಮಿನ್ ಡಿ ಕೊರತೆಯ ಗುಣಲಕ್ಷಣಗಳು ಏನು? ಅದನ್ನು ನಿವಾರಿಸಿಕೊಳ್ಳುವುದು ಹೇಗೆ? ಇಲ್ಲಿದೆ ಮಾಹಿತಿ.

ವಿಟಮಿನ್ ಡಿ ಕೊರತೆ ಸಾಮಾನ್ಯವಾಗಿ ಚಳಿಗಾಲದಲ್ಲಿ ಮಾತ್ರವೇ ಕಾಣಿಸಿಕೊಳ್ಳುತ್ತದೆ. ಬಿಸಿಲು ಹೆಚ್ಚಾಗಿ ಇರುವ ಸಮಯದಲ್ಲಿ ಈ ಸಮಸ್ಯೆ ಇರುವುದಿಲ್ಲ ಏಕೆಂದರೆ ಮನುಷ್ಯನಿಗೆ ಬೇಕಾದಷ್ಟು ವಿಟಮಿನ್ ಡಿ ಸೂರ್ಯನಿಂದ ಅಥವಾ ಬಿಸಿಲು, ಶಾಖದಿಂದ ಲಭ್ಯವಾಗಿಬಿಡುತ್ತದೆ. ಆದರೆ ಚಳಿಗಾಲದಲ್ಲಿ ಹೀಗಾಗುವುದಿಲ್ಲ.

ವಿಟಮಿನ್ ಡಿ ಕೊರತೆ ಇರುವವರಿಗೆ ಮುಖ್ಯವಾಗ ಮೈ ಕೈ ನೋವು ಕಾಣಿಸಿಕೊಳ್ಳುತ್ತದೆ. ವಿಶೇಷವಾಗಿ ಕೆಳ ಬೆನ್ನಿನ ಭಾಗದಲ್ಲಿ ತೀವ್ರ ನೋವು ಇರುತ್ತದೆ. ಅದು ಒಂದು ರೀತಿ ಚುಚ್ಚಿದ ಮಾದರಿಯ ನೋವು. ಇನ್ನು ಕೆಲವರಿಗೆ ಕಾಲಿನ ಪಾದ ಹಾಗೂ ಅಂಗೈನಲ್ಲಿ ಚುಚ್ಚಿದ ಮಾದರಿ ನೋವು ಕಾಣಿಸಿಕೊಳ್ಳುತ್ತದೆ. ನೋವನ್ನು ತಡೆದುಕೊಳ್ಳುವ ಶಕ್ತಿ ಬಹಳ ಕಡಿಮೆ ಆಗುತ್ತದೆ. ಸಣ್ಣ ಪುಟ್ಟ ಗಾಯ ಅಥವಾ ಏಟುಗಳು ಸಹ ಹೆಚ್ಚು ನೋವು ನೀಡುತ್ತವೆ. ನಡೆಯಬೇಕಾದರೆ ದೊಡ್ಡ ಹೆಜ್ಜೆಗಳನ್ನು ಇಡಲಾಗುವುದಿಲ್ಲ ಬದಲಿಗೆ ಸಣ್ಣ ಸಣ್ಣ ಹೆಜ್ಜೆಗಳನ್ನು ಇಟ್ಟು ನಡೆಯಬೇಕಾಗುತ್ತದೆ. ಮೂಳೆಗಳಲ್ಲಿ ನೋವು ಕಾಣಿಸುತ್ತದೆ.

Food: ಪ್ಯಾಕೇಟ್ ತಿಂಡಿಗಳನ್ನು ತಿನ್ನುತ್ತಿದ್ದೀರೆ? ಹಾಗಿದ್ದರೆ ಇದನ್ನೊಮ್ಮೆ ಓದಿ

ವಿಟಮಿನ್ ಡಿ ಕೊರತೆಯನ್ನು ನಿವಾರಿಸಿಕೊಳ್ಳುವುದು ಸುಲಭವಾದ ಕಾರ್ಯ. ಆಹಾರ ಮತ್ತು ಕೆಲ ಮಾತ್ರೆಗಳಿಂದಲೂ ವಿಟಮಿನ್ ಡಿ ಮರುಪೂರಣ ಮಾಡಿಕೊಳ್ಳಬಹುದು. ಮೀನು, ಕೆಂಪು ಮಾಂಸಾಹಾರ, ಮೊಟ್ಟೆ, ಲಿವರ್, ಸೀಫುಡ್​ನಲ್ಲಿ ವಿಟಮಿನ್ ಡಿ ಅಂಶ ಹೆಚ್ಚಿರುತ್ತದೆ. ಸಸ್ಯಹಾರದಲ್ಲಿ ಸೀಮಿತ ಆಹಾರದಿಂದಷ್ಟೆ ವಿಟಮಿನ್ ಡಿ ದೊರಕುತ್ತದೆ. ಆದರೆ ಎಲ್ಲಕ್ಕಿಂತಲೂ ಒಳ್ಳೆಯ ದಾರಿಯೆಂದರೆ ಸೂರ್ಯನ ಬಿಸಿಲಿಗೆ ಮೈಯೊಡ್ಡುವುದು. ಪ್ರತಿನಿತ್ಯ ಅರ್ಧ ಗಂಟೆ ಬೆಳಿಗಿನ ಬಿಸಿಲಿನಲ್ಲಿ ಸಮಯ ಕಳೆದರೆ ಸಾಕು ವಿಟಮಿನ್ ಡಿ ಮರುಪೂರಣಗೊಳ್ಳುತ್ತದೆ. ವೈದ್ಯರು ಕೆಲವು ವಿಟಮಿನ್ ಮಾತ್ರೆ ಮತ್ತು ಸಿರಪ್​ಗಳನ್ನು ಸಹ ಕೊಡುತ್ತಾರೆ. ಇವು ಸಹ ಸಹಾಯಕಾರಿಯೇ.

LEAVE A REPLY

Please enter your comment!
Please enter your name here