Site icon Samastha News

Vivek Oberoi: ಅವಕಾಶಕ್ಕಾಗಿ ಕಾಲು ಹಿಡಿದಿದ್ದ ನಟ, ಇಂದು 1200 ಕೋಟಿ ಸಾಮ್ರಾಜ್ಯ ಕಟ್ಟಿದ್ದಾನೆ

Vivek Oberoi

Vivek Oberoi

ಕಾಲವೇ ಹೀಗೆ, ಒಮ್ಮೆ ಏರಿದರೆ ಒಮ್ಮೆ ಪಾತಾಳಕ್ಕೆ ತಳ್ಳುತ್ತದೆ. ಇದಕ್ಕೆ ತಾಜಾ ಉದಾಹರಣೆ ಕರ್ನಾಟಕದ ಅಳಿಯ, ಬಾಲಿವುಡ್ ನಟ ವಿವೇಕ್ ಒಬೆರಾಯ್. ಈ ನಟ 2002 ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟಾಗ ಈತನನ್ನು ಶಾರುಖ್ ಖಾನ್​ಗೆ ಹೋಲಿಸಲಾಗಿತ್ತು. ಈಗ ಕೈಇಟ್ಟಿದ್ದೆಲ್ಲವೂ ಚಿನ್ನವೇ ಆಗಿತ್ತು ಆಗ. ನಟಿಸಿದ ಸಿನಿಮಾಗಳು ಸಾಲು-ಸಾಲಾಗಿ ಹಿಟ್. ನಿರ್ಮಾಪಕರು ಮನೆ ಮುಂದೆ ಸಾಲುಗಟ್ಟಿ ನಿಂತಿದ್ದರು. ಎಲ್ಲದಕ್ಕಿಂತಲೂ ಮಿಗಿಲಾಗಿ ಐಶ್ವರ್ಯಾ ರೈ ಎಂಬ ಚೆಲುವೆ ತೋಳಿನಲ್ಲಿದ್ದಳು.

ಹೌದು, ವಿವೇಕ್ ಒಬೆರಾಯ್ ಹಾಗೂ ಐಶ್ವರ್ಯಾ ರೈ ಬಹುಸಮಯ ಪ್ರೀತಿಯಲ್ಲಿದ್ದರು. ಆದರೆ ಇದು ಸಲ್ಮಾನ್ ಖಾನ್​ಗೆ ಸಹಿಸಲಾಗಲಿಲ್ಲ. ಆ ಸಮಯದಲ್ಲಿ ವಿವೇಕ್ ಒಬೆರಾಯ್, ತನಗೆ ಸಲ್ಮಾನ್ ಖಾನ್ ಜೀವ ಬೆದರಿಕೆ ಹಾಕಿದ್ದಾನೆಂದು ಪೊಲೀಸ್ ಠಾಣೆಯಲ್ಲಿ ದೂರು ನೀಡಿದರು. ಆದರೆ ಆ ದೂರಿನ ಬಳಿಕ ವಿವೇಕ್ ಒಬೆರಾಯ್ ಬದುಕು ಬೇರೆ ದಾರಿಯನ್ನೇ ಹಿಡಿಯಿತು. ಆರಂಭದ ಕೆಲ ವರ್ಷ ಮುಟ್ಟಿದ್ದೆಲ್ಲವೂ ಚಿನ್ನವಾಯ್ತು ಅದಾದ ಬಳಿಕ ಸಾಲು-ಸಾಲು ಫ್ಲಾಪ್ ಸಿನಿಮಾಗಳು ನೀಡಲಾರಂಭಿಸಿದರು ವಿವೇಕ್. 2005 ರಲ್ಲಿ ಐಶ್ವರ್ಯಾ ರೈ ಸಹ ಬಿಟ್ಟು ಹೋದರು. ಆ ಮೇಲಂತೂ ನರಕವೇ.

ವಿವೇಕ್ ಒಬೆರಾಯ್​ಗೆ ಸಿನಿಮಾ ಅವಕಾಶಗಳು ಸಿಗುವುದೇ ಕಷ್ಟವಾಗಿ ಹೋಯ್ತು. ಸಲ್ಮಾನ್ ಖಾನ್ ಅನ್ನು ಎದುರಿಸಿ ಉಳಿಗಾಲವುಂಟೇ. ಹಾಗೋ ಹೀಗೋ ಕಷ್ಟಪಟ್ಟು, ಕಾಡಿ ಬೇಡಿ ಸಿನಿಮಾಗಳನ್ನು ಪಡೆದುಕೊಳ್ಳುತ್ತಿದ್ದರು ವಿವೇಕ್. ಶಾರುಖ್ ಖಾನ್ ಜೊತೆ ಹೋಲಿಸಲಾಗುತ್ತಿದ್ದ ನಟನಿಗೆ ಬಿ ದರ್ಜೆ, ಸಿ ದರ್ಜೆ ಸಿನಿಮಾಗಳಲ್ಲಿ ನಟಿಸುವ ಗತಿ ಬಂತು. ಒಮ್ಮೆಯಂತೂ ಸಿನಿಮಾ ಅವಾರ್ಡ್ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ನಿಂತು ಎಲ್ಲರೆದರು ಕ್ಷಮೆ ಕೇಳಿ ಸಲ್ಮಾನ್ ಖಾನ್​ಗೆ ಕೈ ಮುಗಿದರು ವಿವೇಕ್. ಆದರೂ ಸಹ ಸಲ್ಮಾನ್ ಖಾನ್ ಕರಗಿರಲಿಲ್ಲ.

Salman Khan: ಸಲ್ಮಾನ್ ಖಾನ್ ಧರಿಸಿರುವ ವಾಚ್ ಕಂಡು ಮುಸ್ಲಿಂ ಗುರುಗಳಿಗೆ ಉರಿ

ಆದರೆ ವಿವೇಕ್ ಒಬೆರಾಯ್ ಸ್ವಭಾವತಃ ಬುದ್ಧಿವಂತ. ವೃತ್ತಿ ಜೀವನದ ಆರಂಭದಲ್ಲಿ ಸಿಕ್ಕ ಯಶಸ್ಸು ಆ ನಂತರ ಬಂದ ವಿಫಲತೆಯ ಅರಿವಿದ್ದ ಕಾರಣ ಸಿನಿಮಾಗಳ ಜೊತೆಗೆ ಉದ್ಯಮದ ಕಡೆಗೆ ಗಮನ ನೀಡಿದರು. ದುಡಿದ ಹಣವನ್ನೆಲ್ಲ ಒಂದಲ್ಲ ಒಂದು ಉದ್ಯಮಗಳ ಮೇಲೆ ತೊಡಗಿಸುತ್ತಲೇ ಸಾಗಿದರು. ಈಗ ಕೇವಲ ಉದ್ಯಮಗಳಿಂದಾಗಿಯೇ ವಿವೇಕ್ ಒಬೆರಾಯ್ ಬಳಿ 1200 ಕೋಟಿ ಮೌಲ್ಯದ ಆಸ್ತಿ ಇದೆ. ಹಲವು ಬ್ಯುಸಿನೆಸ್​ಗಳಿಗೆ ಮಾಲೀಕರಾಗಿದ್ದಾರೆ ವಿವೇಕ್ ಒಬೆರಾಯ್. ಸಲ್ಮಾನ್ ಖಾನ್​ ಇಂದಾಗಿ ಸಿನಿಮಾ ವೃತ್ತಿ ಹಾಳಾಯ್ತು, ಆದರೆ ಈಗ ಸಲ್ಮಾನ್ ಖಾನ್​ಗೆ ಸರಿ ಸಮನಾದ ಆಸ್ತಿ ಮೌಲ್ಯವನ್ನು ವಿವೇಕ್ ಹೊಂದಿದ್ದಾರೆ.

ಅಂದಹಾಗೆ ವಿವೇಕ್ ಒಬೆರಾಯ್, ಕರ್ನಾಟಕದ ಅಳಿಯ. ವಿವೇಕ್ ಒಬೆರಾಯ್ ವಿವಾಹವಾಗಿರುವುದು ಕರ್ನಾಟಕದ ಮಾಜಿ ಮಂತ್ರಿ ಜೀವ್​ರಾಜ್ ಆಳ್ವ ಅವರ ಪುತ್ರಿ ಪ್ರಿಯಾಂಕಾ ಆಳ್ವಾ ಅವರನ್ನು. ವಿವೇಕ್ ಒಬೆರಾಯ್ ಅವರ ಈ ಅದ್ಭುತ ಯಶಸ್ಸಿನಲ್ಲಿ ಪ್ರಿಯಾಂಕಾ ಆಳ್ವಾ ಅವರ ಪಾಲೂ ಸಹ ದೊಡ್ಡದಾಗಿದೆ.

Exit mobile version