Site icon Samastha News

Wayanad: ವಯನಾಡು‌ ಭೂಕುಸಿತ ಪ್ರದೇಶದಲ್ಲಿ‌ ಸಮಸ್ಯೆ‌ ಸೃಷ್ಟಿಸಿರುವ ಸ್ವಯಂ ಸೇವಕರು

wayanad

Wayanad

ಕೇರಳ ಹಿಂದೆಂದೂ ಕಾಣದಂತ ಪ್ರಕೃತಿ ವಿಕೋಪಕ್ಕೆ ತುತ್ತಾಗಿದೆ. ವಯನಾಡಿನ ಮಂಡಕೈ ಸೇರಿದಂತೆ ಕೆಲವು ಕಡೆ ಭೀಕರ ಗುಡ್ಡ ಕುಸಿತ ಉಂಟಾಗಿದ್ದು 350 ಕ್ಕೂ ಹೆಚ್ಚು ಜನ ಜೀವ ಕಳೆದುಕೊಂಡಿದ್ದಾರೆ. ಸೇನೆ, ಪೊಲೀಸ್, ಅಗ್ನಿಶಾಮಕ ದಳ ಎಲ್ಲರೂ ವಯನಾಡಿಗೆ ಬಂದು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಇವರ ಜೊತೆಗೆ ಸ್ವಯಂ ಸೇವಕರೂ ಸಹ ರಕ್ಷಣಾ ಕಾರ್ಯದಲ್ಲಿ ಕೈ ಜೋಡಿಸಿದ್ದಾರೆ. ಆದರೆ ಈ ಸ್ವಯಂ ಸೇವಕರಿಂದ ಕೆಲವು ಸಮಸ್ಯೆಗಳು ಸಹ ಕಾಡಲು ಪ್ರಾರಂಭವಾಗಿವೆ.

ಗುಡ್ಡ ಕುಸಿತದಿಂದ ಸಮಸ್ಯೆಗೆ ಸಿಲುಕಿರುವ ಪ್ರದೇಶಗಳಲ್ಲಿ ಇನ್ನೂ ಹಲವು ಮನೆಗಳು ಉಳಿದುಕೊಂಡಿವೆ. ಈಗ ಈ ಮನೆಗಳಲ್ಲಿ ಕಳ್ಳತನ ಪ್ರಾರಂಭವಾಗಿದೆ. ಈ ಕಳ್ಳತನಗಳಿಗೆ ಹೊರಗಿನಿಂದ ಬಂದಿರುವ ಸ್ವಯಂ ಸೇವಕರೆ ಕಾರಣ ಎನ್ನಲಾಗುತ್ತಿದೆ. ಕೆಲವು ದಿನಗಳ ಹಿಂದೆಯಷ್ಟೆ ಸ್ವಯಂ ಸೇವಕರು ಹಾಗೂ ಅಧಿಕಾರಿಗಳ‌ ಸೋಗಿನಲ್ಲಿ ಬಂದ ಕೆಲವರು ಕೆಲವು ಮನೆಗಳನ್ನು ದೋಚಿ ಪರಾರಿ ಆಗಿದ್ದಾರೆ. ಬೇರೆ ಕೆಲವು ಕಳ್ಳತನದ ಪ್ರಕರಣಗಳು ಸಹ ವರದಿ ಆಗಿವೆ.

ಇದೇ ಕಾರಣಕ್ಕೆ ವಯನಾಡು ಜಿಲ್ಲಾ ಆಡಳಿತವು ಭಾನುವಾರ ಹೊಸ ನಿಯಮ ಜಾರಿ ಮಾಡಿದ್ದು, ಯಾರೇ ಸ್ವಯಂ ಸೇವಕರಾಗಿ ಬಂದರು ಅವರು ಕಡ್ಡಾಯವಾಗಿ ನೊಂದಣಿ ಮಾಡಿಕಳ್ಳಬೇಕು ಎಂದಿದೆ. ಸ್ವಯಂ ಸೇವಕರ ನೊಂದಣಿಗಾಗಿ ಚೂರ್ಲಮಾಲ ನಲ್ಲಿ ಕೌಂಟರ್ ಒಂದನ್ನು ತೆರೆಯಲಾಗಿದೆ. ಸ್ವಯಂ ಸೇವಕರು ತಮ್ಮ ಗುರುತಿನ ಚೀಟಿ, ಸಂಪರ್ಕ ಸಂಖ್ಯೆಗಳನ್ನು ನೀಡಿ ನೊಂದಣಿ ಆದ ಬಳಿಕವಷ್ಟೆ ರಕ್ಷಣಾ ಕಾರ್ಯದಲ್ಲಿ‌ತೊಡಗಿಕೊಳ್ಳಬೇಕು ಎನ್ನಲಾಗಿದೆ.

Bengaluru: ರಾತ್ರೋರಾತ್ರಿ ಕೋಟ್ಯಧೀಶಳಾದ ಬೆಂಗಳೂರಿನ ಮಹಿಳೆ: ಹೇಗೆ?

ಪೊಲೀಸರು ಸಹ ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ್ದು ಯಾವುದೇ ಸ್ವಯಂ ಸೇವಕರು ಅಥವಾ ಇನ್ಯಾವುದೇ ವ್ಯಕ್ತಿಗಳು ಸಂತ್ರಸ್ತರ ಮನೆಗಳಿಗೆ ಹೋಗುವ ಮುಂಚೆ ಪೊಲೀಸರ ಒಪ್ಪಿಗೆ ಪಡೆಯಬೇಕು. ಮತ್ತು ರಾತ್ರಿ ಸಮಯದಲ್ಲಿ ಯಾವುದೇ ಕಾರಣಕ್ಕೂ ಸಂತ್ರಸ್ತರ ಮನೆಗಳಿಗೆ ಭೇಟಿ ನೀಡಬಾರದು ಎಂದಿದ್ದಾರೆ. ಸ್ವಯಂ ಸೇವಕರ ಹೆಸರಲ್ಲಿ ಬಂದು ಸಂತ್ರಸ್ತ ಪ್ರದೇಶದಲ್ಲಿ ಖಾಲಿ ತಿರುಗುತ್ತಿರುವವರನ್ನು, ಕೇವಲ‌ ಊಟಕ್ಕಾಗಿ ಬಂದವರನ್ನು, ಸಂತ್ರಸ್ತರಿಗಾಗಿ ಬಂದ ಪದಾರ್ಥಗಳನ್ನು ಕದಿಯಲು ತೊಡಗಿದವರನ್ನು ಗುರುತಿಸಿ ಪೊಲೀಸರು ವಾಪಸ್ ಕಳಿಸಿದ್ದಾರೆ.

Exit mobile version