Weekly Astrology: ಈ ವರ್ಷದ ಕೊನೆಯ ವಾರ ಯಾರ ಭವಿಷ್ಯ ಹೇಗಿದೆ?

0
60
Weekly Astrology from December 23 to December 30

Weekly Astrology

ಈ ವರ್ಷ ಮುಗಿಯಲು ಇನ್ನು ಒಂದು ವಾರವಷ್ಟೆ ಬಾಕಿ ಇದೆ. ಡಿಸೆಂಬರ್ ತಿಂಗಳ ಕೊನೆಯ ವಾರದಲ್ಲಿ ಯಾರ ಅದೃಷ್ಟ ಹೇಗಿದೆ? ಯಾರ ಗ್ರಹಗತಿ ಯಾವ ದಿಕ್ಕಿನ ಕಡೆಗೆ ಸಾಗುತ್ತಿದೆ? ಯಾರಿಗೆ ಒಳಿತು? ಯಾರಿಗೆ ಕೆಡುಕು? ಇಲ್ಲಿದೆ ನೋಡಿ ಮಾಹಿತಿ. ಈ ಭವಿಷ್ಯವು ಡಿಸೆಂಬರ್ 23 ರಿಂದ ಡಿಸೆಂಬರ್ 30ರ ವರೆಗೆ ಇರುತ್ತದೆ.

ಮೇಷ ರಾಶಿ

ಮೇಷ ರಾಶಿಯವರಿಗೆ ಈ ವಾರ ಅಷ್ಟೇನೂ ಶುಭವಿಲ್ಲ. ಮನೆಯಲ್ಲಿ ಭಿನ್ನಾಭಿಪ್ರಾಯ ಮೂಡಲಿದೆ. ನೆಮ್ಮದಿ ಇರದು. ಅಂದುಕೊಂಡಿದ್ದನ್ನು ಮಾಡಲಾಗದು. ಆಡಳಿತಗಾರರಿಂದ ಸಮಸ್ಯೆಗೆ ಸಿಲುಕಿವಿರಿ. ಪ್ರಯಾಣದಿಂದ ಸುಸ್ತಾಗುವಿರಿ. ನಿಮ್ಮ ಬಗ್ಗೆ ಕೆಲವರು ಸುಳ್ಳು ಹೇಳುವರು. ದೈನಂದಿಕ ಕಾರ್ಯಗಳಲ್ಲಿ ಬದಲಾವಣೆ ಆಗುವುದು. ಕೆಲಸದ ಸ್ಥಳದಲ್ಲಿ ಗೌರವ ಕಡಿಮೆ ಆಗಲಿದೆ.

ವೃಷಭ ರಾಶಿ:

ವೃಷಭ ರಾಶಿಗೆ ಈ ವಾರ ಶುಭ ಫಲ ದೊರಕಲಿದೆ. ಸಾಮಾಜಿಕ ಗೌರವ ಪ್ರಾಪ್ತಿ ಆಗಲಿದೆ. ಕಲಾವಿದರಿಗೆ ಉದ್ಯೋಗ ಸಿಗಲಿದೆ. ಅಂದುಕೊಂಡ ಕೆಲಸ ಕೈಗೂಡಲಿವೆ. ಸೋಮಾರಿತನ ಮಾಡಬೇಡಿ. ಅನಾರೋಗ್ಯ ಕಾಡಬಹುದು. ಹಣಕಾಸಿನ ಹರಿವು ಚೆನ್ನಾಗಿ ಇರಲಿದೆ. ಹೊಸ ಯೋಜನೆಗಳನ್ನು ಹಾಕಲಿದ್ದೀರಿ.

ಮಿಥುನ ರಾಶಿ:

ಮಿಥುನ ರಾಶಿಗೆ ಈ ವಾರ ಶುಭ ಫಲ ಇದೆ. ಶತ್ರುಕಾಟ ಪರಿಹಾರ ಆಗಲಿದೆ. ಹೊಸ ಮಿತ್ರರು ಸಿಗಲಿದ್ದಾರೆ. ಆದರೆ ಅದೇ ಕಾರಣಕ್ಕೆ ಮೋಸವನ್ನೂ ಹೋಗಲಿದ್ದೀರಿ. ಪ್ರಯಾಣ ಮಾಡಬೇಕಾದರೆ ಎಚ್ಚರ. ಉದ್ಯೋಗದಲ್ಲಿ ಸಂಬಳ ಹೆಚ್ಚಳ ಅಥವಾ ಬೋನಸ್ ಪ್ರಾಪ್ತಿ ಆಗಲಿದೆ. ನಿಮ್ಮನ್ನು ಘಾಸಿಗೊಳಿಸಲೆಂದೇ ಕೆಲವರು ಮಾತನಾಡಲಿದ್ದಾರೆ. ಮನಸ್ಸಿಗೆ ತೆಗೆದುಕೊಳ್ಳಬೇಡಿ.

ಕರ್ಕಾಟಕ ರಾಶಿ:

ಈ ವಾರ ಕರ್ನಾಟಕ ರಾಶಿಗೆ ಮಿಶ್ರಫಲ ಇದೆ. ಮನಸ್ಸಿನಲ್ಲಿ ಸಾಕಷ್ಟು ಗೊಂದಲ ಇರಲಿದೆ. ಗಟ್ಟಿ ನಿರ್ಣಯಗಳನ್ನು ಮಾಡಲು ನಿಮಗೆ ಆಗದು. ಶಾಪಿಂಗ್ ಮಾಡಲಿದ್ದೀರಿ. ಮಕ್ಕಳ ಬಗ್ಗೆ ಹೆಮ್ಮೆಯಾಗಲಿದೆ. ಪ್ರವಾಸಕ್ಕೆ ಹೋಗುವ ಮನಸ್ಸಾಗಲಿದೆ. ಫಲ ಪಡೆಯಲು ಸಾಕಷ್ಟು ಶ್ರಮವನ್ನು ನೀವು ಪಡಬೇಕಾಗುತ್ತದೆ. ಮುಂದೆ ಒಳ್ಳೆಯ ದಿನಗಳಿವೆ.

ಸಿಂಹ ರಾಶಿ:

ಸಿಂಹ ರಾಶಿಯವರಿಗೆ ಈ ವಾರ ಶುಭ ಇರಲಿದೆ. ಆರೋಗ್ಯದ ಸುಧಾರಣೆಯಾಗುವುದು. ಶಿಕ್ಷಣಕ್ಷೇತ್ರದಲ್ಲಿ ಸಾಧನೆ ಸಾಧ್ಯವಾಗುವುದು. ನೀವು ಏನನ್ನಾದರೂ ಪಡೆಯಲು ಪ್ರಯತ್ನಿಸಲೇ ಬೇಕು. ಸ್ವಾತಂತ್ರ್ಯವನ್ನು ಪಡೆಯಲು ಹವಣಿಸುವಿರಿ. ಮನೆಯಿಂದ ದೂರವಿರುವವರಿಗೆ ಮನೆಯ ನೆನಪಾಗಲಿದೆ. ತನ್ನವರನ್ನು ಕಳೆದುಕೊಳ್ಳುವ ಹೆದರಿಕೆ ಉಂಟಾಗಲಿದೆ.

ಕನ್ಯಾ ರಾಶಿ:

ಕನ್ಯಾ ರಾಶಿಗೆ ಈ ವಾರ ಶುಭ ಫಲ ಇದೆ. ಮಾಡಿದ ಉಪಕಾರಕ್ಕೆ ನಿಮಗೆ ಪ್ರತ್ಯುಪಕಾರ ಸಿಗಲಿದೆ. ಮನಸ್ಸಿನ ಗೊಂದಲಗಳು ನಿವಾರಣೆ ಆಗಲಿದೆ. ಪ್ರೀತಿ ಪಾತ್ರರಿಂದ ನಿಮಗೆ ಮಾರ್ಗದರ್ಶನ ಸಿಗಲಿದೆ. ಅತಿಯಾದ ಕೆಲಸದಿಂದ ದೇಹ ಬಳಲಲಿದೆ. ನಿದ್ರೆ ಅತಿಯಾಗಿ ಕಾಡಲಿದೆ. ನಾನು ಒಬ್ಬನೇ ಎಂಬ ಕೊರಗು ನಿವಾರಣೆ ಆಗಲಿದೆ.

ತುಲಾ ರಾಶಿ:

ತುಲಾ ರಾಶಿಗೆ ಈ ವಾರ ಅಶುಭ ಫಲ ಇದೆ. ಇಲ್ಲದ ಆರೋಪಗಳು ನಿಮ್ಮ ಮೇಲೆ ಬರಲಿದೆ. ಕಚೇರಿಯಲ್ಲಿಯೂ ಅವಮಾನ ಆಗುವ ಸಾಧ್ಯತೆ ಇರಲಿದೆ. ಕೆಲವು ವ್ಯಕ್ತಿಗಳ ಸಹವಾಸ ಬಿಡಲೇ ಬೇಕಾಗಿದೆ. ಅನ್ಯರೊಂದಿಗೆ ಅತಿಯಾದ ವಿಶ್ವಾಸ ಬೇಡ. ಊಟದ ವಿಷಯದಲ್ಲಿ ಜಾಗೃತೆ ಇರಲಿದೆ. ದೇವರ ನಾಮ ಸ್ಮರಿಸುತ್ತಿರಿ.

ವೃಶ್ಚಿಕ ರಾಶಿ:

ಈ ವಾರ ನಿಮಗೆ ಅಶುಭ. ಈ ವಾರ ಪ್ರಯಾಣಿಸುವಾಗ ಎಚ್ಚರ ಇರಲಿ. ನಿಮ್ಮ ಮಾತಿಗೆ ಗೌರವ ಕಡಿಮೆ ಆಗಲಿದೆ. ಈ ವಾರ ನಿಮಗೆ ಕೆಲವು ಸೋಲುಗಳು ಎದುರಾಗಲಿವೆ. ಮದುವೆ ಮಾತುಕತೆ ಮುಂದೆ ಹೋಗಲಿದೆ. ಕೆಲವು ಸಮಸ್ಯೆಗಳಿಗೆ ಈ ವಾರ ಸಿಲುಕಿಕೊಳ್ಳಲಿದ್ದೀರಿ. ಸಾಧ್ಯವಾದಷ್ಟು ಎಚ್ಚರಿಕೆಯಿಂದ ವ್ಯವಹಾರಗಳನ್ನು ಮಾಡಿ.

ಧನು ರಾಶಿ:

ಕೆಲವರೊಟ್ಟಿಗೆ ವೈಮನಸ್ಯ ಮೂಡಲಿದೆ. ವಿಶೇಷವಾಗಿ ಬಂಧುಗಳೊಡನೆ ಸಮಸ್ಯೆ ಮೂಡಲಿದೆ. ಅಪಘಾತ ಆಗುವ ಸಂಭವ ಇದೆ. ಕೆಲವು ವ್ಯಕ್ತಿಗಳು ನಿಮೆಗ ಇಷ್ಟ ಆಗಲಿದ್ದಾರೆ. ಯಾವುದಕ್ಕೂ ಅವಸರ ಮಾಡಬೇಡಿ. ದೇವಸ್ಥಾನಗಳಿಗೆ ಭೇಟಿ ನೀಡಲಿದ್ದಾರೆ. ಒಳ್ಳೆಯ ಸಲಹೆಗಳನ್ನು ಸ್ವೀಕಾರ ಮಾಡಿರಿ, ಮಾರ್ಗದರ್ಶನ ಪಡೆಯಿರಿ.

ಮಕರ ರಾಶಿ:

ಈ ವಾರ ನಿಮಗೆ ಅಶುಭ ಇರಲಿದೆ. ಸಹೋದರರೊಂದಿಗೆ ಜಗಳ ಆಗಲಿದೆ. ಆಸ್ತಿಗಾಗಿ ಜಗಳ ಆಗಲಿದೆ. ಕೆಲವು ಜನಪ್ರಿಯ ವ್ಯಕ್ತಿಗಳ ಪರಿಚಯ ನಿಮಗೆ ಈ ವಾರ ಆಗಲಿದೆ. ಕೆಲಸದಲ್ಲಿ ಒತ್ತಡ ಉಂಟಾಗಲಿದೆ, ಕೆಲವು ಸಮಸ್ಯೆಗಳಿಗೆ ಸಿಲುಕಿಕೊಳ್ಳಲಿದ್ದೀರಿ. ಎಂದೋ ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸಲಿದ್ದೀರಿ. ಸುಳ್ಳು ಹೇಳಲು ಹೋಗಬೇಡಿ.

Weekly Astrology: ಈ ವಾರ ನಾಲ್ಕು ರಾಶಿಯವರಿಗೆ ಅದೃಷ್ಟ

ಕುಂಭ ರಾಶಿ :

ಕುಂಭ ರಾಶಿಗೆ ಈ ವಾರ ಶುಭ ಫಲ ಇದೆ. ಹಣದ ಹರಿವು ಉತ್ತಮವಾಗಿ ಇರಲಿದೆ. ಮಗುವಿನ ಆಗಮನ ಖುಷಿ ಹೆಚ್ಚಿಸಲಿದೆ. ಸತ್ಯದಿಂದ ನಿಮಗೆ ಶಕ್ತಿ ಸಿಗಲಿದೆ. ನಿಮ್ಮ ಮಾತಿಗೆ ಗೌರವ ಧಕ್ಕಲಿದೆ. ಆಕರ್ಷಕ ವ್ಯಕ್ತಿತ್ವದಿಂದ ಜನರನ್ನು ಸೆಳೆಯಲಿದ್ದೀರಿ. ಬಂಧುಗಳು ನೆರವಿಗೆ ಬರಲಿದ್ದೀರಿ. ಕೆಲವು ಬಂಧುಗಳೊಟ್ಟಿಗೆ ಕಲಹ ಆಗಲಿದೆ.

ಮೀನ ರಾಶಿ:

ಮೀನ ರಾಶಿಗೆ ಈ ವಾರ ಮಿಶ್ರ ಫಲ ಇದೆ. ಹತ್ತಿರದವರ ಮೇಲೆ ಅಸಮಾಧಾನ ಮೂಡಲಿದೆ. ಕೆಲವು ಸವಾಲುಗಳು ಈ ವಾರ ನಿಮಗೆ ಎದುರಾಗಲಿವೆ. ಕೆಲವು ಗೊಂದಲಗಳು ಸಹ ನಿಮ್ಮನ್ನು ಕಾಡಲಿವೆ. ಸಂಗಾತಿಯ ಜೊತೆ ಕಾಲವನ್ನು ಕಳೆಯಲಿದ್ದೀರಿ. ಪೋಷಕರಿಗೂ ಸಮಯ ನೀಡಲಿದ್ದೀರಿ.

LEAVE A REPLY

Please enter your comment!
Please enter your name here