Weekly Astrology: ಜುಲೈ ಮೂರನೇ ವಾರ ಹೇಗಿರಲಿದೆ ನಿಮ್ಮ ಭವಿಷ್ಯ

0
151

ಜುಲೈ ತಿಂಗಳ ಮೂರನೇ ವಾರ ಜುಲೈ 15 ರಿಂದ ಆರಂಭಗೊಂಡು ಜುಲೈ 21ರ ವರೆಗೆ ಇರಲಿದೆ. ಈ ವಾರದಲ್ಲಿ ಹಲವು ಗ್ರಹಗಳು ಚಲನೆ ಆಗಲಿದೆ. ಸೂರ್ಯನು ಮಿಥುನ ರಾಶಿಯಿಂದ ಕರ್ಕಾಟಕ ರಾಶಿಗೆ ಸಂಚರಿಸಲಿದ್ದಾನೆ. ಬುಧನು ಕರ್ಕಾಟಕದಿಂದ ಸಿಂಹ ರಾಶಿಗೆ ಸಂಚಾರ ನಡೆಸಲಿದ್ದಾನೆ. ಈ ವಾರ ಯಾವ ರಾಶಿಗೆ ಶುಭ, ಯಾವ ರಾಶಿಗೆ ಅಶುಭ? ಇಲ್ಲಿ ತಿಳಿಯಿರಿ.

ಮೇಷ ರಾಶಿ

ಮೊದಲನೇ ರಾಶಿಯವರಿಗೆ ಈ ವಾರ ಶುಭವಿದೆ. ಈ ವಾರ ಕೆಲವು ಸಕಾರಾತ್ಮಕ ಬೆಳವಣಿಗೆ ನಡೆಯಲಿದೆ. ಏನನ್ನಾದರೂ ಸಾಧಿಸುವ ಹಂಬಲ ಉಂಟಾಗಲಿದೆ. ಕಲಾವಿದರು ಶ್ರಮಪಟ್ಟು ಕೆಲಸ ಮಾಡಲಿದ್ದಾರೆ. ಶ್ರಮ ಪಟ್ಟು ಮಾಡಿದ ಕೆಲಸಕ್ಕೆ ಒಳ್ಳೆಯ ಆದಾಯವೂ ಬರಲಿದೆ. ಧಾರ್ಮಿಕ ಕಾರ್ಯ ಮಾಡುವುದರಿಂದ ಒಳಿತಾಗಲಿದೆ. ಸಂಬಂಧಿಗಳ ನಡುವೆ ಬಾಂಧವ್ಯ ಹೆಚ್ಚಾಗಲಿದೆ.

ವೃಷಭ ರಾಶಿ

ವೃಷಭ ರಾಶಿಗೆ ಮಿಶ್ರಫಲ ಇದೆ. ಈ ರಾಶಿಯ ಸ್ತ್ರೀಯರಿಗೆ ಈ ವಾರ ಶುಭವಿಲ್ಲ. ನಿಮ್ಮ ಬಗ್ಗೆ ನಿಮಗೆ ಬೇಸರ ಮೂಡಲಿದೆ. ಒತ್ತಡ ಉಂಟಾಗಲಿದೆ, ಕಷ್ಟಪಟ್ಟು ನಿಭಾಯಿಸಿ. ನಿಗದಿ ಆಗಿದ್ದ ಪ್ರವಾಸ ರದ್ದಾಗುವುದು. ಕೆಲಸ ಮಾಡುವ ಬಗ್ಗೆ ಬೇಸರ ಮೂಡಲಿದೆ. ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ. ಕುಟುಂಬದ ಬಗ್ಗೆ ನಿರಾಸಕ್ತಿ, ಮನಸ್ಸಿನಲ್ಲಿ ಕೆಲ ಗೊಂದಲಗಳು ಮೂಡಲಿವೆ.

ಮಿಥುನ ರಾಶಿ

ಮಿಥುನ ರಾಶಿ ತಿಂಗಳ ಮೂರನೇ ವಾರದಲ್ಲಿ ಅಶುಭ ಫಲ ಇದೆ. ಈ ವಾರ ಮನಸ್ಸು ಸ್ಥಿಮಿತದಲ್ಲಿರದು. ಶತ್ರುಗಳ ಭೀತಿ ನಿವಾರಣೆ ಆಗಲಿದೆ. ಯಾವುದಾದರೂ ಹಗರಣದಲ್ಲಿ ಸಿಕ್ಕಿ ಬೀಳುವಿರಿ. ಸಂಗಾತಿಯ ಜೊತೆಗೆ ಜಗಳ ಮಾಡುವಿರಿ. ಉದ್ಯೋಗದ ಮೇಲೆ ಬೇಸರ ಮೂಡಲಿದೆ. ಕೆಲಸ ಬಿಡುವ ಸಾಧ್ಯತೆಯೂ ಇದೆ. ನೀವು ಪಟ್ಟ ಕಷ್ಟದಿಂದ ಬೇರೆಯವರಿಗೆ ಲಾಭ ಆಗಲಿದೆ. ಸಮಯ ಸರಿ ಹೋಗಲಿದೆ ತಾಳ್ಮೆಯಿಂದ ಇರಿ.

ಕರ್ಕಾಟಕ ರಾಶಿ

ಕರ್ನಾಟಕ ರಾಶಿಯವರಿಗೆ ಮೂರನೇ ವಾರದಲ್ಲಿ ಶುಭ. ಈ ವಾರ ಒಳಿತು ಆಗಲಿದೆ. ವಿದೇಶಕ್ಕೆ ಹೋಗುವ ಅವಕಾಶ ಬರಲಿದೆ. ಸಣ್ಣ ಮಟ್ಟಿಗಿನ ಅನಾರೋಗ್ಯ ಕಾಡಲಿದೆ. ಮಾತು ಮೃದುವಾಗಿರಲಿ. ಪತ್ನಿಯೊಟ್ಟಿಗೆ ಜಗಳ ಮಾಡುವುದು ಬೇಡ. ದುರ್ಜನರ ಸಂಘ ಮಾಡಬೇಕಾದ ಪರಿಸ್ಥಿತಿ ನಿರ್ಮಾಣ, ಧೈರ್ಯ ಇರಲಿ ಆದರೆ ಹುಂಬತನ ಬೇಡ. ನಿಮ್ಮ ಅತಿಯಾದ ಆತ್ಮವಿಶ್ವಾಸ ಮುಳುವಾಗುವುದು ಬೇಡ.

ಸಿಂಹ ರಾಶಿ

ಸಿಂಹ ರಾಶಿಗೆ ಈ ವಾರ ಮಿಶ್ರಫಲ. ಮನೆಯಲ್ಲಿ ಸಣ್ಣ ಜಗಳಗಳು ನಡೆಯಲಿವೆ. ಬಲವಂತದಿಂದ ತೆರಿಗೆ ಪಾವತಿ ಅಥವಾ ದಂಡ ಕಟ್ಟುವಿರಿ. ಮಾಡಿದ ಸಾಲ ತೀರಿಸುವುದು ಕಷ್ಟ ಆಗಲಿದೆ. ಅನಾರೋಗ್ಯ ಭೀತಿ ಇದೆ. ಪತ್ನಿ ಜೊತೆಗೆ ವಿನಾಕಾರಣ ಜಗಳ ಮಾಡಲಿದ್ದೀರಿ, ಮಕ್ಕಳ ಮೇಲಿನ ಪ್ರೀತಿ ಹೆಚ್ಚಾಗಲಿದೆ. ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಈ ವಾರ ಲಾಭವಿದೆ.

ಕನ್ಯಾ ರಾಶಿ

ಈ ವಾರ ಒಳಿತಾಗಲಿದೆ. ಕೆಲಸದ ಸ್ಥಳದಲ್ಲಿ ಸ್ವಲ್ಪ ಒತ್ತಡ ಇರಲಿದೆ. ವಿದೇಶದ ಪ್ರವಾಸ ಯೋಗ ಇದೆ. ಈ ವಾರ ಪ್ರೇಮ ಉಂಟಾಗುವ ಸಾಧ್ಯತೆ ಇದೆ. ಯಾವುದಕ್ಕೂ ದೊಡ್ಡವರ ಅಭಿಪ್ರಾಯ ಪಡೆದು ಮುಂದುವರೆಯಿರಿ. ಮನಸ್ಸಿಗೆ ಸಣ್ಣ ಪುಟ್ಟ ಸಮಸ್ಯೆಗಳು ಕಾಡಲಿವೆ. ಅನಿರೀಕ್ಷಿತವಾದ ಹಣ ಕೈ ಸೇರಲಿದೆ. ಕಲಾವಿದರಿಗೆ ಇದು ಬಹಳ ಒಳ್ಳೆಯ ಸಮಯ.

ತುಲಾ ರಾಶಿ

ಈ ವಾರ ವ್ಯಾಪಾರಿಗಳಿಗೆ ಧನ ಲಾಭ ಇದೆ. ಹೂಡಿಕೆಗಳಿಂದಲೂ ಹಣ ಹರಿದು ಬರಲಿದೆ. ಕೆಲಸದಲ್ಲಿ ಇದ್ದ ಸಮಸ್ಯೆಗಳು ಪರಿಹಾರ ಆಗಲಿವೆ. ಯಾವುದೇ ಕೆಲಸ ಹೇಳಿದರೂ ಜನ ಮಾಡಿ ಕೊಡಲಿದ್ದಾರೆ. ಅನ್ಯರಿಂದ ಸಣ್ಣ ಅವಮಾನವೂ ಆಗಲಿದೆ. ಸ್ತ್ರೀಯರ ಬಳಿ ವಿನಯದಿಂದ ವರ್ತಿಸಿ. ಕಾಳಿ ಮಾತೆಯನ್ನು ಪೂಜಿಸಿ.

ವೃಶ್ಚಿಕ ರಾಶಿ

ಇದು ಮಿಶ್ರಫಲವಿರುವ ವಾರ. ಮದುವೆ ಮಾತುಕತೆ ನಡೆಯಲಿವೆ. ಇಷ್ಟಪಟ್ಟವರ ಜೊತೆಗೆ ಮದುವೆ ಆಗುವ ಯೋಗವಿದೆ. ನಿಮ್ಮ ಸುತ್ತ ಇರುವವರು ನಿಮಗೆ ಸಹಕಾರ ನೀಡಲಿದ್ದಾರೆ. ಕೆಲಸದ ಸ್ಥಳದಲ್ಲಿ ಸಹಕಾರ ಸಿಗಲಿದೆ. ಹೊಸ ಉದ್ಯೋಗ ಅವಕಾಶ ಸಿಗಲಿವೆ. ಕಲಾವಿದರಿಗೆ ಹೊಸ ಕೆಲಸ ಸಿಗಲಿದೆ. ನೆಮ್ಮದಿಯಿಂದ ಕೆಲಸ ಮಾಡುವಿರಿ. ವಿದೇಶದಲ್ಲಿ ಉದ್ಯೋಗ ಯೋಗವಿದೆ.

ಧನು ರಾಶಿ

ಅಷ್ಟೇನು ಒಳಿತಾದ ವಾರ ಇದಲ್ಲ. ಕೆಲಸಗಳಲ್ಲಿ ಹಿನ್ನಡೆ ಆಗಲಿದೆ. ಮಾಡುವ ಕೆಲಸದಲ್ಲಿ ಬೇಸರ. ಕೌಟುಂಬಿಕ ಕಲಹದಿಂದ ಮನಸ್ಸಿಗೆ ಬೇಸರ ಆಗಲಿದೆ. ಗಾಡಿ ಓಡಿಸುವಾಗ ಎಚ್ಚರಿಕೆ ಇರಲಿ. ಕುಗ್ಗಿ ಹೋಗಿದ್ದಾಗ ಪತ್ನಿಯ ಬೆಂಬಲ ಸಿಗಲಿದೆ. ಉದ್ಯೋಗದ ಬಗ್ಗೆ ಕಾಳಜಿ ಇರಲಿ.

ಮಕರ ರಾಶಿ

ಈ ವಾರ ಮಕರ ರಾಶಿಯವರಿಗೆ ಒಳಿತಿನ ವಾರ. ಈ ವಾರ ಒಳ್ಳೆಯ ಗೌರವ, ಆದರಗಳು ಸಿಗಲಿವೆ. ಅಂದುಕೊಂಡ ಕೆಲಸಗಳು ಸುಲಭವಾಗಿ ಪೂರ್ಣ ಆಗಲಿವೆ. ವಿದೇಶ ಪ್ರಯಾಣಕ್ಕೆ ಇದು ಒಳ್ಳೆಯ ಸಮಯ. ಪತ್ನಿಯೊಂದಿಗೆ ಇದ್ದ ಮುನಿಸು ನಿವಾರಣೆ ಆಗಲಿದೆ. ಅವಿವಾಹಿತರಿಗೆ ವಿವಾಹ ಆಗುವ ಸಂಭವ ಇದೆ. ಆರೋಗ್ಯದ ಬಗ್ಗೆ ತುಸು ಕಾಳಜಿ ಇರಲಿ.

ಕುಂಭ ರಾಶಿ

ಈ ವಾರ ಶುಭ ಫಲ ಸಿಗಲಿದೆ. ಬಂದ ಕಷ್ಟಗಳು ಕರಗಿ ಹೋಗಲಿವೆ. ಸಮಸ್ಯೆಗೆ ಹೆದರಿ ಓಡುವುದು ಬೇಡ. ಪತಿ-ಪತ್ನಿಯಲ್ಲಿ ವಿರಸ ಉಂಟಾಗಲಿದೆ. ಮದುವೆ ಮಾತುಕತೆ ಮುಂದುವರೆಯುವುದು ಆದರೆ ಎರಡು ಕುಟುಂಬಗಳ ನಡುವೆ ವಿರಸಗಳು ನಿರ್ಮಾಣ ಆಗಲಿವೆ. ಆಂಜನೇಯ ಸ್ವಾಮಿಯ ಬಗ್ಗೆ ಭಕ್ತಿ ಇರಲಿದೆ.

ಮೀನ ರಾಶಿ

ಈ ವಾರ ಮಿಶ್ರಫಲ ಇರಲಿದೆ. ಮನಸ್ಸಿಗೆ ವಿನಾಕಾರಣ ಬೇಸರ ಆಗಲಿದೆ. ಹಿಡಿದ ಕಾರ್ಯಗಳು ಮುಗಿಯುವುದಿಲ್ಲ. ಕೆಲಸಗಳನ್ನು ಪೂರ್ಣ ಮಾಡಲಾರಿರಿ. ವಿದೇಶದಲ್ಲಿರುವವರಿಗೆ ಕೆಲವು ಕಷ್ಟಗಳು ಬರುವ ಸಾಧ್ಯತೆ ಇದೆ. ಇರುವ ನೌಕರಿ ಬಿಟ್ಟು ಬೇರೆ ನೌಕರಿ ಮಾಡುವ ಯೋಚನೆ ಬರಲಿದೆ. ವಿದ್ಯಾರ್ಥಿಗಳು ಗಮನ ಇಟ್ಟು ಓದಿದಲ್ಲಿ ಒಳ್ಳೆಯ ಅಂಕ ಬರಲವೆ. ಶತ್ರು ಕಾಟ ಇರಲಿದ್ದು, ಹಿತ ಶತ್ರುಗಳಿಂದ ಸಮಸ್ಯೆ ಆಗಲಿದೆ.

LEAVE A REPLY

Please enter your comment!
Please enter your name here