Weekly Astrology: ಈ ವಾರ ಹೇಗಿರಲಿದೆ ನಿಮ್ಮ ಭವಿಷ್ಯ? ಇಲ್ಲಿ ತಿಳಿಯಿರಿ

0
43
Weekly Astrology

ಇದು ಮಾರ್ಚ್ ತಿಂಗಳ ನಾಲ್ಕನೇ ವಾರ ಪ್ರಾರಂಭವಾಗಿದೆ. ಈ ವಾರವು ಮಾರ್ಚ್ 17 ರಿಂದ ಮಾರ್ಚ್ 24ರ ವರೆಗೆ ನಡೆಯಲಿದೆ. ಈ ವಾರ ಶನಿ ಗ್ರಹದ ಚಲನೆ ಇದ್ದು, ಇದು ಹಲವು ಗ್ರಹಗಳ ಮೇಲೆ ಪ್ರಭಾವ ಬೀರಲಿದೆ. ಈ ವಾರದ ಭವಿಷ್ಯ ಹೇಗಿರಲಿದೆ ಇಲ್ಲಿದೆ ವಿವರ.

ಮೇಷ ರಾಶಿ

ಈ ವಾರ ವಿದ್ಯಾರ್ಥಿಗಳಿಗೆ ಉತ್ತಮ ಲಾಭ ಇರಲಿದೆ. ವಿದ್ಯಾರ್ಥಿಗಳಿಗೆ ಉತ್ತಮ ಅಂಕಗಳು ಸಿಗಲಿದೆ. ಸ್ವಲ್ಪ ಶ್ರದ್ಧೆಯಿಂದ ಕೆಲಸ ಮಾಡಿದರೂ ಸಾಕು ಒಳ್ಳೆಯ ಫಲ ಸಿಗಲಿದೆ. ಬಾಕಿ ಇರುವ ಕೆಲಸ ಮುಗಿಸಲು ಇದು ಸಕಾಲ. ಕೆಲಸದ ಒತ್ತಡ ಹೆಚ್ಚಾಗಲಿದೆ. ಇಷ್ಟವಾಗುವ ಕೆಲಸ ಮಾಡಿ. ಒಲ್ಲದ ಕೆಲಸ ಮೈಮೇಲೆ ಎಳೆದುಕೊಳ್ಳಬೇಡಿ. ಹಣದ ಹರಿವು ಇರಲಿದೆ. ಉದ್ವಿಗ್ನಕ್ಕೆ ಒಳಗಾಗಬೇಡಿ.

ವೃಷಭ ರಾಶಿ

ಹಣಕಾಸಿನ ವಿಷಯದಲ್ಲಿ ಗೊಂದಲ ನಿರ್ಮಾಣ ಆಗಲಿದೆ. ಚಂಚಲ ಮನಸ್ಸು ಈ ವಾರ ಇರಲಿದೆ. ಈ ವಾರ ಅನಗತ್ಯ ಖರ್ಚುಗಳು ಎದುರಾಗಲಿವೆ. ಕೆಲವರಿಂದ ಸಣ್ಣ ಪುಟ್ಟ ತೊಂದರೆ ಎದುರಿಸಲಿದ್ದೀರಿ. ಕಾಯ್ದಿಟ್ಟುಕೊಂಡಿದ್ದ ಗುಟ್ಟು ರಟ್ಟಾಗಲಿದೆ. ವೈವಾಹಿಕ ಜೀವನ ಸುಂದರ ಆಗಲಿದೆ. ಮನೆಯ ಕೆಲ ಸದಸ್ಯರೊಡನೆ ಜಗಳ ಆಗಲಿದೆ.

ಮಿಥುನ ರಾಶಿ

ಕೆಲ ವಸ್ತುಗಳ ಮಾರಾಟಕ್ಕೆ ಪ್ರಯತ್ನ ಪಡುವಿರಿ. ಹಣಕಾಸಿನ ಸಮಸ್ಯೆ ಉಂಟಾಗಲದೆ. ಮನಸ್ಸು ಚಂಚಲವಾಗಿ ಇರಲಿದೆ. ಉದ್ಯೋಗದಿಂದ ನಿಮಗೆ ಲಾಭ ಸಿಗಲಿದೆ. ನಿಮ್ಮಿಂದ ಕೆಲವರಿಗೆ ಬೇಸರ ಮೂಡಲಿದೆ. ಈ ವಾರ ಆರೋಗ್ಯದಲ್ಲಿ ತುಸು ಏರು ಪೇರು ಆಗಲಿದೆ. ಅಂದುಕೊಂಡಂತೆ ಕೆಲಸಗಳು ಆಗಲಿಲ್ಲ. ಹಣಕಾಸಿನ ಕೊರತೆಯ ನಡುವೆ ಖರ್ಚು ವಿಪರೀತ ಆಗಲಿದೆ.

ಕರ್ಕಾಟಕ ರಾಶಿ

ಈ ವಾರ ದಿಗಿಲು ಕಾಡಲಿದೆ. ನಿಮ್ಮ ಬಗ್ಗೆ ಒಳ್ಳೆಯ ಮಾತುಗಳನ್ನು ಕೇಳುವಿರಿ. ಪತ್ನಿ ಅಥವಾ ಪ್ರೇಮಿಯ ಜೊತೆಗೆ ಜಗಳ ಆಗಲಿದೆ. ಹೆತ್ತವರ ಪ್ರೀತಿ ನಿಮಗೆ ಸಿಗಲಿದೆ. ಸಾಕಷ್ಟು ನೋವು, ಸಮಸ್ಯೆ ಇದ್ದರೂ ಖುಷಿಯಾಗಿಯೇ ಇರುವಿರಿ. ವಿದ್ಯಾರ್ಥಿಗಳಿಗೆ ಕಷ್ಟದ ಸಮಯ, ಕಷ್ಟಪಟ್ಟರೆ ಮಾತ್ರವೇ ನಿಮಗೆ ಫಲ ಸಿಗಲಿದೆ.

ಸಿಂಹ ರಾಶಿ

ಈ ವಾರ ನಿಮಗೆ ಮಿಶ್ರ ಫಲ ಇರಲಿದೆ. ಸಾಧನೆ ಮಾಡಲು ಸಾಕಷ್ಟು ಹೋರಾಟ ಮಾಡಬೇಕಾಗಿದೆ. ಸಣ್ಣ ಪುಟ್ಟ ವಿಷಯಗಳು ನಿಮಗೆ ಖುಷಿ ಕೊಡಲಿವೆ. ಎಂದೋ ಮಾಡಿದ ಕಾರ್ಯ ಈಗ ನಿಮಗೆ ಫಲ ಸಿಗಲಿದೆ. ಕೆಲವರು ನಿಮ್ಮನ್ನು ಸಿಟ್ಟಿಗೆ ತರಿಸುವರು, ನೀವು ಶಾಂತವಾಗಿಯೇ ಇರಿ. ಮಾತು ಆಡುವ ಮುಂಚೆ ಎಚ್ಚರಿಕೆಯಿಂದ ಇರಿ. ಮಾತಿನಿಂದ ಸಮಸ್ಯೆಗೆ ಸಿಲುಕಿವಿರಿ.

ಕನ್ಯಾ ರಾಶಿ

ಈ ವಾರ ಕನ್ಯಾ ರಾಶಿಯವರಿಗೆ ಶುಭ ಫಲ ಇದೆ. ಮನೆಯಲ್ಲಿ ಉತ್ತಮ ವಾತಾವರಣ ಇರಲಿದೆ. ಉದ್ಯೋಗದ ಸ್ಥಳದಲ್ಲಿಯೂ ಸಹ ಉತ್ತಮ ವಾತಾವರಣವೇ ಇರಲಿದೆ. ಬಡ್ತಿ ಸಿಗುವ ಸಂಭವವೂ ಇರಲಿದೆ. ಹೊಸ ವಸ್ತು, ಆಸ್ತಿ, ಮನೆ ಖರೀದಿ ಬಗ್ಗೆ ಆಲೋಚನೆ ಮಾಡಲಿದ್ದೀರಿ. ಕೆಲ ಒಳ್ಳೆಯ ಸುದ್ದಿಗಳು ಬರಲಿವೆ, ಒಳ್ಳೆಯ ಜನರ ಪರಿಚಯ ಆಗಲಿದೆ.

ತುಲಾ ರಾಶಿ

ತುಲಾ ರಾಶಿಯವರಿಗೆ ಈ ವಾರ ಮಿಶ್ರ ಫಲ ಇದೆ. ಹೊಸ ಯೋಜನೆ ಮಾಡದ ಹೊರತು ವ್ಯವಹಾರದಲ್ಲಿ ಲಾಭ ಆಗದು. ಅನುಭವಿಗಳ ಸಲಹೆಗಳು ಅಗತ್ಯವಾಗಿವೆ. ಹಣಕಾಸಿನ ವ್ಯವಹಾರ ಮಾಡುವಾಗ ಎಚ್ಚರಿಕೆಯಿಂದ ಇರಿ. ಕುಟುಂಬದೊಂದಿಗೆ ಸಮಯ ಕಳೆಯುವಿರಿ. ಸಾಕಷ್ಟು ಸಮಸ್ಯೆಗಳು ಬಂದರೂ ಸಹ ಅದರ ಜೊತೆಗೆ ಖುಷಿಯ ಸಮಯಗಳು ಸಹ ಬರಲಿವೆ.

ವೃಶ್ಚಿಕ ರಾಶಿ

ಈ ವಾರ ವಿದ್ಯಾರ್ಥಿಗಳ ಶ್ರಮಕ್ಕೆ ಫಲ ಸಿಗಲಿದೆ. ವಿಶೇಷವಾಗಿ ಉನ್ನತ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಇದು ಶುಭ ಸಮಯ. ಯುವತಿಯ ಮೇಲೆ ಪ್ರೇಮಾಂಕುರ ಆಗುವ ಸಾಧ್ಯತೆ ಇದೆ. ಕೆಲ ಆತ್ಮೀಯರೊಟ್ಟಿಗೆ ಜಗಳ ಮಾಡುವಿರಿ. ಉದ್ಯೋಗದ ಸ್ಥಳದಲ್ಲಿ ಅವಮಾನ ಆಗುವ ಸಂದರ್ಭ ನಿರ್ಮಾಣ ಆಗಲಿದೆ. ಅಂತಹ ಸಂದರ್ಭದಲ್ಲಿ ಎಚ್ಚರದಿಂದಿರಿ.

ಧನುಸ್ಸು ರಾಶಿ

ಕುಟುಂಬದವರ ಜೊತೆಗೆ ವಾಗ್ವಾದ ನಡೆಯಲಿದೆ. ಸಣ್ಣ ಜಗಳವನ್ನು ದೊಡ್ಡದು ಮಾಡಬೇಡಿ. ಇಷ್ಟವಾಗುವ ಉಡುಗೊರೆಗಳು ನಿಮಗೆ ಸಿಗಲಿವೆ. ನಿಮ್ಮ ಸಿಕ್ಕ ವಸ್ತುಗಳನ್ನು ಜೋಪಾನದಿಂದ ಕಾಯ್ದುಕೊಂಡಿರಿ. ಸಂಗಾತಿಯೊಡನೆ ಸಂಬಂಧವನ್ನು ಗಟ್ಟಿ ಮಾಡಿಕೊಳ್ಳಿ. ಮನಸ್ಸು ಚಂಚಲಗೊಳ್ಳಲು ಬಿಡಬೇಡಿ. ವಿದೇಶಿ ವ್ಯಾಪಾರ ಹೊಂದಿರುವವರಿಗೆ ತೊಂದರೆ ಎದುರಾಗಬಹುದು.

Weekly Astrology: ಈ ವಾರ ಯಾವ ರಾಶಿಯವರಿಗೆ ಅದೃಷ್ಟ, ಯಾವ ರಾಶಿಗೆ ದುರಾದೃಷ್ಟ

ಮೀನ ರಾಶಿ :

ಮೀನ ರಾಶಿಯವರಿಗೆ ಈ ವಾರ ಶುಭ ಫಲ ಸಿಗಲಿದೆ. ಈ ವಾರ ಅದೃಷ್ಟ ಇರಲಿದೆ ಆದರೆ ಅತಿಯಾದ ಆತ್ಮವಿಶ್ವಾಸ ಬೇಡ. ನಿಮ್ಮ ಸ್ನೇಹಿತರು ಮತ್ತು ಸಹೋದ್ಯೋಗಿಗಳು ನಿಮಗೆ ಸಹಾಯ ಮಾಡಲಿದ್ದಾರೆ. ಕೆಲವು ಸವಾಲುಗಳು ಬರಬಹುದು ಎಚ್ಚರದಿಂದ ಇರಿ. ಶ್ರಮ ಪಡದೆ ಯಾವ ಕೆಲಸವೂ ಆಗುವುದಿಲ್ಲ ಎಂಬುದು ನೆನಪಿನಲ್ಲಿರಲಿ. ಪಾಲುದಾರಿಕೆಯಲ್ಲಿ ಉದ್ಯಮ ಸ್ಥಾಪಿಸುವಂತಿದ್ದರೆ ಎಚ್ಚರದಿಂದ ಇರಿ.

LEAVE A REPLY

Please enter your comment!
Please enter your name here