Weekly Astrology: ನವೆಂಬರ್ ತಿಂಗಳ ಮೂರನೇ ವಾರದಲ್ಲಿ ಹೇಗಿರಲಿದೆ ನಿಮ್ಮ ಭವಿಷ್ಯ?

0
203
Weekly Astrology

Weekly Astrology

ನವೆಂಬರ್ ತಿಂಗಳ ಮೂರನೇ ವಾರ ಪ್ರಾರಂಭವಾಗಿದೆ. ನವೆಂಬರ್ 18 ರಿಂದ ನವೆಂಬರ್ 24 ರವರೆಗೆ ಇರಲಿದೆ. ಈ ವಾರದಲ್ಲಿ ಕೆಲವು ರಾಶಿಗಳ ಗ್ರಹಗತಿಯ ಬದಲಾವಣೆ ಆಗಲಿದೆ. ಈ ವಾರ ನಿಮ್ಮ ಭವಿಷ್ಯ ಹೇಗಿರಲಿದೆ ಇಲ್ಲಿ ತಿಳಿಯಿರಿ.

ಮೇಷ ರಾಶಿ

ನವೆಂಬರ್ ತಿಂಗಳ ಮೂರನೇ ವಾರದಲ್ಲಿ ಮೊದಲ ರಾಶಿಯವರಿಗೆ ಶುಭ ಫಲ ಇದೆ. ಜನರಿಂದ ಪ್ರಶಂಸೆ ಸಿಗಲಿದೆ. ಅನಿರೀಕ್ಷಿತ ಸಂಪತ್ತು ಬರಲಿದೆ. ಧಾರ್ಮಿಕ ಕಾರ್ಯ ಮಾಡುವ ಮನಸ್ಸು ಮೂಡಲಿದೆ. ಪೋಷಕರ ಬಗ್ಗೆ ಬೇಸರ ಮೂಡಲಿದೆ. ನಿಮ್ಮನ್ನು ಜನ ಅತಿಯಾಗಿ ಪ್ರೀತಿಸುವರು. ಕೆಲ ಕಠಿಣ ತೀರ್ಮಾನ ತೆಗೆದುಕೊಳ್ಳಬೇಕಿದೆ, ಆಗ ಎಚ್ಚರಿಕೆಯಿಂದ ಇರಿ.

ವೃಷಭ ರಾಶಿ

ವೃಷಭ ರಾಶಿಯವರಿಗೆ ಶುಭ ಫಲ ಇದೆ. ಕೆಲವರು ನಿಮ್ಮನ್ನು ಹಣ ಕೇಳುವರು. ಕೊಟ್ಟ ಹಣ ಮರಳಿ ಬಾರದೆ ಇರಬಹುದು. ಬಂದ ಕಷ್ಟಗಳು ಕರಗಿ ಹೋಗಲಿವೆ. ಇಷ್ಟವಾಗುವವರ ಜೊತೆ ಹೆಚ್ಚು ಸಮಯ ಕಳೆಯಲಿದ್ದೀರಿ. ಗೆಳೆಯರಿಗೆ ಸಹಾಯ ಮಾಡಲಿದ್ದೀರಿ. ನಿಮ್ಮಿಂದ ಕೆಲವರಿಗೆ ಸಹಾಯ ಆಗಲಿದೆ.

ಮಿಥುನ ರಾಶಿ

ಮಿಥುನ ರಾಶಿಯವರಿಗೆ ಈ ವಾರವೂ ಅಶುಭ.‌ ಶತ್ರುಗಳ ಭಯ ಕಾಡಲಿದೆ. ಕೆಲವು ಹೊಸ ಸ್ನೇಹಿತರು ಸಿಗಲಿದ್ದಾರೆ. ಕೆಲವು ಕಠಿಣ ಪರಿಸ್ಥಿತಿ ಬರಲಿವೆ. ಸತತ ಶ್ರಮದಾಯಕ ಕೆಲಸ ಮಾಡಲಿದ್ದೀರಿ. ಕುಟುಂಬದ ಜೊತೆಗೆ ಕೆಲ ಕಾರ್ಯಕ್ರಮಗಳಿಗೆ ಭೇಟಿ ನೀಡಲಿದ್ದೀರಿ. ಕೂಡಿಟ್ಟ ಹಣ ನಿಮ್ಮ ಉಪಯೋಗಕ್ಕೆ ಬರಲಿದೆ. ಕೆಲಸದಲ್ಲಿ ಒತ್ತಡ ಹೆಚ್ಚಾಗಲಿದೆ. ಹೊರಗೆ ಭೋಜನ ಮಾಡಿ ಆರೋಗ್ಯ ಕೆಡಿಸಿಕೊಳ್ಳಲಿದ್ದೀರಿ.

ಕರ್ಕಾಟಕ ರಾಶಿ

ಕರ್ಕಾಟಕ ರಾಶಿಗೆ ಈ ವಾರ ಶುಭ ಇದೆ.‌ ದಂಪತಿಯ ನಡುವೆ ಪ್ರೀತಿ ಇರಲಿದೆ. ವಿದ್ಯಾರ್ಥಿಗಳಿಗೆ ಒಳ್ಳೆಯ ಸಮಯ. ಒಳ್ಳೆಯ ಸಮಯವನ್ನು ಕಳೆಯಲಿದ್ದೀರಿ. ಒಳ್ಳೆಯ ಹೂಡಿಕೆಯಿಂದ ಒಳ್ಳೆಯ ಲಾಭ ಬರಲಿದೆ. ನಿಮ್ಮಿಂದ ಕೆಲ ಗೆಳೆಯರಿಗೆ ಒಳ್ಳೆಯದಾಗುವುದು. ದೇಹಾರೋಗ್ಯ ಸುಧಾರಣೆ ಆಗಲಿದೆ. ಉತ್ಸಾಹ ಚಿಮ್ಮಲಿದೆ.

ಸಿಂಹ ರಾಶಿ

ಸಿಂಹ ರಾಶಿಗೆ ಈ ವಾರ ಶುಭ ಫಲ ಇದೆ. ಅನೇಕ ದಿನದಿಂದ ಅಂದುಕೊಂಡ ಕೆಲಸಗಳು ಪೂರೈಕೆ ಆಗಲಿವೆ. ವೃತಾ ಹರಟೆಯಲ್ಲಿ ಕಾಲಹರಣ ಮಾಡಬೇಡಿ. ಕೆಲವು ವ್ಯಕ್ತಿಗಳ ನಿಜ ಮುಖ ನಿಮ್ಮ ಅರಿವಿಗೆ ಬರಲಿದೆ. ಪ್ರಯಾಣ ಯೋಗ ನಿಮಗೆ ಇದೆ. ದೇವರನ್ನು ಪೂಜಿಸಿ ಆತನೇ ದಾರಿ ತೋರಲಿದ್ದಾನೆ.

ಕನ್ಯಾ ರಾಶಿ

ಕನ್ಯಾ ರಾಶಿಯವರಿಗೆ ಈ ವಾರ ಮಿಶ್ರ ಫಲ ಇದೆ. ಆಪ್ತರು ನಿಮ್ಮಲ್ಲಿ ಹಣಸಹಾಯ ಕೇಳುವರು. ಕೊಡುವ ಮುನ್ನ ಎಚ್ಚರ. ಅಧಿಕ ಶ್ರಮದಿಂದ ಆರೋಗ್ಯ ಏರು-ಪೇರಾಗಲಿದೆ. ದಂಪತಿಗಳಲ್ಲಿ ಕಲಹ ಉಂಟಾಗಲಿದೆ. ನಿಮ್ಮ ಮಾತಿನಿಂದ ಶತ್ರುಗಳು ಹೆಚ್ಚಾಗುವರು. ಐಶಾರಾಮಿ ವಸ್ತುಗಳ ಮೇಲೆ ಆಸೆ ಹೆಚ್ಚಾಗಲಿದೆ. ಆದರೆ ಹಣ ಖರ್ಚು ಮಾಡುವಾಗ ಎಚ್ಚರ ಇರಲಿ.

ತುಲಾ ರಾಶಿ

ತುಲಾ ರಾಶಿಯವರಿಗೆ ಈ ವಾರ ಅಶುಭಫಲ ಇದೆ. ಅಂದುಕೊಂಡ ಕೆಲಸಗಳು ನಿಧಾನ ಆಗಲಿವೆ. ಮುಂದೆ ಕಷ್ಟದ ದಿನಗಳು ಇವೆ, ಈಗಿನಿಂದಲೂ ಸಿದ್ಧತೆ ಆರಂಭಿಸಿ. ಆರೋಗ್ಯವೂ ಕೈಕೊಡಲಿದೆ. ದೇವರ ದರ್ಶನದ ಮನಸ್ಸಾಗಲಿದೆ. ಮಾನಸಿಕವಾಗಿ ಹಿಂಸೆಯ ಅನುಭವ ಆಗಲಿದೆ. ಹಳೆ ಘಟನೆಗಳು ನೆನಪಾಗಿ ಕಾಡಲಿವೆ. ಉದ್ಯೋಗದಲ್ಲಿ ಸಮಸ್ಯೆ ಬರಲಿದೆ. ದೇವರನ್ನು ಸ್ಮರಿಸಿ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಗೆ ಈ ವಾರ ಅಶುಭ ಫಲ ಇದೆ. ಇದ್ದ ಹಣದಲ್ಲಿ ಉಳಿತಾಯ ಮಾಡಲು ಶ್ರಮ ಪಡಲಿದ್ದೀರಿ. ಸಮಸ್ಯೆಗಳ ಬಗ್ಗೆ ಕೆಲವರ ಬಳಿ ಹೇಳಿಕೊಳ್ಳಲಿದ್ದೀರಿ. ನಿಮಗೆ ಕೋಪ ತರಿಸುವ ಪ್ರಯತ್ನ ಕೆಲವರು ಮಾಡಲಿದ್ದಾರೆ. ಕೆಲಸದ ಸ್ಥಳದಲ್ಲಿ ನಿಮ್ಮ ಪ್ರತಿಭೆ ಇತರರಿಗೆ ತಿಳಿಯಲಿದೆ. ಆರೋಗ್ಯದ ಕಡೆಗೆ ಗಮನಹರಿಸಿ. ಅನವಶ್ಯಕ ಖರ್ಚು ಬೇಡ.

ಧನು ರಾಶಿ

ಧನು ರಾಶಿಯವರಿಗೆ ಮಿಶ್ರ ಫಲ ಈ ವಾರ ಇದೆ. ಕೆಲವರು ನಿಮ್ಮ ಬಗ್ಗೆ ದೂರುಗಳನ್ನು ಹೇಳುವರು. ಜನರೊಂದಿಗೆ ಬೆರೆಯಿರಿ. ಆಹಾರವನ್ನು ಹಿತವಾಗಿ-ಮಿತವಾಗಿ ಸೇವಿಸಿ. ನಿಮ್ಮ ಬಗ್ಗೆ ಕೆಲವರು ಗುಣಗಾನ ಮಾಡುವರು. ಅನವಶ್ಯಕ ಕೆಲಸದಲ್ಲಿ ತೊಡಗಿಕೊಳ್ಳುವಿರಿ. ನಿಮ್ಮ ಶ್ರಮ, ಶಕ್ತಿ ಮತ್ತು ಸಮಯವನ್ನು ವೃಥಾ ವ್ಯರ್ಥ ಮಾಡಿಕೊಳ್ಳುವಿರಿ.

ಮಕರ ರಾಶಿ

ಮಕರ ರಾಶಿಯವರಿಗೆ ಈ ವಾರ ಶುಭ ಫಲ ಇದೆ. ಅನಿರೀಕ್ಷಿತ ಮೂಲದಿಂದ ಹಣ ಬಂದು ಸೇರಲಿದೆ. ಜ್ಞಾನವೃದ್ಧಿಗೆ ಪ್ರಯತ್ನ ಮಾಡಲಿದ್ದೀರಿ. ಬಂಧುಗಳ ಆಗಮನ ಆಗಲಿದೆ. ವ್ಯಾಪಾರದ ಮನಸ್ಸು ಮಾಡಲಿದ್ದೀರಿ. ಪಾಲುದಾರಿಕೆ ಮಾಡುವ ಪ್ರಯತ್ನ ಮಾಡಲಿದ್ದೀರಿ. ಆರೋಗ್ಯ ಸುಧಾರಣೆ ಬಗ್ಗೆ ಗಮನ ಹರಿಸುವಿರಿ.

ಕುಂಭ ರಾಶಿ

ಕುಂಭ ರಾಶಿಯವರಿಗೆ ಮಿಶ್ರ ಫಲ ಇದೆ. ಕೂಡಿಟ್ಟ ಹಣ ಉಪಯೋಗಕ್ಕೆ ಬರಲಿದೆ. ಹಿರಿಯರು ಮಾಡಿದ ಆಸ್ತಿಯಿಂದ ನಿಮಗೆ ಲಾಭ ಆಗಲಿದೆ. ನಿಮ್ಮ ಚಂಚಲ ಸ್ವಭಾವವನ್ನು ಅಧುಮಿಟ್ಟುಕೊಳ್ಳಿ ಇಲ್ಲವಾದರೆ ತೊಂದರೆ ತಪ್ಪಿದ್ದಲ್ಲ. ದುಶ್ಚಟಗಳು ನಿಮ್ಮನ್ನು ಅನಾರೋಗ್ಯಕ್ಕೆ ತಳ್ಳಲಿವೆ. ಹಣವಿದ್ದರೂ ಸಹ ಅನಾರೋಗ್ಯದಿಂದಾಗಿ ಮನಸ್ಸು ಬೇಸರಕ್ಕೆ ಹೋಗಲಿದೆ.

Weekly Astrology: ನವೆಂಬರ್ ಎರಡನೇ ವಾರದಲ್ಲಿ ಮೂರು ರಾಶಿಯವರಿಗೆ ಅದೃಷ್ಟ

ಮೀನ ರಾಶಿ

ಮೀನ ರಾಶಿಗೆ ಈ ವಾರ ಶುಭ ಫಲ ಇದೆ. ಕೆಲಸ ಹುಡುಕುತ್ತಿರುವವರಿಗೆ ಇದು ಒಳ್ಳೆಯ ಸಮಯ. ಉದ್ಯಮದಲ್ಲಿ ಒಳಿತಾಗಲಿದೆ. ಉದ್ಯೋಗದಲ್ಲಿಯೂ ಚಾಕಚಕ್ಯತೆಯಿಂದ ಹೆಸರು ಗಳಿಸಲಿದ್ದೀರಿ. ದಾಂಪತ್ಯ ಸುಖಮಯ ಆಗಲಿದೆ. ವಿದ್ಯಾರ್ಥಿಗಳಿಗೆ ಇದು ಉತ್ತಮ ಕಾಲ. ದೇವರ ಧ್ಯಾನ ಮಾಡಿ.

LEAVE A REPLY

Please enter your comment!
Please enter your name here