Weekly Astrology: ನವೆಂಬರ್ ತಿಂಗಳ ಕೊನೆಯ ವಾರ ಹೇಗಿದೆ ನಿಮ್ಮ ಭವಿಷ್ಯ

0
228
Astrology

Weekly Astrology

ನವೆಂಬರ್ ತಿಂಗಳ ಕೊನೆಯ ವಾರ 25 ರಿಂದ ಡಿಸೆಂಬರ್ 1 ರವರೆಗೆ ಇರಲಿದೆ. ಈ ವಾರದಲ್ಲಿ ಗ್ರಹಗಳು ಅಲ್ಪ ಬದಲಾವಣೆ ಕಾಣಲಿವೆ. ಹೀಗಾಗಿ ಈ ವಾರ ರಾಶಿ ಭವಿಷ್ಯದ ದೃಷ್ಟಿಯಿಂದ ತುಸು ಮಹತ್ವ ಪಡೆದುಕೊಂಡಿದೆ.

ಮೇಷ ರಾಶಿ

ಮೇಷ ರಾಶಿಯವರಿಗೆ ಈ ವಾರ ಮನಸ್ಸಿನಲ್ಲಿ ಚಾಂಚಲ್ಯ ಇರಲಿದೆ. ಈ ವಾರ ನಿಮಗೆ ನಿಮ್ಮ ಬಗ್ಗೆ ಅನುಮಾನ ಮೂಡಲಿದೆ. ನಿಮ್ಮ ಬಗ್ಗೆ ಆತ್ಮಸ್ಥೈರ್ಯವನ್ನು ಬಿಡಬೇಡಿ. ಇತರರ ವಿರುದ್ಧ ಕತ್ತಿಮಸೆಯುವ ಕಾರ್ಯ ಮಾಡುವುದು ಬೇಡ. ಸ್ವ ಸಾಮರ್ಥ್ಯದಿಂದ ಮೇಲೆ ಬನ್ನಿ, ನಿಮ್ಮಲ್ಲಿ ಶಕ್ತಿ ಸಾಮರ್ಥ್ಯ ಇದೆ, ಅದನ್ನು ಬಳಸಿ.

ವೃಷಭ ರಾಶಿ

ವೃಷಭ ರಾಶಿಗೆ ಈ ವಾರ ಮಿಶ್ರ ಫಲ ಇದೆ. ನಿಮ್ಮ ಬಗ್ಗೆ ನಿಮಗೆ ಬೇಸರ ಮೂಡಲಿದೆ. ನಿರ್ಧಾರಗಳು ತೆಗೆದುಕೊಳ್ಳುವಾಗ ಗೊಂದಲ ಉಂಟಾಗಲಿದೆ. ನೀವು ಮಾಡಿದ ಕೆಲಸಗಳ ಬಗ್ಗೆ ನಿಮಗೆ ಬೇಸರ ಮೂಡಲಿದೆ. ವಿಮರ್ಶೆ ಮಾಡಿಕೊಳ್ಳುವಿರಿ. ನೀವು ಮಾಡಬೇಕು ಎಂದುಕೊಂಡ ಕೆಲಸಗಳು ಮಂದಗತಿಯಲ್ಲಿ ಸಾಗಲಿವೆ.

ಮಿಥುನ ರಾಶಿ

ಮಿಥುನ ರಾಶಿಯವರಿಗೂ ಈ ವಾರ ಮಿಶ್ರ ಫಲ ಇರಲಿದೆ. ಈ ವಾರ ಸ್ನೇಹಿತರಿಂದ, ಬಂಧುಗಳಿಗೆ ಖುಷಿ ಸಿಗಲಿದೆ. ಕೆಲವರಿಂದ ಬೇಡದ ಮಾತುಗಳನ್ನು ಕೇಳಬೇಕಾಗುತ್ತದೆ. ನೀವು ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಿ, ನಿಮ್ಮ ಮಾತಿನಿಂದ ಕಚೇರಿಯಲ್ಲಿ ಹಿನ್ನಡೆ ಅನುಭವಿಸಲಿದ್ದೀರಿ. ಬೇಸರದ ಸುದ್ದಿಗಳೇ ನಿಮಗೆ ಕೇಳಿ ಬರಲಿವೆ. ಯಾವುದಕ್ಕೂ ಭಯ ಪಡಬೇಡಿ.

ಕರ್ಕಾಟಕ ರಾಶಿ

ಕರ್ನಾಟಕದ ರಾಶಿವರಿಗೆ ಈ ವಾರ ಮಿಶ್ರಫಲ ಇದೆ. ವಿನಾಕಾರಣ ಹಣ ಖರ್ಚಾಗಲಿದೆ. ಆದಾಯ ಕ್ಷೀಣವಾಗಲಿದೆ. ಅಂದುಕೊಂಡ ಕೆಲಸ ಆಗದೇ ಹೋಗಲಿದೆ. ನೀವು ಮಾಡಿದ ಯೋಜನೆಗಳು ಕೈಕೊಡಲಿವೆ. ತಂದೆಯಿಂದ ಸಹಾಯ ಸಿಗಲಿದೆ. ಹಿರಿಯರ ಮಾರ್ಗದರ್ಶನವೂ ಸಿಕ್ಕಿ ಅಂದುಕೊಂಡ ಕಾರ್ಯಗಳಲ್ಲಿ ನಿಧಾನಕ್ಕೆ ಗೆಲುವು ಸಿಗಲಿದೆ.

ಸಿಂಹ ರಾಶಿ

ಸಿಂಹ ರಾಶಿಯವರಿಗೆ ಈ ವಾರ ಶುಭ ಫಲ ಇದೆ. ಈ ವಾರ ಪ್ರಯಾಣದ ಯೋಗ ಇದೆ. ಕೆಲವರಿಗೆ ವಿದೇಶ ಪ್ರಯಾಣ ಯೋಗವೂ ಇರಲಿದೆ. ನಿಮ್ಮ ಮಾತುಗಳು ಗೌರವಕ್ಕೆ ತಂದುಕೊಡಲಿವೆ. ಹೊಸ ಗೆಳೆಯರನ್ನೂ ತಂದುಕೊಡಲಿವೆ. ಕೆಲಸದ ಸ್ಥಳದಲ್ಲಿ ನಿಮ್ಮ ವಿರುದ್ಧ ಕೆಲ ಕುತಂತ್ರಗಳು ನಡೆಯಲಿವೆ. ಆದರೆ ಅವೆಲ್ಲ ಗೆಲುವು ಸಾಧಿಸುವುದಿಲ್ಲ.

ಕನ್ಯಾ ರಾಶಿ

ಕನ್ಯಾ ರಾಶಿಗೆ ಈ ವಾರ ಶುಭ ಫಲ ಇದೆ. ಹಳೆಯ ಜಗಳಗಳು ಇತ್ಯರ್ಥ ಆಗಲಿದೆ. ಜೀವನದಲ್ಲಿ ಕೆಲ ಬದಲಾವಣೆ ಆಗುವ ಸೂಚನೆ ಸಿಗಲಿದೆ. ಕೆಲ ಅನಿರೀಕ್ಷಿತ ಅತಿಥಿಗಳು ಬರುವರು. ಉದ್ಯೋಗದಲ್ಲಿ ಬಡ್ತಿ ದೊರೆಯುವ ಅಥವಾ ಪ್ರಶಂಸೆ ಪಡೆಯುವ ಸಾಧ್ಯತೆ ಇದೆ. ವಿರೋಧಿಗಳಿಗೆ ಹಿನ್ನಡೆ ಆಗಲಿದೆ. ಹಣಕಾಸನ್ನು ಯೋಚಿಸಿ ಖರ್ಚು ಮಾಡಿ.

ತುಲಾ ರಾಶಿ

ತುಲಾ ರಾಶಿಯವರಿಗೂ ಸಹ ಈ ವಾರ ಮಿಶ್ರ ಫಲ ಇದೆ. ಸ್ತ್ರೀಯರಿಂದ ಸಮಸ್ಯೆ ಆಗಲಿದೆ. ದಾಂಪತ್ಯದಲ್ಲಿ ವಿರಸ ಮೂಡುವ ಸಾಧ್ಯತೆ ಇದೆ. ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಿ. ವೃಥಾ ಖರ್ಚು ಬೇಡ, ಹೂಡಿಕೆ ಮಾಡುವಾಗ ಎಚ್ಚರಿಕೆ ಇರಲಿ. ವಿದ್ಯಾರ್ಥಿಗಳು ಹೆಚ್ಚಿನ ಶ್ರಮ ಹಾಕಬೇಕಾದ ಸಮಯ ಇದು.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಗೆ ಈ ವಾರ ಶುಭ ಮಿಶ್ರ ಫಲ ಇದೆ. ಬರಬೇಕಿದ್ದ ಆದಾಯ ನಿಧಾನ ಆಗಲಿದೆ. ಕೆಲವು ಗೊಂದಲಗಳು ನಿಮ್ಮನ್ನು ಕಾಡಲಿವೆ. ಆತ್ಮೀಯ ಬಂಧಗಳಲ್ಲಿ ಬಿರುಕು ಮೂಡಲಿದೆ. ಮಾನಸಿಕವಾಗಿ ಮಿಶ್ರ ಅನುಭವ ಆಗಲಿದೆ. ಮಕ್ಕಳಿಂದ ಖುಷಿ ಸಿಗಲಿದೆ. ವ್ಯಾಪಾರಿಗಳಿಗೆ ಲಾಭ ಕಡಿಮೆ ಆಗಲಿದೆ. ಮೋಸದ ಸಾಧ್ಯತೆಯೂ ಇದೆ.

ಧನು ರಾಶಿ

ಧನು ರಾಶಿಯವರಿಗೆ ಈ ವಾರ ಶುಭ ಫಲ ಇರಲಿದೆ. ವಿದ್ಯಾರ್ಥಿಗಳಿಗೆ ಉತ್ತಮ ಸಮಯ ಇದಾಗಿದೆ. ದಂಪತಿಗಳ ನಡುವೆ ಮುನಿಸು ಮರೆಯಲಾಗಲಿದೆ. ಆರೋಗ್ಯದಲ್ಲಿ ಚೇತರಿಕೆ ಕಾಣಲಿದ್ದೀರಿ. ಹಿರಿಯರ ಆರೋಗ್ಯದ ಬಗ್ಗೆ ಗಮನ ಇರಲಿ. ವಾಹನದಿಂದ ಸಮಸ್ಯೆ ಆಗುವ ಸಾಧ್ಯತೆ ಇದೆ. ದೂರ ಪ್ರಯಾಣ ಮಾಡುವಾಗ ಎಚ್ಚರಿಕೆ ಇರಲಿ. ವೃಥಾ ಹಣ ಖರ್ಚು ಮಾಡುವುದು ಬೇಡ.

ಮಕರ ರಾಶಿ

ನಿಮ್ಮ ಪ್ರಯತ್ನ ವ್ಯರ್ಥವಾಗಿ ಹೋಗಲಿದೆ. ಆದರೆ ನಿರಾಶರಾಗಬೇಡಿ. ನಿಮ್ಮ ಮಾತಿಗೆ ಬೆಲೆ ಕಡಿಮೆ ಆದ ಅನುಭವ ಆಗಲಿದೆ. ಕೊಟ್ಟ ಮಾತು ತಪ್ಪಿದ ಆರೋಪ ಬರಲಿದೆ. ಕೆಲ ಅಪರಚಿತ ವ್ಯಕ್ತಿಗಳಿಂದ ಮೋಸದ ಸಾಧ್ಯತೆ ಇದೆ. ಹಣ ವ್ಯಯ ಹೆಚ್ಚಾದಂತೆ ಭಾಸವಾಗುತ್ತದೆ. ಹಣಕಾಸಿನ ಮೇಲೆ ಹಿಡಿತ ಇರಲಿ. ಕುಟುಂಬದೊಟ್ಟಿಗೆ ಹೆಚ್ಚು ಸಮಯ ಕಳೆಯಿರಿ. ವೃಥಾ ಖರ್ಚು ಬೇಡ.

ಕುಂಭ ರಾಶಿ

ಕುಂಭ ರಾಶಿಗೆ ಈ ವಾರ ಅಶುಭ ಇದೆ. ಯಾವುದರ ಮೇಲೂ ಮನಸ್ಸು ಇರುವುದಿಲ್ಲ. ಎಲ್ಲವನ್ನೂ ಬಿಟ್ಟುಬಿಡುವ ಮನಸ್ಸಾಗುತ್ತದೆ. ಸಂತೋಷದ ಸಮಯ ಮುಗಿದವು ಎನಿಸುತ್ತದೆ. ಆತ್ಮೀಯ ಗೆಳೆಯರ ಸಂಘವೂ ಬೇಡ ಎನಿಸುತ್ತದೆ. ಆದರೆ ಧೃತಿಗೆಡಬೇಡಿ, ಭಯಪಡಬೇಡಿ, ನಿಮಗೆ ಮುಂದೆ ಒಳ್ಳೆಯ ಸಮಯ ಇದೆ.

ಮೀನ ರಾಶಿ

ಮೀನ ರಾಶಿಗೆ ಈ ವಾರ ಮಿಶ್ರ ಫಲ ಇರಲಿದೆ. ಈ ವಾರ ನಿಮ್ಮ ಯೋಚನಾ ಲಹರಿ ಬದಲಾಗಲಿದೆ. ಮಾತಿನಿಂದ ವೃಥಾ ಸಮಸ್ಯೆಗೆ ಸಿಲುಕಲಿದ್ದೀರಿ. ಅವಶ್ಯಕತೆ ಇಲ್ಲದೆ ಮಾತನಾಡುವುದು ಬೇಡ. ವಾಹನ ಚಾಲನೆ ಮಾಡುವಾಗ ಎಚ್ಚರಿಕೆಯಿಂದ ಇರಿ. ಕೆಲಸದ ಸ್ಥಳದಲ್ಲಿ ಹೆಚ್ಚು ಏಕಾಗ್ರತೆ ಇರಲಿ, ಇಲ್ಲವಾದರೆ ಇಕ್ಕಟ್ಟಿಗೆ ಸಿಲುಕಲಿದ್ದೀರಿ. ವಿದ್ಯಾರ್ಥಿಗಳು ಹೆಚ್ಚು ಶ್ರಮ ಹಾಕಬೇಕಿದೆ.

LEAVE A REPLY

Please enter your comment!
Please enter your name here