Weekly Astrology: ಜುಲೈ ತಿಂಗಳ ಮೊದಲ ವಾರ ನಿಮ್ಮ ಭವಿಷ್ಯ ಹೇಗಿರಲಿದೆ? ಇಲ್ಲಿ ತಿಳಿಯಿರಿ

0
151
Weekly Astrology

Weekly Astrology

ಮೇಷ ರಾಶಿ

ಜುಲೈ ತಿಂಗಳ ಮೊದಲ ವಾರ ಮೇಷ ರಾಶಿಗೆ ಶುಭವಾಗಲಿದೆ. ಶ್ರಮಕ್ಕೆ ತಕ್ಕ ಫಲ ಸಿಗಲಿದೆ. ಹಣ ವ್ಯವಯಾಗಲಿದೆ, ಲಾಭವೂ ಬರದು. ಕುಟುಂಬದೊಟ್ಟಿಗೆ ಸಮಯ ಕಳೆಯುವಿರಿ. ಒಳ್ಳೆಯ ಸುದ್ದಿ ನಿಮಗಾಗಿ ಬರುವುದು. ಕಚೇರಿ ಕೆಲಸದಲ್ಲಿ ಕಿರಿಕಿರಿ ಅನುಭವಿಸುವಿರಿ. ಗುರುವಿನ ದರ್ಶನ ಆಗಲಿದೆ. ಒಳ್ಳೆಯ ಸಮಾಚಾರ ನಿಮಗಾಗಿ ಬರಲಿದೆ. ನಂಬಿಕೆ ಇರಲಿ, ನಂಬಿಕೆ ನಿಮ್ಮ ಕೈ ಬಿಡದು.

ವೃಷಭ ರಾಶಿ

ವೃಷಭ ರಾಶಿಗೆ ಮಿಶ್ರಫಲ. ನಿಮ್ಮ ಸಂಗಾತಿಯಿಂದ ಅಚ್ಚರಿಯ ಸುದ್ದಿ ಬರುವುದು. ಕುಟುಂಬದವರೊಡನೆ ಸಮಯ ಕಳೆಯಿರಿ. ಪ್ರಭಾವಿ ವ್ಯಕ್ತಿಗಳ ಜೊತೆ ನಿಕಟ ಸಂಪರ್ಕ ಹೊಂದುವಿರಿ. ನಿಮ್ಮ ಸಮಸ್ಯೆಗಳ ಬಗ್ಗೆ ಬೇರೆಯವರೊಟ್ಟಿಗೆ ಚರ್ಚಿಸುವಿರ. ಸಂಬಂಧಿಕರ ಜೊತೆ ಭಿನ್ನಾಭಿಪ್ರಾಯ ಉಲ್ಬಣಗೊಳ್ಳಲಿವೆ. ಅಂದುಕೊಂಡಿದ್ದನ್ನು ಸಾಧಿಸಲು ದೇವರ ನಾಮ ಪಠಿಸಿ.

ಮಿಥುನ ರಾಶಿ

ಕಳೆದೆರಡು ವಾರ ಅಶುಭವಿತ್ತು, ಈ ವಾರ ಮಾನಸಿಕ ಉಲ್ಲಾಸ ಇರಲಿದೆ. ಕುಟುಂಬದಲ್ಲಿ ಕೆಲವು ಸಮಸ್ಯೆಗಳು ತಲೆದೂರುತ್ತವೆ. ಪ್ರಯಾಣಕ್ಕಾಗಿ ಸ್ವಲ್ಪ ಖರ್ಚು ಆಗಲಿದೆ. ಆದರೆ ಒಳ್ಳೆಯ ದಿನಕ್ಕಾಗಿ ನೀವು ಇನ್ನೂ ಕೆಲವು ಸಮಯ ಕಾಯಬೇಕಾಗುತ್ತದೆ. ಎಲ್ಲರೊಟ್ಟಿಗೆ ನಿಮ್ಮ ಒಳ್ಳೆಯ ಸಂಬಂಧ ಮುಂದುವರೆಸಿ, ಒಳಿತಾಗಲಿದೆ, ತುಸು ತಡವಾಗಿ.

ಕರ್ಕ ರಾಶಿ

ವಿವಾಹ ಯೋಗವಿದೆ, ನಿಂತಿದ್ದ ಮದುವೆ ಮಾತುಕತೆ ಮುಂದುವರೆಯಲಿದೆ. ಹಣಕಾಸಿನ ವ್ಯಾಜ್ಯಗಳು ನಿಮ್ಮ ಕಡೆಗೆ ಆಗಲಿವೆ. ತುಸು ಹದಗೆಟ್ಟಿದ್ದ ಆರೋಗ್ಯ ಸರಿ ಹೋಗಲಿದೆ. ಕಳೆದ ಕೆಲ ವಾರದಲ್ಲಿದ್ದ ನಿಮ್ಮ ಸಮಸ್ಯೆಗಳು ಇತ್ಯರ್ಥವಾಗಲಿವೆ. ನಂಬಿಕೆ ಇಲ್ಲದವರಿಗೆ ಹಣ ಕೊಡಬೇಡಿ, ಸಾಲ ನೀಡುವುದರಿಂದ ದೂರವೇ ಉಳಿಯಿರಿ. ಮನೆಗೆ ಅತಿಥಿಗಳು ಬರಬಹುದು, ಕೆಲಸದ ಸ್ಥಳದಲ್ಲಿ ನಿಮ್ಮನ್ನು ಇಷ್ಟಪಡುವವರ ಸಂಖ್ಯೆ ಹೆಚ್ಚಾಗಲಿದೆ. ವ್ಯಾಪಾರಕ್ಕಾಗಿ ಪ್ರಯಾಣ ಮಾಡುತ್ತೀರಿ, ಅದರಿಂದ ಲಾಭವೇ ಆಗುತ್ತದೆ.

ಸಿಂಹ ರಾಶಿ

ಒಳಿತು-ಕೆಡಕು ಎರಡೂ ಈ ವಾರ ಇದೆ. ವಿವಾಹ ಕಾರ್ಯಗಳು ನಡೆಯಲಿದೆ. ಕೆಲವು ಕಾರ್ಯಗಳಲ್ಲಿ ಜಯ ನಿಮ್ಮದಾಗಲಿದೆ. ಸಾಲವನ್ನು ಕೇಳಿ ಪಡೆಯುವರು, ಮೆಚ್ಚಿನವರ ಜೊತೆ ಸಮಯ ಕಳೆಯಲಿದ್ದೀರಿ. ಕೆಲಸಗಳು ಕೈಗೂಡದೇ ನೆಮ್ಮದಿಗೆ ಕೇಡು, ಮಾತಿನಿಂದ ಜಗಳ ಸಾಧ್ಯತೆ. ವ್ಯಾಪಾರಿಗಳಿಗೆ ನಷ್ಟದ ಸಮಯ. ಹರಿದು ಹೋದ ಸಂಬಂಧಕ್ಕೆ ತೇಪೆಯ ಪ್ರಯತ್ನ. ದೇವರ ಬಗ್ಗೆ ಆಸಕ್ತಿ ಮೂಡಲಿದೆ.

ಕನ್ಯಾ ರಾಶಿ

ಕನ್ಯಾ ರಾಶಿಗೆ ಈ ವಾರ ಶುಭ. ಕೌಟುಂಬಿಕ ಸಮಸ್ಯೆಗಳು ಪರಿಹಾರ ಆಗಲಿವೆ. ಯಾವುದೇ ಕೆಲಸ ಮಾಡುವ ಮುನ್ನ ದೂರಾಲೋಚನೆ ಇರಲಿ. ಯಾವುದೇ ಕೆಲಸಕ್ಕೆ ಮುನ್ನ ಅನುಭವಿಗಳ ಸಲಹೆ ಪಡೆಯಿರಿ. ಕೆಲವು ಆಸೆಗಳು ಈಡೇರಲಿವೆ. ಒಳಿತು ಮಾಡಿದರೆ ನಿಮಗೆ ಒಳಿತಾಗಲಿದೆ. ಪ್ರೀತಿ-ಪ್ರೇಮದ ವಿಷಯದಲ್ಲಿ ಕೆಲವು ತಿರುವುಗಳು ಸಿಗಲಿವೆ. ಜೀವನದಲ್ಲಿ ಶಿಸ್ತು ಪಾಲನೆ ಇರಲಿ.

ತುಲಾ ರಾಶಿ

ಮೊದಲ ವಾರ ತುಲಾ ರಾಶಿಗೆ ಮಿಶ್ರ ಫಲವಿದೆ. ಕೆಲಸ ಬದಲಾಯಿಸುವ ಮನಸ್ಸು ಮಾಡಲಿದ್ದೀರಿ. ಸಿಟ್ಟಿನ ಮೇಲೆ ಹಿಡಿತ ಇರಲಿ. ನಿಮ್ಮ ವರ್ತನೆಗಳಿಂದ ಮನೆಯಲ್ಲಿ ಬೇಸರ. ಈ ವಾರ ಕೆಲ ಸಮಸ್ಯೆಗಳು ನಿಮ್ಮನ್ನು ಸುತ್ತಿಕೊಳ್ಳಲಿವೆ. ನಿಮ್ಮ ಹಾಗೂ ಮಕ್ಕಳ ಆರೋಗ್ಯದಲ್ಲಿ ವ್ಯತ್ಯಯವಾಗಬಹುದು. ಹೊಸ ಉದ್ಯಮಗಳಿಗೆ ಕೈ ಹಾಕುವ ಸಾಧ್ಯತೆ ಇದೆ. ಆದರೆ ಪಾಲುದಾರರನ್ನು ಜಾಗೃತೆಯಿಂದ ಆರಿಸಿ ಮೋಸ ಹೋಗಬಹುದು.

ವೃಶ್ಚಿಕ ರಾಶಿ

ಈ ವಾರ ಮಾತಿನಿಂದ ಸಮಸ್ಯೆಗಳಿಗೆ ಸಿಲುಕಿವಿರಿ. ಗೌರವಾನ್ವಿತ ವ್ಯಕ್ತಿಗಳ ಭೇಟಿ ಆಗಲಿದ್ದೀರಿ. ಸಮಸ್ಯೆಗಳ ಬಗ್ಗೆ ಯಾರಾದರೂ ಒಬ್ಬರ ಬಳಿ ಹೇಳಿಕೊಳ್ಳಿ. ವಿವಾಹದ ಬಗ್ಗೆ ಮಾತುಕತೆ ಮುಂದುವರೆಯಲಿದೆ. ಯಾರೊಟ್ಟಿಗೂ ಸಿಟ್ಟಿನ ವರ್ತನೆ ಬೇಡ. ನಿಮ್ಮ ಶತ್ರುಗಳಿಗೆ ಸಮಸ್ಯೆ ಆಗಲಿದೆ. ಮಾಡುವ ಪ್ರಯತ್ನವನ್ನು ಕೈಬಿಡಬೇಡಿ. ಕುಟುಂಬದೊಟ್ಟಿಗೆ ಸಮಯ ಕಳೆಯುವಿರಿ.

ಧನು ರಾಶಿ

ಈ ವಾರ ಮಧ್ಯ ಭಾಗದಲ್ಲಿ ಹಣ ಖರ್ಚಾಗಲಿದೆ. ಅನಗತ್ಯವಾದ ವಿಷಯದಲ್ಲಿ ತಲೆ ಹಾಕಬೇಡಿ. ಮಾತಿನ ಮೇಲೆ ನಿಗಾ ಇರಲಿ. ನಾಳೆ ಮಾಡೋಣ ಎಂಬ ಧೊರಣೆಯನ್ನು ಬಿಡಿ. ಬೇರೆಯವರ ವಿಚಾರವನ್ನು ನಿಮ್ಮದು ಅಂದುಕೊಳ್ಳಬೇಡಿ. ಊಹಿಸದ ಘಟನೆಗಳು ನಡೆಯಬಹುದು. ಆರೋಗ್ಯದ ಬಗ್ಗೆ ಕಾಳಜಿ ಕಡಿಮೆ ಆಗಲಿದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

ಮಕರ ರಾಶಿ

ಮಕರ ರಾಶಿಗೆ ಒಳ್ಳೆಯ ಸಮಯವಿದೆ. ದೂರ ಪ್ರಯಾಣ ಮಾಡುವಾಗ ಎಚ್ಚರಿಕೆ ಅಗತ್ಯ. ಅನಗತ್ಯ ಖರ್ಚುಗಳು ಮುಂದುವರೆಯಲಿದೆ. ನಿಮ್ಮ ಪ್ರತಿಭೆ ಲೋಕಕ್ಕೆ ತಿಳಿಯಲಿದೆ. ಸಹೋದರರ ಸಹಾಯ ಸಿಗಲಿದೆ. ಅನಿರೀಕ್ಷಿತವಾಗಿ ಕೆಲವು ಕೆಲಸಗಳು ನಡೆಯಲಿವೆ. ಯೋಚಿಸಿ ಕೆಲಸ ಮಾಡಿ. ಪ್ರೀತಿಯಾಗಬಹುದು ಜಾಗೃತೆ. ದೇವರ ಆರಾಧನೆ ಮರೆಯಬೇಡಿ.

ಕುಂಭ ರಾಶಿ

ಯೋಚಿಸದೆ ಕೆಲಸ ಮಾಡಬೇಡಿ, ಇದರಿಂದ ಸಂಕಷ್ಟ ತಪ್ಪಿದ್ದಲ್ಲ. ಹಣ ಬರಲಿದೆ, ಆದರೆ ಖರ್ಚು ಸಹ ಆಗಲಿದೆ. ಕೊಟ್ಟಿರುವ ಸಾಲದ ಹಣ ಮರಳಲಿದೆ. ಸರ್ಕಾರಿ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ. ನೀವು ಗಣ್ಯರೊಂದಿಗೆ ಇಂದಿನ ಒಡನಾಡವಿರಲಿದೆ. ನಷ್ಟಕ್ಕಿಂತಲೂ ಈ ವಾರ ಲಾಭವೇ ಹೆಚ್ಚಾಗಲಿದೆ. ಬಂಧುಗಳಿಂದ ಕೆಲವು ಕಟು ಮಾತುಗಳು ಕೇಳಿ ಬರುತ್ತವೆ ಆದರೆ ಧೃತಿಗೆಡಬೇಡಿ.

ಮೀನ ರಾಶಿ

ಈ ವಾರ ಯಾವುದೇ ಆತುರದ ನಿರ್ಧಾರ ಮಾಡುವುದು ಬೇಡ. ಸಮಾಧಾನದಿಂದ ವರ್ತಿಸಿ ಇಲ್ಲವಾದರೆ ಸಮಸ್ಯೆಗೆ ಸಿಲುಕುತ್ತೀರಿ. ಯಾವುದೇ ಕೆಟ್ಟ ಅಭ್ಯಾಸದ ದಾಸರಾಗಬೇಡಿ. ರಾಹು ನಿಮ್ಮ ರಾಶಿಯಲ್ಲಿದೆ ಎಂಬುದರ ಎಚ್ಚರಿಕೆ ಇರಲಿ. ಕಷ್ಟಗಳು ಬರಲಿವೆ, ಆದರೆ ಒಳ್ಳೆಯ ಕೆಲಸ ಮಾಡುವ ಬಗ್ಗೆ ಗಮನ ಹರಿಸಿ. ಜೀವನದಲ್ಲಿ ಏನಾದರೂ ಆಗಲಿ ಒಳ್ಳೆಯ ಕೆಲಸ, ದೇವರ ಆರಾಧನೆ ಬಗ್ಗೆ ನಿಮ್ಮ ಗಮನವಿರಲಿ.

LEAVE A REPLY

Please enter your comment!
Please enter your name here