Weekly Astrology
ಈ ತಿಂಗಳ ನಾಲ್ಕನೇ ವಾರವು ಜುಲೈ 22 ರಿಂದ ಜುಲೈ 29 ರವರೆಗೆ ಇರಲಿದೆ. ಈ ವಾರ ಕೆಲ ಗ್ರಹಗಳ ಜೊತೆಗೆ ನಕ್ಷತ್ರಗಳ ಸ್ಥಳ ಬದಲಾವಣೆ ಆಗಲಿದೆ. ಇದರಿಂದ ಕೆಲ ರಾಶಿಗಳಿಗೆ ಒಳಿತಾದರೆ ಕೆಲವು ರಾಶಿಗೆ ಕೆಡುಕಾಗಲಿದೆ. ಯಾವ ರಾಶಿಗೆ ಒಳಿತಾಗಲಿದೆ? ಇಲ್ಲಿದೆ ಮಾಹಿತಿ.
ಮೇಷ ರಾಶಿ:
ಮೇಷ ರಾಶಿಗೆ ಈ ತಿಂಗಳ ನಾಲ್ಕನೇ ವಾರ ಒಳಿತಾಗಲಿದೆ. ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಲಾಭವಿದೆ. ಕೃಷಿ ಮಾಡುವವರಿಗೂ ಲಾಭ ಆಗಲಿದೆ. ಮಾತನ್ನು ಮಧುರವಾಗಿ ಆಡಿ. ಒಳ್ಳೆಯತನದಿಂದಲೂ ಅಪಾಯ ಬರಬಹುದು ಎಚ್ಚರ. ಕೆಲವು ಕೆಲಸಗಳಲ್ಲಿ ಹಿನ್ನಡೆ ಆಗಲಿದೆ. ಯಾವುದೇ ಕೆಲಸ ಮಾಡುವ ಮುನ್ನ ಭಯ ಇರಲಿದೆ. ಈ ವಾರ ಪ್ರವಾಸದ ಯೋಗವಿದೆ. ಪೋಷಕರಿಗೂ ಸುಖವಿದೆ.
ವೃಷಭ ರಾಶಿ:
ವೃಷಭ ರಾಶಿಗೆ ಈ ವಾರ ಮಿಶ್ರಫಲವಿದೆ. ಬೇಡ ಎಂದರೂ ಖರ್ಚುಗಳು ಹೆಚ್ಚಾಗುತ್ತವೆ. ಅನವಶ್ಯಕ ಖರ್ಚುಗಳು ಆಗಲಿವೆ. ಆದರೆ ಭ್ರಮೆಯಿಂದ ನೀವು ಹೊರಬರಬೇಕಿದೆ. ಎಚ್ಚರಿಕೆಯಿಂದ ಮಾತನಾಡಿ, ಸ್ತ್ರೀಯರ ಗೆಳೆತನ ಸಿಗಲಿದೆ. ಹಿರಿಯರ ಬಗ್ಗೆ ಗೌರವ ಇರಲಿ. ಈ ವಾರ ಕೆಲ ವಿಘ್ನಗಳು ಕೆಲಸದಲ್ಲಿ ಎದುರಾಗಲಿವೆ, ಆದರೆ ಭಯಪಡುವುದು ಬೇಡ. ಎಲ್ಲರೊಟ್ಟಿಗೆ ಪ್ರೀತಿ-ಗೌರವದಿಂದ ಇರಿ. ಎಲ್ಲವೂ ಒಳಿತಾಗಲಿದೆ.
ಮಿಥುನ ರಾಶಿ:
ನಾಲ್ಕನೇ ರಾಶಿಯಾದ ಮಿಥುನ ರಾಶಿಗೆ ಈ ವಾರ ಅಷ್ಟೇನು ಒಳಿತಾದದ್ದಿಲ್ಲ. ಮನಸ್ಸಿನಲ್ಲಿ ಹಲವು ರೀತಿಯ ಭಾವನೆ ಬರಲಿದೆ. ಚಿಂತೆಗಳು ಸಹ ಕಾಡಲಿವೆ. ಈ ವಾರ ಪ್ರವಾಸದ ಯೋಗವಿದೆ. ಉದ್ಯೋಗ ಸ್ಥಳದಲ್ಲಿ ನಿಮ್ಮ ನಾಯಕತ್ವದ ಪರೀಕ್ಷೆ ಆಗಲಿದೆ. ಹಿಂದೆ ಮಾಡಿದ ತಪ್ಪುಗಳ ಬಗ್ಗೆ ಬೇಸರ ಪಡುವಿರಿ. ಯಾವುದೇ ಹೂಡಿಕೆ ಮಾಡುವಾಗ ಎಚ್ಚರಿಕೆ ಬಹಳ ಅವಶ್ಯಕ. ದೇವರ ಆರಾಧನೆ ಮರೆಯಬೇಡಿ.
ಕರ್ಕಾಟಕ ರಾಶಿ:
ಈ ವಾರ ಒಳ್ಳೆಯದಾಗಲಿದೆ. ಈ ವಾರ ಅನಿರೀಕ್ಷಿತ ಫಲಗಳು ಸಿಗಲಿವೆ. ಈ ವಾರ ನಿಮ್ಮ ವ್ಯಕ್ತಿತ್ವ ಉತ್ತಮಗೊಳ್ಳಲಿದೆ. ಹಲವು ವಿಭಾಗಗಳಲ್ಲಿ ಗೆಲುವು ಸಿಗಲಿದೆ. ಉದ್ಯೋಗದಲ್ಲಿ ಬಡ್ತಿ ಇದೆ. ವೃತ್ತಿಯಲ್ಲಿ ಕಷ್ಟಪಟ್ಟು ಕೆಲಸ ಮಾಡಬೇಕಾಗಬಹುದು. ಆತ್ಮೀಯರು ನಿಮಗೆ ಶುಭ ಸುದ್ದಿಗಳನ್ನು ನೀಡಲಿದ್ದಾರೆ. ಸ್ನೇಹಿತರ ಸಹಾಯ ದೊರಕಲಿದೆ.
ಸಿಂಹ ರಾಶಿ:
ಈ ವಾರ ಸಿಂಹ ರಾಶಿಗೆ ಅಷ್ಟು ಒಳ್ಳೆಯದಾಗಿಲ್ಲ. ಎಚ್ಚರಿಕೆ ಇಂದ ಇದ್ದರೂ ಹಣ ನಷ್ಟವುಂಟಾಗಲಿದೆ. ಅತಿಯಾದ ಆತ್ಮವಿಶ್ವಾಸಬೇಡ. ಈ ಸಮಯ ಒಳ್ಳೆಯದಾಗಿಲ್ಲ ಹಾಗಾಗಿ ಯಾವುದೇ ಹೆಜ್ಜೆ ಇಡಬೇಕಾದರೂ ಎಚ್ಚರಿಕೆ ಇರಬೇಕು. ಹಣ ನಷ್ಟವಾದರೂ ಸಹ ಹೊಸ ಮೂಲಗಳಿಂದ ಹಣ ಬರುತ್ತದೆ. ಮೋಸ ಹೋಗುವ ಸಂಭವ ಇದೆ ಎಚ್ಚರಿಕೆ ಇರಲಿ. ಸರ್ಕಾರಕ್ಕೆ ಸಂಬಂಧಿಸಿದ ಕೆಲಸ ಆಗುವುದಿಲ್ಲ.
ಕನ್ಯಾ ರಾಶಿ:
ಕನ್ಯಾ ರಾಶಿಗೆ ಈ ವಾರ ಲಾಭ ಆಗಲಿದೆ. ಆದರೆ ಅನಾರೋಗ್ಯದ ಸಾಧ್ಯತೆ ಇದೆ. ನಿಮ್ಮ ಮಾತಿನ ಬಗ್ಗೆ ನಿಗಾ ಇರಲಿ, ತಾಳ್ಮೆಯಿಂದ ವರ್ತಿಸಿದರೆ ಗೌರವ ಪ್ರಾಪ್ತಿ ಆಗಲಿದೆ. ಈ ವಾರ ಶ್ರಮದಾಯಕ ಕೆಲಸ ಮಾಡುವುದು ಬೇಡ. ಈ ವಾರ ತಾಳ್ಮೆಯೇ ನಿಮ್ಮ ಮಂತ್ರವಾಗರಲಿ. ಶತ್ರು ಸಮಸ್ಯೆ ಇದೆ ಆದರೆ ತೀವ್ರವಾಗಿ ಏನೂ ಇಲ್ಲ.
ತುಲಾ ರಾಶಿ:
ತುಲಾ ರಾಶಿಯವರಿಗೆ ಈ ವಾರ ಒಳ್ಳೆಯದಾಗಿಲ್ಲ. ಸಿಡುಕಿನ ಪ್ರವೃತ್ತಿ ನಿಮಗೆ ಇರುವುದು. ಹೊಸ ಅವಕಾಶಗಳು ಬರುತ್ತವೆ ಆದರೆ ನೀವು ಹಿಂದಡಿ ಇಡುತ್ತೀರಿ. ಬೇರೆಯವರ ಮೇಲೆ ಅವಲಂಬಿತರಾಗಬೇಡಿ. ಅತಿಯಾಗಿ ಕೆಲಸ ಮಾಡಬೇಡಿ ವಿಶ್ರಾಂತಿಗೂ ಸಮಯ ಇರಲಿ. ಯಾವುದೇ ನಿರ್ಣಯ ತೆಗೆದುಕೊಳ್ಳುವಾಗ ಎಚ್ಚರಿಕೆ ಇರಲಿ. ಸಂಗಾತಿ ಜೊತೆಗೆ ಜಗಳ ಮಾಡಲಿದ್ದೀರಿ. ಪೋಷಕರ ಬೆಂಬಲ ಸಿಗಲಿದೆ. ಆದರೆ ಎಚ್ಚರಿಕೆ ಇರಲಿ.
CM Siddaramaiah: ನೆರೆ ಹಾವಳಿ ವೀಕ್ಷಣೆಗೆ ಸಿದ್ದರಾಮಯ್ಯ, ರಕ್ಷಣಾ ಸಿಬ್ಬಂದಿ ಕಾರ್ಯಕ್ಕೆ ಮೆಚ್ಚುಗೆ
ವೃಶ್ಚಿಕ ರಾಶಿ:
ವೃಶ್ಚಿಕ ರಾಶಿಗೆ ಈ ವಾರ ಲಾಭ ಇದೆ. ಮನೆಯಲ್ಲಿ ಎದ್ದಿದ್ದ ಸಮಸ್ಯೆಗಳು ನಿವಾರಣೆ ಆಗಲಿವೆ. ನಿಮ್ಮಗುರಿಗಳ ಬಗ್ಗೆ ನಿಮಗೆ ಜಾಗೃತಿ ಇರಲಿ. ಕೆಲವು ಹೂಡಿಕೆಗಳನ್ನು ಸಹ ಮಾಡಲಿದ್ದೀರಿ. ಪ್ರೇಮಿಗಳು ಎಚ್ಚರಿಕೆಯಿಂದ ಇರಬೇಕು, ಕಷ್ಟಪಟ್ಟರೆ ಮಾತ್ರ ಅವರ ಗುರಿ ಈಡೇರಲಿದೆ. ಮಕ್ಕಳ ವಿಷಯ ಯೋಚನೆ ಮಾಡಲಿದ್ದೀರಿ. ವಿದ್ಯಾಭ್ಯಾಸದಲ್ಲಿ ಹಿನ್ನಡೆ ಅನುಭವಿಸಲಿದ್ದೀರಿ. ಹಣ ಪೂರ್ತಿ ಸಿಗುವುದಿಲ್ಲ. ಮಾನಸಿಕ ಸಮಸ್ಯೆಗಳು ಕಾಡಲಿವೆ.
ಧನು ರಾಶಿ:
ಧನು ರಾಶಿಗೆ ಎಲ್ಲವೂ ಒಳಿತಿಲ್ಲ. ಗುರುಗಳ ಕೋಪಕ್ಕೆ ಕಾರಣ ಆಗಲಿದ್ದೀರಿ. ಗೆಳೆಯರ ಮುಂದೆ ಅವಮಾನ ಆಗಲಿದೆ. ಆದರೆ ಯಾವುದನ್ನೂ ಮನಸ್ಸಿಗೆ ಹಚ್ಚಿಕೊಳ್ಳಬೇಡಿ. ಕೆಲಸದ ಮೇಲೆ ಕೆಲಸ ಬರಲಿದೆ. ಬಿಡುವೇ ಸಿಗದು. ಈ ವಾರ ಕೆಲಸಗಳು ಪೂರ್ಣವಾಗದು, ದುಃಖವು ಕಾಡಲಿದೆ. ಕೆಲಸದ ಮೇಲೆ ನಿರುತ್ಸಾಹ ಮೂಡಲಿದೆ. ಸಾಹಸ ಮನೋಭಾವದಿಂದ ಸಮಸ್ಯೆ ಆಗಲಿದೆ ಎಚ್ಚರಿಕೆ ಇರಲಿ. ಮಕ್ಕಳಿಂದ ಬೇಸರ ಆಗಲಿದೆ.
ಮಕರ ರಾಶಿ:
ಮಕರ ರಾಶಿಯರಿಗೆ ಈ ವಾರ ಒಳ್ಳೆಯದಾಗುತ್ತದೆ. ಮದುವೆ ಮಾತುಕತೆ ಮುಂದುವರೆಯಲಿದೆ. ಕೆಲವರು ನಿಮ್ಮ ಸಹಾಯಕ್ಕೆ ಬರಲಿದ್ದಾರೆ. ವಿದ್ಯಾಭ್ಯಾಸದಲ್ಲಿ ಉನ್ನತಿ ಸಾಧಿಸಲಿದ್ದೀರಿ. ಉದ್ಯೋಗದಲ್ಲಿ ಕೆಲ ಸಮಸ್ಯೆಗಳು ಬರುತ್ತವೆ ಬೇಜಾರು ಮಾಡಿಕೊಳ್ಳಬೇಡಿ. ಹಳೆಯ ಸಾಲವೊಂದನ್ನು ನೀವು ತೀರಿಸಲಿದ್ದೀರಿ. ಸಂಬಂಧಿಗಳ ಬಗ್ಗೆ ಬೇಸರ ಮಾಡಿಕೊಳ್ಳಲಿದ್ದೀರಿ. ಆಂಜನೇಯ ದೇವರ ಪೂಜೆ ಮಾಡಿ.
ಕುಂಭ ರಾಶಿ:
ಕುಂಭ ರಾಶಿಗೆ ಈ ವಾರ ಶುಭ ಯೋಗವಿದೆ. ವಾರ ಪೂರ್ತಿ ಉತ್ಸಾಹಭರಿತವಾಗಿ ಇರುತ್ತೀರಿ. ಆದರೆ ಉತ್ಸಾಹದ ಜೊತೆಗೆ ತಾಳ್ಮೆಯೂ ಸಹ ಇರಲಿ. ನಿಮಗೆ ನಿಮ್ಮ ಗುರಿಯ ಬಗ್ಗೆ ಸ್ಪಷ್ಟತೆ ಇರಲಿ. ಹಣಕಾಸು ವ್ಯವಸ್ಥೆಯಲ್ಲಿ ಹಿನ್ನಡೆ ಆಗಲಿದೆ. ಜಾಣ್ಮೆಯಿಂದ ನಿರ್ಣಯ ತೆಗೆದುಕೊಳ್ಳಿ. ಮಾನಸಿಕವಾಗಿ ಕೆಲ ಚಿಂತೆಗಳು ಕಾಡಲಿದೆ. ಆರೋಗ್ಯ ಕಾಪಾಡಿಕೊಳ್ಳುವತ್ತ ಗಮನ ಹರಿಸಿ. ತಪ್ಪು ಆದಾಗ ಅದನ್ನು ತಿದ್ದುಕೊಳ್ಳುವತ್ತ ಗಮನ ಕೊಡಿ, ನಿಂದನೆ ಬೇಡ.
ಮೀನ ರಾಶಿ:
ಮೀನ ರಾಶಿಗೆ ಈ ವಾರ ಅಷ್ಟೇನೂ ಶುಭವಾಗಿಲ್ಲ. ಮಾನಸಿಕ ಒತ್ತಡ ಇರಲಿದೆ. ಬೇರೆ ಬೇರೆ ಯೋಚನೆಗಳು ತಲೆಯಲ್ಲಿ ಬರಲಿವೆ. ವೃತ್ತಿ ಜೀವನದಲ್ಲಿ ಗೆಳೆಯರ ಸಹಾಯ ಸಿಗಲಿದೆ. ಆತ್ಮೀಯರೊಟ್ಟಿಗೆ ಮಾತನಾಡಿ ದುಗುಡ ಪರಿಹಾರ ಮಾಡಿಕೊಳ್ಳಿ. ಬೇರೆಯವರು ನಿಮ್ಮ ಬಳಿ ಏನಾದರೂ ಹೇಳಿಕೊಂಡರೆ ತಾಳ್ಮೆಯಿಂದ ಕೇಳಿ. ಜಾಣ್ಮೆಯಿಂದ ತೆಗೆದುಕೊಳ್ಳುವ ನಿರ್ಧಾರದಿಂದ ಪ್ರಗತಿ ಆಗಲಿದೆ. ಈ ವಾರ ನಿಮಗೆ ತಾಳ್ಮೆ ಮತ್ತು ಶಿಸ್ತು ಅತ್ಯವಶ್ಯಕ. ಹಣದ ಶಿಸ್ತು ಸಹ ಮುಖ್ಯ.