Weekly Horoscope
ಮೇಷ ರಾಶಿ
ಈ ವಾರ ತುಸು ಅನಾರೋಗ್ಯ ಕಾಡಬಹುದು. ಆರೋಗ್ಯ ಕ್ಷೀಣಿಸುವ ಲಕ್ಷಣಗಳಿವೆ. ಆಹಾರದ ಬಗ್ಗೆ ಹೆಚ್ಚು ಕಾಳಜಿ ವಹಿಸಿದರೆ ಒಳ್ಳೆಯದು. ಈ ವಾರದಲ್ಲಿ ವ್ಯಾಪಾರಸ್ಥರು ಕೆಲವು ದೊಡ್ಡ ಯೋಜನೆಗಳನ್ನು ಹಾಕುತ್ತಾರೆ. ಆದರೆ ಹಣ ಹೂಡಿಕೆ ಮಾಡುವಾಗ ಎಚ್ಚರಿಕೆ ಇರಲಿ. ಬೇರೆಯವರು ಹೇಳಿದರೆಂದು ನಿರ್ಧಾರಗಳನ್ನು ತೆಗೆದುಕೊಳ್ಳುವುದು ಬೇಡ. ಬಹಳ ಸಮಯದ ಬಳಿಕ ಹಳೆಯ ಸ್ನೇಹಿತರನ್ನು ಭೇಟಿ ಮಾಡಲಿದ್ದೀರಿ. ಆರೋಗ್ಯ ಸಮಸ್ಯೆಯ ಕಾರಣದಿಂದ ಮನೆಯಲ್ಲಿ ಒತ್ತಡದ ವಾತಾವರಣ ನಿರ್ಮಾಣವಾಗಲಿದೆ.
ವೃಷಭ ರಾಶಿ
ಉದ್ಯೋಗ ಮಾಡುತ್ತಿರುವವರಿಗೆ ಈ ವಾರ ಸವಾಲಿನ ವಾರವಾಗಲಿದೆ. ಸಂಬಳ ತಡವಾಗಿ ಆಗುವ ಕಾರಣಕ್ಕೆ ಕೊಟ್ಟ ಮಾತಿಗೆ ತಪ್ಪುತ್ತೀರಿ. ಹಣಕಾಸಿನ ಸಮಸ್ಯೆಗಳಿಂದಾಗಿ, ನಿಮ್ಮ ಕೆಲಸದ ಮೇಲೆ ಗಮನ ಕೇಂದ್ರೀಕರಿಸಲು ಸಾಧ್ಯವಾಗುವುದಿಲ್ಲ. ಚಿಂತೆಗಳನ್ನು ಮರೆತು ಕೆಲಸದ ಮೇಲೆ ಗಮನ ಹರಿಸಿ. ಒಳ್ಳೆಯ ಸಮಯ ಬಂದಾಗ ನಿಮ್ಮ ಸಮಸ್ಯೆ ಪರಿಹಾರವಾಗುತ್ತದೆ. ಸರ್ಕಾರಿ ಉದ್ಯೋಗ ಮಾಡುವ ಜನರಿಗೆ ಈ ಸಮಯ ಮಹತ್ವದ್ದಾಗಿದೆ. ಈ ವಾರ ನಿಮಗೆ ಹೆಚ್ಚಿನ ಕೆಲಸದ ಹೊರೆ ಇರಲಿದೆ. ಕುಟುಂಬ ಜೀವನದಲ್ಲಿ ಪರಿಸ್ಥಿತಿಗಳು ಸಾಮಾನ್ಯವಾಗುತ್ತವೆ. ಈ ವಾರ ಅಗತ್ಯಕ್ಕೆ ತಕ್ಕಂತೆ ಹೊಸ ಹೂಡಿಕೆ ಮಾಡಿ.
ಮಿಥುನ ರಾಶಿ
ವ್ಯಾಪಾರಸ್ಥರು ಬುದ್ಧಿವಂತಿಕೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಕಾನೂನು ಬಾಹಿರ ಕೆಲಸ ಮಾಡುವುದು ಬೇಡವೇ ಬೇಡ. ಉದ್ಯೋಗದಲ್ಲಿರುವವರಿಗೆ ಈ ವಾರ ಒತ್ತಡ ಹೆಚ್ಚಿರುತ್ತದೆ. ನಿಮ್ಮ ಮೇಲೆ ಕೆಲಸದ ಹೊರೆ ಹೆಚ್ಚಾಗಿರಲಿದೆ. ಆದರೂ ಹೆಚ್ಚಿನ ಒತ್ತಡ ತೆಗೆದುಕೊಳ್ಳುವುದನ್ನು ತಪ್ಪಿಸಿ, ಒತ್ತಡದಿಂದ ನಿಮ್ಮ ಆರೋಗ್ಯಕ್ಕೆ ಸಮಸ್ಯೆಯಾಗಬಹುದು. ಒತ್ತಡದಿಂದ ಕೆಲಸದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ತಮ್ಮ ಉತ್ತಮ ಪ್ರದರ್ಶನದೊಂದಿಗೆ ವಿದ್ಯಾರ್ಥಿಗಳು ತಮ್ಮ ಶಿಕ್ಷಕರು ಮತ್ತು ಹಿರಿಯರ ಹೃದಯ ಗೆಲ್ಲುತ್ತಾರೆ. ಕುಟುಂಬದ ಜೊತೆಗೆ ಸುತ್ತಾಡಲು ಹೋಗುಗುವ ಸಾಧ್ಯತೆ ಇದೆ. ನಿಮ್ಮ ಸಾಮಾಜಿಕ ವಲಯದಲ್ಲಿ ಕೆಲವು ಪ್ರಮುಖ ಕಾರ್ಯಕ್ರಮಗಳಿಗೆ ನಿಮ್ಮನ್ನು ಕರೆಯಲಾಗುತ್ತದೆ.
ಕರ್ಕ ರಾಶಿ
ಹಣಕಾಸಿನ ವಿಷಯದಲ್ಲಿ ತುಂಬಾ ಅದೃಷ್ಟಕರವಾದ ವಾರವಿದು. ಹಣಕಾಸಿನ ಸ್ಥಿತಿಯಲ್ಲಿ ದೊಡ್ಡ ಸುಧಾರಣೆಯ ಸಾಧ್ಯತೆ ಇದೆ. ಹಣವನ್ನು ಕೂಡಿಡಲು ಸಫಲರಾಗುತ್ತೀರಿ. ಹಳೆಯ ಸಾಲದಿಂದ ದೂರಾಗುತ್ತೀರಿ. ಹಿರಿಯರನ್ನು ಗೌರವಿಸುವ ಗುಣ ಬೆಳೆಸಿಕೊಳ್ಳಿ. ಆತುರಪಟ್ಟು ಯಾವುದೇ ನಿರ್ಣಯಗಳನ್ನು ತೆಗೆದುಕೊಳ್ಳಬೇಡಿ ಮತ್ತು ತಾಳ್ಮೆಯಿಂದಿರಿ. ಹಿರಿಯರ ಅಭಿಪ್ರಾಯವನ್ನು ನೀವು ಮನ್ನಿಸಿ ತಂದೆಯ ಮಾತುಗಳನ್ನು ನಿರ್ಲಕ್ಷಿಸಬೇಡಿ. ಈ ವಾರ ಯಾರೊಬ್ಬರ ಅಸಹನೀಯ ಮಾತುಗಳು ನಿಮಗೆ ಬೇಜಾರು ತರಬಹುದು.
ಸಿಂಹ ರಾಶಿ
ಈ ವಾರದಲ್ಲಿ ಖಾಸಗಿ ಅಥವಾ ವೃತ್ತಿ ಯಾವುದೇ ವಿಭಾಗದಲ್ಲಾದರೂ ಸರಿ ನಡವಳಿಕೆಯ ಬಗ್ಗೆ ವಿಶೇಷ ಕಾಳಜಿ ವಹಿಸಿ. ನಿಮ್ಮ ಹಠಮಾರಿ ಸ್ವಭಾವವು ನಿಮ್ಮನ್ನು ತೊಂದರೆಗೆ ಸಿಲುಕಿಸಬಹುದು. ಈ ಅವಧಿಯಲ್ಲಿ ಕುಟುಂಬದ ಸದಸ್ಯರ ಜೊತೆ ಜಗಳವಾಗಬಹುದು. ಮನೆಯ ವಾತಾವರಣ ಹಾಳಾಗಲಿದೆ. ಅಲ್ಲದೆ, ಸಂಬಂಧದಲ್ಲಿ ಕಹಿ ಹೆಚ್ಚಾಗುತ್ತದೆ. ಕಚೇರಿಯಲ್ಲಿ ಸಹೋದ್ಯೋಗಿಗಳನ್ನು ಟೀಕಿಸುವುದನ್ನು ಬಿಡಿ. ಇತರರ ಕೆಲಸದಲ್ಲಿ ದೋಷ ಹುಡುಕುವುದಕ್ಕಿಂತಲೂ ಸ್ವಂತ ಕೆಲಸದ ಮೇಲೆ ಗಮನಹರಿಸಿ. ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬಂದು ಬೇಕಾದ ಕೆಲಸವನ್ನು ಪಡೆಯಲು ಅನುಕೂಲವಾಗುತ್ತದೆ.
ಕನ್ಯಾ ರಾಶಿ
ನಿಮ್ಮ ಕುಟುಂಬ ಜೀವನ ಚೆನ್ನಾಗಿರುತ್ತದೆ. ನಿಮ್ಮ ಮನೆಯ ವಾತಾವರಣ ತಿಳಿಯಾಗಲಿದೆ. ನಿಮ್ಮ ಕುಟುಂಬ ಸದಸ್ಯರೊಂದಿಗೆ ಹೆಚ್ಚು ಸಮಯ ಕಳೆಯಲಿದ್ದೀರಿ. ಪೋಷಕರ ಪ್ರೀತಿ ಮತ್ತು ಬೆಂಬಲ ದೊರೆಯಲಿದೆ. ಜೀವನ ಸಂಗಾತಿಯ ಹುಡುಕಾಟ ಪೂರ್ಣವಾಗುತ್ತದೆ. ಆಕಸ್ಮಿಕ ಧನ ಲಾಭವಿದೆ. ವ್ಯಾಪಾರಸ್ಥರಿಗೆ ಹೊಸ ಅವಕಾಶ ಸಿಗಲಿದೆ. ಆಹಾರದಲ್ಲಿ ನಿಯಂತ್ರಣವಿರಲಿ ಮತ್ತು ಸಕ್ರಿಯ ಜೀವನಶೈಲಿ ಅನುಸರಿಸಿ ಆರೋಗ್ಯ ಉತ್ತಮಪಡಿಸಿಕೊಳ್ಳಿ. ಕೆಲಸದ ಸ್ಥಳದಲ್ಲಿಯೂ ಯಶಸ್ಸು ಸಿಗಲಿದೆ.
ತುಲಾ ರಾಶಿ
ವಾರದ ಆರಂಭ ಕೆಲ ಹಿನ್ನಡೆ ಆಗಲಿದೆ. ಚಿಂತೆಗೀಡಾಗಲಿದ್ದೀರಿ, ನಕಾರಾತ್ಮಕ ಆಲೋಚನೆಗಳಿಂದ ದೂರವಿರಿ. ಒತ್ತಡದಿಂದಾಗಿ ಆರೋಗ್ಯ ಹಾಳಾಗುತ್ತದೆ. ದೇವರ ಮೇಲೆ ನಂಬಿಕೆ ಹೆಚ್ಚಾಗಲಿದೆ. ದೇವರ ಕೃಪೆಯಿಂದ ಸಮಸ್ಯೆಗಳು ಬಗೆಹರಿಯುತ್ತವೆ. ಉದ್ಯೋಗದಲ್ಲಿ ಯಶಸ್ಸು ಸಿಗಲಿದೆ. ಆದಾಯದಲ್ಲಿ ಹೆಚ್ಚಳ ಆಗುವ ಸಾಧ್ಯತೆ ಇದೆ. ನಿಮ್ಮ ಕಾರ್ಯಕ್ಷಮತೆ ಉತ್ತಮವಾಗುತ್ತದೆ. ವ್ಯಾಪಾರಸ್ಥರು ನಿರೀಕ್ಷಿಸಿದಂತೆ ಫಲಿತಾಂಶಗಳನ್ನು ಪಡೆಯುವ ಸಾಧ್ಯತೆಯಿದೆ. ವಿದ್ಯಾರ್ಥಿಗಳಿಗೆ ಮತ್ತು ವೃತ್ತಿಪರರಿಗೆ ಒಳ್ಳೆಯದಾಗಲಿದೆ.
ವೃಶ್ಚಿಕ ರಾಶಿ
ವ್ಯಾಪಾರಸ್ಥರು ಹುಷಾರಾಗಿ ಹೊಸ ಹೆಜ್ಜೆಗಳನ್ನು ಇಡಬೇಕಾಗಿದೆ. ನಿಮ್ಮ ಹಾದಿಯಲ್ಲಿ ದೊಡ್ಡ ಅಡಚಣೆ ಎದುರಾಗಬಹುದು. ಶೀಘ್ರದಲ್ಲೇ ನಿಮ್ಮ ಈ ಸಮಸ್ಯೆ ದೂರವಾಗುತ್ತದೆ. ಪ್ರಸ್ತುತ ಕೆಲಸವನ್ನು ಬಿಟ್ಟು ಬೇರೆ ಕೆಲಸ ಮಾಡಲು ಯೋಚಿಸುತ್ತಿದ್ದರೆ ಅವಸರದ ನಿರ್ಧಾರ ಬೇಡ. ಹಣದ ದೃಷ್ಟಿಯಿಂದ ಈ ವಾರ ಸಾಧಾರಣವಾಗಿರುತ್ತದೆ. ಖರ್ಚುಗಳನ್ನು ನಿಯಂತ್ರಿಸಿ. ಆಸೆ ಈಡೇರಿಸಲು ನಿಮ್ಮ ಕುಟುಂಬದ ಸದಸ್ಯರು ಬೆಂಬಲಕ್ಕೆ ನಿಲ್ಲುತ್ತಾರೆ. ಕೆಲವು ಜನರು ಈ ವಾರ ಆರ್ಥಿಕವಾಗಿ ಸ್ವತಂತ್ರರಾಗುತ್ತಾರೆ.
ಧನು ರಾಶಿ
ವಾರದ ಆರಂಭದಲ್ಲಿ ಲವಲವಿಕೆಯಿಂದ ಇರುತ್ತೀರಿ. ಮನಸ್ಸಿಗೆ ಖುಷಿ ಕೊಡುವ ಸಂಗತಿಗಳು ನಡೆಯುತ್ತವೆ. ಸ್ನೇಹಿತರೊಂದಿಗೆ ಸಮಯ ಕಳೆಯುವ ಅವಕಾಶ ಪಡೆಯುವಿರಿ. ನಿಮ್ಮ ಮಾತು ಮತ್ತು ನಡವಳಿಕೆಯ ಬಗ್ಗೆ ಎಚ್ಚರಿಕೆ ಇರಲಿ. ಬೇರೆಯವರ ಭಾವನೆಗಳನ್ನು ನೋಯಿಸಬೇಡಿ. ನಿಮ್ಮ ಕೆಲಸದ ಶೈಲಿ ಮತ್ತು ಕೆಲಸದ ಸ್ಥಳದಲ್ಲಿ ತೋರಿದ ದಕ್ಷತೆಗೆ ಮನ್ನಣೆ ಸಿಗಲಿದೆ. ಒಳ್ಳೆಯ ಕೆಲಸಕ್ಕಾಗಿ ನೀವು ಸಮಾಜದಲ್ಲಿ ಮೆಚ್ಚುಗೆ ಪಡೆಯುತ್ತೀರಿ. ಹಾಳಾದ ಸ್ನೇಹ ಸಂಬಂಧ ಸುಧಾರಣೆಯಾಗಲಿದೆ.
ಮಕರ ರಾಶಿ
ಈ ವಾರ ಹೆಚ್ಚು ಕಷ್ಟಪಟ್ಟು ಕೆಲಸ ಮಾಡಬೇಕಾಗಿದೆ. ಬಡ್ತಿ ಹೊಂದಿದ್ದರೆ ಕೆಲಸದ ಕಡೆಗೆ ನಿರ್ಲಕ್ಷ್ಯ ಬೇಡವೇ ಬೇಡ. ಸರ್ಕಾರಿ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವವರು ಯಶಸ್ಸನ್ನು ಸಿಗುವ ಸಾಧ್ಯತೆ ಇದೆ. ಬಯಸಿದ ಉದ್ಯೋಗ ಪಡೆಯುವ ಅವಕಾಶವಿದೆ. ಸಾರಿಗೆಗೆ ಸಂಬಂಧಿಸಿದ ಕೆಲಸ ಮಾಡುವವರು ಒಳ್ಳೆಯ ಲಾಭ ಗಳಿಸುತ್ತಾರೆ. ದಾರಿಯಲ್ಲಿ ಬರುವ ಯಾವುದೇ ಅಡಚಣೆಗಳು ನಿವಾರಣೆಯಾಗುತ್ತವೆ. ವಿದೇಶ ಪ್ರಯಾಣದ ಸಾಧ್ಯತೆ ಇದೆ. ಕಮಿಷನ್ ಆಧಾರದ ಮೇಲೆ ಕೆಲಸ ಮಾಡುವ ಜನರಿಗೆ ಈ ವಾರ ಲಾಭವಿದೆ.
ಕುಂಭ ರಾಶಿ
ವ್ಯಾಪಾರಿಗಳಿಗೆ ಒಳ್ಳೆಯ ಲಾಭವಿದೆ. ವ್ಯಾಪಾರ ವಿಸ್ತರಣೆ ಸಹ ಆಗುತ್ತದೆ. ಲಾಭ ಎಂದಿಗಿಂತ ಹೆಚ್ಚಾಗುತ್ತದೆ. ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡಿದರೆ ಈ ವಾರ ಕೆಲವು ದೊಡ್ಡ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳುವಿರಿ. ಪಾಲುದಾರರ ಜೊತೆ ಬಾಂಧವ್ಯ ಉತ್ತಮವಾಗಿರಲಿದೆ. ಉದ್ಯೋಗದಲ್ಲಿರುವ ಜನರು ತಮ್ಮ ಪರಿಶ್ರಮದ ಫಲ ಪಡೆಯುವರು. ನಿಮ್ಮ ಪ್ರಗತಿಗೆ ಅವಕಾಶಗಳಿವೆ. ನಿಮ್ಮ ಕೆಲಸಗಳಿಗೆ ಕುಟುಂಬದ ಹಿರಿಯರ ಬೆಂಬಲ ಸಿಗಲಿದೆ. ಸಾಮಾಜಿಕ ವಲಯದಲ್ಲಿ ನೀವು ಆಕರ್ಷಣೆಯ ವ್ಯಕ್ತಿಯಾಗುವಿರಿ. ಬಹಳ ಸಮಯದ ಬಳಿಕ ಸಂಗಾತಿ ಜೊತೆ ಏಕಾಂಗಿಯಾಗಿ ಸಮಯ ಕಳೆಯುವ ಅವಕಾಶ ಸಿಗಲಿದೆ.
ಮೀನ ರಾಶಿ
ಶ್ರಮಕ್ಕೆ ಫ್ರತಿಫಲ ಸಿಗದಿದ್ದರೆ ಅಸಮಾಧಾನ ಬೇಡ. ಕೋಪ ಮತ್ತು ಆತುರದ ನಿರ್ಧಾರದಿಂದ ನಿಮಗೆ ನಷ್ಟವಾಗಲಿದೆ. ಕಚೇರಿಯಲ್ಲಿ ಬಾಸ್ ಒಳ್ಳೆಯ ಬಾಂಧವ್ಯ ಇರಲಿ. ಕೆಲಸಗಳನ್ನು ಎಚ್ಚರಿಕೆಯಿಂದ ಮಾಡಿರಿ. ನಿಮ್ಮ ಮೇಲೆ ಯಾರೂ ದೂರು ನೀಡುವ ಅವಕಾಶ ಕೊಡಬೇಡಿ. ಚಿನ್ನ ಮತ್ತು ಬೆಳ್ಳಿ ತಯಾರಿಸುವವರು ಹೆಚ್ಚು ಆರ್ಥಿಕ ಲಾಭ ಪಡೆಯುತ್ತಾರೆ. ಪೋಷಕರ ಆರೋಗ್ಯ ಚೆನ್ನಾಗಿರುತ್ತದೆ. ಕೆಲಸಗಳಿಗೆ ಅವರ ಬೆಂಬಲ ಸಿಗಲಿದೆ. ಪ್ರಭಾವಶಾಲಿ ವ್ಯಕ್ತಿಯನ್ನು ಭೇಟಿಯಾಗುತ್ತೀರಿ. ಅವರಿಂದ ನಿಮಗೆ ಸಹಾಯವಾಗಲಿದೆ.