Weekly Horoscope
ಆಗಸ್ಟ್ ತಿಂಗಳ ಕೊನೆಯ ವಾರ 26 ಆಗಸ್ಟ್ ನಿಂದ ಸೆಪ್ಟೆಂಬರ್ 1 ರವರೆಗೆ ಇರಲಿದೆ. ಈ ವಾರ ಕೆಲವು ಪ್ರಮುಖ ಗ್ರಹಗಳ ಚಲನೆ ನಡೆಯಲಿವೆ. ಹಲವು ರಾಶಿಗಳ ಮೇಲೆ ಇದರ ಪ್ರಭಾವ ಇರಲಿದೆ. ಈ ವಾರ ಕೆಲವು ರಾಶಿಯವರಿಗೆ ಮಾತ್ರವೇ ಶುಭ ಇರಲಿದೆ. ಹಲವರಿಗೆ ಅಶುಭ ಇರಲಿದೆ, ಜಾಗೃತೆ ಇರಲಿ.
ಮೇಷ ರಾಶಿ
ಮೇಷ ರಾಶಿಯ ಶುಭ ಫಲ ಈ ವಾರವೂ ಚಾಲ್ತಿಯಲ್ಲಿ ಇರಲಿದೆ. ಕೆಲವು ಶುಭ ಸುದ್ದಿಗಳು ಕೇಳಿ ಬರಲಿವೆ. ನೀವು ಅಂದುಕೊಂಡಿದ್ದು ನಡೆಯಲಿದೆ. ನಿಮ್ಮ ಮಾತಿಗೆ ಗೌರವ ಸಿಗಲಿದೆ. ಹಿರಿಯರ, ಪತಿ-ಪತ್ನಿಯ ಮಾತಿನ ಬಗ್ಗೆ ಗಮನ ಇರಲಿ. ಹಣದ ಹೂಡಿಕೆ ಬಗ್ಗೆ ಗಮನ ಹರಿಸಿ. ಯಾವುದೇ ಹೂಡಿಕೆ ಮಾಡುವ ಮುನ್ನ ಜಾಗೃತೆ ಇರಲಿ. ಅನವಶ್ಯಕವಾಗಿ ಖರ್ಚು ಬೇಡ.
ವೃಷಭ ರಾಶಿ
ವೃಷಭ ರಾಶಿಗೆ ಈ ವಾರ ಮಿಶ್ರಫಲ ಇದೆ. ದಾಂಪತ್ಯದಲ್ಲಿ ಕಲಹ ಸಂಭವಿಸಲಿದೆ. ಆದರೆ ತಾಳ್ಮೆ ಇರಲಿ. ವಿನಾಕಾರಣ ಸುಳ್ಳಾಡಲಿದ್ದೀರಿ. ನಿಮ್ಮ ನಿರ್ಲಕ್ಷ್ಯದಿಂದ ಕೆಲ ವಸ್ತುಗಳು ಕಳೆದು ಹೋಗುವುದು, ಕಳೆದ ಹೋದ ವಸ್ತುವಿನ ಬೆಲೆ ತಡವಾಗಿ ನಿಮಗೆ ತಿಳಿಯುವುದು. ಅನವಶ್ಯಕ ನಿಂದನೆಗೆ ಗುರಿ ಆಗುವಿರಿ, ಆತ್ಮಾಭಿಮಾನ ಕಳೆದುಕೊಳ್ಳುವುದು ಬೇಡ.
ಮಿಥುನ ರಾಶಿ
ಮಿಥುನ ರಾಶಿಗೆ ಈ ವಾರವೂ ಸಹ ಅಶುಭವೇ ಮುಂದುವರೆಯುವುದು. ಕುಟುಂಬದಲ್ಲಿ ಕಲಹ ನಿರ್ಮಾಣ ಆಗಲಿದೆ. ಪತಿ-ಪತ್ನಿ ಮಧ್ಯೆ ಬಿರುಕು ಮೂಡಬಹುದು. ಉದ್ಯೋಗದಲ್ಲಿ, ಸಂಸಾರದಲ್ಲಿ ಒತ್ತಡ ಹೆಚ್ಚಾಗಲಿದೆ. ಕೆಲಸ ಹೆಚ್ಚಾಗಲಿದೆ ಆದರೆ ಸಂಬಳ ಅಷ್ಟೆ ಇರಲದೆ. ಮದುವೆ ಮಾತುಕತೆ ನಿಧಾನ ಆಗಲಿವೆ. ಹಿರಿಯರ ಮಾತಿನ ಬಗ್ಗೆ ನಿರ್ಲಕ್ಷ್ಯ ತೋರಲಿದ್ದೀರಿ. ಅದು ಸೂಕ್ತವಲ್ಲ. ಕುಟುಂಬಕ್ಕಾಗಿ ಹಣ ವ್ಯಯ ಮಾಡಲಿದ್ದೀರಿ. ಧೈರ್ಯದಿಂದ ಇರಿ, ಎಲ್ಲವೂ ಸರಿ ಆಗಲಿದೆ.
ಕರ್ಕಾಟಕ ರಾಶಿ
ಕರ್ನಾಟಕ ರಾಶಿಗೆ ಈ ವಾರ ಒಳಿತು ಆಗಲಿದೆ. ಇಷ್ಟು ದಿನ ಇದ್ದ ಒತ್ತಡ, ಸಂಕಟ ನಿವಾರಣೆ ಆಗಲಿದೆ. ಹಿರಿಯರಿಂದ ಒಳ್ಳೆಯ ಸುದ್ದಿ ಕೇಳುವಿರಿ. ಉದ್ಯೋಗದ ಸ್ಥಳದಲ್ಲಿ ನಿಮಗೆ ಗೌರವ ಕಡಿಮೆ ಆಗಲಿದೆ. ಒತ್ತಡ ಹೆಚ್ಚಾಗಲಿದೆ. ಕುಟುಂಬದವರು ಸಹ ನಿಮ್ಮನ್ನು ಗೌರವಿಸುವುದಿಲ್ಲ. ಈ ವಾರ ಕೆಲಸ ಮಾಡಿದರೂ ಸಹ ಹಣ ಕಡಿಮೆ ಬರಲಿದೆ. ಇದು ಬೇಸರ ಮೂಡಿಸಲಿದೆ. ಈ ವಾರ ಕುಟುಂಬದಿಂದ ಯಾವುದೇ ಸಹಕಾರ ಸಿಗದು, ಆದರೆ ಧೃತಿಗೆಡಬೇಕಿಲ್ಲ.
ಸಿಂಹ ರಾಶಿ
ಸಿಂಹ ರಾಶಿಗೆ ಮಿಶ್ರ ಫಲ ಲಭಿಸಲಿದೆ. ಕೋಪ ತರಿಸುವ ಹಲವು ಸನ್ನಿವೇಶ ನಡೆಯಲಿವೆ, ಆದರೆ ತಾಳ್ಮೆ ಕಳೆದುಕೊಳ್ಳಬೇಡಿ, ಕೋಪಗೊಂಡರೆ ಸಮಸ್ಯೆ ಖಂಡಿತ. ಔಷಧ ವ್ಯಾಪಾರಿಗಳಿಗೆ ಲಾಭ ಸಿಗಲಿದೆ. ಕೆಲಸ ಬಿಡುವ ಯೋಚನೆ ಮಾಡಲಿದ್ದೀರಿ, ಕೆಲವು ಅವಕಾಶಗಳು ಸಹ ಬರಲಿವೆ. ಉದ್ಯೋಗ ಹೋಗುವ ಬಗ್ಗೆ ಆತಂಕ ಸಹ ಮೂಡಲಿದೆ. ದೇವರನ್ನು ಮರೆಯಬೇಡಿ.
ಕನ್ಯಾ ರಾಶಿ
ಕನ್ಯಾ ರಾಶಿಗೆ ಈ ವಾರ ಮಿಶ್ರಫಲ ಇರಲಿದೆ. ಬರಹಗಾರರಿಗೆ ಈ ವಾರ ಒಳಿತಾಗಲಿದೆ, ಹಣ, ಗೌರವ ಸಿಗಲಿದೆ. ಹೊಸ ಆದಾಯದ ಮೂಲಗಳು ಸಿಗಲಿವೆ. ಉದ್ಯಮದಾರರಿಗೆ ಲಾಭ ಸಿಗಲಿದೆ. ಹೊಸ ಉದ್ಯಮ ಪ್ರಾರಂಭಿಸಲು ಸಹ ಇದು ಸಕಾಲ, ಆದರೆ ಯೋಚನೆ ಮಾಡಿ ಹೆಜ್ಜೆ ಇಡಿ. ಕುಟುಂಬದವರ ಸಹಕಾರ ಎಲ್ಲ ವಿಷಯದಲ್ಲಿಯೂ ಸಿಗಲಿದೆ. ಅತಿಯಾದ ಆಲೋಚನೆ ಮಾಡುವುದು ಬೇಡ, ಆರೋಗ್ಯದ ಕಡೆ ಗಮನ ಹರಿಸಿ.
ತುಲಾ ರಾಶಿ
ತುಲಾ ರಾಶಿಗೆ ಈ ವಾರ ಶುಭವಿಲ್ಲ. ಹಣಕಾಸಿನ ಸಮಸ್ಯೆ ಕಾಡಲಿದೆ. ಹಣಕಾಸಿನ ಹರಿವು ಇದ್ದ ಮೂಲಗಳು ನಿಲ್ಲುವ ಸಾಧ್ಯತೆ ಇದೆ. ಸಾಲ ಮಾಡಲೇ ಬೇಕಾದ ಸನ್ನಿವೇಶ ಸೃಷ್ಟಿ ಆಗಲಿದೆ. ಪಾಲುದಾರರಲ್ಲಿ ಸಹ ಗೊಂದಲ ಮೂಡಲಿದೆ. ಒತ್ತಡದಲ್ಲಿ ಇರಲಿದ್ದೀರಿ, ಆದರೆ ನಿಮ್ಮ ಕಷ್ಟ ಹೇಳಿಕೊಳ್ಳಲು ಜನ ಸಿಗಲಿದ್ದಾರೆ. ಈ ವಾರ ನಿಮಗೆ ಗೆಲುವು ಸಿಗುವುದು ಕಷ್ಟ. ಆದರೆ ಭಯ ಪಡುವ ಅಗತ್ಯವಿಲ್ಲ ಸಮಯ ಸರಿ ಹೋಗಲಿದೆ.
ವೃಶ್ಚಿಕ ರಾಶಿ
ಈ ವಾರ ಶುಭ ಸುದ್ದಿ ಸಿಗಲಿದೆ. ಮದುವೆಗೆ ಸಂಬಂಧ ನೋಡುತ್ತಿರುವವರಿಗೆ ಮದುವೆ ನಿಶ್ಚಯ ಆಗುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ಪ್ರಗತಿ ಕಾಣುವಿರಿ. ಉದ್ಯೋಗದ ಬಗ್ಗೆ ಇದ್ದ ಆತಂಕ ದೂರಾಗಲಿದೆ. ಈ ವಾರ ಅನಿರೀಕ್ಷಿತ ಆದಾಯಗಳು ಕೆಲವು ಬರಲಿವೆ. ಆದಾಯ ಹೆಚ್ಚು ಮಾಡಿಕೊಳ್ಳಲು ಪ್ರಯತ್ನ ಸಹ ಮಾಡಲಿದ್ದೀರಿ.
ಧನು ರಾಶಿ
ಧನು ರಾಶಿಗೆ ಈ ವಾರವೂ ಮಿಶ್ರ ಫಲ ಇರಲಿದೆ. ಕುಟುಂಬದಲ್ಲಿ ವಿರಸಗಳು ಮೂಡಲಿವೆ. ಹಿಂದಿನ ಪ್ರೀತಿ-ಗೌರವ ಕಳೆದುಕೊಳ್ಳಲಿದ್ದೀರಿ. ಪ್ರಯಾಣದ ಆಸೆಗಳು ಈಡೇರುವುದಿಲ್ಲ. ಸಂಗಾತಿಯ ಬೆಂಬಲ ನಿಮಗೆ ಸಿಗಲಿದೆ. ಬಂಧುಗಳೊಂದಿಗೆ ಭಿನ್ನಾಭಿಪ್ರಾಯ ತುಸು ಕಡಿಮೆ ಆಗುವುದು. ಉದ್ಯೋಗದಲ್ಲಿ ಪ್ರಗತಿ ಸಾಧಿಸುವುದು ಕಷ್ಟ ಎನಿಸಲು ಶುರುವಾಗಲಿದೆ.
ಮಕರ ರಾಶಿ
ಮಕರ ರಾಶಿಗೆ ಈ ವಾರ ಒಳಿತಾಗಲಿದೆ. ಈ ವಾರ ನೀವು ಅಂದುಕೊಂಡ ಕೆಲಸಗಳು ನಡೆಯುತ್ತವೆ. ಮನಸ್ಸು ಉಲ್ಲಾಸಿತವಾಗಿರಲಿದೆ. ಆದಾಯಗಳು ಅಂದುಕೊಂಡಂತೆ ಬರಲಿವೆ. ಮಕ್ಕಳಿಗಾಗಿ ತುಸು ಹಣ ಖರ್ಚು ಮಾಡಬೇಕಾಗುತ್ತದೆ. ವಿವಾಹಕ್ಕೆ ಬಂದಿದ್ದ ಅಡೆ-ತಡೆ ನಿವಾರಣೆ ಆಗಲಿದೆ. ಉದ್ಯೋಗದ ಅವಕಾಶಗಳು ಸಹ ಬರಲಿವೆ. ಎಚ್ಚರಿಕೆಯಿಂದ ಉದ್ಯೋಗ ಆಯ್ಕೆ ಮಾಡಿಕೊಳ್ಳಿ.
weekly horoscope: ಆಗಸ್ಟ್ 19 ರಿಂದ 25: ಈ ವಾರ ಹೇಗಿರಲಿದೆ ನಿಮ್ಮ ಭವಿಷ್ಯ?
ಕುಂಭ ರಾಶಿ
ಈ ವಾರ ಕುಂಭ ರಾಶಿಗೆ ಮಿಶ್ರ ಫಲ ಇದೆ. ನೌಕರಿ ಸಿಗುವುದು ಕಷ್ಟವಾಗಲಿದೆ. ಬಹಳ ಶ್ರಮ ಪಡಬೇಕಾಗುತ್ತದೆ. ಆತ್ಮೀಯರ ಮೇಲೆಯೇ ಅನುಮಾನ, ಸಿಟ್ಟು ಬರಲಿದೆ. ತಾಳ್ಮೆ ಇರಲಿ. ಅಹಂ ಇಂದಾಗಿ ನೀವು ಸಮಸ್ಯೆ ಅನುಭವಿಸಲಿದ್ದೀರಿ. ಕೈಗೆ ಸಿಗಬೇಕಿದ್ದ ವಸ್ತು, ಉದ್ಯೋಗವೂ ಸಹ ನಿಮ್ಮಂದ ದೂರವಾಗಲಿದೆ. ಇದು ನಿಮ್ಮನ್ನು ಹತಾಶೆಗೆ, ಆಕ್ರೋಶಕ್ಕೆ ತಳ್ಳಲಿದೆ. ವಾಹನ ಚಲಾಯಿಸುವಾಗ ಬಹಳ ಎಚ್ಚರಿಕೆಯಿಂದ ಇರಿ.
ಮೀನ ರಾಶಿ
ಮೀನ ರಾಶಿಗೆ ಈ ವಾರ ಮಿಶ್ರಫಲ ಇದೆ. ಕುಟುಂಬದ ಮೇಲೆ ಪ್ರೀತಿ ಕಡಿಮೆ ಆಗಲಿದೆ. ಮನಸ್ಸಿಗೆ ಘಾಸಿಯಾಗುವ ಘಟನೆಗಳು ನಡೆಯಲಿದೆ. ವಿನಾಕಾರಣ ಮನಸ್ಸಿಗೆ ಬೇಸರ ಮಾಡಿಕೊಳ್ಳಲಿದ್ದೀರಿ. ಆತ್ಮೀಯರ ಮೇಲೆ ನಿಮಗೆ ಅನುಮಾನಗಳು ಮೂಡಲು ಪ್ರಾರಂಭವಾಗುತ್ತವೆ. ಅನವಶ್ಯಕವಾಗಿ ಅನುಮಾನ, ಸಿಟ್ಟುಗಳನ್ನು ಮಾಡಿಕೊಳ್ಳಲಿದ್ದೀರಿ.