Science News
ಮನುಕುಲದ ಅಂತ್ಯದ ಬಗ್ಗೆ ಆಗಾಗ್ಗೆ ಗಾಳಿ ಸುದ್ದಿಗಳು ಹರಿದಾಡುತ್ತಲೇ ಇರುತ್ತವೆ. ಕಾವಿ ತೊಟ್ಟ ಜ್ಯೋತಿಷಿಗಳು, ಬಾಬ ವಂಗಾರಂಥಹಾ ಅಜ್ಜಿಯರು, ಗ್ರೆಗೊರಿಯನ್ ಕ್ಯಾಲೆಂಡರ್ ಓದುವವರು ಆಗೊಮ್ಮೆ ಈಗೊಮ್ಮೆ ಥಟ್ಟನೆ ಟಿವಿಗಳಲ್ಲಿಯೋ, ಸಾಮಾಜಿಕ ಜಾಲತಾಣಗಳಲ್ಲಿ ಪ್ರತ್ಯಕ್ಷವಾಗಿ ಭೂಮಿ ಅಂತ್ಯವಾಗಲಿದೆ ಮನುಕುಲ ನಾಶವಾಗಲದೆ ಎಂದು ಹೇಳುತ್ತಿರುತ್ತಾರೆ. ಆದರೆ ವಿಜ್ಞಾನಿಗಳ ಆತಂಕವೇ ಬೇರೆ. ಮನುಕಲದ ಅಂತ್ಯದ ಸಾಧ್ಯತೆ ಬಗ್ಗೆ ಕೇಳಿದಾಗ ಬಹುತೇಕ ವಿಜ್ಞಾನಿಗಳು ಹೇಳುವುದು ಕ್ಷುದ್ರಗ್ರಹ ಅಥವಾ ಧೂಮಕೇತುಗಳು ಬಂದು ಭೂಮಿಗೆ ಅಪ್ಪಳಿಸದ ಹೊರತು ಅಷ್ಟು ಸುಲಭಕ್ಕೆ ಭೂಮಿಯ ವಿನಾಶವಾಗುವುದಿಲ್ಲ ಎನ್ನುತ್ತಾರೆ.
ಆದರೆ ಅಂಥಹಾ ದಿನವೊಂದು ಬಂದಿದೆ. 6.1 ಕೋಟಿ ಟನ್ ತೂಕದ, 1100 ಅಡಿ ವಿಸ್ತೀರ್ಣ ಹೊಂದಿರುವ ಆಕಾಶಕಾಯವೊಂದು ಭೂಮಿಯ ಕಡೆಗೆ ಸೆಕೆಂಡ್ಗೆ 30 ಕಿ.ಮೀ ವೇಗದಲ್ಲಿ ಧಾವಿಸಿ ಬರುತ್ತಿದೆ. ಈ ಆಕಾಶ ಕಾಯಕ್ಕೆ ಈಜಿಪ್ಟ್ನ ಪೌರಾಣಿಕ ಕತೆಗಳಲ್ಲಿ ಬರುವ ವಿಧ್ವಂಸಕ ಪ್ರವೃತ್ತಿಯ ರಾಕ್ಷಸ ಅಪೋಫಿಸ್ನ ಹೆಸರನ್ನೇ ಇಡಲಾಗಿದೆ. ಭೂಮಿಯ ಮೇಲೆ ಮನುಷ್ಯ ಜೀವಿಯ ವಿಕಸನ ಹೊಂದಿದ ಮೇಲೆ ಇಷ್ಟು ದೊಡ್ಡ ಆಕಾಶಕಾಯವೊಂದು ಭೂಮಿಯ ಸನಿಹಕ್ಕೆ ಬರುತ್ತಿರುವುದು ಇದೇ ಮೊದಲು.
ಏಪ್ರಿಲ್ 13, 2029 ರಂದು ಅಪೋಫಿಸ್ ಆಕಾಶಕಾಯವು ಭೂಮಿಯ ಅತ್ಯಂತ ಸನಿಹಕ್ಕೆ ಬರಲಿದೆ. ಭೂಮಿಯಿಂದ 19,794 ಮೈಲುಗಳ ದೂರಕ್ಕೆ ಅಪೋಫಿಸ್ ಆಕಾಶಕಾಯ ಬರಲಿದೆ. ನಾವು ಹಾರ ಬಿಟ್ಟಿರುವ ಹಲವು ಸ್ಯಾಟಲೈಟ್ಗಳಿಗಿಂತಲೂ ಸನಿಹಕ್ಕೆ ಬರಲಿದೆ. ಭಾರತ ಸೇರಿದಂತೆ, ಚೀನಾ, ಜಪಾನ್, ಬ್ರಿಟನ್, ಬೆಲ್ಜಿಯಂ, ಫ್ರ್ಯಾನ್ಸ್, ಜರ್ಮನಿ, ನೆದರ್ಲ್ಯಾಂಡ್ಸ್, ಈಜಿಪ್ಟ್, ಸುಡಾನ್, ದಕ್ಷಿಣ ಕೊರಿಯಾ, ಉತ್ತರ ಕೊರಿಯಾ, ಆಸ್ಟ್ರೇಲಿಯಾ ದೇಶಗಳ ಜನರು, ಯಾವುದೇ ಟೆಲಿಸ್ಕೋಪ್ ನೆರವು ಇಲ್ಲದೆ ಬರಿಗಣ್ಣಿನಿಂದ ಈ ಆಕಾಶಕಾಯವನ್ನು ನೋಡಬಹುದಾಗಿದೆ.
ವಿಜ್ಞಾನಿಗಳು ಹಾಕಿರುವ ಲೆಕ್ಕಾಚಾರದಂತೆ ಈ ಆಕಾಶಕಾಯದಿಂದ ಭೂಮಿಗೆ ಯಾವುದೇ ಹಾನಿ ಇಲ್ಲ. ಈ ಆಕಾಶಕಾಯ ಭೂಮಿಗೆ ಅಪ್ಪಳಿಸುವುದೂ ಸಹ ಇಲ್ಲ. ಆದರೆ ಈ ಆಕಾಶಕಾಯದಿಂದ ಭೂಮಿಯ ವಾತಾವರಣದ ಮೇಲೆ ಏನಾದರೂ ಪರಿಣಾಮ ಆಗಬಹುದೇ ಎಂಬುದಕ್ಕೆ ಇನ್ನೂ ಸ್ಪಷ್ಟ ಉತ್ತರ ಇಲ್ಲ. ಈಗ ಲಭ್ಯವಿರುವ ಮಾಹಿತಿಯ ಪ್ರಕಾರ ಈ ಆಕಾಶಕಾಯದಿಂದ ಭೂಮಿಗೆ ಯಾವುದೇ ಹಾನಿ ಇಲ್ಲ. ನಾಸಾದ ವಿಜ್ಞಾನಿ ಡೇವಿಡ್ ಫಾರ್ನೋಕಿಯಾ (Davide Farnocchia) ಹೇಳಿರುವಂತೆ ಕನಿಷ್ಟ 100 ವರ್ಷದ ವರೆಗೆ ಈ ಆಕಾಶಕಾಯ ಭೂಮಿಗೆ ಢಿಕ್ಕಿ ಹೊಡೆಯುವ ಸಾಧ್ಯತೆ ಸಂಪೂರ್ಣವಾಗಿ ಇಲ್ಲ’ ಎಂದಿದ್ದಾರೆ.
Refex Eveelz: ಟ್ಯಾಕ್ಸಿ ಕ್ಷೇತ್ರದಲ್ಲಿ ‘ಹೊಸ ಅಧ್ಯಾಯ’ ಬರೆಯುತ್ತಿದೆ ‘ರೆಫೆಕ್ಸ್ ಇವೀಲ್ಜ್’ ಸಂಸ್ಥೆ
4.3 ಬಿಲಿಯನ್ ವರ್ಷಗಳ ಹಿಂದೆ ನಮ್ಮ ಸೌರ ಮಂಡಲ ರಚನೆಯಾದಾಗಲೇ ಈ ಅಪೋಫಿಸ್ ಆಕಾಶಕಾಯದ ಜನನವಾಗಿದೆ. ಈ ಆಕಾಶದ ಕಾಯದ ಜನನಕ್ಕೆ ಭುಧ ಅಥವಾ ಗುರು ಗ್ರಹ ಕಾರಣವಾಗಿರಬಹುದು ಎಂಬುದು ವಿಜ್ಞಾನಿಗಳ ಅಂದಾಜು. ಅಪೋಫಿಸ್ ಆಕಾಶಕಾಯವನ್ನು ಮೊದಲಿಗೆ ಪತ್ತೆ ಹಚ್ಚಿದ್ದು 2004ರ ಜೂನ್ 19ರಂದು. ಅಂದಿನಿಂದಲೂ ನಿರಂತರವಾಗಿ ಈ ಆಕಾಶಕಾಯವನ್ನು ಅಧ್ಯಯನ ಮಾಡಲಾಗುತ್ತಿದೆ. ಸದ್ಯಕ್ಕಂತೂ ಈ ಆಕಾಶಕಾಯವನ್ನು ಭೂಮಿಗೆ ಅಪಾಯಕಾರಿ ಎಂಬ ಪಟ್ಟಿಯಿಂದ ಹೊರಗೆ ಇಡಲಾಗಿದೆ.