Virat Kohli
ಭಾರತ ಕ್ರಿಕೆಟ್ ನ ದಿಗ್ಗಜರ ಪಟ್ಟಿಯಲ್ಲಿ ಸಚಿನ್ ಗಿಂತಲೂ ಮೊದಲು ಸುನಿಲ್ ಗವಾಸ್ಕರ್ ಹೆಸರು ಬರುತಗತದೆ. ಸಚಿನ್ ದಾಖಲೆಗಳ ಸರದಾರನಾಗಿದ್ದು ಸುನಿಲ್ ಗವಾಸ್ಕರ್ ಅವರ ದಾಖಲೆಗಳನ್ನು ಮುರಿದೆ. ಈಗ ವಿರಾಟ್ ಕೊಹ್ಲಿ ದಾಖಲೆಗಳ ಸರದಾರ ಆಗುತ್ತಿದ್ದಾರೆ. ಇಗ ನಡೆಯುತ್ತಿರುವ ಐಪಿಎಲ್ ನಲ್ಲಿ ಕೊಹ್ಲಿ ಅದ್ಭುತವಾಗಿ ಆಡುತ್ತಿದ್ದಾರೆ. ಆದರೆ ಪಂದ್ಯಗಳ ನಡುವೆ ವಿರಾಟ್ ಕೊಹ್ಲಿ ಹಾಗೂ ಸುನಿಲ್ ಗವಾಸ್ಕರ್ ನಡುವಿನ ಜಗಳದ ಬಗ್ಗೆಯೂ ಕ್ರಿಕೆಟ್ ಪ್ರೇಮಿಗಳ ನಡುವೆ ಜೋರಾಗಿಯೇ ಚರ್ಚೆ ನಡೆಯುತ್ತಿದೆ. ಅಷ್ಟಕ್ಕೂ ಈ ಇಬ್ಬರು ಬ್ಯಾಟಿಂಗ್ ದಿಗ್ಗಜರ ನಡುವೆ ಜಗಳಕ್ಕೆ ಕಾರಣವೇನು?
ಆಗಿದ್ದಿಷ್ಟು, ಟಿ20 ಯಲ್ಲಿ ಕಡಿಮೆ ಸ್ಟ್ರೈಕ್ ರೇಟ್ ಅನ್ನು ವಿರಾಟ್ ಕೊಹ್ಲಿ ಹೊಂದಿರುವ ಬಗ್ಗೆ ಚರ್ಚೆ ನಡೆಯುತ್ತಿತ್ತು. ಪಂದ್ಯವೊಂದರ ಸಂದರ್ಭದಲ್ಲಿ ಪಂದ್ಯದ ವೀಕ್ಷಕ ವಿವರಣೆಗಾರರು ಸಹ ಈ ಬಗ್ಗೆ ಮಾತನಾಡಿದ್ದರು. ಆದರೆ ಗುಜರಾತ್ ವಿರುದ್ದ ಪಂದ್ಯದಲ್ಲಿ 44 ಬಾಲುಗಳಿಗೆ 70 ರನ್ ಹೊಡೆದ ವಿರಾಟ್ ಕೊಹ್ಲಿ ಅಂದು ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆವ ವೇಳೆ ತಮ್ಮ ಸ್ಟ್ರೈಕ್ ರೇಟ್ ಬಗ್ಗೆ ಮಾತನಾಡಿದ ವೀಕ್ಷಕ ವಿವರಣೆಗಾರರ ಬಗ್ಗೆ ಲಘುವಾಗಿ ಮಾತನಾಡಿದರು. ಬಾಕ್ಸ್ ನಲ್ಲಿ ಕೂತು ತೋಚಿದಂತೆ ಮಾತನಾಡುವುದು ಸಾಧನೆಯಲ್ಲ ಫೀಲ್ಡ್ ನಲ್ಲಿ ಏನಾಗುತ್ತಿದೆ ಎಂಬುದು ನಮಗೆ ಗೊತ್ತಿರುತ್ತದೆ ಎಂದಿದ್ದರು.
ಕೊಹ್ಲಿ, ಕಮೆಂಟೇಟರ್ ಗಳ ಬಗ್ಗೆ ಆಡಿದ ಮಾತಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸುನಿಲ್ ಗವಾಸ್ಕರ್, ಬೇರೊಂದು ಪಂದ್ಯದ ವೀಕ್ಷಕ ವಿವರಣೆ ನೀಡುವ ವೇಳೆ ಖಾರವಾಗಿಯೇ ಮಾತನಾಡುತ್ತಾ, ‘ಕಮೆಂಟೇಟರ್ ಗಳು ತಾವು ಏನು ನೋಡುತ್ತಾರೆಯೋ ಅದನ್ನೇ ಹೇಳುತ್ತಾರೆ. ನೀವು ಓಪನಿಂಗ್ ಬಂದು 118 ಸ್ಟ್ರೈಕ್ ರೇಟ್ ನಲ್ಲಿ ರನ್ ಹೊಡೆದು, 14 ಅಥವಾ 15 ನೇ ಓವರ್ ನಲ್ಲಿ ಔಟ್ ಆಗಿ, ನಿಮ್ಮ ಆ ‘ಸಾಧನೆ’ಗೆ ಎಲ್ಲರೂ ಚೆಪ್ಪಾಳೆ ಹೊಡೆಯಬೇಕು ಎಂದುಕೊಂಡರೆ ನಾವೇನೂ ಮಾಡಲಾಗದು. ಹೊರಗಿನ ಟೀಕೆಗಳಿಗೆ ಕಿವಿ ಕೊಡುವುದಿಲ್ಲ ಎಂದು ನೀವೇ ಹೇಳುತ್ತೀರಿ. ಈಗೇಕೆ ಹೊರಗಡೆಯ ಟೀಕೆಗಳಿಗೆ ಉತ್ತರಿಸುತ್ತೀರಿ’ ಎಂದು ಕಟುವಾಗಿಯೇ ಗವಾಸ್ಕರ್ ಟೀಕಿಸಿದ್ದಾರೆ.
Beers: ಭಾರತದಲ್ಲಿ ಮಾರಾಟವಾಗುತ್ತಿರುವ ಈ ಬಿಯರ್ ಗಳ ಬಗ್ಗೆ ನಿಮಗೆ ಗೊತ್ತೆ?
ಮುಂದುವರೆದು ಸ್ಟಾರ್ ಸ್ಪೋರ್ಟ್ಸ್ ಚಾನೆಲ್ ನವರನ್ನು ತರಾಟೆಗೆ ತೆಗೆದುಕೊಂಡ ಸುನಿಲ್, ‘ಆ ವ್ಯಕ್ತಿ (ಕೊಹ್ಲಿ) ವಿಮರ್ಶಕರನ್ನು ಟೀಕೆ ಮಾಡುವಾಗ, ಆತ ಟೀಕಿಸುತ್ತಿರುವುದು ನಮ್ಮ ವೀಕ್ಷಕ ವಿವರಣೆಗಾರರನ್ನು ಎಂದು ಅರಿವಾಗಲಿಲ್ಲವೆ? ನಿಮ್ಮ ವಿವರಣೆಗಾರರನ್ನು ಆ ವ್ಯಕ್ತಿ ನಿಂದಿಸುತ್ತಿದ್ದರೆ ನೀವು ಅದನ್ನೇ ತೋರಿಸುತ್ತಿದ್ದೀರೆಂದರೆ ಅದು ಒಳ್ಳೆಯ ವಿಷಯವಲ್ಲ. ಆ ದೃಶ್ಯವನ್ನು ಮತ್ತೊಮ್ಮೆ ತೋರಿಸಿದರೆ ನನಗಂತೂ ಬಹಳ ಬೇಸರವಾಗಲಿದೆ’ ಎಂದು ಲೈವ್ ನಲ್ಲಿಯೇ ತರಾಟೆಗೆ ತೆಗೆದುಕೊಂಡಿದ್ದಾರೆ ಸುನಿಲ್ ಗವಾಸ್ಕರ್.
ಸುನಿಲ್ ಗವಾಸ್ಕರ್ ಸಹ ಈ ಐಪಿಎಲ್ ನಲ್ಲಿ ವೀಕ್ಷಕ ವಿವರಣೆಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಂದಹಾಗೆ ವಿರಾಟ್ ಕೊಹ್ಲಿ ವೀಕ್ಷಕ ವಿವರಣೆಗಾರರನ್ನು ಟೀಕಿಸಿರುವುದು ಇದು ಮೊದಲೇನು ಅಲ್ಲ. ಕೊಹ್ಲಿಯ ಬಗ್ಗೆ ವೈಯಕ್ತಿಕ ಅಭಿಪ್ರಾಯ ಹಂಚಿಕೊಂಡಿದ್ದ ಹರ್ಷ ಬೋಗ್ಲೆ ವಿರುದ್ಧವೂ ಕೊಹ್ಲಿ ಮಾತನಾಡಿದ್ದರು. ಆಗಲೂ ಸಹ ನಿಜ ಕ್ರಿಕೆಟ್ ಅಭಿಮಾನಿಗಳಿಂದ ಕೊಹ್ಲಿ ಟೀಕೆಗೆ ಗುರಿಯಾಗಿದ್ದರು.