Site icon Samastha News

Rachita Ram: ರಚಿತಾ ರಾಮ್ ಮೊದಲ ಸಂಭಾವನೆ ಎಷ್ಟು? ಈಗ ಒಂದು ಸಿನಿಮಾಕ್ಕೆ ಪಡೆವ ಹಣ ಎಷ್ಟು?

Rachita Ram

Rachita Ram

ರಚಿತಾ ರಾಮ್ ಕನ್ನಡ ಚಿತ್ರರಂಗದ ಬಲು ಜನಪ್ರಿಯ ನಟಿ. ಡಿಂಪಲ್ ಕ್ವೀನ್ ಎಂದೇ ಕರೆಸಿಕೊಳ್ಳುವ ರಚಿತಾ ರಾಮ್ ಕಳೆದ 11 ವರ್ಷದಿಂದ ಕನ್ನಡ ಚಿತ್ರರಂಗದಲ್ಲಿ ಇದ್ದಾರೆ. ದರ್ಶನ್ ನಟನೆಯ ‘ಬುಲ್ ಬುಲ್’ ಸಿನಿಮಾ ಮೂಲಕ ನಾಯಕಿ ಆದ ರಚಿತಾ ರಾಮ್, ಅದಕ್ಕೆ ಮುಂಚೆ ಟಿವಿ ಧಾರವಾಹಿಗಳಲ್ಲಿ ನಟಿಸುತ್ತಿದ್ದರು. ಆಗೆಲ್ಲ ಅವರಿಗೆ ಬಹಳ ಕಡಿಮೆ ಸಂಭಾವನೆ ಇತ್ತು. ಅಷ್ಟಕ್ಕೂ ರಚಿತಾ ರಾಮ್ ಪಡೆದ ಮೊದಲ ಸಂಭಾವನೆ ಎಷ್ಟು? ಈಗ ಅವರು ಒಂದು ಸಿನಿಮಾಕ್ಕೆ ಎಷ್ಟು ಹಣ ಸಂಭಾವನೆಯಾಗಿ ಪಡೆಯುತ್ತಾರೆ? ಇಲ್ಲಿದೆ ಮಾಹಿತಿ‌

ರಚಿತಾ ರಾಮ್ ಅವರೇ ಹೇಳಿಕೊಂಡಿರುವಂತೆ ಅವರು ಮೊದಲಿಗೆ ಧಾರವಾಹಿಗಳಲ್ಲಿ ನಟಿಸುವಾಗ ಅವರ ದಿನದ ಸಂಬಳ ಇದ್ದಿದ್ದು ಕೇವಲ 750 ರೂಪಾಯಿಗಳಂತೆ. ರಚಿತಾ ನಟಿಸಿದ ಮೊದಲ ಧಾರಾವಾಹಿಯಲ್ಲಿ ಅವರು ಮುಖ್ಯ ಪಾತ್ರದಲ್ಲೇನೂ ಇರಲಿಲ್ಲ. ಹಾಗಾಗಿ ಆಗೆಲ್ಲ ದಿನಕ್ಕೆ ಕೇವಲ 750 ರೂಪಾಯಿ ಹಣವನ್ನು ಸಂಭಾವನೆಯಾಗಿ‌ಕೊಡಲಾಗುತ್ತಿತ್ತು. 2012 ರಲ್ಲಿ ರಚಿತಾ ರಾಮ್ ‘ಬುಲ್ ಬುಲ್’ ಸಿನಿಮಾಕ್ಕೆ ಆಡಿಷನ್ ಕೊಟ್ಟರು. ಅವರೊಟ್ಟಿಗೆ 200 ಇತರೆ ಯುವತಿಯರು ಆಡಿಷನ್ ಕೊಟ್ಟಿದ್ದರು ಆದರೆ ಆಯ್ಕೆ ಆಗಿದ್ದು ರಚಿತಾ ರಾಮ್. ‘ಬುಲ್ ಬುಲ್’ ಸಿನಿಮಾ ಬಿಡುಗಡೆ ಆದ ಬಳಿಕ ರಚಿತಾ ರಾಮ್ ಅದೃಷ್ಟವೇ ಬದಲಾಯ್ತು.

1 1 ವರ್ಷಗಳ ಬಳಿಕ ಈಗಲೂ ರಚಿತಾ ರಾಮ್ ಕನ್ನಡದ ನಂಬರ್ 1 ನಟಿ. ಈಗಲೂ ಅವರ ಕೈಯಲ್ಲಿ ಆರು ಸಿನಿಮಾಗಳಿವೆ. ಇನ್ನೆರಡು ಸಿನಿಮಾಗಳಿಗೆ ಮಾತುಕತೆ ನಡೆಯುತ್ತಿದೆ. ಈಗ ರಚಿತಾ ರಾಮ್ ಪ್ರತಿ ಸಿನಿಮಾಕ್ಕೆ 1 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಅತಿ ಹೆಚ್ಚು ಸಂಭಾವನೆ ಪಡೆವ ಕನ್ನಡದ ನಾಯಕಿಯರಲ್ಲಿ ರಚಿತಾ ರಾಮ್ ಸಹ ಒಬ್ಬರು. 750 ರೂಪಾಯಿಯಿಂದ 1 ಕೋಟಿಗೆ ಬಲಯ ರಚಿತಾ ರಾಮ್ ಬಹಳ ಶ್ರಮಪಟ್ಟಿದ್ದಾರೆ.

ಸಿನಿಮಾಗಳ ಜೊತೆಗೆ ರಚಿತಾ ರಾಮ್ ರಿಯಾಲಿಟಿ ಶೋ ಜಡ್ಜ್ ಆಗಿಯೂ ಕೆಲಸ ಮಾಡುತ್ತಾರೆ. ರಿಯಾಲಿಟಿ ಶೋದವರು ಭಾರಿ ದೊಡ್ಡ ಸಂಭಾವನೆಯನ್ನು ನಟ-ನಟಿಯರಿಗೆ ನೀಡುತ್ತಾರೆ. ಕೆಲ ವರದಿಗಳ ಪ್ರಕಾರ ರಚಿತಾ ರಾಮ್ ಗೆ ರಿಯಾಲಿಟಿ ಶೋನ ಒಂದು ಸೀಸನ್’ಗೆ ಸುಮಾರು 5 ಕೋಟಿ ರೂಪಾಯಿ ನೀಡಲಾಗುತ್ತದೆ. ಒಟ್ಟಾರೆ ವರ್ಷಕ್ಕೆ ಸುಮಾರು 12 ರಿಂದ 13 ಕೋಟಿ ಹಣವನ್ನು ರಚಿತಾ ಸಂಪಾದನೆ ಮಾಡುತ್ತಿದ್ದಾರೆ ಎಂದು ಅಂದಾಜಿಸಬಹುದು.

Rachita Ram: ಒಲ್ಲದ ಮಾತು ಬೇಡ, ವಯಸ್ಸಿಗಷ್ಟೆ ಮರ್ಯಾದೆ: ಲಾಯರ್ ಜಗದೀಶ್ ಗೆ, ರಚಿತಾ ರಾಮ್ ವಾರ್ನಿಂಗ್

ರಚಿತಾ ರಾಮ್ ನಟನೆಯ ‘ಸಂಜು ವೆಡ್ಸ್ ಗೀತಾ 2′ ಶೀಘ್ರವೇ ಬಿಡುಗಡೆ ಆಗಲಿದೆ. “ಶಬರಿ ಸರ್ಚಿಂಗ್ ಫಾರ್ ರಾವಣ’, ‘ಲವ್ ಮೀ ಆರ್ ಹೇಟ್ ಮೀ’, ‘ಅಯೋಗ್ಯ 2’, ‘ಕಲ್ಟ್’, ‘ರಾಚಯ್ಯ’ ಸಿನಿಮಾಗಳ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇದರ ಹೊರತಾಗಿ ಇನ್ನೂ ಎರಡು-ಮೂರು ಹೊಸ ಪ್ರಾಜೆಕ್ಟ್ ಗಳಯ ಶುರುವಾಗುವ ಹಂತದಲ್ಲಿವೆ.

Exit mobile version