Two Wheeler
ಅಮೆರಿಕ, ಜರ್ಮನಿ ಇನ್ನಿತರೆ ಕೆಲವು ಪಾಶ್ಚಾತ್ಯ ದೇಶಗಳಲ್ಲಿ ಬೈಕುಗಳಿಗಿಂತಲೂ ಕಾರುಗಳ ಸಂಖ್ಯೆ ಹೆಚ್ಚಿಗಿದೆ. ಆದರೆ ಭಾರತದಲ್ಲಿ ಇದು ಉಲ್ಟಾ. ಭಾರತದಲ್ಲಿ ಕಾರಿನ ಸಂಖ್ಯೆಗಿಂತಲೂ ಐದಾರು ಪಟ್ಟು ಬೈಕುಗಳ ಸಂಖ್ಯೆ ಹೆಚ್ಚಾಗಿದೆ. ದೇಶದ ಯುವಕರು ಕಾರಿಗಿಂತಲೂ ಬೈಕ್ ತೆಗೆದುಕೊಳ್ಳಬೇಕೆಂದು ಆಸೆ ಪಡುವುದು ಹೆಚ್ಚು. ಅಷ್ಟಕ್ಕೂ ಈ ವರ್ಷ ಮೊದಲ ಆರು ತಿಂಗಳಲ್ಲಿ ಯಾವ ಬೈಕು ಹೆಚ್ಚು ಮಾರಾಟವಾಗಿದೆ? ನಿಮ್ಮ ಡ್ರೀಮ್ ಬೈಕ್ ಈ ಪಟ್ಟಿಯಲ್ಲಿಲ್ಲ ಬಿಡಿ!
10) ಟಿವಿಎಸ್ ಅಪಾಚೆ
ಆಶ್ಚರ್ಯವಾಗಬಹುದು, ಟಿವಿಎಸ್ ಅಪಾಚೆ ಅತಿ ಹೆಚ್ಚು ಮಾರಾಟವಾದ ವಾಹನಗಳಲ್ಲಿ ಹತ್ತನೇ ಸ್ಥಾನದಲ್ಲಿದೆಯೇ ಎಂದು. ಹೌದು, ಭಾರತಲ್ಲಿ ಕಡಿಮೆ ಸಿಸಿಗಳ ಬೈಕುಗಳ ಮಾರುಕಟ್ಟೆ ಹೆಚ್ಚಿದೆ ಹಾಗಾಗಿ 160, 180 ಸಿಸಿಯ ಟಿವಿಎಸ್ ಅಪಾಚೆ ಹತ್ತನೇ ಸ್ಥಾನದಲ್ಲಿದೆ.
9) ಬಜಾಜ್ ಪ್ಲಾಟಿನಾ
ಬಜಾಜ್ ಸಂಸ್ಥೆಯು ಬಡ, ಮಧ್ಯಮ ಮತ್ತು ಮೇಲ್ಮಧ್ಯಮ ಮೂರು ವರ್ಗಗಳಿಗೂ ಬೈಕ್ಗಳನ್ನು ತಯಾರಿಸುತ್ತದೆ. ಸ್ಕೂಟರ್ನಿಂದ ಭಾರತದ ಬೈಕ್ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ್ದ ಬಜಾಜ್ ಆ ನಂತರ ಪಲ್ಸರ್ನಿಂದಲೂ ಕ್ರಾಂತಿ ಎಬ್ಬಿಸಿತ್ತು. ಈ ಸಂಸ್ಥೆಯ ಲೋ ಸಿಸಿ ಬೈಕ್ ಬಜಾಜ್ ಪ್ಲಾಟಿನಾ ಒಂಬತ್ತನೇ ಸ್ಥಾನದಲ್ಲಿದೆ.
8) ಟಿವಿಎಸ್ ರೈಡರ್
ಟಿವಿಎಸ್ ಸಂಸ್ಥೆ ಸಹ ಬಜಾಜ್ ರೀತಿಯಲ್ಲಿಯೇ ಬಡ, ಮಧ್ಯಮ ಮತ್ತು ಮೇಲ್ಮಧ್ಯಮ ವರ್ಗಕ್ಕೆ ಬೈಕ್ ತಯಾರು ಮಾಡುತ್ತಿದೆ. ಟಿವಿಎಸ್ ರೈಡರ್ ಮಧ್ಯಮ ಸಿಸಿಯ ಉತ್ತಮ ಗುಣಮಟ್ಟದ ಬೈಕ್. ಹಾಗಾಗಿ ಇದು ಎಂಟನೇ ಸ್ಥಾನದಲ್ಲಿರುವುದು ಆಶ್ಚರ್ಯವಲ್ಲ.
7) ಸುಜುಕಿ ಆಕ್ಸಸ್
ಸುಜುಕಿ ಆಕ್ಸಸ್ ಪರಿಪೂರ್ಣ ಬೈಕ್ ಅಲ್ಲ. ಆದರೆ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ದ್ವಿಚಕ್ರ ವಾಹನಗಳ ಪಟ್ಟಿಯನ್ನು ತೆಗೆದಾಗ ಸುಜುಕಿ ಆಕ್ಸಸ್ ಏಳನೇ ಸ್ಥಾನದಲ್ಲಿ ಬರುತ್ತದೆ. ವೃತ್ತಿಪರ ಹೆಣ್ಣುಮಕ್ಕಳ ಮೆಚ್ಚಿನ ಆಯ್ಕೆ ಇದು.
6) ಟಿವಿಎಸ್ ಜುಪಿಟರ್
ಸುಜುಕಿ ಆಕ್ಸಸ್ ರೀತಿಯಲ್ಲಿಯೇ ಟಿವಿಎಸ್ ಜುಪಿಟರ್ ಸಹ ಪೂರ್ಣ ಪ್ರಮಾಣದ ಬೈಕ್ ಅಲ್ಲ ಆದರೆ ಇದೂ ಸಹ ಭಾರತದಲ್ಲಿ ಹೆಚ್ಚು ಮಾರಾಟವಾಗುವ ದ್ವಿಚಕ್ರ ವಾಹನಗಳಲ್ಲಿ ಒಂದಾಗಿದೆ.
ಹೊಸ ಅವತಾರ ತಳೆದ ಮಾರುತಿ ಆಲ್ಟೋ, ಗ್ರಾಹಕರ ಹುಬ್ಬೇರುವುದು ಗ್ಯಾರೆಂಟಿ
5) ಬಜಾಜ್ ಪಲ್ಸರ್ 125
ಮೇಲೆ ಹೇಳಿರುವಂತೆ ಬಜಾಜ್ ಸಂಸ್ಥೆ ಈ ದೇಶದ ದ್ವಿಚಕ್ರ ವಾಹನದಲ್ಲಿ ಕ್ರಾಂತಿ ಮಾಡಿದ ಸಂಸ್ಥೆ. ಪಲ್ಸರ್ ಬೈಕ್ ಸಹ ಭಾರತದಲ್ಲಿ ದೊಡ್ಡ ಕ್ರಾಂತಿ ಉಂಟು ಮಾಡಿತ್ತು. ಇದನ್ನೇ 125 ಸಿಸಿ ಆಗಿಯೂ ಬಜಾಜ್ ಬಿಡುಗಡೆ ಮಾಡಿತ್ತು. ಇದು ಐದನೇ ಸ್ಥಾನದಲ್ಲಿದೆ.
4) ಹೋಂಡಾ ಶೈನ್
ನೆನಪಿರಬಹುದು ಹೀರೋ ಮತ್ತು ಹೋಂಡಾ ಸಂಸ್ಥೆಗಳು ಬೇರಾಗಿದ್ದವು. ಬೇರಾದ ಬಳಿಕ ಶೈನ್ ಬ್ರ್ಯಾಂಡ್ ಹೋಂಡಾ ಬಳಿ ಉಳಿಯಿತು. 125 ಸಿಸಿಯ ಈ ಬೈಕ್ ಭಾರತದಲ್ಲಿ ನಾಲ್ಕನೇ ಸ್ಥಾನದಲ್ಲಿದೆ.
3) ಹೀರೋ ಫ್ಯಾಷನ್
ಹೀರೋ ಸಂಸ್ಥೆಯ ಫ್ಯಾಷನ್ ಹಾಗೂ ಎಚ್ಎಫ್ ಡಿಲಕ್ಸ್ ಸಹ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ಎರಡು ಬೈಕ್ಗಳಾಗಿವೆ. ಇವುಗಳು ಸಹ ಮಧ್ಯಮ ಹಾಗೂ ಬಡ ಮಧ್ಯಮ ವರ್ಗದ ಬೈಕುಗಳಾಗಿವೆ.
2) ಹೋಂಡಾ ಆಕ್ಟಿವಾ
ಆಕ್ಟಿವಾ ಸಹ ಬೈಕ್ ಅಲ್ಲ ಆದರೆ ಭಾರತದ ಅತ್ಯಂತ ಅಚ್ಚು-ಮೆಚ್ಚಿನ ದ್ವಿಚಕ್ರ ವಾಹನ. ಕಡಿಮೆ ಮೈಲೇಜ್, ಬೆಲೆಯೂ ಕಡಿಮೆ ಏನೂ ಇಲ್ಲದೇ ಇದ್ದರೂ ಸಹ ಹೋಂಡಾ ಆಕ್ಟಿವಾ ಭಾರಿ ಸಂಖ್ಯೆಯಲ್ಲಿ ಮಾರಾಟವಾಗುತ್ತದೆ.
1) ಹೀರೋ ಸ್ಪ್ಲೆಂಡರ್
ಹೀರೋ ಮತ್ತು ಹೋಂಡಾ ಒಟ್ಟಾಗಿದ್ದಾಗಿನಿಂದಲೂ ಸ್ಪೆಂಡರ್ ಬೈಕ್ಗಳು ಭಾರತದ ಮಾರುಕಟ್ಟೆಯಲ್ಲಿ ಮ್ಯಾಜಿಕ್ ಮಾಡಿದ್ದವು. ಈಗ ಹೀರೋ ಸಂಸ್ಥೆ ಮಾತ್ರವೇ ಸ್ಪ್ಲೆಂಡರ್ ಬೈಕ್ ಮಾರಾಟ ಮಾಡುತ್ತಿದ್ದು, ದಶಕಗಳೇ ಕಳೆದರೂ ಸಹ ಭಾರತೀಯ ಗ್ರಾಹಕನಿಗೆ ಸ್ಪ್ಲೆಂಡರ್ ಬೈಕ್ ಮೇಲಿನ ಪ್ರೀತಿ ಕಡಿಮೆ ಆಗಿಲ್ಲ.