Site icon Samastha News

English Speaking in India: ಭಾರತದ ಯಾವ ರಾಜ್ಯದವರು ಇಂಗ್ಲೀಷ್ ಚೆನ್ನಾಗಿ ಮಾತನಾಡಬಲ್ಲರು, ಕರ್ನಾಟಕಕ್ಕೆ ಎಷ್ಟನೇ ಸ್ಥಾನ

English Speaking in India

English Speaking in India

ಭಾರತಕ್ಕೆ ರಾಷ್ಟ್ರೀಯ ಭಾಷೆ ಎಂಬುದಿಲ್ಲ. ಭಾರತದಲ್ಲಿ 780 ಕ್ಕೂ ಹೆಚ್ಚು ಭಾಷೆಗಳಿವೆ. ಅತಿ ಹೆಚ್ಚು ಭಾಷೆಗಳನ್ನು ಹೊಂದಿರುವ ವಿಶ್ವದ ಎರಡನೇ ದೇಶ ಭಾರತ. ಮೊದಲ ಸ್ಥಾನ ಪಾಪ ನ್ಯೂ ಗಿನಿಯದ್ದು. ಭಾರತದಲ್ಲಿ ಕೆಲವೇ ಕಿ.ಮೀಟರ್​ಗಳಿಗೆ ಭಾಷೆ ಬದಲಾಗುತ್ತದೆ. ಭಾರತದ ವಿಂಗಡನೆಯೇ ಭಾಷಾವಾರು ಆಧಾರದಲ್ಲಾಗಿದೆ. ಪ್ರತಿ ರಾಜ್ಯವೂ ಅದರದ್ದೇ ಆದ ಭಾಷೆಯನ್ನು ಹೊಂದಿದೆ. ಆದರೆ ಪರಸ್ಪರ ಬೇರೆ ಬೇರೆ ರಾಜ್ಯಗಳವರು ಸಂವಹನ ಮಾಡಲು ಹಿಂದಿ ಅಥವಾ ಇಂಗ್ಲೀಷ್​ ಅನ್ನು ಸಾಮಾನ್ಯವಾಗಿ ಬಳಸುತ್ತಾರೆ. ಇತ್ತೀಚೆಗಂತೂ ಹಿಂದಿಗಿಂತಲೂ ಇಂಗ್ಲೀಷ್ ಬಳಕೆಯೇ ಹೆಚ್ಚಾಗಿದೆ. ಆದರೆ ಭಾರತದ ಯಾವ ರಾಜ್ಯದವರು, ಅಥವಾ ಯಾವ ಭಾಷೆಯನ್ನು ಮಾತೃಭಾಷೆಯನ್ನಾಗಿ ಮಾತನಾಡುವ ಜನ ಚೆನ್ನಾಗಿ ಇಂಗ್ಲೀಷ್ ಮಾತನಾಡಬಲ್ಲರು? ಇಲ್ಲಿದೆ ವರದಿ.

ಅತಿ ಹೆಚ್ಚು ಜನ ಮಾತನಾಡುವ ಹತ್ತು ಭಾಷೆಗಳನ್ನು ಆಯ್ದುಕೊಂಡು ಆ ಹತ್ತು ಭಾಷೆಯನ್ನು ಮಾತೃಭಾಷೆಯನ್ನಾಗಿ ಮಾತನಾಡುವ ಮಂದಿಯಲ್ಲಿ ಇಂಗ್ಲೀಷ್​ ಅನ್ನು ಯಾರು ಚೆನ್ನಾಗಿ ಹಾಗೂ ಹೆಚ್ಚು ಮಾತನಾಡುತ್ತಾರೆ ಎಂಬ ಸಮೀಕ್ಷೆಯನ್ನು ಮಾಡಲಾಗಿದೆ. ಸಮೀಕ್ಷೆಯಲ್ಲಿ ಕರ್ನಾಟಕ ರಾಜ್ಯ ಅಥವಾ ಕನ್ನಡ ಮಾತನಾಡುವವರು ಸಹ ಸ್ಥಾನ ಪಡೆದುಕೊಂಡಿದ್ದಾರೆ.

ಸಮೀಕ್ಷೆಯ ಪ್ರಕಾರ, ಪಂಜಾಬ್ ಮಾತನಾಡುವ ಅಥವಾ ಪಂಜಾಬಿನ ಜನ ಇಂಗ್ಲೀಷ್​ ತುಸು ವೀಕ್. ಪಂಜಾಬ್​ ಅನ್ನು ಮಾತೃಭಾಷೆಯನ್ನಾಗಿ ಮಾತನಾಡುವ ಜನ ಇಂಗ್ಲೀಷ್​ ಮಾತನಾಡಲು ಕಷ್ಟಪಡುತ್ತಾರೆ. ಇಂಗ್ಲೀಷ್​ ಅನ್ನು ಅವರು ಸುಲಭವಾಗಿ ಮಾತನಾಡಲಾರರು. ಪಂಜಾಬ್​ನ 63% ಜನ ಮಾತ್ರವೇ ಇಂಗ್ಲೀಷ್ ಮಾತನಾಡಬಲ್ಲರು. ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದ್ದಾರೆ ಪಂಜಾಬಿಗಳು.

ಭಾರತ ತೊರೆಯುವುದಾಗಿ ಹೇಳಿದ ವಾಟ್ಸ್​ಆಪ್, ಕಾರಣವೇನು?

ಆರನೇ ಸ್ಥಾನದಲ್ಲಿರುವುದು ಗುಜರಾತಿಗಳು. ವ್ಯಾಪಾರವನ್ನೇ ಜೀವನಾಧಾರವನ್ನಾಗಿ ಮಾಡಿಕೊಂಡಿರುವ ಗುಜರಾತಿಗಳು ಶಿಕ್ಷಣಕ್ಕೆ ಅತಿಯಾದ ಆದ್ಯತೆ ಕೊಟ್ಟವರಲ್ಲ. ಹಾಗಾಗಿ ಗುಜರಾತಿಗಳಿಗೆ ಇಂಗ್ಲೀಷ್ ಭಾಷೆಯ ಮೇಲೆ ಹಿಡಿತ ಸಾಧಿಸಲಾಗಿಲ್ಲ. ಶೇಖಡ 65 % ಗುಜರಾತಿಗಳು ಇಂಗ್ಲೀಷ್ ಮಾತನಾಡುತ್ತಾರೆ. ಇನ್ನು ಐದನೇ ಸ್ಥಾನದಲ್ಲಿ ಬೆಂಗಾಲಿಗಳಿದ್ದಾರೆ. ದೇಶದ ಬುದ್ಧಿವಂತ ಜನರಲ್ಲಿ ಬೆಂಗಾಲಿಗಳು ಒಬ್ಬರೆನ್ನಲಾಗುತ್ತದೆ. ಆದರೆ ಅವರಲ್ಲಿ ಇಂಗ್ಲೀಷ್ ಸಾಕ್ಷರತೆ ಕಡಿಮೆಯೇ ಇದೆ. 68% ಬೆಂಗಾಲಿಗಳು ಮಾತ್ರವೇ ಇಂಗ್ಲೀಷ್ ಮಾತನಾಡಬಲ್ಲರು.

ಹಿಂದಿ, ಮಲಯಾಳಂ, ತೆಲುಗು ಹಾಗೂ ಉರ್ದು ಮಾತನಾಡುವ ಜನ ಒಟ್ಟಿಗೆ ನಾಲ್ಕನೇ ಸ್ಥಾನದ ಮೇಲೆ ಕಬ್ಜ ಮಾಡಿದ್ದಾರೆ. ಹಿಂದಿ, ಮಲಯಾಳಂ, ತೆಲುಗು, ಉರ್ದುವನ್ನು ಮಾತೃ ಭಾಷೆಯನ್ನಾಗಿ ಮಾತನಾಡುವ ಮಂದಿ 70% ಇಂಗ್ಲೀಷ್ ಮಾತನಾಡಬಲ್ಲರು. ಮೂರನೇ ಸ್ಥಾನದಲ್ಲಿ ನೆರೆಯ ತಮಿಳುನಾಡು ಇದೆ. 71% ಮಂದಿ ತಮಿಳರು ಇಂಗ್ಲೀಷ್ ಅನ್ನು ನಿರರ್ಗಳವಾಗಿ ಮಾತನಾಡಬಲ್ಲರು.

ಎರಡನೇ ಸ್ಥಾನದಲ್ಲಿ ಮರಾಠಿ ಮಾತನಾಡುವ ಮಹರಾಷ್ಟ್ರದ ಜನರಿದ್ದಾರೆ. 73% ಮಂದಿ ಮರಾಠಿಗರು ಇಂಗ್ಲೀಷ್ ಅನ್ನು ಮಾತನಾಡುತ್ತಾರೆ. ಇಂಗ್ಲೀಷ್ ಭಾಷೆ ಅವರಿಗೆ ಬಹಳ ಕಷ್ಟವೇನಲ್ಲ. ಇನ್ನು ಮೊದಲನೇ ಸ್ಥಾನದಲ್ಲಿರುವುದು ಕರ್ನಾಟಕದ ಜನ. ಶೇಕಡ 74 % ಕನ್ನಡಿಗರು ನಿರರ್ಗಳವಾಗಿ ಇಂಗ್ಲೀಷ್ ಮಾತನಾಡಬಲ್ಲರು. ಕನ್ನಡಿಗರ ವಿಶೇಷತೆಯೆಂದರೆ ಅವರು ಬಹು ಭಾಷಾ ಪ್ರವೀಣರು. ಕನ್ನಡ, ಹಿಂದಿ, ಇಂಗ್ಲೀಷ್, ತೆಲುಗು, ತಮಿಳು ಭಾಷೆಗಳನ್ನು ಮಾತನಾಡಬಲ್ಲರು, ಅರ್ಥ ಮಾಡಿಕೊಳ್ಳಬಲ್ಲರು. ಮರಾಠಿ, ಮಲಯಾಳಂ ಭಾಷೆಯೂ ಸಹ ಕನ್ನಡಿಗರಿಗೆ ಸುಲಭ.

Exit mobile version