Mukesh Ambani Family
ಮುಖೇಶ್ ಅಂಬಾನಿ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಮಾತ್ರವಲ್ಲ, ವಿಶ್ವದ ಅತಿ ಹೆಚ್ಚು ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರು. ಅವರ ಜೀವನ ಶೈಲಿಗೂ ಸಾಮಾನ್ಯರ ಜೀವನ ಶೈಲಿಗೂ ಆಕಾಶ ಭೂಮಿಯ ಅಂತರವಿದೆ. ಮುಖೇಶ್ ಅಂಬಾನಿ ಹಾಗೂ ಅವರ ಕುಟುಂಬದವರು ಧರಿಸುವ ಬಟ್ಟೆ, ಬಳಸುವ ವಾಹನ ಕೊನೆಗೆ ತಿನ್ನುವ ತಿಂಡಿ ಸಹ ಲಕ್ಷಾಂತರ ರೂಪಾಯಿ ಬೆಲೆಯದ್ದು. ಅಂದಹಾಗೆ ಮುಖೇಶ್ ಅಂಬಾನಿ ಮನೆಯವರು ಕುಡಿಯುವ ಹಾಲು ಯಾವುದು? ಮತ್ತು ಹಾಲಿನ ಪ್ರತಿ ಲಿಒಟರ್ ಬೆಲೆ ಎಷ್ಟು ಗೊತ್ತೆ?
ಅಂಬಾನಿ ಕುಟುಂಬದವರು ಕುಡಿಯುವುದು ಹಸುವಿನ ಹಾಲೆ ಆದರೂ ಆ ಹಸು ಸಾಮಾನ್ಯ ಹಸು ಅಲ್ಲ ಬದಲಿಗೆ ವಿಶೇಷವಾಗಿ ಬ್ರೀಡ್ ಮಾಡಲಾದ ಹಸು. ಹೋಲಿಸ್ಟಾನ್- ಫ್ರಿಸಿಯನ್ ಬ್ರೀಡ್ ಹಸುವಿನ ಹಾಲನ್ನಷ್ಟೆ ಅಂಬಾನಿ ಕುಟುಂಬದವರು ಸೇವಿಸುತ್ತಾರೆ. ಈ ಮಾದರಿಯ ಹಸುಗಳನ್ನು ಪುಣೆಯ ಭಾಗ್ಯಲಕ್ಷ್ಮಿ ಡೈರಿ ಪುಣೆಯಲ್ಲಿ ಸಾಕಲಾಗಿದೆ. 35 ಎಕರೆ ವಿಸಲಸ್ತೀರ್ಣ ಹೊಂದಿರುವ ಈ ಡೈರಿಯಲ್ಲಿ ಇದೇ ಬ್ರೀಡ್ ನ ಸುಮಾರು 3000 ಹಸುಗಳಿವೆ.
https://samasthanews.com/smart-traffic-managment-system-in-bengaluru-mysuru-highway/
ಈ ವಿಶೇಷ ಬ್ರೀಡ್ ನ ಹಸುಗಳ ಒಂದು ಲೀಟರ್ ಹಾಲಿಗೆ ವೆಲೆ ಸುಮಾರು 1600 ರಿಂದ 2000 ರೂಪಾಯಿಗಳು. ಈ ಬ್ರೀಡ್ ನ ಹಸುಗಳನ್ನು ವಿಶೇಷವಾಗಿ ನೆದರ್ ಲ್ಯಾಂಡ್ಸ್ ನಿಂದ ತರಿಸಲಾಗುತ್ತದೆ. ಕಪ್ಪು ಬಿಳುಪು ಅಥವಾ ಬಿಳುಪು-ಕಂದು ಬಣ್ಣದ ಈ ಹಸುಗಳಿಗೆ ಪುಣೆಯ ಫಾರಂನಲ್ಲಿ ರಾಜಾತಿಥ್ಯ ನೀಡಲಾಗುತ್ತಿದೆ.
ಈ ಹಸುಗಳಿಗೆ ಎಸಿ ವ್ಯವಸ್ಥೆ ಮಾಡಲಾಗಿದೆ. ಮಲಗಲು ರಬ್ಬರ ಟರ್ಫ್ ಹಾಸಲಾಗಿದೆ. ಕುಡಿಯಲು ಆರ್ ಓ ನೀರನ್ನೇ ನೀಡಲಾಗುತ್ತದೆ. ಪೌಷ್ಟಿಕ ಆಹಾರವನ್ನು ಹಸುಗಳಿಗೆ ಕೊಡಲಾಗುತ್ತದೆ. ಈ ಹಸುಗಳು ದಿನಕ್ಕೆ 25 ರಿಂದ 30 ಲೀಟರ್ ಹಾಲು ನೀಡುತ್ತವೆ.