Radhakishan Damani
ಭಾರತದ ಟಾಪ್ ಉದ್ಯಮಿ ಎಂದರೆ ನೆನಪಿಗೆ ಬರುವುದು ಮೂರೇ ಹೆಸರು. ಟಾಟಾ, ಅಂಬಾನಿ ಮತ್ತು ಅದಾನಿ. ಆದರೆ ಏನೂ ಇಲ್ಲದೆ ಸೊನ್ನೆಯಿಂದ ಹೊಸ ಸಂಸ್ಥೆಯೊಂದನ್ನು ಕಟ್ಟಿ ಅದನ್ನು ಸಾವಿರಾರು ಕೋಟಿಯ ಉದ್ಯಮವನ್ನಾಗಿ ಮಾಡಿದ ಹಲವರು ಭಾರತದಲ್ಲಿದ್ದಾರೆ. ಇವರನ್ನು ಆಂಟ್ರೊಪ್ರಿನ್ಯೋರ್ಸ್ ಅಥವಾ ನವೋದ್ಯಮಿಗಳು ಎನ್ನಲಾಗುತ್ತದೆ. ಇದೀಗ ಹೂರೆ ಸಂಸ್ಥೆ ಹೊರತಂದಿರುವ ಭಾರತದ ಟಾಪ್ ನವೋದ್ಯಮಿಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಗಳಿಸಿರುವುದು ರಾಧಾಕಿಶನ್ ಧಮಾನಿ.
ತುಂಬಾ ಜನರಿಗೆ ರಾಧಾಕಿಶನ್ ಧಮಾನಿ ಯಾರೆಂದು ಗೊತ್ತಿರುವುದಿಲ್ಲ. ಆದರೆ ಅವರ ಕಂಪೆನಿಯ ಹೆಸರು ಕೇಳದೇ ಇರುವವರ ಸಂಖ್ಯೆ ಬಹಳ ಕಡಿಮೆ. ಇಂದು ಭಾರತದ ನಂಬರ್ 1 ರೀಟೇಲ್ ವ್ಯಾಪಾರ ಮಳಿಗೆ ಆಗಿರುವ ಡಿ-ಮಾರ್ಟ್ ನ ಮಾಲೀಕ ಇವರು. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಮೂಲಕ ವೃತ್ತಿ ಆರಂಭಿಸಿದ ರಾಧಾಕಿಶನ್ ಧಮಾನಿ ಇಂದು ಭಾರತದ ಅತ್ಯುತ್ತಮ ಉದ್ಯಮಿಗಳಲ್ಲಿ ಒಬ್ಬರು.
ಹುರೆನ್ ಬಿಡುಗಡೆ ಮಾಡಿರುವ ಭಾರತದ ಟಾಪ್ ನವೋದ್ಯಮಿಗಳಲ್ಲಿ ರಾಧಾಕಿಶನ್ ಧಮಾನಿ ಮೊದಲ ಸ್ಥಾನದಲ್ಲಿದ್ದಾರೆ. ಕಳೆದ ವರ್ಷವೂ ಇವರೇ ಮೊದಲ ಸ್ಥಾನದಲ್ಲಿದ್ದರು. ಇವರ ಆಸ್ತಿ ಮೌಲ್ಯ 3.4 ಲಕ್ಷ ಕೋಟಿ ರೂಪಾಯಿಗಳು. ಇವರ ಆದಾಯ ಪ್ರತಿ ವರ್ಷ 44% ಏರಿಕೆ ಆಗುತ್ತಲೇ ಇದೆಯಂತೆ. ಮುಂಬೈನ ಬಡ ಕುಟುಂಬದ ರಾಧಾಕಿಶನ್ ಧಮಾನಿ ಇಂದು ಭಾರತದ ಟಾಪ್ ಉದ್ಯಮಿಯಾಗಿ ಬೆಳೆದ ಕತೆ ಬಲು ರೋಚಕ.
ಪದವಿ ಸಹ ಪೂರೈಸದ ರಾಧಾಕಿಶನ್ ಧಮಾನಿ 90 ರ ದಶಕದಲ್ಲಿ ಮುಂಬೈನ ಷೇರು ಪೇಟೆಗೆ ಎಂಟ್ರಿ ಕೊಟ್ಟರು. ಹರ್ಷದ್ ಮೆಹ್ತಾ ಸ್ಕ್ಯಾಮ್ ನಡೆದಾಗ ಹರ್ಷದ್ ಮೆಹ್ತಾ ವಿರುದ್ಧ ನಿಂತು ಆತನ ಸ್ಕ್ಯಾಮ್ ಅನ್ನು ಹೊರಹಾಕಿಸಿದ್ದಲ್ಲದೆ ಅದರಿಂದ ಭಾರಿ ದೊಡ್ಡ ಲಾಭವನ್ನೂ ಮಾಡಿಕೊಂಡರು. ಇಂದು ಬ್ಲೂ ಚಿಪ್ ಸ್ಟಾಕ್ ಆಗಿರುವ ಎಚ್’ಡಿಎಫ್ಸಿ ಯಲ್ಲಿ ಭಾರಿ ದೊಡ್ಡ ಮೊತ್ತದ ಹೂಡಿಕೆಯನ್ನು ರಾಧಾಕಿಶನ್ ಧಮಾನಿ ಮಾಡಿದ್ದಾರೆ.
Sanjay Dutt: ದಾಖಲೆ ಬರೆದ ಅಧೀರನ ಎಣ್ಣೆ ಬ್ರ್ಯಾಂಡ್.
2020 ರಲ್ಲಿ ಟ್ರೇಡಿಂಗ್ ಗೆ ಗುಡ್ ಬೈ ಹೇಳಿ ಅಮೆರಿಕದ ವಾಲ್ ಮಾರ್ಟ್ ಮಾದರಿಯಲ್ಲಿ ಭಾರತದಲ್ಲಿ ಡಿ ಮಾರ್ಟ್ ಪ್ರಾರಂಭ ಮಾಡಿದರು. ಈಗ ದೇಶದ ಹಲವಾರು ಸಣ್ಣ-ಪುಟ್ಟ ನಗರಗಳಲ್ಲಿಯೂ ಡಿಮಾರ್ಟ್ ನ ಬ್ರ್ಯಾಂಚ್ ಗಳಿವೆ. ಪ್ರತಿದಿನ ಸಾವಿರಾರು ಕೋಟಿ ಮೊತ್ತದ ವ್ಯವಹಾರ ಇವುಗಳಿಂದ ಆಗುತ್ತದೆ. ಭಾರತದ ನಂಬರ್ 1 ರೀಟೆಲ್ ಬ್ರ್ಯಾಂಡ್ ಆಗಿದೆ ಡಿ ಮಾರ್ಟ್. ಅಂದಹಾಗೆ ಡಿ ಮಾರ್ಟ್ ಹೊರತುಪಡಿಸಿ ರಾಧಾಕಿಶನ್ ಬಳಿ ವಿವಿಧ ಸಂಸ್ಥೆಗಳ 2.14 ಲಕ್ಷ ಕೋಟಿ ಮೌಲ್ಯದ ಷೇರುಗಳಿವೆಯಂತೆ.