Independence day: ಬ್ರಿಟೀಷರು ಭಾರತಕ್ಕೆ ಆಗಸ್ಟ್ 15ರಂದೇ ಸ್ವಾತಂತ್ರ್ಯ‌ ನೀಡಿದ್ದು ಏಕೆ?

0
152
Independence day

Independence day

ಕಳೆದ‌ 78 ವರ್ಷಗಳಿಂದಲೂ ಭಾರತ ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನಾಚರಣೆ ಆಚರಿಸುತ್ತಾ ಬಂದಿದೆ. ಪಠ್ಯದಲ್ಲಿ ನಮಗೆ ಕಲಿಸಿರುವಂತೆ ಬ್ರಿಟೀಷರು ಭಾರತ ಬಿಟ್ಟು ಹೋದ ದಿನವನ್ನು ಸ್ವಾತಂತ್ರ್ಯ ದಿನವೆಂದು ಆಚರಣೆ ಮಾಡುತ್ತಿದ್ದೇವೆ. ಅದರಲ್ಲಿಯೂ ಆಗಸ್ಟ್ 14 ರ ಅರ್ಧ ರಾತ್ರಿಯಲ್ಲಿ ಬ್ರಿಟೀಷರು ನಮಗೆ ಸ್ವಾತಂತ್ರ್ಯ ಹಸ್ತಾಂತರ ಮಾಡಿ ಹೋದರು. ಅಸಲಿಗೆ ಬ್ರಿಟೀಷರು ಆಗಸ್ಟ್ 15 ರಂದೇ ಭಾರತವನ್ನು ಏಕೆ ಸ್ವಾತಂತ್ರ್ಯಗೊಳಿಸಿದರು? ಇದಕ್ಕೆ ಕಾರಣವೂ ಇದೆ. ಮಾತ್ರವಲ್ಲ, ಈ ಆಗಸ್ಟ್ 15 ಕ್ಕೆ ಸ್ವಾತಂತ್ರ್ಯ ಘೋಷಣೆ ಆಗಬಾರದು ಎಂದು ಸಾಕಷ್ಟು ಮಂದಿ ಭಾರತೀಯರೇ ವಿರೋಧ ಮಾಡಿದ್ದರು‌.

ಭಾರತ ಆಗಸ್ಟ್ 15 ರಂದೇ ಸ್ವಾತಂತ್ರ್ಯ ಪಡೆಯಬೇಕು ಎಂದು ನಿರ್ಧರಿಸಿದ್ದು ಬ್ರಿಟೀಷರ ಜನರಲ್ ಮೌಂಟ್ ಬ್ಯಾಟನ್.  ಭಾರತಕ್ಕೆ ಸ್ವಾತಂತ್ರ್ಯ ನೀಡಿ ತಾವು ಭಾರತ ಬಿಟ್ಟು ಹೊರಡುವುದಾಗಿ ಘೋಷಿಸಲು ಮೌಂಟ್ ಬ್ಯಾಟನ್ ಪತ್ರಿಕಾಗೋಷ್ಠಿಯೊಂದನ್ನು ಕರೆದಿದ್ದರು. 1948ರ ಮುನ್ನ ನಾವು ಭಾರತ ಬಿಟ್ಟು ಹೋಗಲಿದ್ದೇವೆ. ಭಾರತಕ್ಕೆ ಸ್ವಾತಂತ್ರ್ಯವನ್ನು ಹಸ್ತಾಂತರ ಮಾಡಲಿದ್ದೇವೆ ಎಂದು ಆ ಪತ್ರಿಕಾಗೋಷ್ಠಿಯಲ್ಲಿ ಮೌಂಟ್ ಬ್ಯಾಟನ್ ಘೋಷಣೆ ಮಾಡಿದರು.

ಅಲ್ಲಿದ್ದ ಪತ್ರಕರ್ತರು ಕೆಲವರು ಯಾವ ದಿನಾಂಕದಂದು ನೀವು ಭಾರತದಿಂದ ಹೊರಡಲಿದ್ದೀರಿ ಎಂದು ಪ್ರಶ್ನೆ ಮಾಡಿದರು‌. ಅಸಲಿಗೆ ಮೌಂಟ್ ಬ್ಯಾಟನ್ ಬಳಿ ಈ ಪ್ರಶ್ನೆಗೆ ಉತ್ತರ ಇರಲಿಲ್ಲ. ಆದರೆ ಪತ್ರಕರ್ತರ ಒತ್ತಡದಿಂದಾಗಿ ಒಂದು ದಿನಾಂಕವನ್ನು ಮೌಂಟ್ ಬ್ಯಾಟನ್ ಪ್ರಕಟಿಸಲೇ ಬೇಕಾಗಿ ಬಂತು. ಸ್ವಲ್ಪ ಅತ್ತಿತ್ತ ಯೋಚಿಸಿದ ಮೌಂಟ್ ಬ್ಯಾಟನ್ ಆಗಸ್ಟ್ 15 ರಂದು ಭಾರತಕ್ಕೆ ಸ್ವಾತಂತ್ರ್ಯ ಹಸ್ತಾಂತರ ಮಾಡಲಿದ್ದೇವೆ ಎಂದು ಘೋಷಿಸಿದರು‌. ಆದರೆ ಮೌಂಟ್ ಬ್ಯಾಟನ್ ಆ ದಿನಾಂಕ ಘೋಷಣೆ ಮಾಡಲು ಒಂದು ಪ್ರಮುಖ ಕಾರಣ ಇತ್ತು.

Jangamakote Farmers: ಭೂಸ್ವಾಧೀನಕ್ಕೆ ವಿರೋಧ, ಜಂಗಮಕೋಟೆಯಲ್ಲಿ ಬೀದಿಗಿಳಿದ ರೈತರು

1947ರಲ್ಲಿ ಮೌಂಟ್ ಬ್ಯಾಟನ್ ಭಾರತಕ್ಕೆ ವೈಸ್ ರಾಯ್ ಆಗಿ ಆಗಮಿಸುವ ಮುಂಚೆ ಅವರು ಬ್ರಿಟೀಷ್ ಸೇನೆಯ ಕಮ್ಯಾಂಡರ್ ಆಗಿದ್ದರು. ಎರಡನೇ ಮಹಾಯುದ್ಧದಲ್ಲಿ ಬ್ರಿಟನ್, ಜಪಾನ್ ಹಾಗೂ ಅದರ ಮಿತ್ರ ದೇಶಗಳ ವಿರುದ್ಧ ಹೋರಾಡುತ್ತಿತ್ತು‌. 1945ರ ಆಗಸ್ 15 ರಂದು ಕಮ್ಯಾಂಡರ್ ಮೌಂಟ್ ಬ್ಯಾಟನ್ ಆಗಿನ ಬ್ರಿಟನ್ ಪ್ರಧಾನಿ ವಿನ್ ಸ್ಟನ್ ಚರ್ಚಿಲ್ ಅವರ ಕಚೇರಿಯಲ್ಲಿ ಕುಳಿತು ರೇಡಿಯೋ ಕೇಳುತ್ತಿದ್ದಾಗ ಜಪಾನ್ ಶರಣಾಗಿ ಎರಡನೇ ವಿಶ್ವಯುದ್ಧ ಮುಗಿದ ಸುದ್ದಿ ಕೇಳಿತು. ಆಗ ಚರ್ಚಿಲ್ ಅವರು ಕಮ್ಯಾಂಡರ್ ಆದ ಮೌಂಟ್ ಬ್ಯಾಟನ್ ಅವರನ್ನು ಅಮೋಘ ವಿಜಯಕ್ಕಾಗಿ ಅಭಿನಂಧಿಸಿದ್ದರು. ಒಬ್ಬ ಯೋಧನಾಗಿ, ಯೋಧರ ನಾಯಕನಾಗಿ ತಮಗೆ ಗೆಲುವು ಸಿಕ್ಕ ಆಗಸ್ಟ್ 15 ಮೌಂಟ್ ಬ್ಯಾಟನ್ ಗೆ ಮಹತ್ವದ್ದಾಗಿತ್ತು. ಹಾಗಾಗಿಯೇ ಅದೇ ದಿನವನ್ನು ಭಾರತದ ಸ್ವಾತಂತ್ರ್ಯಕ್ಕೂ ಅವರು ನಿಗದಿಪಡಿಸಿದರು.

ಆದರೆ ಇಲ್ಲೊಂದು ಸಮಸ್ಯೆ ಎದುರಾಯ್ತು, ಆಗಸ್ಟ್ 15 ರಂದು ಸ್ವಾತಂತ್ರ್ಯ ಘೋಷಿಸಲು ಭಾರತದ ಜ್ಯೋತಿಷಿಗಳು ತೀವ್ರ ವಿರೋಧ ವ್ಯಕ್ತಪಡಿಸಿದರು. ಆಗಸ್ಟ್ 15 ರಂದು ದಿನ ಚೆನ್ನಾಗಿಲ್ಲ, ಅಂದು ಸ್ವಾತಂತ್ರ್ಯ ಘೋಷಣೆ ಮಾಡಿದರೆ ದೇಶವು ಬರ, ನೆರೆಗಳಿಂದ ತತ್ತರಿಸಲಿದೆ ಹಾಗಾಗಿ ಆಗಸ್ಟ್ 15 ರಂದು ಸ್ವಾತಂತ್ರ್ಯ ಘೋಷಣೆ ಮಾಡಬೇಡಿ ಎಂದು ಪಟ್ಟು ಹಿಡಿಯಿತು ಒಂದು ಸಮುದಾಯ ಅದಕ್ಕೆ ಹಲವರ ಬೆಂಬಲವೂ ದೊರೆಯಿತು. ಕೊನೆಗೆ ಒಲ್ಲದ ಮನಸ್ಸಿನಿಂದ ಮೌಂಟ್ ಬ್ಯಾಟನ್, ಆಗಸ್ಟ್ 14 ರ ಮಧ್ಯ ರಾತ್ರಿ ಸ್ವಾತಂತ್ರ್ಯ ಹಸ್ತಾಂತರ ಮಾಡಿದರು.

LEAVE A REPLY

Please enter your comment!
Please enter your name here