Darshan Case: ಚಿತ್ರರಂಗದ ಈ ಮಹನೀಯರು ಮೌನವಾಗಿರುವುದೇಕೆ?

0
131
Darshan Case

Darshan Case

ನಟ ದರ್ಶನ್ ಜೈಲು ಪಾಲಾಗಿದ್ದಾರೆ. ಯಾವುದೋ ಸಣ್ಣ-ಪುಟ್ಟ ಪ್ರಕಣದಲ್ಲಿ ಅಲ್ಲ ಬದಲಿಗೆ ಅಭಿಮಾನಿಯನ್ನೇ ಕೊಂದ ಆರೋಪದಲ್ಲಿ. ಕನ್ನಡ ಚಲನಚಿತ್ರರಂಗವೇ ನಾಚಿಕೆಯಿಂದ ತಲೆ‌ತಗ್ಗಿಸುವ ವಿಷಯವಿದು. ಇನ್ಯಾವುದೇ ಚಿತ್ರರಂಗದ ಇಷ್ಟು ದೊಡ್ಡ ಸ್ಟಾರ್ ನಟ ಅಭಿಮಾನಿಯನ್ನೇ ಕೊಂದ ಉದಾಹರಣೆ ಇಲ್ಲ. ಸೆಲೆಬ್ರಿಟಿ-ಸೆಲೆಬ್ರಿಟಿ ಎನ್ನುತ್ತಾ ಸೆಲೆಬ್ರಿಟಿಯನ್ನೇ ಸಾವಿಗಟ್ಟಿರುವುದಕ್ಕೆ ಹಲವು ಪೂರಕ ಸಾಕ್ಷ್ಯಗಳನ್ನು ಪೊಲೀಸರು ಈಗಾಗಲೆ ಕಲೆ ಹಾಕಿದ್ದಾರೆ.. ಮಾಧ್ಯಮಗಳು, ಸಾಮಾಜಿಕ ಮಾಧ್ಯಮಗಳು ದರ್ಶನ್ ಕೊರಳ ಪಟ್ಟಿ ಹಿಡಿದು ಪ್ರಶ್ನೆ ಮಾಡುತ್ತಿವೆ. ಆದರೆ ಪ್ರಶ್ನಿಸಬೇಕಾದ ಕೆಲವರು ‘ಕಳ್ಳ ಮೌನಕ್ಕೆ’ ಜಾರಿದ್ದಾರೆ.

ಚಿತ್ರರಂಗದಲ್ಲಿ ಇಲಿ ಹೋದರು ಮಾಧ್ಯಮಗಳ ಮುಂದೆ ಬಂದು ಗಂಟೆಗಟ್ಟಲೆ ಪತ್ರಿಕಾಗೋಷ್ಠಿ ನಡೆಸುವ ಫಿಲಂ ಚೇಂಬರ್ ಅದೆಲ್ಲಿ ಹೋಗಿ ಅಡಗಿ ಕುಳಿತಿದೆಯೋ ಗೊತ್ತಿಲ್ಲ. ಯಾವುದಾದರು ನಟಿಯ ವಿವಾದ ಆಗಿದಿದ್ದರೆ ನ್ಯಾಯ ಪಂಚಾಯಿತಿ ಮಾಡಲು ಹಾರಿ ಬಿದ್ದು ಓಡೋಡಿ ಬರುತ್ತಿದ್ದ ಫಿಲಂ ಚೇಂಬರ್ ದರ್ಶನ್ ವಿಷಯಕ್ಕೆ ಬಾಯಿಕಟ್ಟಿಕೊಂಡು ಕೂತಿದೆ. ನಾಯಕಿರ ವಿಷಯಕ್ಕೆ, ನಿರ್ಮಾಪಕರ ಹಣಕಾಸಿನ ವಿಷಯಕ್ಕೆ, ಸಣ್ಣ-ಪುಟ್ಟ ನಟ-ನಟಿಯರ ನಡುವಿನ ವಿವಾದಕ್ಕೆ ಮಧ್ಯಸ್ಥಿಕೆ ವಹಿಸಲು, ಸುದ್ದಿಗೋಷ್ಠಿ ನಡೆಸಲು ರಣೋತ್ಸಾಹ ತೋರುವ ಫಿಲಚೇಂಬರ್ ನಾಲಗೆಗೆ ದರ್ಶನ್ ವಿಷಯದಲ್ಲಿ ಲಕ್ವ ಹೊಡೆದಂತಿದೆ.

ಇನ್ನು ಚಿತ್ರರಂಗದಲ್ಲಿ ಕೆಲವು ಮಾಧ್ಯಮ ಕ್ಯಾಮೆರಾ ಪ್ರಿಯರಿದ್ದಾರೆ. ಚಿತ್ರರಂಗದಲ್ಲಿ ಏನೇ ಆದರೂ ಮಾಧ್ಯಮದವರನ್ನು ಕರೆಸಿ ತಮ್ಮ ಹೇಳಿಕೆಗಳನ್ನು ದಾಖಲಿಸುತ್ತಾರೆ, ಯಾಕೋ ಅವರೂ ಸಹ ದರ್ಶನ್ ವಿಷಯದಲ್ಲಿ ಮೌನವಾಗಿದ್ದಾರೆ. ಇತ್ತೀಚೆಗಷ್ಟೆ ಮಾಧ್ಯಮದ ಮುಂದೆ ನಿವೇದಿತಾ ಗೌಡ ಅವರ ಕ್ಯಾರೆಕ್ಟರ್ ಬಗ್ಗೆ ಕಮೆಂಟ್ ಮಾಡಿದ್ದ ಪ್ರಶಾಂತ್ ಸಂಬರ್ಗಿ ಈಗ ದರ್ಶನ್ ವಿಷಯವಾದಾಗ ಎಲ್ಲಿ ಕಾಣೆಯಾಗಿದ್ದಾರೋ ಗೊತ್ತಿಲ್ಲ. ಹೆಣ್ಣು ಮಕ್ಕಳ ಬಗ್ಗೆ ಮಾತನಾಡುವಾಗ ಎದ್ದು ಬರುವ ‘ಗಂಡಸ್ತನ’ ಬೇರೆ ಸಮಯದಲ್ಲಿ ಎಲ್ಲಿ ಕಾಣೆಯಾಗಿರುತ್ತದೆಯೋ ಗೊತ್ತಿಲ್ಲ.

https://samasthanews.com/darshan-arrest-in-murder-case-here-is-the-full-detail-of-case/

ಒಳ್ಳೆ ಹುಡ್ಗ ಪ್ರಥಮ್, ರಾಜ್ಯದಲ್ಲಿ ನಡೆವ ಘಟನೆಗಳಿಗೆ ತಮ್ಮದೇ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾ ಬಂದಿದ್ದಾರೆ. ಇತ್ತೀಚೆಗೆ ಹೊರಬಿದ್ದ ಪೆನ್ ಡ್ರೈವ್ ಪ್ರಕರಣದ ಬಗ್ಗೆ ಪ್ರಥಮ್ ಮಾತನಾಡಿದ್ದರು. ಅದರ ಹಿಂದೆ ನಡೆದಿದ್ದ ನೇಹಾ ಪ್ರಕರಣದ ಬಗ್ಗೆ ಸಿಡಿದೆದಿದ್ದರು. ಆದರೆ ಯಾಕೋ ಈಗ ಮೌನವಾಗಿದ್ದಾರೆ. ತಪ್ಪನ್ನು ತಪ್ಪು ಎನ್ನುವುದು ಕಷ್ಟವೇ, ಕನಿಷ್ಟ ತಪ್ಪಿತಸ್ತರಿಗೆ ಶಿಕ್ಷೆ ಆಗಲಿ ಎಂದರಷ್ಟೆ ಆಯಿತಲ್ಲವೆ, ರೇಣುಕಾ ಸ್ವಾಮಿಯ ಪತ್ನಿಯೂ ಹೆಣ್ಣಲ್ಲವೇ?

ಇನ್ನು ನಟ ಕಿಶೋರ್ ಅವರು ಸಾಮಾಜಿಕ‌ ಜಾಲತಾಣದಲ್ಲಿ ಫುಲ್ ಟೈಮ್ ರಾಜಕಾರಣಿ ಆಗಿಬಿಟ್ಟಿದ್ದಾರೆ. ರಾಜಕಾರಣದಿಂದ ಅವರಿಗೆ ಬಿಡುವೇ ಸಿಗುತ್ತಿಲ್ಲ. ತಾವು ಕೆಲಸ ಮಾಡುತ್ತಿರುವ ಕ್ಷೇತ್ರದ ಹೊಲಸು ಅವರಿಗೆ ಕಾಣದಷ್ಟು ರಾಜಕಾರಣ, ಬಿಜೆಪಿ ಮೇಲಿನ ಸಿಟ್ಟು ಅವರ ಕಣ್ಣನ್ನು ಮುಚ್ಚಿ ಹಾಕಿದಂತಿದೆ.

ನಟಿ, ಬಿಜೆಪಿ ಸದಸ್ಯೆ ಮಾಳವಿಕಾ ಅವಿನಾಶ್ ಅವರೂ ಸಹ ತಮ್ಮ ಅಭಿಪ್ರಾಯಗಳನ್ನು ನಿರ್ಭೀತಿಯಿಂದ ಹಂಚಿಕೊಳ್ಳುವ ಕೆಲವೇ ಕೆಲವು‌ ಚಿತ್ರರಂಗದ ಹೆಣ್ಣು ಮಕ್ಕಳಲ್ಲಿ ಒಬ್ಬರು. ಆದರೆ ಅವರೂ ಸಹ ದರ್ಶನ್ ಪ್ರಕರಣದ ಬಗ್ಗೆ ದಿವ್ಯ ಮೌನ ವಹಿಸಿದ್ದಾರೆ.

LEAVE A REPLY

Please enter your comment!
Please enter your name here