Vladimir Putin: ರಷ್ಯಾ ಅಧ್ಯಕ್ಷ ಪುತಿನ್ ವಿರುದ್ಧ ಅಂತರಾಷ್ಟ್ರೀಯ ಅರೆಸ್ಟ್ ವಾರೆಂಟ್, ಬಂಧಿಸುವ ಧೈರ್ಯ ಯಾರಿಗಿದೆ?

0
123
vladimir putin

Vladimir Putin

ವಿಶ್ವದ ಅತ್ಯಂತ ಪ್ರಭಾವಶಾಲಿ ನಾಯಕರಲ್ಲಿ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಸಹ ಒಬ್ಬರು. ತನ್ನ ಚಾಣಾಕ್ಷ, ದಿಟ್ಟ ಮತ್ತು ಧೈರ್ಯಶಾಲಿ ನಿರ್ಣಯಗಳಿಂದ ರಷ್ಯಾದ ಮಹಾನ್ ನಾಯಕ ಎನಿಸಿಕೊಂಡಿದ್ದಾರೆ ವ್ಲಾದಿಮಿರ್ ಪುತಿನ್. ಇದೀಗ ನೆರೆಯ ಉಕ್ರೇನ್ ಮೇಲೆ ಯುದ್ಧ ಸಾರಿರುವ ಪುತೀನ್ ಮೇಲೆ ಬಂಧನ ವಾರೆಂಟ್ ಅನ್ನು ಅಂತರಾಷ್ಟ್ರೀಯ ಅಪರಾಧ ವಿಚಾರಣೆ ನ್ಯಾಯಾಲಯ (ಇಂಟರ್ನ್ಯಾಷನಲ್ ಕ್ರಿಮಿನಲ್ ಕೋರ್ಟ್) ಹೊರಡಿಸಿದೆ. ಆದರೆ ಪುತೀನ್ ಅನ್ನು ಬಂಧಿಸುವ ತಾಕತ್ತು ಯಾವ ದೇಶಕ್ಕಿದೆ?

ಪುತೀನ್ ಕೆಲವೇ ದಿನಗಳಲ್ಲಿ ಸೊಮಾಲಿಯಾ ದೇಶಕ್ಕೆ ರಾಜತಾಂತ್ರಿಕ ಪ್ರವಾಸಕ್ಕೆ ತೆರಳಲಿದ್ದಾರೆ. ಸೆಪ್ಟೆಂಬರ್ 3 ರಂದು ಪುತಿನ್ ಮಂಗೋಲಿಯಾಕ್ಕೆ ಭೇಟಿ ಆಗಲಿದ್ದು, ಪುತೀನ್ ವಿರುದ್ಧ ಅಂತರಾಷ್ಟ್ರೀಯ ಬಂಧನ ವಾರೆಂಟ್ ಇದ್ದು, ಅವರನ್ನು ಸೊಮಾಲಿಯಾ ಸರ್ಕಾರ ಬಂಧಿಸಿ ಹೇಗನ್ ನಲ್ಲಿರುವ ಐಸಿ ಕೋರ್ಟ್ ಮುಂದೆ ಹಾಜರುಪಡಿಸಬೇಕು ಎಂದು ಉಕ್ರೇನ್ ಮನವಿ ಮಾಡಿದೆ.

Narendra Modi: ತಲೆ ಬಾಗಿ ಕ್ಷಮೆ ಕೇಳುತ್ತೀನಿ, ಕ್ಷಮಿಸಿಬಿಡಿ: ನರೇಂದ್ರ ಮೋದಿ

ಮಂಗೋಲಿಯಾ ದೇಶವು ಇಂಟರ್ನ್ಯಾಷನಲ್ ಕ್ರಿಮಿನಲ್ ಕೋರ್ಟ್ (ಐಸಿಸಿ) ನ ಸದಸ್ಯ ಆಗಿದ್ದು, ಈಗ ಐಸಿಸಿ ವಾರೆಂಟ್ ವಿಧಿಸಿರುವ ಆರೋಪಿಯೊಬ್ಬ ತನ್ನ ದೇಶದಲ್ಲಿದ್ದಾಗ ನಿಯಮದ ಪ್ರಕಾರ ಮಂಗೋಲಿಯಾ, ಪುತಿನ್ ಅನ್ನು ಬಂಧಿಸಲೇ ಬೇಕಾಗಿದೆ. ಆದರೆ ಮಂಗೋಲಿಯಾ ಇಂಥಹಾ ಮೂರ್ಖತನದ ತಪ್ಪು ಮಾಡುವುದಿಲ್ಲ ಎಂಬ ನಂಬಿಕೆ ಇದೆ ಎಂದು ಅಧ್ಯಕ್ಷರ ಕಚೇರಿ ಅಧಿಕಾರಿಗಳಯ ರಷ್ಯಾದ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಮಾತ್ರವಲ್ಲದೆ ಪುತಿನ್ ಪ್ರವಾಸದ ಬಗ್ಗೆ ಯಾವುದೇ ಆತಂಕ ಇಲ್ಲ, ಪ್ರವಾಸದಲ್ಲಿ ಬದಲಾವಣೆಯೂ ಇಲ್ಲ ಎಂದಿದ್ದಾರೆ.

ಕಳೆದ ವರ್ಷ ಐಸಿಸಿಯು ಪುತಿನ್ ವಿರುದ್ಧ ಬಂಧನ ವಾರೆಂಟ್ ಹೊರಡಿಸಿತು. ಯುದ್ಧ ಅಪರಾಧಗಳು, ಉಕ್ರೇನ್ ಗಡಿಯಲ್ಲಿ ಅಕ್ರಮ ಚಟುವಟಿಕೆ, ಉಕ್ರೇನ್ ನ ಮಕ್ಕಳ ಅಕ್ರಮ ಸಾಗಣೆ ಆರೋಪಗಳನ್ನು ಆಧರಿಸಿ ಈ ಬಂಧನ ವಾರೆಂಟ್ ಹೊರಡಿಸಲಾಗಿದೆ. ಅಂದಹಾಗೆ ಭಾರತವೂ ಸಹ ಐಸಿಸಿ (ಇಂಟರ್ನ್ಯಾಷನಲ್ ಕ್ರಿಮಿನಲ್ ಕೋರ್ಟ್​) ನ ಸದಸ್ಯರಾಗಿದ್ದು, ಇದೇ ವರ್ಷಾಂತ್ಯಕ್ಕೆ ಭಾರತದಲ್ಲಿ ನಡೆಯಲಿರುವ ಜಿ12 ಮಹಾ ಸಮ್ಮೇಳನಕ್ಕೆ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಆಗಮಿಸಲಿದ್ದಾರೆ. ಆಗ ಪುತಿನ್ ಅನ್ನು ಬಂಧಿಸುವಂತೆ ಭಾರತದ ಮೇಲೆ ಒತ್ತಡ ಬರುವ ಸಾಧ್ಯತೆ ಇದೆ.

LEAVE A REPLY

Please enter your comment!
Please enter your name here